Black Warrant: ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಂದು ಥ್ರಿಲ್ಲರ್ ವೆಬ್‌ ಸಿರೀಸ್‌; ಜನವರಿಯಲ್ಲಿ ಸ್ಟ್ರೀಮ್ ಆಗಲಿದೆ ಬ್ಲಾಕ್ ವಾರೆಂಟ್‌
ಕನ್ನಡ ಸುದ್ದಿ  /  ಮನರಂಜನೆ  /  Black Warrant: ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಂದು ಥ್ರಿಲ್ಲರ್ ವೆಬ್‌ ಸಿರೀಸ್‌; ಜನವರಿಯಲ್ಲಿ ಸ್ಟ್ರೀಮ್ ಆಗಲಿದೆ ಬ್ಲಾಕ್ ವಾರೆಂಟ್‌

Black Warrant: ನೆಟ್‌ಫ್ಲಿಕ್ಸ್‌ನಲ್ಲಿ ಮತ್ತೊಂದು ಥ್ರಿಲ್ಲರ್ ವೆಬ್‌ ಸಿರೀಸ್‌; ಜನವರಿಯಲ್ಲಿ ಸ್ಟ್ರೀಮ್ ಆಗಲಿದೆ ಬ್ಲಾಕ್ ವಾರೆಂಟ್‌

Black Warrant: ನೆಟ್‌ಫ್ಲಿಕ್ಸ್ ಹೊಸ ಥ್ರಿಲ್ಲರ್ ವೆಬ್ ಸರಣಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಿದೆ. ಮುಂದಿನ ವರ್ಷದ ಆರಂಭದಲ್ಲೇ ಸಾಕಷ್ಟು ಸಿನಿಮಾಗಳನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ನಾವಿಲ್ಲಿ ಕೆಲವು ವೆಬ್‌ ಸಿರೀಸ್‌ ಹೆಸರನ್ನು ನೀಡಿದ್ದೇವೆ ಗಮನಿಸಿ.

ಜನವರಿಯಲ್ಲಿ ಸ್ಟ್ರೀಮ್ ಆಗಲಿದೆ ಬ್ಲಾಕ್ ವಾರೆಂಟ್‌
ಜನವರಿಯಲ್ಲಿ ಸ್ಟ್ರೀಮ್ ಆಗಲಿದೆ ಬ್ಲಾಕ್ ವಾರೆಂಟ್‌

Black Warrant: ಇತ್ತೀಚೆಗೆ ಬ್ಲ್ಯಾಕ್ ವಾರಂಟ್ ಎಂಬ ಸರಣಿಯನ್ನು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ವರ್ಷ, ಹಿರಾಮಂಡಿ, ಐಸಿ 814: ದಿ ಕಂದಹಾರ್ ಹೈಜಾಕ್‌ನಂತಹ ವೆಬ್ ಸರಣಿಗಳನ್ನು ಜನರ ವೀಕ್ಷಣೆಗೆ ನೀಡಿರುವ ಈ ಒಟಿಟಿ ಮುಂದಿನ ದಿನಗಳಲ್ಲಿ ಸಾಕಷ್ಟು ವೆಬ್‌ ಸರಣಿಗಳನ್ನು ನೀಡಲಿದೆ. ನೆಟ್‌ಫ್ಲಿಕ್ಸ್ ತನ್ನ ಹೊಸ ವೆಬ್ ಸರಣಿಯ ಟೀಸರ್ ಅನ್ನು ಇಂದು ಗುರುವಾರ (ಡಿಸೆಂಬರ್ 19) ಬಿಡುಗಡೆ ಮಾಡಿದೆ. ಜಹಾನ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬ್ಲಾಕ್ ವಾರಂಟ್ ವೆಬ್ ಸರಣಿಯು ಜನವರಿ 10 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ . ಇದೊಂದು ರೋಚಕ ಕಥನವಾಗಿದ್ದು ಜೈಲಿನ ಬಗ್ಗೆ ಇದೆ ಎನ್ನಲಾಗುತ್ತಿದೆ.

ನೈಜ ಘಟನೆ ಆಧಾರಿತ ಸರಣಿ

ಈ ಸರಣಿಯು ತಿಹಾರ್ ಜೈಲಿನಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ. ದೆಹಲಿಯ ಈ ಜೈಲು ಏಷ್ಯಾದ ಅತಿದೊಡ್ಡ ಜೈಲು ಎಂದು ಕರೆಯಲ್ಪಡುತ್ತದೆ. ಈ ಸರಣಿಯ ಮೂಲಕ ಜೈಲರ್ ಸುನೀಲ್ ಕುಮಾರ್ ಗುಪ್ತಾ ಅವರ ದೃಷ್ಟಿಕೋನದಿಂದ ಕುಖ್ಯಾತ ಕ್ರಿಮಿನಲ್‌ಗಳೊಂದಿಗಿನ ಅವರ ಅನುಭವವನ್ನು ಜನರ ಮುಂದೆ ತೆರೆದಿಡುವ ಪ್ರಯತ್ನ ಮಾಡಲಾಗಿದೆ. ರೋಚಕ ಕಥನವನ್ನು ಇಷ್ಟಪಡುವವರಿಗೆ ಈ ವೆಬ್‌ ಸರಣಿ ಹಬ್ಬದಂತಿದೆ.

ಸಿನಿಮಾ ತಂಡ

ಹಿರಿಯ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಮತ್ತು ಸತ್ಯಾಂಶು ಸಿಂಗ್ ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಈ ಬ್ಲಾಕ್ ವಾರೆಂಟ್ ಸರಣಿಯ ತಯಾರಕರು ಜೈಲು ಜೀವನ ಹೇಗಿದೆ ಎಂಬುದನ್ನು ಹೊರ ಜಗತ್ತಿಗೆ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಜಹಾನ್ ಕಪೂರ್ ಇದರಲ್ಲಿ ಜೈಲರ್ ಸುನಿಲ್ ಕುಮಾರ್ ಆಗಿ ನಟಿಸಿದ್ದಾರೆ. ಅವರ ಜೊತೆಗೆ ರಾಹುತ್ ಭಟ್, ಪರಮವೀರ್ ಸಿಂಗ್ ಚೀಮಾ, ಅನುರಾಗ್ ಠಾಕೂರ್ ಮತ್ತು ಸಿದ್ಧಾಂತ್ ಗುಪ್ತಾ ಮುಂತಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಕನ್ಫೆಷನ್ಸ್ ಆಫ್ ಎ ತಿಹಾರ್ ಜೈಲರ್ ಪುಸ್ತಕ

ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಮತ್ತು ಆಂದೋಲನ್ ಪ್ರೊಡಕ್ಷನ್ಸ್ ಜಂಟಿಯಾಗಿ ಈ ಬ್ಲ್ಯಾಕ್ ವಾರೆಂಟ್ ವೆಬ್ ಸರಣಿಯನ್ನು ನಿರ್ಮಿಸುತ್ತಿವೆ. ಈ ಸರಣಿಯು ತಿಹಾರ್ ಜೈಲಿನ ಜೈಲರ್ ಸುನಿಲ್ ಗುಪ್ತಾ ಮತ್ತು ಪತ್ರಕರ್ತೆ ಸುನೇತ್ರಾ ಚೌಧರಿ ಬರೆದ ಬ್ಲ್ಯಾಕ್ ವಾರೆಂಟ್: ಕನ್ಫೆಷನ್ಸ್ ಆಫ್ ಎ ತಿಹಾರ್ ಜೈಲರ್ ಪುಸ್ತಕವನ್ನು ಆಧರಿಸಿದೆ. Netflix ಸಹಯೋಗದಲ್ಲಿ ಭಾರತದ ಮೊದಲ ಸೂಪರ್ ಹಿಟ್ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ ಅನ್ನು ಪ್ರಸ್ತುತಪಡಿಸಿದ ಅದೇ ತಂಡದೊಂದಿಗೆ ಈ OTT ಈ ಹೊಸ ವೆಬ್ ಸರಣಿಯನ್ನು ತರುತ್ತಿದೆ, ಆದ್ದರಿಂದ ಬ್ಲ್ಯಾಕ್ ವಾರಂಟ್‌ ನೋಡಲು ಜನರು ಆಸಕ್ತರಾಗಿದ್ದಾರೆ.

ಟೀಸರ್ ಕೂಡ ಈ ಸರಣಿಯ ನಿರೀಕ್ಷೆಯನ್ನು ಹೆಚ್ಚಿಸಿದೆ. 2024ರಲ್ಲಿ ತನ್ನ ಮೂಲ ಕಂಟೆಂಟ್‌ನೊಂದಿಗೆ ಭಾರತೀಯ ಪ್ರೇಕ್ಷಕರನ್ನು ಆಕರ್ಷಿಸಿದ ನೆಟ್‌ಫ್ಲಿಕ್ಸ್. ಹೊಸ ವರ್ಷದಲ್ಲಿ ಇನ್ನೂ ಹೆಚ್ಚಿನ ಜನರನ್ನು ಸೆಳೆಯುವ ನಿರೀಕ್ಷೆ ಇದೆ.

Whats_app_banner