ಕಟಕ ರಾಶಿಗೆ ಸೂರ್ಯ; ಮೇಷ, ವೃಷಭ ಸೇರಿ ಈ 5 ರಾಶಿಗಳಿಗೆ ಇನ್ನು ಶುಭಫಲ ಆರಂಭ
ಶೀಘ್ರದಲ್ಲೇ ಸೂರ್ಯನು ಚಂದ್ರನ ರಾಶಿಯಾದ ಕರ್ಕಾಟಕವನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಚಲನೆಯಿಂದ ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟ ಬದಲಾಗಲಿದೆ. ಆ ರಾಶಿಚಕ್ರ ಚಿಹ್ನೆಗಳ ಬಗ್ಗೆ ತಿಳಿಯೋಣ.
Surya Gochar 2024 Rashifal: ಗ್ರಹಗಳ ರಾಜ ಸೂರ್ಯ ಜುಲೈ 16ರಂದು ಕರ್ಕಾಟಕ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದು ಹಲವು ರಾಶಿಯವರಿಗೆ ಶುಭಫಲ ನೀಡಲಿದೆ. ಜ್ಯೋತಿಷ್ಯದಲ್ಲಿ, ಕರ್ಕಾಟಕ ರಾಶಿಗೆ ಸೂರ್ಯನ ಪ್ರವೇಶದಿಂದ ಮೇಷ ಮತ್ತು ಸಿಂಹ ರಾಶಿ ಸೇರಿದಂತೆ ಹಲವು ರಾಶಿಚಕ್ರ ಚಿಹ್ನೆಗಳಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಕಟಕ ರಾಶಿಯನ್ನು ಪ್ರವೇಶಿಸುವ ದಿನದಂದು ಕರ್ಕಾಟಕ ಸಂಕ್ರಾಂತಿ ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಸೂರ್ಯನ ಕೃಪೆಯಿಂದ ಸಂಬಂಧಿಸಿದ ರಾಶಿಚಕ್ರದವರು ಸಂಪತ್ತು, ಗೌರವ, ಪ್ರಗತಿ ಮಾತ್ರವಲ್ಲದೆ ಭಾರಿ ಯಶಸ್ಸನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹೀಗಾಗಿ ಕಟಕ ರಾಶಿಗೆ ಸೂರ್ಯ ಪ್ರವೇಶಿಸುವ ಜುಲೈ 16ರಿಂದ ಯಾವ ರಾಶಿಯವರ ಜೀವನ ಸುಧಾರಿಸುತ್ತದೆ ಎಂಬುದನ್ನು ನೋಡೋಣ.
ಮೇಷ ರಾಶಿ
ಸೂರ್ಯನ ಸಂಚಾರದಿಂದ ಮೇಷ ರಾಶಿಚಕ್ರ ಚಿಹ್ನೆಯ ನಾಲ್ಕನೇ ಮನೆಯಲ್ಲಿರುತ್ತದೆ. ಹೀಗಾಗಿ ಸೂರ್ಯನ ಸಂಚಾರವು ಈ ರಾಶಿಯವರ ವೃತ್ತಿಜೀವನಕ್ಕೆ ಶುಭವಾಗಲಿದೆ. ಈ ಸಮಯದಲ್ಲಿ ನೀವು ಉದ್ಯೋಗದಲ್ಲಿ ಸುಧಾರಣೆ ಕಂಡು ತೃಪ್ತಿ ಪಡೆಯಲಿದ್ದೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮೂಲಕ ನೆಮ್ಮದಿ ಹೆಚ್ಚಲಿದೆ. ದಾಂಪತ್ಯದಲ್ಲಿ ಖುಷಿ ಹೆಚ್ಚಲಿದೆ.
ವೃಷಭ ರಾಶಿ
ಸೂರ್ಯನು ವೃಷಭ ರಾಶಿಯ ಮೂರನೇ ಮನೆಯಲ್ಲಿ ಸಂಚರಿಸುತ್ತಾನೆ. ಸೂರ್ಯನ ಸಂಚಾರದಿಂದ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಸಾಧನೆ ಮಾಡಬಹುದು. ಈ ಅವಧಿಯಲ್ಲಿ ಆರ್ಥಿಕ ಲಾಭ ಗಳಿಸಲಿದ್ದೀರಿ. ವೃತ್ತಿಜೀವನದಲ್ಲಿ ನೆಮ್ಮದಿ ಇರಲಿದೆ. ವಿವಿಧ ಮೂಲಗಳಿಂದ ಸಂಪತ್ತಿನ ಸಂಗ್ರಹ ಸಾಧ್ಯವಾಗುತ್ತದೆ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ ಖುಷಿಯ ದಿನಗಳನ್ನು ಕಳೆಯಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ, ಸೂರ್ಯನ ಸಂಚಾರವು ಎರಡನೇ ಮನೆಯಲ್ಲಿರುತ್ತದೆ. ಸೂರ್ಯನ ಸಂಚಾರದಿಂದ ನಿಮ್ಮ ವೃತ್ತಿಜೀವನದಲ್ಲಿ ನೀವು ದೊಡ್ಡ ಸಾಧನೆ ಮಾಡಬಹುದು. ಮಾಡುವ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಮುಖ್ಯವಾಗಿ ಈ ಅವಧಿ ವ್ಯಾಪಾರಿಗಳಿಗೆ ಹೆಚ್ಚು ಲಾಭದಾಯಕವಾಗಲಿದೆ. ಆರ್ಥಿಕ ಸಂಕಷ್ಟ ದೂರವಾಗಲಿದೆ.
ಸಿಂಹ ರಾಶಿ
ಸೂರ್ಯನ ಸಂಚಾರದಿಂದ ಸಿಂಹ ರಾಶಿಯ ಜನರಿಗೆ ಶುಭವಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿ ಹೆಚ್ಚು ಹಣ ಗಳಿಸಬಹುದು. ಈ ಸಮಯದಲ್ಲಿ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ, ಯಶಸ್ಸು ನಿಮ್ಮದಾಗುತ್ತದೆ. ಈ ಅವಧಿಯು ವೃತ್ತಿಜೀವನದಲ್ಲಿ ನಿಮಗೆ ಪ್ರಯೋಜನಕಾರಿಯಾಗಲಿದೆ. ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪ್ರಶಂಸೆ ಕೇಳಿ ಬರುತ್ತದೆ.
ವೃಶ್ಚಿಕ ರಾಶಿ
ಸೂರ್ಯನ ರಾಶಿಚಕ್ರ ಬದಲಾವಣೆಯಿಂದ ವೃಶ್ಚಿಕ ರಾಶಿಯವರಿಗೂ ಒಳಿತಾಗಲಿದೆ. ಮಾಡುವ ಕೆಲಸಗಳಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುತ್ತದೆ. ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಖರ್ಚುಗಳನ್ನು ಕಡಿಮೆ ಮಾಡುತ್ತೀರಿ. ಆ ಮೂಲಕ ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ಇನ್ನಷ್ಟು ರಾಶಿ ಭವಿಷ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಕಟಕ ರಾಶಿಗೆ ಶುಕ್ರನ ಪ್ರವೇಶ, ಸೌಂದರ್ಯ ದೇವತೆಗೆ ರಾಹುವಿನ ದೃಷ್ಠಿ; ಮಕರ ಸೇರಿ ಈ 5 ರಾಶಿಯವರಿಗೆ ಒಳ್ಳೆ ಸಮಯ