Ramachari Serial: ರುಕ್ಕು ಅಂದುಕೊಂಡಂತೆ ಮತ್ತೆ ಮನೆಗೆ ಕುಡಿದು ಬಂದ ಕೋದಂಡ; ವೈಶಾಖಾ ಜೈಲಿಂದ ಹೊರ ಬರುವ ಸಾಧ್ಯತೆ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರುಕ್ಕು ಅಂದುಕೊಂಡಂತೆ ಮತ್ತೆ ಮನೆಗೆ ಕುಡಿದು ಬಂದ ಕೋದಂಡ; ವೈಶಾಖಾ ಜೈಲಿಂದ ಹೊರ ಬರುವ ಸಾಧ್ಯತೆ

Ramachari Serial: ರುಕ್ಕು ಅಂದುಕೊಂಡಂತೆ ಮತ್ತೆ ಮನೆಗೆ ಕುಡಿದು ಬಂದ ಕೋದಂಡ; ವೈಶಾಖಾ ಜೈಲಿಂದ ಹೊರ ಬರುವ ಸಾಧ್ಯತೆ

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕೋದಂಡ ಮತ್ತೆ ಕುಡಿದು ಮನೆಗೆ ಬಂದಿದ್ದಾನೆ. ಇದು ರುಕ್ಕು ಮಾಡಿದ ಉಪಾಯ. ತಾನು ಒಳ್ಳೆಯವಳಂತೆ ಇದ್ದುಕೊಂಡು ಆ ಮನೆಗೆ ಕೆಟ್ಟದ್ದನ್ನು ಮಾಡುತ್ತಿದ್ದಾಳೆ.

ರುಕ್ಕು ಅಂದುಕೊಂಡಂತೆ ಮತ್ತೆ ಮನೆಗೆ ಕುಡಿದು ಬಂದ ಕೋದಂಡ
ರುಕ್ಕು ಅಂದುಕೊಂಡಂತೆ ಮತ್ತೆ ಮನೆಗೆ ಕುಡಿದು ಬಂದ ಕೋದಂಡ

ರಾಮಾಚಾರಿ ಧಾರಾವಾಹಿಯಲ್ಲಿ ಕೋದಂಡ ವೈಶಾಖಾಳನ್ನು ಮತ್ತೆ ಪ್ರೀತಿಸಲು ಆರಂಭಿಸಿದ್ದಾನೆ. ಅವನಿಗೆ ಮತ್ತೆ ತನ್ನ ಹೆಂಡತಿ ಬೇಕು ಎಂದು ಅನಿಸಲು ಆರಂಭವಾಗಿದೆ. ಹಿಂದೊಮ್ಮೆ ಅವನು ತನಗೆ ನಿನ್ನ ಅವಶ್ಯಕಥೆಯೇ ಇಲ್ಲ ಎಂದು ಹೇಳಿ ವೈಶಾಖಳನ್ನು ಧಿಕ್ಕರಿಸಿ ಹೋಗಿದ್ದ. ಆದರೆ ಈಗ ಮತ್ತೆ ಜತೆಗೂಡಲು ಬಯಸುತ್ತಿದ್ದಾನೆ. ಹೀಗಿರುವಾರುವಾಗ ಇದೆಲ್ಲವೂ ರುಕ್ಕು ಮಾಡಿದ ಉಪಾಯ ಎಂದು ಆ ನಂತರ ತಿಳಿದುಬರುತ್ತದೆ. ವೈಶಾಖ ಜೈಲಿನಲ್ಲಿ ತನ್ನ ಪಕ್ಕ ಇದ್ದ ಇನ್ನೊಬ್ಬ ಖೈದಿ ಜೊತೆ ಅವಳ ಮನೆಯ ವಿಚಾರವನ್ನು ಮಾತಾಡುತ್ತಾ ಇರುತ್ತಾಳೆ.

ವೈಶಾಖಾ ಅಂದುಕೊಂಡಂತೆ ಆಗುತ್ತಾ?

ಈಗ ಮನೆಗೆ ಹೊಸದಾಗಿ ಬಂದ ಸೊಸೆ ತುಂಬಾ ಚಾಲಾಕಿ. ನನಗಿಂತ ಬೇಗ ಅವಳು ಎಲ್ಲ ಕೆಲಸ ಮಾಡಿದ್ದಾಳೆ. ಮೊನ್ನೆ ಜೈಲಿಗೆ ಬಂದು ಹೋಗುವಾಗ ನಿನ್ನ ಗಂಡ ನಿನ್ನನ್ನು ಹುಡುಕಿಕೊಂಡು ಬರುವ ರೀತಿ ಮಾಡುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಅದನ್ನೆಲ್ಲ ಬಾಯ್ಮಾತಿಗೆ ಹೇಳಿದ್ದಾಳೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅದು ಹಾಗಲ್ಲ.. ನಿಜಕ್ಕೂ ಆ ಮಾತು ನಿಜವಾಗಿಯೇ ಹೋಯ್ತು ಎಂದಿದದ್ದಾಳೆ.

ರುಕ್ಕು ಕೂಗು
ಇನ್ನು ಮನೆಯಲ್ಲಿ ತಾನು ಕೋದಂಡ ಬರುವುದಕ್ಕಾಗಿಯೇ ಕಾದಿದ್ದೇನೆ ಎಂಬಂತೆ ಓಡಾಡುತ್ತಿದ್ದ ರುಕ್ಕು. ಕೋದಂಡ ಕುಡಿದುಕೊಂಡು ಬರುತ್ತಿರುವುದನ್ನು ನೋಡುತ್ತಾಳೆ. ನೋಡಿ ಅವನನ್ನು ತಡೆಯದೇ ಸೀದಾ ಮನೆಯೊಳಗಡೆ ಓಡಿ ಬರುತ್ತಾಳೆ. ಓಡಿ ಬಂದವಳೇ ಅತ್ತೆ, ಮಾತ, ಅತ್ತಿಗೆ ಮತ್ತು ಭಾವ ಎಲ್ಲರನ್ನೂ ಕರೆದು ಮತ್ತೆ ಕೋದಂಡ ಕುಡಿದು ಬಂದ ಎನ್ನುತ್ತಾಳೆ.

ಜನಾಭಿಪ್ರಾಯ

ವಿಲನ್ ಗಳಿಲ್ಲದೆ ಈ ಸೀರಿಯಲ್ ನಡೆಯಲ್ಲಾ ಅನ್ಸುತ್ತೆ. ಅದಕ್ಕೆ ವೈಶಾಖ ಳನ್ನು ಕಾಲಿಗೆ ಬಿದ್ದು ಕರೆದುಕೊಂಡು ಬರ್ತಿದ್ದಾರೆ. ಮೊದಲಿಂದ ನೋಡ್ತಿದ್ದೀವಲ್ಲಾ ಅಂತ ಕಷ್ಟಪಟ್ಟು ನೋಡ್ಬೇಕಾಗಿದೆ ಎಂದು ಯಶೋಧಾ ಕಾಮೆಂಟ್ ಮಾಡಿದ್ಧಾರೆ.

ಜನ ಮನಸ್ಸಿಗೆ ಹಿಡಿಸುವಂತೆ ಸಾಹಿತ್ಯ ಬೆಳೆಸಿ . ದುಶ್ಚಟ, ಸೇಡು, ವೈರತ್ವ, ಸದಾ ಕಾಲ ನೋಡಲು ಬೆಸರ. ನವರಸ ಆಸ್ವಾದಿಸುವ ಜನ ಮನಗಳು ಈ ವಿಚಿತ್ರ ಕಲ್ಪನೆಗಳಿಂದ ಬೆಸತ್ತಿವೆ. ಜನರು ಆಚಾರ ಸಂಸ್ಕಾರ ಮರೆತು ಬದುಕುವದೆ ಸೂಕ್ತ ಎನ್ನುವ ಕಟು ನಿರ್ಧಾರಕ್ಕೆ ಸಿದ್ದರಾಗುವರು ಎಂದು ಪವಿತ್ರಾ ಕಾಮೆಂಟ್ ಮಾಡಿದ್ದಾರೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner