ಆಕ್ಷೇಪಾರ್ಹ ಪದ ಬಳಕೆ ಆರೋಪ; ಎಫ್‌ಐಆರ್ ದಾಖಲು ಬೆನ್ನಲೇ ಎಂಎಲ್‌ಸಿ ಸಿಟಿ ರವಿ ಪೊಲೀಶ್ ವಶಕ್ಕೆ
ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೀರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೀರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿಟಿ ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದನದೊಳಗೆ ಅವಚ್ಯ ಶಬ್ದ ಬಳಕೆ ಬೆನ್ನಲ್ಲೇ, ಸುವರ್ಣ ವಿಧಾನಸೌಧದ ಕಾರಿಡಾರ್ ಬಳಿಕ ಸಿಟಿ ರವಿ ಮೇಲೆ ಹೆಬ್ಬಾಳ್ಕರ್ ಬೆಂಬಲಿಗರು ಹಲ್ಲೆ ನಡೆಸಿದ್ದರು. ಅದಾದ ನಂತರ, ಕೊಲೆ ಯತ್ನ ಆರೋಪಿಸಿದ ಸಿಟಿ ರವಿ ಸುವರ್ಣಸೌಧದ ಕಾರಿಡಾರ್‌ನಲ್ಲಿ ಧರಣಿ ಕುಳಿತ್ತಿದ್ದರು. ಇದೀಗ ಅಲ್ಲಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿಸಿಪಿ ಮೇಲುಸ್ತುವಾರಿಯಲ್ಲಿ ಸಿಟಿ ರವಿ ಅವರನ್ನು ಪೊಲೀಸರು ವಶ್ಕೆ ಪಡೆದಿದ್ದು, ತಮ್ಮ ವಾಹನದಲ್ಲಿ ಕರೆದೊಯ್ದಿದ್ದಾರೆ. ಧರಣಿ ಕುಳಿತಿದ್ದ ಸಿಟಿ ರವಿ ಅವರನ್ನು ಪೊಲೀಸರು ಎತ್ತಿಕೊಂಡೇ ಹೋಗಿ ಗಾಡಿಯಲ್ಲಿ ಕೂರಿಸಿದ್ದಾರೆ. ಆ ಸಮಯದಲ್ಲೂ ಅವರು ಧರಣಿ ಕೂಗುತ್ತಿದ್ದರು.
ಆಕ್ಷೇಪಾರ್ಹ ಪದ ಬಳಕೆ ಬಿಜೆಪಿ ನಾಯಕನಿಗೆ ದುಬಾರಿಯಾಗಿದೆ. ಘಟನೆ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಪೊಲೀಸ್ ದೂರು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್ ಕಾನೂನು ಕ್ರಮಕ್ಕೆ ಮುಂದಾದರು. ಎಫ್‌ಐಆರ್ ದಾಖಲಿಸಿದ ಹೀರೇಬಾಗೇವಾಡಿ ಪೊಲೀಶರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಸುವರ್ಣಸೌಧದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಎಸ್‌ಆರ್‌ಪಿ ತುಕಡಿಯ ಭದ್ರತೆಯಲ್ಲಿ ಸಿಟಿ ರವಿ ನಂದಗಡ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.
ಪ್ರಕರಣದ ಹಿನ್ನೆಲೆ
ರಾಜ್ಯಸಭೆಯಲ್ಲಿ ಬಿಆರ್ ಆಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ, ರಾಜ್ಯ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಇದಕ್ಕೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯ್ತು. ಈ ಸಮಯದಲ್ಲಿ ಎಂಎಲ್‌ಸಿ ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ಕ್ಷಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ/ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದನ್ನು ಸಹಿಸದ ಹೆಬ್ಬಾಳ್ಕರ್ ಕೂಡಾ ಪರಿಷತ್ ಸದಸ್ಯನ ವಿರುದ್ಧ ಕಿಡಿಕಾರಿದ್ದಾರೆ.
ಘಟನೆ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುವರ್ಣ ಸೌಧದಲ್ಲಿ ಕಾರಿಡಾರ್ ಬಳಿ ಸಿಟಿ ರವಿ ನಡೆದುಕೊಂಡು ಬರುತ್ತಿದ್ದಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು, ಅವರ ಮೇಲೆ ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಬಳಿಕ ತನ್ನ ಮೇಲೆ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದಾರೆ ಎಂದು ಎಂಎಲ್‌ಸಿ ಸಿಟಿ ರವಿ ಆರೋಪಿಸಿದ್ದಾರೆ.
ನಾನು ಅವಾಚ್ಯ ಶಬ್ದ ಬಳಸಿಲ್ಲ ಎಂದ ಸಿಟಿ ರವಿ
ಹಲ್ಲೆ ಯತ್ನ ಬಳಿಕ ಸುವರ್ಣ ಸೌಧದ ಕಾರಿಡಾರ್‌ನಲ್ಲಿ ಧರಣಿ ಕುಳಿತ ಸಿಟಿ ರವಿ, ಪ್ರತಿಭಟನೆ ನಡೆಸಿದ್ದಾರೆ. “ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಸುವರ್ಣ ಸೌಧದ ಮೊಗಸಾಲೆಯಲ್ಲಿ ಹೋಗುತ್ತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲ ಎಂದಾದರೆ, ರಾಜ್ಯದ ಇತರ ಜನರ ಪರಿಸ್ಥಿತಿ ಏನು? ಕಾಂಗ್ರೆಸ್ ವಿರುದ್ಧ ಧರಣಿ ನಡೆಸುತ್ತಿದ್ದೇನೆ. ನಾನು ಯಾವುದೇ ಅವಾಚ್ಯ ಶಬ್ದ ಬಳಕೆ ಮಾಡಿಲ್ಲ. ಬೇಕಿದ್ದರೆ ವಿಡಿಯೋ ನೋಡಿ. ನನಗೆ ಯಾವುದೇ ಭಯ ಇಲ್ಲ. ಇದೆಲ್ಲಾ ಕಾಂಗ್ರೆಸ್ ಶಡ್ಯಂತ್ರ" ಎಂದು ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
(ಸುದ್ದಿ ಅಪ್ಡೇಟ್ ಆಗಲಿದೆ)