Shani Sadesati: 2025 ರಲ್ಲಿ ಶನಿ ಸಾಡೇಸಾತಿ ಮೇಷದಲ್ಲಿ ಪ್ರಾರಂಭ; ಈ ರಾಶಿಯವರಿಗೆ ಏನೆಲ್ಲಾ ಸವಾಲುಗಳಿವೆ
ಮೇಷ ರಾಶಿಯ ಮೇಲೆ ಶನಿ ಸಾಡೇಸಾತಿ: 2025 ರ ಮಾರ್ಚ್ ನಲ್ಲಿ ಶನಿ ಸಾಡೇಸಾತಿಯ ಮೊದಲ ಹಂತವು ಪ್ರಾರಂಭವಾಗುತ್ತದೆ. ಮೇಷ ರಾಶಿಯ ಜನರ ಮೇಲೆ ಶನಿ ಹೇಗೆ ಪರಿಣಾಮ ಬೀರುತ್ತಾನೆ, ದ್ವಾದಶ ರಾಶಿಗಳ ಪೈಕಿ ಮೊದಲ ರಾಶಿಯಾಗಿರುವ ಮೇಷದವರಿಗೆ ಇದರಿಂದ ಏನೆಲ್ಲಾ ಸವಾಲುಗಳು ಇರುತ್ತವೆ ಎಂಬುದನ್ನು ತಿಳಿಯೋಣ.
2025 ರಲ್ಲಿ ಮೇಷ ರಾಶಿಯವರಿಗೆ ಶನಿ ಸಾಡೇಸಾತಿ ಪರಿಣಾಮ: ಶನಿಯ ಸಾಡೇಸಾತಿಯನ್ನು ಜ್ಯೋತಿಷ್ಯದಲ್ಲಿ ಕಷ್ಟಕರ ಹಂತವೆಂದು ಪರಿಗಣಿಸಲಾಗಿದೆ. ಶನಿ ಒಂದು ರಾಶಿಚಕ್ರ ಚಿಹ್ನೆಯಿಂದ ಹೊರಬಂದು ಮತ್ತೊಂದು ರಾಶಿಯನ್ನು ಪ್ರವೇಶಿಸಿದಾಗ ಅದು ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಪ್ರಭಾವ ಬೀರುತ್ತದೆ. 2025ರ ಮಾರ್ಚ್ ನಲ್ಲಿ ಶನಿ ಕುಂಭ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ, ಇದು ಮೇಷ ರಾಶಿಯ ಮೇಲೆ ಶನಿಯ ಸಾಡೇಸಾತಿಯ ಮೊದಲ ಹಂತವನ್ನು ಪ್ರಾರಂಭಿಸುತ್ತದೆ. ಗ್ರಹಗಳ ಅಧಿಪತಿಯಾದ ಶನಿ 2025ರ ಮಾರ್ಚ್ 29 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಸುಮಾರು ಎರಡೂವರೆ ವರ್ಷಗಳ ನಂತರ ಅಂದರೆ 2027ರ ಜೂನ್ 3 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮೇಷ ರಾಶಿಯವರ ಮೇಲೆ ಶನಿಯ ಸಾಡೇಸಾತಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಜ್ಯೋತಿಷಿ ಪಂಡಿತ್ ನರೇಂದ್ರ ಉಪಾಧ್ಯಾಯ ವಿವರಿಸಿದ್ದಾರೆ.
2025ರ ಮಾರ್ಚ್ 29 ರಂದು ಮೇಷ ರಾಶಿಯಲ್ಲಿ ಶನಿಯ ಸಾಡೇಸಾತಿ ಪ್ರಾರಂಭವಾಗುತ್ತದೆ. ಅಂದು ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ಮೀನ ರಾಶಿಗೆ ಪ್ರವೇಶಿಸಿದ ಕೂಡಲೇ, ಶನಿಯ ಸಾಡೇಸಾತಿಯ ಮೊದಲ ಹಂತವು ಮೇಷ ರಾಶಿಯಲ್ಲಿ ಪ್ರಾರಂಭವಾಗುತ್ತದೆ. ಶನಿಯ ಸಾಡೇಸಾತಿಯ ಎರಡನೇ ಹಂತವು ಮೀನ ರಾಶಿಯಲ್ಲಿ ಪ್ರಾರಂಭವಾಗುತ್ತದೆ. ಮೂರನೇ ಹಂತವು ಕುಂಭ ರಾಶಿಯಲ್ಲಿ ಪ್ರಾರಂಭವಾಗುತ್ತದೆ.
ಮೇಷ ರಾಶಿಯ ಮೇಲೆ ಶನಿಯ ಸಾಡೇಸಾತಿ ಪ್ರಭಾವ
ಜ್ಯೋತಿಷಿ ಪಂಡಿತ್ ನರೇಂದ್ರ ಉಪಾಧ್ಯಾಯ ಅವರು ಹೇಳುವ ಪ್ರಕಾರ, 2025ರ ಮಾರ್ಚ್ 29 ರಿಂದ ಮೇಷ ರಾಶಿಯವರು ಶನಿಯ ಸಾಡೇಸಾತಿಯ ಮೊದಲ ಹಂತವನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಮೇಷ ರಾಶಿಯವರು ತಮ್ಮ ಉದ್ಯೋಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಣದ ನಷ್ಟವಾಗಬಹುದು. ತಲೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಸಾಲದ ಪರಿಸ್ಥಿತಿ ಉಂಟಾಗಬಹುದು. ಮುಖ್ಯವಾಗಿ ಆರ್ಥಿಕ ಮತ್ತು ದೈಹಿಕ ನಷ್ಟ ಇರುತ್ತದೆ. ನೀವು ಸೋಮಾರಿತನ ಅಥವಾ ಮುಂದೂಡುವಿಕೆಯೊಂದಿಗೆ ಹೆಣಗಾಟವನ್ನು ಕಾಣುತ್ತೀರಿ. ಅನಿರೀಕ್ಷಿತ ಆರ್ಥಿಕ ಹಿನ್ನಡೆ ಇರುತ್ತದೆ. ಮನೆಯಲ್ಲಿ ಕೆಲವು ಒತ್ತಡದ ಸನ್ನಿವೇಶಗಳನ್ನು ಸಹ ಎದುರಿಸಬಹುದು, ಇದು ಮೇಷ ರಾಶಿಯವರ ಕುಟುಂಬ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
2025ರಲ್ಲಿ ಯಾವ ರಾಶಿಯವರಿಗೆ ಶನಿಯ ಸಾಡೇಸಾಡಿ ಕೊನೆಗೊಳ್ಳುತ್ತೆ
2025 ರಲ್ಲಿ ಸಿಂಹ ಮತ್ತು ಧನು ರಾಶಿಯವರಿಗೆ ಶನಿಯ ಸಾಡೇಸಾತಿ ಕೊನೆಗೊಳ್ಳುತ್ತದೆ. ಮೇಷ ರಾಶಿಯ ಮೇಲೆ ಶನಿಯ ಸಾಡೇಸಾತಿ 2032ರ ಮೇ 31 ರವರೆಗೆ ಇರುತ್ತದೆ. ಇದಾದ ನಂತರ, ಈ ರಾಶಿಯವರು ಶನಿಯ ಪ್ರಭಾವವನ್ನು ತೊಡೆದುಕೊಳ್ಳಲು ಸಾಧ್ಯವಾಗುತ್ತದೆ.
2025 ರಲ್ಲಿ ಯಾವ ರಾಶಿಯವರಿಗೆ ಶನಿಯ ಸಾಡೇಸಾತಿ ಕೊನಗೊಳ್ಳುತ್ತದೆ ಎಂಬುದನ್ನು ನೋಡುವುದಾದರೆ ಮಕರ ರಾಶಿವರಿಗೆ ಶನಿಯ ಸಾಡೇಸಾತಿ ಕೊನೆಯ ಹಂತದಲ್ಲಿದೆ. ಇದು 2025ರ ಮಾರ್ಚ್ ನಲ್ಲಿ ಕೊನೆಗೊಳ್ಳುತ್ತದೆ. 2025ರ ಮಾರ್ಚ್ 29ರ ನಂತರ ಮಕರ ರಾಶಿಯ ಮೇಲೆ ಶನಿಯ ಸಾಡೇಸಾತಿಯ ಯಾವುದೇ ಪರಿಣಾಮಗಳು ಇರುವುದಿಲ್ಲ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)