ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇ 31 ರಿಂದ ರೂಪುಗೊಳ್ಳಲಿದೆ ಭದ್ರ ಮಹಾಪುರುಷ ರಾಜಯೋಗ; ಈ 3 ರಾಶಿಯವರ ಅದೃಷ್ಟವನ್ನು ಯಾರಿಂದಲೂ ತಡೆಯಲಾಗುವುದಿಲ್ಲ

ಮೇ 31 ರಿಂದ ರೂಪುಗೊಳ್ಳಲಿದೆ ಭದ್ರ ಮಹಾಪುರುಷ ರಾಜಯೋಗ; ಈ 3 ರಾಶಿಯವರ ಅದೃಷ್ಟವನ್ನು ಯಾರಿಂದಲೂ ತಡೆಯಲಾಗುವುದಿಲ್ಲ

Bhadra Mahapurusha Rajayoga: ಜೂನ್‌ 14 ರಂದು ಬುಧನು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಭದ್ರ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಮಿಥುನ ರಾಶಿ ಸೇರಿದಂತೆ ಕೆಲವೊಂದು ರಾಶಿಯವರಿಗೆ ಅದೃಷ್ಟ ಕೂಡಿ ಬರಲಿದೆ. ಯಾವ ರಾಶಿಗೆ ಯಾವ ರೀತಿ ಅನುಕೂಲ ದೊರೆಯಲಿದೆ ನೋಡಿ.

ಮೇ 31 ರಿಂದ ರೂಪುಗೊಳ್ಳಲಿದೆ ಭದ್ರ ಮಹಾಪುರುಷ ರಾಜಯೋಗ; ಈ 3 ರಾಶಿಯವರ ಅದೃಷ್ಟವನ್ನು ಯಾರಿಂದಲೂ ತಡೆಯಲಾಗುವುದಿಲ್ಲ
ಮೇ 31 ರಿಂದ ರೂಪುಗೊಳ್ಳಲಿದೆ ಭದ್ರ ಮಹಾಪುರುಷ ರಾಜಯೋಗ; ಈ 3 ರಾಶಿಯವರ ಅದೃಷ್ಟವನ್ನು ಯಾರಿಂದಲೂ ತಡೆಯಲಾಗುವುದಿಲ್ಲ

ಭದ್ರ ಮಹಾ ಪುರುಷ ರಾಜಯೋಗ: ಗ್ರಹಗಳ ಅಧಿಪತಿ ಬುಧವು ಮೇ 31 ರಂದು ವೃಷಭ ರಾಶಿಗೆ ಚಲಿಸುತ್ತಾನೆ. ನಂತರ ಜೂನ್‌ 14 ರಂದು ಮಿಥುನ ರಾಶಿಗೆ ಆಗಮಿಸುತ್ತಾನೆ. ಇದರಿಂದ ಜೂನ್ ತಿಂಗಳಿನಲ್ಲಿ ಭವ್ಯವಾದ ರಾಜಯೋಗ ಸಂಭವಿಸಲಿದೆ. ಇದರ ಪರಿಣಾಮ ಕೆಲವು ರಾಶಿಚಕ್ರದ ಜನರು ಸಮಸ್ಯೆಗಳಿಂದ ಹೊರ ಬರುತ್ತಾರೆ. ಅವರ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದೆ.

ಬುಧ ಗ್ರಹವು ಬುದ್ಧಿವಂತಿಕೆ, ವ್ಯವಹಾರ, ಸಂವಹನ, ತಂತ್ರಜ್ಞಾನ ಇತ್ಯಾದಿಗಳಿಗೆ ಸಂಬಂಧಿಸಿದ ಗ್ರಹವಾಗಿದೆ. ಜೂನ್ 14 ರಿಂದ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಭದ್ರ ಮಹಾಪುರುಷ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಗಳು ಮಾತ್ರ ಎಲ್ಲಾ ರೀತಿಯ ಸುಖ ಸಂತೋಷ ಗಳಿಸುತ್ತಾರೆ.

ಭದ್ರ ಮಹಾಪುರುಷ ರಾಜಯೋಗ ಎಂದರೇನು?

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧನು ಸ್ವಂತ ರಾಶಿಯಲ್ಲಿ ಅಥವಾ ಉಚ್ಛ ರಾಶಿಯಲ್ಲಿ ಅಥವಾ ಮೂಲ ತ್ರಿಕೋನದಲ್ಲಿದ್ದಾಗ ಭದ್ರ ಎಂಬ ಪಂಚ ಮಹಾ ಪುರುಷ ಯೋಗವು ಸಂಭವಿಸುತ್ತದೆ. ಅಂತಹ ಯೋಗದಲ್ಲಿ ಜನಿಸಿದ ಜನರು ತುಂಬಾ ಧೈರ್ಯಶಾಲಿ ಎಂದು ಪರಿಗಣಿಸಲಾಗುತ್ತದೆ. ಅವರು ಶತ್ರುಗಳನ್ನು ನಾಶಮಾಡುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಯೋಗದಿಂದ ಯಾವ ರಾಶಿಯವರಿಗೆ ಒಲವು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಭದ್ರ ಮಹಾಪುರುಷ ರಾಜಯೋಗವು ಬಹಳ ಅದೃಷ್ಟಶಾಲಿಯಾಗಿದೆ. ಈ ಅವಧಿಯಲ್ಲಿ ಮಿಥುನ ರಾಶಿಯವರು ವೃತ್ತಿಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುವರು. ನಿರೀಕ್ಷೆಗೆ ತಕ್ಕಂತೆ ಹೊಸ ಉದ್ಯೋಗಾವಕಾಶಗಳು ಸಿಗಲಿವೆ. ಈ ಅವಧಿಯಲ್ಲಿ ಎಲ್ಲಾ ಆಸೆಗಳು ಈಡೇರುತ್ತವೆ. ಕೈ ಹಾಕಿದ ಎಲ್ಲಾ ಕೆಲಸದಲ್ಲೂ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ವಿದೇಶಕ್ಕೆ ಹೋಗುವ ಅವಕಾಶಗಳಿವೆ. ನಿರೀಕ್ಷೆಗೂ ಮೀರಿ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳಿಗೆ ಹಣ ಸಂಪಾದಿಸಲು ಇದು ಉತ್ತಮ ಸಮಯ. ಪ್ರತಿಸ್ಪರ್ಧಿಗಳ ವಿರುದ್ಧ ಉತ್ತಮ ಸ್ಪರ್ಧಿಗಳಾಗಿ ಎದ್ದು ನಿಂತು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು. ಆರ್ಥಿಕ ಪರಿಸ್ಥಿತಿಗಳಿಗೆ ಇದು ಮಂಗಳಕರ ಅವಧಿಯಾಗಿದೆ. ಒಟ್ಟಿನಲ್ಲಿ ಭದ್ರ ಮಹಾಯೋಗದಿಂದ ಎಲ್ಲವೂ ಸುಖಮಯವಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರು ಈ ಅವಧಿಯಲ್ಲಿ ಯಶಸ್ಸು ಮತ್ತು ಪ್ರಗತಿ ಸಾಧಿಸುವತ್ತ ಗಮನ ಹರಿಸುತ್ತಾರೆ. ಆಧ್ಯಾತ್ಮದಲ್ಲಿ ನಿಮಗೆ ಆಸಕ್ತಿ ಉಂಟಾಗಲಿದೆ. ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವ ಸಂಭವವಿದೆ. ದೊಡ್ಡ ಸಾಧನೆಗಳನ್ನು ಮಾಡಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ, ಎಲ್ಲರಿಂದ ಪ್ರಶಂಸೆಗೆ ಒಳಗಾಗುವಿರಿ. ವ್ಯಾಪಾರಸ್ಥರು ಒಪ್ಪಂದ ಮಾಡಿಕೊಳ್ಳಲು ಇದು ಉತ್ತಮ ಸಮಯ. ಈ ಅವಧಿಯಲ್ಲಿ ಸಿಂಹ ರಾಶಿಯವರು ಉತ್ತಮ ಲಾಭವನ್ನು ಗಳಿಸುತ್ತಾರೆ. ಕಚೇರಿಯಲ್ಲಿ ಸಮರ್ಪಣಾಭಾವದಿಂದ ಕೆಲಸ ಮಾಡುತ್ತಾರೆ. ಈ ಅವಧಿಯಲ್ಲಿ ನೀವು ಬಹಳ ಖುಷಿಯಿಂದ ಇರುತ್ತೀರಿ.

ಮಕರ ರಾಶಿ

ಭದ್ರ ಮಹಾಪುರುಷ ರಾಜಯೋಗದಿಂದಾಗಿ ಮಕರ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಕಚೇರಿಯಲ್ಲಿ ಪ್ರಮೋಷನ್‌ ಪಡೆಯುವ ಸಾಧ್ಯತೆ ಇದೆ. ಸಂಬಳ ಹೆಚ್ಚಾಗುತ್ತವೆ. ಜನರು ವಿದೇಶಕ್ಕೆ ಹೋಗುವ ಸಾಧ್ಯತೆಯೂ ಇದೆ. ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ವ್ಯಾಪಾರಿಗಳಿಗೆ ಅನುಕೂಲಕರ ಸಮಯ. ಎದುರಾಳಿಗಳಿಗೆ ಉತ್ತಮ ಪೈಪೋಟಿ ನೀಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿದ್ದಾರೆ. ಹಣಕಾಸಿನ ಪರಿಸ್ಥಿತಿ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ. ಗಂಡ ಹೆಂಡತಿ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)