Horoscope Today: ಆತ್ಮೀಯರ ಕಷ್ಟಕ್ಕೆ ನೆರವು, ನೆಮ್ಮದಿಯ ಜೀವನಕ್ಕಾಗುವಷ್ಟು ಆದಾಯ ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ
25 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (25th May 2024 Daily Horoscope).
ಇಂದಿನ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (25th May 2024 Horoscope)
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯನ-ವಸಂತ ಋತು-ವೈಶಾಖ ಮಾಸ-ಕೃಷ್ಣಪಕ್ಷ-ಶನಿವಾರ
ತಿಥಿ: ಬಿದಿಗೆ ಸಂಜೆ 06.22 ರವರೆಗೂ ಇರುತ್ತದೆ. ಆನಂತರ ತದಿಗೆ ಆರಂಭವಾಗುತ್ತದೆ.
ನಕ್ಷತ್ರ: ಜ್ಯೇಷ್ಠ ನಕ್ಷತ್ರವು ಬೆಳಗ್ಗೆ 10.23 ರವರೆಗು ಇರುತ್ತದೆ. ಆನಂತರ ಮೂಲ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.52
ಸೂರ್ಯಾಸ್ತ: ಸಂಜೆ 06.40
ರಾಹುಕಾಲ: ಬೆ. 09.08 ರಿಂದ ಬೆ. 10.44
ಸಿಂಹ ರಾಶಿ
ನಿಮ್ಮ ಯೋಚನಾ ಹರಿಯು ಸರಿದಾರಿಯಲ್ಲಿರುತ್ತದೆ. ಪ್ರಸಕ್ತ ಸನ್ನಿವೇಶವನ್ನು ಆಧರಿಸಿ ಕೆಲಸ ಕಾರ್ಯಗಳಲ್ಲಿ ಮುನ್ನಡೆಯುವಿರಿ. ಭವಿಷ್ಯದ ಬಗ್ಗೆ ಪರಿಪಕ್ವವಾದ ಯೋಜನೆ ರೂಪಿಸುವಿರಿ. ತಪಿಲ್ಲದೆ ಹೋದರೂ ನಿತ್ಯಜೀವನದಲ್ಲಿ ಆತ್ಮೀಯರೊಬ್ಬರ ವಿರೋಧವನ್ನು ಎದುರಿಸುವಿರಿ. ಉದ್ಯೋಗದಲ್ಲಿ ನಿಮ್ಮಅನುಕೂಲಕ್ಕೆ ತಕ್ಕಂತಹ ಪರಿಸ್ಥಿತಿ ಇರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ವಿಚಾರದಲ್ಲಿ ಹೊಸ ನಿರೀಕ್ಷೆಯಲ್ಲಿ ಇರುತ್ತಾರೆ. ನೆಮ್ಮದಿಯಿಂದ ಜೀವನ ನಡೆಸಲು ಸಾಕಾಗುವಷ್ಟು ಆದಾಯ ಇರುತ್ತದೆ. ತಂದೆಯ ಒಡೆತನದ ಭೂಮಿಯ ವಿವಾದ ಸುಖಾಂತ್ಯಗೊಳ್ಳಲಿದೆ.
ಪರಿಹಾರ: ಕೈ ಅಥವ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತಬಿಳಿ
ಕನ್ಯಾ ರಾಶಿ
ಮನದಲ್ಲಿ ಹೊಸ ಆಸೆ ಆಕಾಂಕ್ಷೆಗಳು ಮೂಡಲಿವೆ. ಗೃಹಿಣಿಯರ ನೆಚ್ಚಿನ ಆಭರಣ ಕೊಳ್ಳುವ ಆಸೆ ಸಾಕಾರಗೊಳ್ಳುತ್ತದೆ. ಸಾರಿಗೆ ಸಂಚಾರಕ್ಕೆ ಸಂಬಂದಿಸಿದ ವೃತ್ತಿ ಇರುತ್ತದೆ. ಸುಖ ಸಂತೋಷದಿಂದ ಜೀವನ ಸಾಗಿಸುವಿರಿ. ವ್ಯಾಪಾರ ನಿರ್ವಹಣೆಗಾಗಿ ಹೊಸ ವಾಹನ ಕೊಳ್ಳುವಿರಿ. ಸಮಾಜದ ಗಣ್ಯವ್ಯಕ್ತಿಯೊಬ್ಬರ ಸಹಾಯ ದೊರೆಯುತ್ತದೆ. ಕಷ್ಟದ ವೇಳೆಯಲ್ಲಿ ಧೈರ್ಯಗೆಡದೆ ಸೂಕ್ತ ಪರಿಹಾರ ಕಂಡುಹಿಡಿಯುವಿರಿ. ಮನೆಯ ದುರಸ್ತಿಯ ಕೆಲಸಕ್ಕೆ ಕೈಹಾಕುವಿರಿ. ಕುಟುಂಬದ ಹಿರಿಯರೊಬ್ಬರು ಉದ್ಯೋಗ ಬದಲಿಸುತ್ತಾರೆ.
ಪರಿಹಾರ: ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 2
ಅಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ತುಲಾ ರಾಶಿ
ಕಾನೂನುನಿನ ಅನ್ವಯ ಲೇವಾದೇವಿ ವ್ಯವಹಾರವನ್ನು ಆರಂಭಿಸುವಿರಿ. ಆತ್ಮೀಯರ ಕಷ್ಟದ ವೇಳೆ ಅವರ ಪರವಾಗಿ ಕೆಲಸ ಮಾಡುವಿರಿ. ಬಾಳಸಂಗಾತಿಯಿಂದ ಹಣದ ಸಹಾಯ ದೊರೆಯುತ್ತದೆ. ಜನಸೇವೆ ಮಾಡಲು ಅನುಕೂಲವಾಗುವ ಉದ್ಯೋಗ ದೊರೆಯುತ್ತದೆ. ಉದ್ಯೋಗದ ಹಿನ್ನೆಲೆಯಿಂದ ದೇಶ ವಿದೇಶಗಳನ್ನು ಸುತ್ತುವ ಅವಕಾಶ ದೊರೆಯುತ್ತದೆ. ಸಂಗೀತ ಭರತನಾಟ್ಯ ಬಲ್ಲವರಿಗೆ ಅವಕಾಶ ದೊರೆತು, ಅದಾಯದ ಜೊತೆಯಲ್ಲಿ ಜನಪ್ರಿಯತೆಯೂ ದೊರೆಯುತ್ತದೆ. ಕುಟುಂಬದ ವ್ಯಾಜ್ಯಗಳಿಗೆ ಪರಿಹಾರ ದೊರೆಯುತ್ತದೆ. ಸೋದರಿಯ ಮಕ್ಕಳಿಗೆ ಸಹಾಯ ಮಾಡುವಿರಿ.
ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ವೃಶ್ಚಿಕ ರಾಶಿ
ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಬೇರೊಬ್ಬರ ಮಾತನ್ನೂ ಕೇಳುವುದಿಲ್ಲ. ನೇರವಾದ ನಡೆ ನುಡಿಯಿಂದ ವಿರೋಧಿಗಳು ಹೆಚ್ಚುತ್ತಾರೆ. ನಿರಾಸೆಯನ್ನು ತಡೆಯಲಾರದೆ ಕೋಪಗೊಳ್ಳುವಿರಿ. ತಂದೆಯವರ ಪ್ರಭಾವದಿಂದ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವಿರಿ. ಉದ್ಯೋಗದಲ್ಲಿ ಬದಲಾವಣೆ ಉಂಟಾದರೂ ಯಾವುದೇ ತೊಂದರೆ ಬಾರದು. ಸೋದರನ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ದೇಹಾಲಸ್ಯ ಉಂಟಾಗುತ್ತದೆ. ವ್ಯವಸಾಯದಲ್ಲಿ ಆಸಕ್ತಿ ಮೂಡುತ್ತದೆ.
ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಆಕಾಶನೀಲಿ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)