ಇಂದು ಮೊಹರಂ ಕೊನೆ ದಿನ; ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸುವ ಪವಿತ್ರ ದಿನವಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ಮೊಹರಂ ಕೊನೆ ದಿನ; ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸುವ ಪವಿತ್ರ ದಿನವಿದು

ಇಂದು ಮೊಹರಂ ಕೊನೆ ದಿನ; ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸುವ ಪವಿತ್ರ ದಿನವಿದು

Muharram 2024: ಕರ್ಬಲಾ ಕದನದಲ್ಲಿ ಯಾಜಿದ್‌ ಪಡೆಗಳಿಂದ ಚಿತ್ರಹಿಂಸೆಗೆ ಒಳಗಾಗಿ ಮರಣ ಹೊಂದಿದ ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸುವ ದಿನವನ್ನು ಮೊಹರಂ ಎಂದು ಆಚರಿಸಲಾಗುತ್ತದೆ. 9 ದಿನಗಳ ಕಾಲ ಉಪವಾಸವಿದ್ದ ಮುಸ್ಲಿಮರು ಇಂದು ಉಪವಾಸ ಮುರಿಯುತ್ತಿದ್ದಾರೆ.

ಇಂದು ಮೊಹರಂ ಕೊನೆ ದಿನ; ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸುವ ಪವಿತ್ರ ದಿನವಿದು
ಇಂದು ಮೊಹರಂ ಕೊನೆ ದಿನ; ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸುವ ಪವಿತ್ರ ದಿನವಿದು

ಇಂದು ಮುಸ್ಲಿಮ್‌ ಬಾಂಧವರು ಮೊಹರಂ ಆಚರಿಸುತ್ತಿದ್ದಾರೆ. ಜುಲೈ 8 ರಿಂದ ಆರಂಭವಾದ 10 ದಿನಗಳ ಮೊಹರಂ ಆಚರಣೆ ಇಂದು ಕೊನೆಗೊಳ್ಳುತ್ತಿದೆ. ಈ 10 ದಿನಗಳ ಕಾಲ ಮುಸ್ಲಿಮರು ಉಪವಾಸ ಆಚರಿಸಿದ್ದು ಇಂದು ಉಪವಾಸ ಮುರಿಯುತ್ತಿದ್ದಾರೆ. ಮೊಹರಂ, ಮುಸ್ಲಿಮರು ಸಂತೋಷದಿಂದ ಬಂಧುಗಳೊಂದಿಗೆ ಆಚರಿಸುವ ಒಂದು ಹಬ್ಬವಲ್ಲ. ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಮರತ್ವವನ್ನು ಸ್ಮರಿಸಲಾಗುವ ದಿನವಿದು.

ಮೊಹರಂ ಮಹತ್ವ

ಇಂದು ಸುನ್ನಿ ಹಾಗೂ ಶಿಯಾ ಮುಸ್ಲಿಮರಿಬ್ಬರಿಗೂ ಮಹತ್ವವಾದ ದಿನವಾಗಿದೆ. ಪ್ರವಾದಿ ಮುಹ್ಮದ್‌ ಅವರ ಮೊಮ್ಮಗ ಹುಸೇನ್ ಇಬ್ನ್ ಅಲಿ ಕ್ರಿ.ಶ 680ರಲ್ಲಿ ಕರ್ಬಲಾ ಕದನದಲ್ಲಿ ಯಾಜಿದ್‌ ಪಡೆಗಳಿಂದ ಚಿತ್ರಹಿಂಸೆಗೆ ಒಳಗಾಗಿ ನಂತರ ಕೊಲ್ಲಲ್ಪಟ್ಟರು. ಸುಮಾರು 10 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಮೊದಲ ಇಸ್ಲಾಮಿಕ ರಾಜ್ಯ ಸ್ಥಾಪನೆಗೆ ಕಾರಣವಾದ ಹೋರಾಟದ ಸಮಯದಲ್ಲಿ ಹುಸೇನ್ ಇಬ್ನ್ ಅಲಿಯನ್ನು ಕ್ರೂರವಾಗಿ ಕೊಲ್ಲಲಾಯ್ತು. ನಂತರ ಮೊದಲ ಇಸ್ಲಾಮಿಕ್‌ ರಾಜ್ಯ ಸ್ಥಾಪನೆ ಆಯ್ತು. ಅಂದಿನಿಂದ ಹುಸೇನ್‌ ಇಬ್ನ್‌ ಅಲಿಯ ಮರಣದ ನೆನಪಿಗಾಗಿ ಮೊಹರಂ ಆಚರಿಸಲಾಗುತ್ತಿದೆ. ಮೊಹರಂ ಆಚರಿಸುವ ಈ ಪವಿತ್ರ ತಿಂಗಳನ್ನು ಅಲ್ಲಾಹ್‌ನ ತಿಂಗಳು ಎಂದು ಕರೆಯಲಾಗುತ್ತದೆ.

ಮೊಹರಂ 10ನೇ ದಿನ ಅಶುರಾ

ಮೊಹರಂ ಆಚರಿಸಲು ಚಂದ್ರನ ಚಕ್ರವನ್ನು ಆಧರಿಸಿ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಾಪುರ, ಇಂಡೋನೇಷ್ಯಾ, ಮಲೇಷ್ಯಾ, ಮೊರಾಕೊ, ಸೌದಿ ಅರೇಬಿಯಾ, ಯುಎಇ, ಓಮನ್ ಮುಂತಾದ ಗಲ್ಫ್ ದೇಶಗಳಲ್ಲಿ ಇಂದು ಮೊಹರಂ ಆಚರಿಸಲಾಗುತ್ತಿದೆ. ಮೊಹರಂ 10ನೇ ದಿನವವನ್ನು ಅಶುರಾ ಎಂದು ಕರೆಯಲಾಗುತ್ತದೆ. ಮುಸ್ಲಿಮರು ಈ ದಿನವನ್ನು ಶೋಕದ ದಿನವನ್ನಾಗಿ ಆಚರಿಸುತ್ತಾರೆ. ಮೆರವಣಿಗೆಗಳನ್ನು ನಡೆಸುತ್ತಾರೆ. ಹುಸೇನ್‌ ಇಬ್ನ್‌ ಅಲಿ ಅವರ ಮರಣವನ್ನು ನೆನೆದು ಈ ದಿನ ಮುಸ್ಲಿಮರು ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ. ಹರಿತವಾದ ಆಯುಧಗಳಿಂದ ತಮ್ಮ ದೇಹವನ್ನು ರಕ್ತ ಬರುವವರೆಗೂ ಹೊಡೆದುಕೊಳ್ಳುತ್ತಾರೆ. ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ಶೋಕಾಚರಣೆ ಮಾಡುತ್ತಾರೆ.

ಹುಸೇನ್ ಇಬ್ನ್ ಅಲಿ ಸ್ಮರಣಾರ್ಥ ಆಚರಿಸುವ ಆಚರಣೆ

ಮೊದಲ ದಿನವನ್ನು ಇಸ್ಲಾಮಿಕ್ ಹೊಸ ವರ್ಷ ಅಥವಾ ಅಲ್ ಹಿಜ್ರಿ ಅಥವಾ ಅರೇಬಿಕ್ ಹೊಸ ವರ್ಷ ಎಂದು ಕರೆಯಲಾಗುತ್ತದೆ. ಹಾಗೇ ಮೊಹರಂ ತಿಂಗಳಲ್ಲಿ ಮುಸ್ಲಿಮರು ಮದುವೆ, ನಿಶ್ಚಿತಾರ್ಥ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಮೊಹರಂ ಹಬ್ಬವಲ್ಲ ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಹುಸೇನ್ ಇಬ್ನ್ ಅಲಿ ಅವರಿಗೆ ಸಂತಾಪ ಸೂಚಿಸಲು ಆಚರಿಸುವ ಆಚರಣೆಯಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.