ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭದಲ್ಲಿ ಶನಿ ಹಿಮ್ಮುಖ ಚಲನೆ; 4 ರಾಶಿಯವರಿಗೆ 139 ದಿನ ಅಪಾರ ಸಂಪತ್ತು, ದೀಪಾವಳಿ ವರೆಗೆ ಭಾರಿ ಅದೃಷ್ಟ

ಕುಂಭದಲ್ಲಿ ಶನಿ ಹಿಮ್ಮುಖ ಚಲನೆ; 4 ರಾಶಿಯವರಿಗೆ 139 ದಿನ ಅಪಾರ ಸಂಪತ್ತು, ದೀಪಾವಳಿ ವರೆಗೆ ಭಾರಿ ಅದೃಷ್ಟ

ಶನಿ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಇರುವುದರಿಂದ ಮೇಷದಿಂದ ಮೀನ ರಾಶಿಯವರಿಗೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ನವೆಂಬರ್ 15 ರವರೆಗೆ ಕೆಲವು ರಾಶಿಯವರು ಶನಿಯ ಹಿಮ್ಮುಖ ಚಲನೆಯ ಲಾಭವನ್ನು ಪಡೆಯುತ್ತಾರೆ. ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕುಂಭದಲ್ಲಿ ಶನಿ ಹಿಮ್ಮುಖ ಚಲನೆ; 4 ರಾಶಿಯವರಿಗೆ 139 ದಿನ ಅಪಾರ ಸಂಪತ್ತು, ದೀಪಾವಳಿ ವರೆಗೆ ಭಾರಿ ಅದೃಷ್ಟ
ಕುಂಭದಲ್ಲಿ ಶನಿ ಹಿಮ್ಮುಖ ಚಲನೆ; 4 ರಾಶಿಯವರಿಗೆ 139 ದಿನ ಅಪಾರ ಸಂಪತ್ತು, ದೀಪಾವಳಿ ವರೆಗೆ ಭಾರಿ ಅದೃಷ್ಟ

ಶನಿ ವಕ್ರಿ 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯನ್ನು ನ್ಯಾಯದ ದೇವರು ಮತ್ತು ಫಲಿತಾಂಶಗಳನ್ನು ನೀಡುವ ದೇವರು ಎಂದು ಕರೆಯಲಾಗುತ್ತೆ. ಪ್ರಸ್ತುತ, ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಇದು ಶನಿಯ ಮೂಲ ತ್ರಿಕೋನ ರಾಶಿಯಾಗಿದೆ. ಶನಿ 2024ರ ಜೂನ್ 29 ರಂದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನವೆಂಬರ್ 15ರ ವರೆಗೆ ಹಿಮ್ಮುಖ ಸ್ಥಿತಿಯಲ್ಲೇ ಇರುತ್ತಾನೆ. ಕುಂಭದಲ್ಲಿ ಹಿಮ್ಮುಖವಾಗಿ (Saturn Retrograde in Aquarius) 139 ದಿನಗಳ ವರೆಗೆ ಇರಲಿದ್ದಾನೆ. ಇದು ಕೆಲವು ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಹೊರತಾಗಿಯೂ ಕೆಲವು ರಾಶಿಯವರಿಗೆ ತುಂಬಾ ಪ್ರಯೋಜನಗಳಿವೆ. ಶನಿ ವಕ್ರಿಯಿಂದ ಯಾವೆಲ್ಲಾ ರಾಶಿಯವರಿಗೆ ಲಾಭಗಳಿವೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ: ಶನಿಯ ಹಿಮ್ಮುಖ ಚಲನೆಯಿಂದ ಮೇಷ ರಾಶಿಯವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿವೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆಇದೆ. ಹಣಕ್ಕೆ ಸಂಬಂಧಿಸಿದ ವಿಷಗಳಲ್ಲಿ ಜಯ ಪಡೆಯುತ್ತೀರಿ. ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗುತ್ತದೆ.

ಧನು ರಾಶಿ: ಈ ರಾಶಿಯವರಿಗೆ ಶನಿ ವಕ್ರಿಯ ಲಾಭಗಳಿವೆ. ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣುತ್ತೀರಿ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಕಚೇರಿಯಲ್ಲಿ ನಿಮ್ಮ ಕಾರ್ಯಶೈಲಿಯಿಂದ ಉನ್ನತ ಅಧಿಕಾರಿಗಳು ಪ್ರಭಾವಿತರಾಗುತ್ತಾರೆ. ವೈವಾಹಿಕ ಜೀವನ ಸುಧಾರಿಸಲಿದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಶನಿಯ ಕೃಪೆಯಿಂದ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ.

ಮಕರ ರಾಶಿ: ಶನಿಯ ಹಿಮ್ಮುಖ ಚಲನೆ ಮಕರ ರಾಶಿಯವರಿಗೂ ಲಾಭವನ್ನು ತರುತ್ತಿದೆ. ಶನಿಯ ಕೃಪೆಯಿಂದಾಗಿ ಈ ರಾಶಿಯವರಿಗೆ ಆರ್ಥಿಕ ಲಾಭಗಳಿಗಾಗಿ ಹೊಸ ಅವಕಾಶಗಳು ಸಿಗಲಿವೆ. ಅನಿರೀಕ್ಷಿತ ಆರ್ಥಿಕ ಲಾಭಗಳ ಬಲವಾದ ಮುನ್ಸೂಚನೆಗಳಿವೆ. ಈ ಅವಧಿಯಲ್ಲಿ ನಿಮಗೆ ಹಲವು ದಿನಗಳಿಂದ ಬಾಕಿ ಇರುವ ಹಣ ಮರಳಿ ಪಡೆಯುತ್ತೀರಿ. ಕುಟುಂಬದ ದೊಡ್ಡ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ, ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಬೇಕು.

ಕುಂಭ ರಾಶಿ: ಶನಿ ಕುಂಭ ರಾಶಿಯ ಅಧಿಪತಿಯಾಗಿರುವುದರಿಂದ ಇವರಿಗೆ ಸಾಕಷ್ಟು ಲಾಭಗಳಿವೆ. ಅದರಲ್ಲೂ ಶನಿ ಹಿಮ್ಮುಖ ಚಲನೆಯು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಯಾವುದೇ ತಂತ್ರಗಳನ್ನು ರೂಪಿಸಿದರೂ ಅದರಲ್ಲಿ ಯಶಸ್ಸು ಕಾಣುತ್ತೀರಿ. ನಿಮ್ಮ ಕಠಿಣ ಪರಿಶ್ರಮದಿಂದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತೀರಿ. ಹಣದ ಒಳಹರಿವು ಮೊದಲಿಗಿಂತಲೂ ಉತ್ತಮವಾಗಿರುತ್ತದೆ. ಹಣವನ್ನು ಉಳಿಸುವ ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ. ಸಂಪೂರ್ಣವಾಗಿ ಸಾಲ ತೀರಿಸಲು ಪ್ರಯತ್ನಿಸುತ್ತೀರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.