ವಿವಾಹದಲ್ಲಿ ಅಡೆ ತಡೆ ಎದುರಾಗಿದೆಯೇ? ಶೀಘ್ರ ಕಂಕಣ ಭಾಗ್ಯ ಕೈಗೂಡಲು ಶ್ರಾವಣ ಮಾಸದಲ್ಲಿ ಶಿವನನ್ನು ಹೀಗೆ ಪೂಜೆ ಮಾಡಿ-hindu culture follow these to get marry soon in shravana masa worship lord shiva 16 monday vrat ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿವಾಹದಲ್ಲಿ ಅಡೆ ತಡೆ ಎದುರಾಗಿದೆಯೇ? ಶೀಘ್ರ ಕಂಕಣ ಭಾಗ್ಯ ಕೈಗೂಡಲು ಶ್ರಾವಣ ಮಾಸದಲ್ಲಿ ಶಿವನನ್ನು ಹೀಗೆ ಪೂಜೆ ಮಾಡಿ

ವಿವಾಹದಲ್ಲಿ ಅಡೆ ತಡೆ ಎದುರಾಗಿದೆಯೇ? ಶೀಘ್ರ ಕಂಕಣ ಭಾಗ್ಯ ಕೈಗೂಡಲು ಶ್ರಾವಣ ಮಾಸದಲ್ಲಿ ಶಿವನನ್ನು ಹೀಗೆ ಪೂಜೆ ಮಾಡಿ

ಶ್ರಾವಣ ಮಾಸದಲ್ಲಿ ಭಕ್ತರು ಶಿವನನ್ನು ಪೂಜಿಸುತ್ತಾರೆ. ಮದುವೆ ಆದ ಹೆಣ್ಣು ಮಕ್ಕಳು ಪತಿಗೆ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ, ಅವಿವಾಹಿತ ಹೆಣ್ಣು ಮಕ್ಕಳು ಶೀಘ್ರ ಮದುವೆ ಆಗಲೆಂದು ಶಿವನನ್ನು ಪ್ರಾರ್ಥಿಸುತ್ತಾರೆ. ಶೀಘ್ರ ಕಂಕಣ ಭಾಗ್ಯ ಕೈಗೂಡಲು ಶ್ರಾವಣ ಮಾಸದಲ್ಲಿ ಯಾವ ಪೂಜೆ ಮಾಡಬೇಕು? ಇಲ್ಲಿದೆ ಮಾಹಿತಿ.

ವಿವಾಹದಲ್ಲಿ ಅಡೆ ತಡೆ ಎದುರಾಗಿದೆಯೇ? ಶೀಘ್ರ ಕಂಕಣ ಭಾಗ್ಯ ಕೈಗೂಡಲು ಶ್ರಾವಣ ಮಾಸದಲ್ಲಿ ಶಿವನನ್ನು ಹೀಗೆ ಪೂಜೆ ಮಾಡಿ
ವಿವಾಹದಲ್ಲಿ ಅಡೆ ತಡೆ ಎದುರಾಗಿದೆಯೇ? ಶೀಘ್ರ ಕಂಕಣ ಭಾಗ್ಯ ಕೈಗೂಡಲು ಶ್ರಾವಣ ಮಾಸದಲ್ಲಿ ಶಿವನನ್ನು ಹೀಗೆ ಪೂಜೆ ಮಾಡಿ

ಲೋಕಪಾಲಕ ವಿಷ್ಣು 4 ತಿಂಗಳ ಕಾಲ ನಿದ್ರೆಗೆ ಜಾರುವ ಕಾರಣ ಈ ನಾಲ್ಕೂ ತಿಂಗಳು ಶಿವನು ಲೋಕವನ್ನು ಪಾಲಿಸುತ್ತಾನೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಎಲ್ಲರೂ ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ. ರುದ್ರಾಭಿಷೇಕ, ಹಾಲು, ನೀರು, ಹೂವು ಮತ್ತು ಗಂಗಾಜಲವನ್ನು ಅರ್ಪಿಸಿ ಶಿವನಿಗೆ ಅಭಿಷೇಕ ಮಾಡಲಾಗುತ್ತದೆ. ವಿವಾಹಿತರು, ಪತಿಯ ಆಯುಷ್ಯ ಕೋರಿ ಶಿವನ ಪೂಜೆ ಮಾಡಿದರೆ, ಅವಿವಾಹಿತ ಹೆಣ್ಣು ಮಕ್ಕಳು ಪೂಜೆ ಮಾಡಿ ಒಳ್ಳೆ ವರನನ್ನು ಬೇಡುತ್ತಾರೆ.

ಶ್ರಾವಣ ಮಾಸದಲ್ಲಿ ಪಾರ್ವತಿ ದೇವಿಯು ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು ತಪಸ್ಸು ಮಾಡಿದ್ದಳು ಮತ್ತು ಅದಕ್ಕಾಗಿಯೇ ಈ ತಿಂಗಳು ಶಿವನಿಗೆ ಅತ್ಯಂತ ಪ್ರಿಯವೆಂದು ಶಿವನೇ ಹೇಳಿದ್ದಾನೆ ಎಂದು ಪುರಾಣಗಳು ಹೇಳುತ್ತವೆ . ಅದಕ್ಕಾಗಿಯೇ ಅವಿವಾಹಿತ ಕನ್ಯೆಯರು ತಾವು ಇಷ್ಟಪಟ್ಟ ಹುಡುಗನೊಂದಿಗೆ ತಮ್ಮ ಮದುವೆ ಆಗಲು ಈ ತಿಂಗಳಲ್ಲಿ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಒಂದು ವೇಳೆ ಈಗಾಗಲೇ ಮದುವೆ ಆಗಿರುವವರು ದಾಂಪತ್ಯದಲ್ಲಿ ಆಗಾಗ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ಮದುವೆ ವಿಳಂಬವಾಗುತ್ತಿದ್ದರೆ ಈ ಶ್ರಾವಣ ಮಾಸದಲ್ಲಿ ಕೆಲವೊಂದು ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಬಹುದು. ಈ ಪರಿಹಾರಗಳನ್ನು ಅನುಸರಿಸುವುದರಿಂದ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ಶೀಘ್ರದಲ್ಲೇ ಮದುವೆ ಆಗುತ್ತದೆ.

ಮದುವೆಯಲ್ಲಿನ ಅಡೆತಡೆಗಳನ್ನು ತೊಡೆದುಹಾಕಲು ಹೀಗೆ ಮಾಡಿ

ಮದುವೆ ವಿಳಂಬವಾಗುತ್ತಿರುವವರು ಈ ಚಾತುರ್ಮಾಸದಲ್ಲಿ 16 ಸೋಮವಾರ ವ್ರತ ಕೈಗೊಳ್ಳಬೇಕು. ಪ್ರತಿ ಸೋಮವಾರ ಉಪವಾಸ ಇದ್ದು ಶಿವನನ್ನು ಪೂಜಿಸಬೇಕು. ಹುತ್ತದ ಮಣ್ಣಿನಿಂದ ಶಿವಲಿಂಗವನ್ನು ತಯಾರಿಸಿ ಗಂಧ, ವಿಭೂಜಿ, ಪುಷ್ಪ, ಬಿಲ್ವಪತ್ರೆಯಿಂದ ಪೂಜಿಸಬೇಕು. ಗೋಧಿಹಿಟ್ಟಿನಿಂದ ಮಾಡಿದ ನೈವೇದ್ಯ ಅರ್ಪಿಸಬೇಕು. ಸೋಮವಾರ ಉಪವಾಸ ಮಾಡಬೇಕು. ಶಿವಲಿಂಗಕ್ಕೆ ಪವಿತ್ರ ಜಲವನ್ನು ಅರ್ಪಿಸಿ ಮತ್ತು ಶಿವ ಪಾರ್ವತಿಯರನ್ನು ಪೂಜಿಸಬೇಕು. ಮರುದಿನ ಈ ಮಣ್ಣಿನ ಲಿಂಗವನ್ನು ಹರಿಯುವ ನದಿಗೆ ಬಿಡಬೇಕು. ಹೀಗೆ ಮಾಡುವುದರಿಂದ ಮದುವೆ ಬೇಗ ಆಗುತ್ತದೆ. ನಿಮಗೆ ತಕ್ಕ ಸಂಗಾತಿ ಸಿಗಲಿದ್ದಾರೆ.

ಜೊತೆಗೆ ಈ ಒಂದು ಸರಳ ಪರಿಹಾರವು ಮದುವೆಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ. ಆ ನೀರಿನಿಂದ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ. ಪ್ರತಿ ದಿನ ಹಣೆಯ ಮೇಲೆ ಕುಂಕುಮ ಅಥವಾ ಅರಿಶಿನ ಹಚ್ಚುವುದರಿಂದ ಧನಾತ್ಮಕ ಶಕ್ತಿಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.

ಹಸುವಿಗೆ ಆಹಾರ ನೀಡಿ

ನೀವು ಮದುವೆಯಲ್ಲಿ ಅಡಚಣೆಗಳನ್ನು ಎದುರಿಸುತ್ತಿದ್ದರೆ ಹಸುವಿಗೆ ಆಹಾರ ನೀಡುವುದು ಸರಳ ಪರಿಹಾರವಾಗಿದೆ. ಹಸುವಿಗೆ ನಿಯಮಿತವಾಗಿ ಹಸಿರು ತರಕಾರಿಗಳನ್ನು ನೀಡುವುದರಿಂದ ಮದುವೆ ಅಡಚಣೆಗಳು ಕಡಿಮೆಯಾಗುತ್ತವೆ. ಸಕಾಲದಲ್ಲಿ ಮದುವೆ ನಡೆಯಲಿದೆ. ನೀವು ಹಸುವಿನ ಬಗ್ಗೆ ತೋರಿಸುವ ದಯೆ ಮತ್ತು ಸಹಾನುಭೂತಿ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಮದುವೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಹಾಗೆಯೇ ಅವಿವಾಹಿತರು ಗೌರಿ ದೇವಿಯನ್ನು ಪೂಜಿಸಬೇಕು. ಗೌರಿ ಶಂಕರ ಮಂತ್ರವನ್ನು ಪಠಿಸುವುದರಿಂದ ದೇವಿಯ ಅನುಗ್ರಹವಾಗುತ್ತದೆ. ಬಯಸಿದ ಸಂಗಾತಿಯೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಅಲ್ಲದೆ ಜಾತಕದಲ್ಲಿ ಮಂಗಳದೋಷ ಇರುವವರಿಗೆ ಈ ಮಂತ್ರವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಗೌರಿ ಶಂಕರ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಸಕಾಲಿಕ ವಿವಾಹವಾಗುತ್ತದೆ. ಆದರ್ಶ ಜೀವನ ಸಂಗಾತಿ ಸಿಗುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್‍್ತಿಸ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.