ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇ 25 ರಿಂದ ರೋಹಿಣಿ ನಕ್ಷತ್ರಕ್ಕೆ ಸೂರ್ಯನ ಸಂಚಾರ; ರೋಹಿಣಿ ಕಾರ್ತೆ ಪ್ರಭಾವದಿಂದ ಎಂದೂ ದೊರೆಯದ ಅದೃಷ್ಟ ರಾಶಿಯವರ ಮಡಿಲಿಗೆ

ಮೇ 25 ರಿಂದ ರೋಹಿಣಿ ನಕ್ಷತ್ರಕ್ಕೆ ಸೂರ್ಯನ ಸಂಚಾರ; ರೋಹಿಣಿ ಕಾರ್ತೆ ಪ್ರಭಾವದಿಂದ ಎಂದೂ ದೊರೆಯದ ಅದೃಷ್ಟ ರಾಶಿಯವರ ಮಡಿಲಿಗೆ

Sun Transit: ಸೂರ್ಯನು ಶೀಘ್ರದಲ್ಲೇ ತನ್ನ ನಕ್ಷತ್ರ ಬದಲಿಸುತ್ತಿದ್ದಾನೆ. ಮೇ 25 ರಂದು ಸೂರ್ಯ ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಿದ್ದು ಇದರ ಪರಿಣಾಮ ಮೇಷ ಸೇರಿದಂತೆ ಈ ಐದೂ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ರೋಹಿಣಿ ಕಾರ್ತೆ ಪ್ರಭಾವದಿಂದ ಯಾವ ರಾಶಿಯವರಿಗೆ ಯಾವ ರೀತಿ ಅದೃಷ್ಟ ದೊರೆಯಲಿದೆ ನೋಡೋಣ.

ರೋಹಿಣಿ ಕಾರ್ತೆ ಪ್ರಭಾವದಿಂದ ಎಂದೂ ದೊರೆಯದ ಅದೃಷ್ಟ ರಾಶಿಯವರ ಮಡಿಲಿಗೆ
ರೋಹಿಣಿ ಕಾರ್ತೆ ಪ್ರಭಾವದಿಂದ ಎಂದೂ ದೊರೆಯದ ಅದೃಷ್ಟ ರಾಶಿಯವರ ಮಡಿಲಿಗೆ

ಮೇ 25 ರಿಂದ ಸೂರ್ಯನು ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಅಂದು ಕೃತಿಕಾ ನಕ್ಷತ್ರದಿಂದ ರೋಹಿಣಿ ನಕ್ಷತ್ರಕ್ಕೆ ಪ್ರಯಾಣ ಆರಂಭಿಸಲಿದ್ದು ಆ ದಿನ ಅಂದಿನಿಂದ ರೋಹಿಣಿ ಕಾರ್ತೆ ಆರಂಭವಾಗುತ್ತದೆ. ಸೂರ್ಯನು ರೋಹಿಣಿ ನಕ್ಷತ್ರದಲ್ಲಿರುವ ಸಮಯವನ್ನು ರೋಹಿಣಿ ಕಾರ್ತೆ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಕೃತ್ತಿಕಾ ನಕ್ಷತ್ರದಲ್ಲಿರುವ ಸೂರ್ಯನು ನಾಳೆಯಿಂದ ರೋಹಿಣಿ ನಕ್ಷತ್ರದಲ್ಲಿ ಚಲಿಸುತ್ತಾನೆ. ಈ ಅವಧಿಯಲ್ಲಿ ಸೂರ್ಯ ದೇವರನ್ನು ಪೂಜಿಸುವುದರಿಂದ ಅನೇಕ ಶುಭಫಲಗಳು ದೊರೆಯಲಿದೆ.

ಈ ಸಮಯದಲ್ಲಿ ಸೂರ್ಯನ ಶಾಖದ ಪ್ರಭಾವ ಅತಿ ಹೆಚ್ಚು. ಸೂರ್ಯನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಂತೆ , ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಈ ರಾಶಿಚಕ್ರದವರು ಬಹಳ ಅದೃಷ್ಟವಂತರಾಗುತ್ತಾರೆ. ರೋಹಿಣಿ ಕಾರ್ತೆಯಿಂದ ಯಾವ ರಾಶಿ ಚಕ್ರದವರು ಯಾವ ರೀತಿಯ ಫಲಿತಾಂಶಗಳನ್ನು ಪಡೆಯುತ್ತಾರೆ ನೋಡೋಣ.

ಮೇಷ ರಾಶಿ

ಸೂರ್ಯನ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಪರಿಣಾಮವಾಗಿ ಎಲ್ಲಾ ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳುತ್ತದೆ. ವ್ಯಾಪಾರದಲ್ಲಿ ಲಾಭವಿದೆ. ಒಡಹುಟ್ಟಿದವರು ಸಹಾಯ ಮಾಡುತ್ತಾರೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಅದೃಷ್ಟ ಸದಾ ಕಾಲ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗ ವ್ಯವಹಾರಗಳಿಗೆ ಇದು ಶುಭ ಸಮಯ. ನಿಮ್ಮ ಕೆಲಸವನ್ನು ಎಲ್ಲರೂ ಮೆಚ್ಚುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಕುಟುಂಬದಿಂದ ಒಳ್ಳೆಯ ಸುದ್ದಿ ಕೇಳಲಿದ್ದೀರಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ರೋಹಿಣಿ ಕಾರ್ತೆಯಿಂದ ಶುಭ ಸಮಯ ಪ್ರಾರಂಭವಾಗುತ್ತವೆ. ಉದ್ಯೋಗ ವ್ಯವಹಾರಗಳಿಗೆ ಅನುಕೂಲಕರ ಸಮಯ. ಗೌರವ ಸಿಗುತ್ತದೆ. ಅನೇಕ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ.ಕುಟುಂಬ ಜೀವನವು ಆನಂದಮಯವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಿದ್ದೀರಿ. ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ. ಬಡ್ತಿ ಅಥವಾ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವಹಿವಾಟುಗಳಿಗೆ ಅನುಕೂಲಕರ ಸಮಯ.

ಸಿಂಹ ರಾಶಿ

ಸೂರ್ಯನ ನಕ್ಷತ್ರ ಬದಲಾವಣೆಯು ಸಿಂಹ ರಾಶಿಯವರ ಜೀವನದಲ್ಲಿ ಬೆಳಕನ್ನು ತರುತ್ತದೆ . ಈ ಸಮಯದಲ್ಲಿ ಕುಟುಂಬದ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಕೌಟುಂಬಿಕ ಜೀವನ ಆನಂದಮಯವಾಗಿರುತ್ತದೆ. ಆರ್ಥಿಕ ಲಾಭವಿರುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ವಿಯಾಗುವಿರಿ. ಸಮಾಜದಲ್ಲಿ ಗೌರವ , ಕೀರ್ತಿ , ಪ್ರತಿಷ್ಠೆ ಹೆಚ್ಚುತ್ತದೆ . ನಿಮ್ಮ ಹೂಡಿಕೆಗಳು ಲಾಭದಾಯಕವಾಗಿರುತ್ತವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ಸಮಯ ತುಂಬಾ ಪ್ರಯೋಜನಕಾರಿ. ವ್ಯಾಪಾರ ಮಾಡಲು ಉತ್ತಮ ಸಮಯ. ಹಲವು ಕ್ಷೇತ್ರಗಳ ಮೂಲಕ ಲಾಭವಿದೆ. ಹಣದ ಹರಿವಿಗೆ ಹೊಸ ಅವಕಾಶಗಳು ದೊರೆಯಲಿವೆ. ವ್ಯಾಪಾರಿಗಳಿಗೆ ಲಾಭ ದೊರೆಯುತ್ತದೆ. ಒಂದು ಪದದಲ್ಲಿ ಹೇಳುವುದಾದರೆ ಕನ್ಯಾ ರಾಶಿಯವರಿಗೆ ಈ ಸಮಯ ಆಶೀರ್ವಾದದಂತೆ.

ಧನು ರಾಶಿ

ಧನು ರಾಶಿಯವರಿಗೆ ಸೂರ್ಯನ ನಕ್ಷತ್ರ ಬದಲಾವಣೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಪ್ರಮೋಷನ್‌ ದೊರೆಯುವ ಸಾಧ್ಯತೆ ಇದೆ. ಆದರೆ ವೆಚ್ಚವನ್ನು ನಿಯಂತ್ರಿಸಬೇಕು. ಕೌಟುಂಬಿಕ ಜೀವನ ಆನಂದಮಯವಾಗಿರುತ್ತದೆ. ಇದು ನಿಮಗೆ ಆರ್ಥಿಕವಾಗಿಯೂ ಪ್ರಯೋಜನಕಾರಿಯಾಗಲಿದೆ. ಶತ್ರುಗಳ ಮೇಲೆ ಜಯ. ಕೆಲಸದ ಸ್ಥಳದಲ್ಲಿ ಗೌರವ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಆರೋಗ್ಯ ಸುಧಾರಿಸುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)