Kartika Purnima 2024: ನಾಳೆಯೇ ಕಾರ್ತಿಕ ಹುಣ್ಣಿಮೆ; ಸತ್ಯನಾರಾಯಣ ಸ್ವಾಮಿ ಪೂಜೆಗೆ ಶುಭ ಸಮಯ, ದೇವ ದೀಪಾವಳಿಯ ಮಹತ್ವ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kartika Purnima 2024: ನಾಳೆಯೇ ಕಾರ್ತಿಕ ಹುಣ್ಣಿಮೆ; ಸತ್ಯನಾರಾಯಣ ಸ್ವಾಮಿ ಪೂಜೆಗೆ ಶುಭ ಸಮಯ, ದೇವ ದೀಪಾವಳಿಯ ಮಹತ್ವ ಹೀಗಿದೆ

Kartika Purnima 2024: ನಾಳೆಯೇ ಕಾರ್ತಿಕ ಹುಣ್ಣಿಮೆ; ಸತ್ಯನಾರಾಯಣ ಸ್ವಾಮಿ ಪೂಜೆಗೆ ಶುಭ ಸಮಯ, ದೇವ ದೀಪಾವಳಿಯ ಮಹತ್ವ ಹೀಗಿದೆ

Kartika Purnima: ಈ ಬಾರಿಯ ಕಾರ್ತಿಕ ಹುಣ್ಣಿಮೆಯಂದು ಶುಭ ಕಾರ್ಯಗಳನ್ನು ನಡೆಸಬಹುದಾದಂತಹ ಅಪರೂಪದ ಸಂಯೋಜನೆ ನಡೆಯುತ್ತಿದೆ. ಕಾರ್ತಿಕ ಹುಣ್ಣಿಮೆಯು ಹಲವಾರು ರಾಜಯೋಗಗಳು ಮತ್ತು ಗ್ರಹಗಳ ಸಂಯೋಗದೊಂದಿಗೆ ಬಂದಿದೆ. ಅಂದು ಪೂಜೆ ಮತ್ತು ಸತ್ಯನಾರಾಯಣ ಸ್ವಾಮಿ ವ್ರತವನ್ನು ಆಚರಿಸಲು ಇರುವ ಮಂಗಳಕರ ಕ್ಷಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

Kartika Purnima 2024: ನಾಳೆಯೇ ಕಾರ್ತಿಕ ಹುಣ್ಣಿಮೆ; ಸತ್ಯನಾರಾಯಣ ಸ್ವಾಮಿ ಪೂಜೆಗೆ ಶುಭ ಸಮಯ, ದೇವ ದೀಪಾವಳಿಯ ಮಹತ್ವ ಹೀಗಿದೆ
Kartika Purnima 2024: ನಾಳೆಯೇ ಕಾರ್ತಿಕ ಹುಣ್ಣಿಮೆ; ಸತ್ಯನಾರಾಯಣ ಸ್ವಾಮಿ ಪೂಜೆಗೆ ಶುಭ ಸಮಯ, ದೇವ ದೀಪಾವಳಿಯ ಮಹತ್ವ ಹೀಗಿದೆ (PC: HT File Photo)

ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆಗೆ ಬಹಳ ವಿಶೇಷತೆಯನ್ನು ನೀಡಲಾಗಿದೆ. ಅಂದು ಗಂಗಾ ಸ್ನಾನವನ್ನು ಮಾಡಲಾಗುತ್ತದೆ. ಈ ವರ್ಷ ಕಾರ್ತಿಕ ಹುಣ್ಣಿಮೆಯನ್ನು ನವೆಂಬರ್ 15, ಶುಕ್ರವಾರದಂದು ಆಚರಿಸಲಾಗುವುದು. ಈ ದಿನ ದೇವ ದೀಪಾವಳಿಯನ್ನು ಸಹ ಆಚರಿಸಲಾಗುತ್ತದೆ. ಆದ್ದರಿಂದ ಕಾರ್ತಿಕ ಹುಣ್ಣಿಮೆಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಉಪವಾಸ, ಪೂಜೆ, ದಾನ, ಗಂಗಾಸ್ನಾನದಂತಹ ಪುಣ್ಯ ಕಾರ್ಯಗಳನ್ನು ಮಾಡಲಾಗುತ್ತದೆ.

ಶುಭ ಯೋಗಗಳು

ಕಾರ್ತಿಕ ಹುಣ್ಣಿಮೆ ಮತ್ತು ದೇವ ದೀಪಾವಳಿಯಂದು ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ಬಾರಿ ಕಾರ್ತಿಕ ಪೂರ್ಣಿಮೆಯಂದು ಚಂದ್ರನು ಮೇಷ ರಾಶಿಯಲ್ಲಿರುತ್ತಾನೆ. ಮಂಗಳ ಮತ್ತು ಚಂದ್ರರು ಪರಸ್ಪರ ನಾಲ್ಕನೇ ದಶಮಾಂಶದಲ್ಲಿರುವುದರಿಂದ ಧನಯೋಗವೂ ಉಂಟಾಗುತ್ತದೆ. ಚಂದ್ರ ಮತ್ತು ಗುರುಗಳ ನಡುವಿನ ದ್ವಿದ್ವಾಶ ಯೋಗವು ಸಂಫ ಯೋಗಕ್ಕೂ ಕಾರಣವಾಗುತ್ತದೆ. ಶನಿಯು ತನ್ನ ಮೂಲ ತ್ರಿಕೋನ ರಾಶಿಯಲ್ಲಿದ್ದಾನೆ. ಅದಕ್ಕಾಗಿಯೇ ಶಶರಾಜಯೋಗವೂ ರೂಪುಗೊಳ್ಳುತ್ತಿದೆ.

ಪೂಜೆಗೆ ಶುಭ ಸಮಯ

ಕಾರ್ತಿಕ ಹುಣ್ಣಿಮೆಯಂದು ಸ್ನಾನ, ದಾನ, ಪೂಜೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಂದು ಬೆಳಿಗ್ಗೆ 4.58 ರಿಂದ 5.51 ರವರೆಗೆ ಸ್ನಾನ ಮಾಡಲು ಉತ್ತಮ ಸಮಯ ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ. ಹಾಗೆಯೇ ಅಂದು ಸತ್ಯನಾರಾಯಣ ಪೂಜೆ ಮಾಡುವ ಸಮಯವು ಬೆಳಗ್ಗೆ 6.44 ರಿಂದ 10.45 ರವರೆಗೆ. ಹುಣ್ಣಿಮೆಯ ತಿಥಿಯು ನವೆಂಬರ್ 15 ರಂದು ಬೆಳಿಗ್ಗೆ 6.19 ರಿಂದ ಮರುದಿನ ನವೆಂಬರ್ 16 ರ ಬೆಳಿಗ್ಗೆ 2.58 ರವರೆಗೆ ಇರುತ್ತದೆ. ಕಾರ್ತಿಕ ಹುಣ್ಣಿಮೆಯನ್ನು ನವೆಂಬರ್ 15 ರಂದು ಉದಯ ತಿಥಿಯಿಂದ ಆಚರಿಸಲಾಗುತ್ತದೆ. ಅಂದು ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ದಾನ ಮಾಡುವುದರಿಂದ ಅನಂತ ಪುಣ್ಯ ಲಭಿಸುತ್ತದೆ.

ಭದ್ರ ಪ್ರಭಾವ ಏನು?

ಪಂಚಾಂಗದ ಪ್ರಕಾರ ಈ ದಿನ ಭದ್ರ ಪ್ರಭಾವವು ಬೆಳಿಗ್ಗೆ 06:44 ರಿಂದ ಸಂಜೆ 04:37 ರವರೆಗೆ ಇರುತ್ತದೆ. ನವೆಂಬರ್ 15 ರಂದು ಮಧ್ಯಾಹ್ನ 03:17 ರವರೆಗೆ, ಚಂದ್ರನು ಮೇಷ ರಾಶಿಯಲ್ಲಿದ್ದು ನಂತರ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ನಂಬಿಕೆಗಳ ಪ್ರಕಾರ, ಚಂದ್ರನು ಕರ್ಕ, ಸಿಂಹ, ಕುಂಭ ಅಥವಾ ಮೀನ ರಾಶಿಯಲ್ಲಿದ್ದಾಗ ಭದ್ರನು ಭೂಮಿಯ ಮೇಲೆ ನೆಲೆಸುತ್ತಾನೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಭೂಮಿಯ ಮೇಲೆ ಭದ್ರನ ಯಾವುದೇ ಪ್ರಭಾವ ಬೀರುವುದಿಲ್ಲ.

ಗಂಗಾ ಸ್ನಾನದ ಮಹತ್ವ

ಕಾರ್ತಿಕ ಹುಣ್ಣಿಮೆಯಂದು ಭಗವಾನ್ ವಿಷ್ಣುವು ತನ್ನ ಮತ್ಸ್ಯಾವತಾರದಲ್ಲಿ ಕಾಣಿಸಿಕೊಂಡನು ಎಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಜನರು ಉಪವಾಸ, ಪೂಜೆ ಮತ್ತು ದಾನ ಮಾಡುತ್ತಾರೆ. ಅದೇ ಸಮಯದಲ್ಲಿ ಕಾರ್ತಿಕ ಪೂರ್ಣಿಮೆಯಂದು ಗಂಗಾ ಸ್ನಾನ ಮತ್ತು ಪವಿತ್ರ ಸ್ಥಳಗಳಲ್ಲಿ ದಾನ ಮಾಡುವುದರಿಂದ ಅನಂತವಾದ ಪುಣ್ಯಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ.

ದೀಪಾವಳಿಯನ್ನು ದೇವತೆಗಳು ಏಕೆ ಆಚರಿಸುತ್ತಾರೆ?

ಕಾರ್ತಿಕ ಮಾಸದ ಹುಣ್ಣಿಮೆಯ ಪ್ರದೋಷ ಕಾಲದಲ್ಲಿ ದೇವತೆಗಳು ಕೂಡಾ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಅದನ್ನೇ ದೇವ ದೀಪಾವಳಿ ಎಂದು ಕರೆಯಲಾಗುತ್ತದೆ. ಈ ದಿನ ಶಿವನು ತ್ರಿಪುರಾಸುರನನ್ನು ಕೊಂದನು. ಅದಕ್ಕಾಗಿಯೇ ದೇವತೆಗಳು ಸ್ವರ್ಗದಲ್ಲಿ ದೀಪಗಳನ್ನು ಬೆಳಗಿಸಿದರು. ಈ ದಿನ ದೇವರುಗಳು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಅವರನ್ನು ಸ್ವಾಗತಿಸಲು ನೆಲದ ಮೇಲೆ ದೀಪಗಳನ್ನು ಬೆಳಗಿಸಲಾಗುತ್ತದೆ. ಪವಿತ್ರ ನದಿಗಳ ದಡದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ವಾರಣಾಸಿಯಲ್ಲಿ ದೇವ ದೀಪಾವಳಿಗೆ ವಿಶೇಷ ಮಹತ್ವವಿದೆ. ವಾರಣಾಸಿಯ ಗಂಗಾ ಘಾಟ್‌ನಲ್ಲಿ ದೇವ ದೀಪಾವಳಿಯಂದು ಲಕ್ಷಾಂತರ ದೀಪ ಬೆಳಗಿಸಲಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.