ಸೂರ್ಯ ಸಂಕ್ರಮಣ; ಆದಾಯ ಹೆಚ್ಚಳ, ಕೆಲಸದಲ್ಲಿ ಯಶಸ್ಸು, ಮೇಷದಿಂದ ಮೀನದವರಿಗೆ ದ್ವಾದಶ ರಾಶಿಗಳ ಶುಭ, ಅಶುಭ ಫಲಿತಾಂಶಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೂರ್ಯ ಸಂಕ್ರಮಣ; ಆದಾಯ ಹೆಚ್ಚಳ, ಕೆಲಸದಲ್ಲಿ ಯಶಸ್ಸು, ಮೇಷದಿಂದ ಮೀನದವರಿಗೆ ದ್ವಾದಶ ರಾಶಿಗಳ ಶುಭ, ಅಶುಭ ಫಲಿತಾಂಶಗಳಿವು

ಸೂರ್ಯ ಸಂಕ್ರಮಣ; ಆದಾಯ ಹೆಚ್ಚಳ, ಕೆಲಸದಲ್ಲಿ ಯಶಸ್ಸು, ಮೇಷದಿಂದ ಮೀನದವರಿಗೆ ದ್ವಾದಶ ರಾಶಿಗಳ ಶುಭ, ಅಶುಭ ಫಲಿತಾಂಶಗಳಿವು

ಸೂರ್ಯ ಈ ವಾರ ರಾಶಿಯನ್ನು ಬದಲಾಯಿಸಲಿದ್ದಾನೆ. ಕನ್ಯಾ ರಾಶಿಯಿಂದ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ರಾಶಿ ಬದಲಾವಣೆಯು 12 ರಾಶಿಚಕ್ರ ಚಿಹ್ನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಮೇಷದಂದ ಮೀನದವರಿಗೆ ಯಾವ ರಾಶಿಯವರಿಗೆ ಏನು ಫಲಗಳಿವೆ ಎಂಬುದನ್ನು ತಿಳಿಯೋಣ.

ತುಲಾ ರಾಶಿಯಲ್ಲಿ ಸೂರ್ಯ ಸಂಕ್ರಮಣದಿಂದ ಮೇಷ ದಿಂದ ಮೀನದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ
ತುಲಾ ರಾಶಿಯಲ್ಲಿ ಸೂರ್ಯ ಸಂಕ್ರಮಣದಿಂದ ಮೇಷ ದಿಂದ ಮೀನದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ

ಜ್ಯೋತಿಷ್ಯದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನವಿದೆ. ಭಗವಾನ್ ಸೂರ್ಯ ಎಲ್ಲಾ ಗ್ರಹಗಳ ರಾಜ. ಅಕ್ಟೋಬರ್ 17 ರಂದು, ಭಗವಾನ್ ಸೂರ್ಯ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಅಕ್ಟೋಬರ್ 17 ರಂದು ಸೂರ್ಯನು ಕನ್ಯಾರಾಶಿಯಿಂದ ಹೊರಟು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಭಗವಾನ್ ಸೂರ್ಯನ ಚಿಹ್ನೆಯ ಬದಲಾವಣೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯ ಭಗವಂತ ತುಲಾ ರಾಶಿಯನ್ನು ಪ್ರವೇಶಿಸುವುದರಿಂದ ಇದನ್ನು ತುಲಾ ಸಂಕ್ರಾಂತಿ ಅಂತಲೂ ಕರೆಯುತ್ತಾರೆ. ಸೂರ್ಯನು ರಾಶಿಯನ್ನು ಬದಲಾಯಿಸಲಿರುವುದರಿಂದ, ಕೆಲವು ರಾಶಿಚಕ್ರದ ಚಿಹ್ನೆಗಳು ಎಚ್ಚರಿಕೆಯಿಂದ ಇರಬೇಕು ಮತ್ತು ಕೆಲವು ರಾಶಿಚಕ್ರದ ಚಿಹ್ನೆಗಳು ಅದೃಷ್ಟವನ್ನು ಪಡೆಯುತ್ತವೆ. ಸೂರ್ಯನು ತುಲಾ ರಾಶಿಗೆ ಪ್ರವೇಶಿಸಿದಾಗ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಶುಭ, ಅಶುಭ ಫಲಿತಾಂಶಗಳ ಏನೆಂಬುದನ್ನು ಇಲ್ಲಿ ನೀಡಲಾಗಿದೆ.

ಮೇಷ ರಾಶಿ: ಕೆಲಸದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ಒಂಟಿಯಾಗಿರುವವರಿಗೆ ಪ್ರೇಮ ವಿವಾಹದ ಸಾಧ್ಯತೆಗಳಿವೆ. ಕೆಲವೊಂದು ಕಾರ್ಯಗಳು ಉತ್ತಮ ಫಲಗಳನ್ನು ನೀಡುತ್ತವೆ.

ವೃಷಭ ರಾಶಿ: ಈ ರಾಶಿಯವರಿಗೆ ಕೆಲವು ಕಹಿ ಅನುಭವಗಳು ಆಗಲಿವೆ. ಆದರೆ ಕೆಲವು ಕೆಲಸಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ಸಾಕಷ್ಟು ಪ್ರಯಾಣ ಮಾಡುವ ಸಾಧ್ಯತೆಗಳಿವೆ.

ಮಿಥುನ ರಾಶಿ: ರಾಶಿಚಕ್ರದಲ್ಲಿ ಸೂರ್ಯನ ಬದಲಾವಣೆಯೊಂದಿಗೆ, ಈ ರಾಶಿಯ ಜನರು ಕೋಪಗೊಳ್ಳುವ ಸಾಧ್ಯತೆ ಇದೆ. ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಕಟಕ ರಾಶಿ: ಮನೆಯಲ್ಲಿ ಕಲಹದ ಲಕ್ಷಣಗಳಿವೆ. ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ವಾದಗಳನ್ನು ತಪ್ಪಿಸುವುದು ಉತ್ತಮ. ಯಾವುದೇ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವತ್ತ ಗಮನ ಹರಿಸಬೇಕು. ಕೆಲಸದಲ್ಲಿ ಯಶಸ್ಸು ಇರುತ್ತದೆ.

ಸಿಂಹ ರಾಶಿ: ಶಕ್ತಿ ಅಥವಾ ಉತ್ಸಾಹದ ಕೊರತೆ ಇರುತ್ತದೆ. ಆದರೆ ಜೀವನದಲ್ಲಿ ಬದಲಾವಣೆಗಳನ್ನು ಸಕಾರಾತ್ಮಕ ಮನೋಭಾವದಿಂದ ತೆಗೆದುಕೊಂಡು ಮುನ್ನಡೆಯಬೇಕು. ತಾಳ್ಮೆಯಿಂದ ಇರಬೇಕಾಗುತ್ತದೆ.

ಕನ್ಯಾ ರಾಶಿ: ಸರ್ಕಾರದ ಯೋಜನೆಗಳನ್ನು ಪಡೆಯುತ್ತೀರಿ. ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ನೀವು ಅಧಿಕಾರಿಗಳಿಂದ ಬೆಂಬಲವನ್ನು ಸಹ ಪಡೆಯುತ್ತೀರಿ. ಆರ್ಥಿಕ ಲಾಭಗಳು ಇರುತ್ತವೆ. ಎಚ್ಚರಿಕೆಯಿಂದ ಖರ್ಚು ಮಾಡಬೇಕು.

ತುಲಾ ರಾಶಿ: ಆರೋಗ್ಯ ಕ್ಷೀಣಿಸಬಹುದು. ಕೆಲಸ ಮತ್ತು ಜೀವನದ ನಡುವಿನ ಸಮತೋಲನ ಒಳ್ಳೆಯದು. ಆದರೆ ಮೊದಲಿಗೆ ಹೋಲಿಸಿದರೆ ಆದಾಯ ದುಪ್ಪಟ್ಟಾಗುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ.

ವೃಶ್ಚಿಕ ರಾಶಿ: ಖರ್ಚು ಹೆಚ್ಚಾಗಲಿದೆ. ಹಠಾತ್ ಖರೀದಿಗಳನ್ನು ತಪ್ಪಿಸುವುದು ಉತ್ತಮ. ಸ್ನೇಹಿತರ ಬೆಂಬಲ ಸಿಗುತ್ತವೆ. ಕುಟುಂಬದಲ್ಲಿ ಅಸಮಾಧಾನಗಳು ಇರುತ್ತವೆ. ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಕಾಣಿಸುತ್ತವೆ. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿ.

ಧನು ರಾಶಿ: ಆದಾಯದಲ್ಲಿ ಹೆಚ್ಚಳ ಕಂಡುಬರಲಿದೆ. ನೀವು ಹೊಸ ಆದಾಯದ ಮೂಲಗಳನ್ನು ಸಹ ಕಾಣುತ್ತೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸವಾಲುಗಳು ಇರುತ್ತವೆ.

ಮಕರ ರಾಶಿ: ವ್ಯಾಪಾರದಲ್ಲಿ ಅನಿರೀಕ್ಷಿತ ಅಭಿವೃದ್ಧಿ ಕಂಡುಬರುವುದು. ಆದರೆ ಹಣದ ವಿಷಯದಲ್ಲಿ ಜಾಗರೂಕರಾಗಿರಿ. ನಿರೀಕ್ಷೆಗೂ ಮೀರಿದ ಖರ್ಚುಗಳು ಇರುತ್ತವೆ. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿ. ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ.

ಕುಂಭ ರಾಶಿ: ಅದೃಷ್ಟಕ್ಕೆ ಅಡೆತಡೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಬಿಟ್ಟುಕೊಡದಿರಲು ಪ್ರಯತ್ನಿಸಿ. ಉದ್ಯೋಗದ ಸ್ಥಳದಲ್ಲಿ ಸಂತೋಷದ ವಾತಾವರಣ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಸವಾಲುಗಳು ಇರುತ್ತವೆ. ಎಲ್ಲವನ್ನು ಧೈರ್ಯದಿಂದ ಎದುರಿಸಲು ಪ್ರಯತ್ನಿಸುತ್ತೀರಿ.

ಮೀನ ರಾಶಿ: ಅಶುಭ ಸೂಚನೆಗಳಿವೆ. ಆದರೂ ಚಿಂತಿಸುವ ಅಗತ್ಯವಿಲ್ಲ. ಜೀವನದಲ್ಲಿ ಆಗುವ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಹೊಸ ಯೋಜನೆಗಳಿಂದ ಸಮಸ್ಯೆಗಳು ಬಗೆಹರಿಯುತ್ತವೆ. ಸಾಲದ ಹೊರೆ ಕಡಿಮೆಯಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.