ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಶುಭವಲ್ಲ, ಶುಭ ಫಲಗಳನ್ನೂ ನೀಡಲಿದ್ದಾನೆ ರಾಹು; ಈ ಎರಡೂ ರಾಶಿಗಳೆಂದರೆ ರಾಹುವಿಗೆ ಇನ್ನಿಲ್ಲದ ಪ್ರೀತಿ

ಅಶುಭವಲ್ಲ, ಶುಭ ಫಲಗಳನ್ನೂ ನೀಡಲಿದ್ದಾನೆ ರಾಹು; ಈ ಎರಡೂ ರಾಶಿಗಳೆಂದರೆ ರಾಹುವಿಗೆ ಇನ್ನಿಲ್ಲದ ಪ್ರೀತಿ

ನೆರಳು ಗ್ರಹಗಳು ಎಂದೇ ಹೆಸರಾಗಿರುವ ರಾಹು ಹಾಗೂ ಕೇತು ಸಮಸ್ಯೆಗಳನ್ನಷ್ಟೇ ಅಲ್ಲ, ಕೆಲವರಿಗೆ ಶುಭ ಫಲಗಳನ್ನು ನೀಡುತ್ತಾನೆ. ಅದರಲ್ಲೂ ಸಿಂಹ , ವೃಶ್ಚಿಕ ರಾಶಿಯ ಜನರೆಂದರೆ ರಾಹುವಿಗೆ ಇನ್ನಿಲ್ಲದ ಪ್ರೀತಿ. ಈ ಎರಡೂ ರಾಶಿಯವರ ಮೇಲೆ ರಾಹುವಿಗೆ ವಿಶೇಷ ಆಶೀರ್ವಾದವಿರುತ್ತದೆ.

ಅಶುಭವಲ್ಲ, ಶುಭ ಫಲಗಳನ್ನೂ ನೀಡಲಿದ್ದಾನೆ ರಾಹು; ಈ ಎರಡೂ ರಾಶಿಗಳೆಂದರೆ ರಾಹುವಿಗೆ ಇನ್ನಿಲ್ಲದ ಪ್ರೀತಿ
ಅಶುಭವಲ್ಲ, ಶುಭ ಫಲಗಳನ್ನೂ ನೀಡಲಿದ್ದಾನೆ ರಾಹು; ಈ ಎರಡೂ ರಾಶಿಗಳೆಂದರೆ ರಾಹುವಿಗೆ ಇನ್ನಿಲ್ಲದ ಪ್ರೀತಿ

ಏನಾದರೂ ಶುಭ ಕಾರ್ಯ ಮಾಡುವಾಗ, ಎಲ್ಲಾದರೂ ಹೊರಗೆ ಹೋಗುವಾಗ ರಾಹು ಕಾಲ ಯಾವಾಗ ಎಂದು ನೋಡುತ್ತೇವೆ. ಏಕೆಂದರೆ ರಾಹು ಕಾಲದಲ್ಲಿ ಮಾಡುವ ಕೆಲಸಗಳು ಶುಭ ಫಲ ಕೊಡುವುದಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಮನೆ ಮಾಡಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಹಾಗೂ ಕೇತುವನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಇವರೆಡೂ ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ.

ಶುಭ ಫಲಗಳನ್ನೂ ನೀಡುವ ರಾಹು ಕೇತು

ರಾಹು ಕೇತು ಅಶುಭ ಗ್ರಹಗಳು. ಜನರಿಗೆ ಅವು ಸದಾ ಅಶುಭ ಫಲಗಳನ್ನೇ ನೀಡುತ್ತಾರೆ ಎಂದು ನಂಬಲಾಗಿದೆ. ಆದರೆ ಎಷ್ಟೋ ಬಾರಿ ರಾಹು ಹಾಗೂ ಕೇತು, ಜನರಿಗೆ ಒಳ್ಳೆಯ ಫಲಗಳನ್ನು ಕೂಡಾ ನೀಡುತ್ತವೆ. ಕೆಲವೊಮ್ಮೆ ಯಾರೂ ಊಹಿಸದಂತಹ ಶುಭ ಫಲಗಳನ್ನು ರಾಹು ನೀಡುತ್ತಾನೆ. ಯಾವ ಸಂದರ್ಭಗಳಲ್ಲಿ ಮತ್ತು ಯಾವ ರಾಶಿಚಕ್ರದ ಚಿಹ್ನೆಗಳಿಗೆ ರಾಹು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ನೋಡೋಣ.

ಜ್ಯೋತಿಷ್ಯದಲ್ಲಿ, ರಾಹುವನ್ನು ಅನಿರೀಕ್ಷಿತ ಘಟನೆಗಳಿಗೆ ಕಾರಣವೆಂದು ವಿವರಿಸಲಾಗಿದೆ. ಜ್ಯೋತಿಷಿಗಳ ಪ್ರಕಾರ, ರಾಹುವಿನ ನಿರ್ದಿಷ್ಟ ಸ್ಥಾನವು ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಕೆಟ್ಟ ಸ್ಥಾನದಲ್ಲಿ ವ್ಯಕ್ತಿಯು ಗಂಭೀರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹು ಮೂರನೇ ಅಥವಾ ಆರನೇ ಮನೆಯಲ್ಲಿದ್ದರೆ ಅವರು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ರಾಹುವಿನ ಪ್ರಭಾವದಿಂದಾಗಿ ವ್ಯಕ್ತಿಯು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ, ಧೈರ್ಯ ಹೆಚ್ಚುತ್ತದೆ ಮತ್ತು ಆರ್ಥಿಕವಾಗಿ ಸಬಲರಾಗುತ್ತಾರೆ.

ಸಿಂಹ, ವೃಶ್ಚಿಕ ರಾಶಿಯವರ ಮೇಲೆ ರಾಹು ಆಶೀರ್ವಾದ

ಜಾತಕದಲ್ಲಿ ರಾಹು ದಶಮ ಸ್ಥಿತನಿದ್ದರೆ ಸಕಲ ಸುಖವೂ ಸಿಗುತ್ತದೆ, ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ರಾಹು 11ನೇ ಮನೆಯಲ್ಲಿದ್ದರೆ ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ರಾಹುವಿನ ಶುಭ ಸ್ಥಾನವು ಸಂಪತ್ತು, ಕೀರ್ತಿ, ಐಶ್ವರ್ಯ ಮತ್ತು ಶೌರ್ಯವನ್ನು ನೀಡುತ್ತದೆ.

ಈ ರಾಶಿಚಕ್ರ ಚಿಹ್ನೆಗಳ ಮೇಲೆ ರಾಹುವಿನ ಆಶೀರ್ವಾದ ಸದಾ ಇರುತ್ತದೆ.

ಸಿಂಹ ಹಾಗೂ ವೃಶ್ಚಿಕ ರಾಶಿಯ ಜನರಿಗೆ ರಾಹು ಹೆಚ್ಚಾಗಿ ತೊಂದರೆ ಕೊಡುವುದಿಲ್ಲ.

ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣವಿಲ್ಲದ ಗ್ರಹ ರಾಹುವಿಗೆ ಸಿಂಹ ರಾಶಿ ಎಂದರೆ ಬಹಳ ಪ್ರೀತಿ. ಸಿಂಹ ರಾಶಿಯಲ್ಲಿ ರಾಹುವಿನ ಸಂಚಾರವು ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಸಿಂಹ ರಾಶಿಯಲ್ಲಿ ರಾಹು ಹಠಾತ್ ಆರ್ಥಿಕ ಲಾಭವನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದು ಜೀವನದಲ್ಲಿ ಅನೇಕ ದೊಡ್ಡ ಮತ್ತು ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ರಾಹುವಿನ ಆಶೀರ್ವಾದದಿಂದ ಸಿಂಹ ರಾಶಿಯವರಿಗೆ ಸಕಲ ಸೌಕರ್ಯಗಳು ಸಿಗುತ್ತವೆ. ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಫಲಿತಾಂಶಗಳು ದೊರೆಯುತ್ತದೆ. ಮಾನಸಿಕ ಒತ್ತಡ ದೂರವಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ಕೂಡಾ ರಾಹುವಿನ ಅಚ್ಚುಮೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ಈ ರಾಶಿಯ ಜನರು ರಾಹುವಿನ ಪ್ರಭಾವದಿಂದ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ. ರಾಹುವಿನ ಕೃಪೆಯಿಂದ ಆರ್ಥಿಕ ಲಾಭ ದೊರೆಯುತ್ತದೆ. ಸಾಮಾಜಿಕ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.