ಜುಲೈ ತಿಂಗಳಲ್ಲಿ ಶಯನಿ ಏಕಾದಶಿ ಯಾವಾಗ; ಲಕ್ಷ್ಮೀ ಸಮೇತ ವಿಷ್ಣುವನ್ನು ಪೂಜಿಸಿದರೆ ಏನು ಫಲ ದೊರೆಯಲಿದೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜುಲೈ ತಿಂಗಳಲ್ಲಿ ಶಯನಿ ಏಕಾದಶಿ ಯಾವಾಗ; ಲಕ್ಷ್ಮೀ ಸಮೇತ ವಿಷ್ಣುವನ್ನು ಪೂಜಿಸಿದರೆ ಏನು ಫಲ ದೊರೆಯಲಿದೆ?

ಜುಲೈ ತಿಂಗಳಲ್ಲಿ ಶಯನಿ ಏಕಾದಶಿ ಯಾವಾಗ; ಲಕ್ಷ್ಮೀ ಸಮೇತ ವಿಷ್ಣುವನ್ನು ಪೂಜಿಸಿದರೆ ಏನು ಫಲ ದೊರೆಯಲಿದೆ?

ಇತರ ಮಾಸಗಳಂತೆ ಆಷಾಢ ಕೂಡಾ ಬಹಳ ವೈಶಿಷ್ಟ್ಯವನ್ನೊಂದಿದೆ. ಈ ಮಾಸದಲ್ಲಿ ಆಚರಿಸುವ ವ್ರತಗಳು, ಪೂಜೆಗಳು ಒಳ್ಳೆ ಫಲಗಳನ್ನು ನೀಡಲಿದೆ. ಹಾಗೇ ಈ ಮಾಸದಲ್ಲಿ ಬರುವ ಶಯನಿ ಏಕಾದಶಿಯಲ್ಲಿ ಲಕ್ಷ್ಮೀ ಸಮೇತ ವಿಷ್ಣುವನ್ನು ಪೂಜಿಸಿದರೆ ಪುಣ್ಯ ದೊರೆಯುತ್ತದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಜುಲೈ ತಿಂಗಳಲ್ಲಿ ಶಯನಿ ಏಕಾದಶಿ ಯಾವಾಗ; ಲಕ್ಷ್ಮೀ ಸಮೇತ ವಿಷ್ಣುವನ್ನು ಪೂಜಿಸಿದರೆ ಏನು ಫಲ ದೊರೆಯಲಿದೆ?
ಜುಲೈ ತಿಂಗಳಲ್ಲಿ ಶಯನಿ ಏಕಾದಶಿ ಯಾವಾಗ; ಲಕ್ಷ್ಮೀ ಸಮೇತ ವಿಷ್ಣುವನ್ನು ಪೂಜಿಸಿದರೆ ಏನು ಫಲ ದೊರೆಯಲಿದೆ?

ಆಷಾಢ ಮಾಸ ಶುರುವಾಗಿದೆ. ಈ ಬಾರಿ 4 ವಾರ ಆಷಾಢ ಶುಕ್ರವಾರವನ್ನು ಜನರು ಆಚರಿಸುತ್ತಿದ್ದಾರೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಕೆಲವು ಪ್ರಾಂತ್ಯಗಳಲ್ಲಿ ಆಷಾಢ ಮಾಸದಲ್ಲಿ ದಿನಶುದ್ಧಿಯನ್ನು ನೋಡಿ ಮದುವೆ ಮುಂತಾದ ಶುಭ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ಜುಲೈ 17ಕ್ಕೆ ಶಯನಿ ಏಕಾದಶಿ

ಇತರ ಮಾಸಗಳಂತೆ ಆಷಾಢ ಮಾಸ ಕೂಡಾ ಬಹಳ ವಿಶೇಷವಾಗಿದೆ. ಸಾಮಾನ್ಯವಾಗಿ ರವಿಯು ಕಟಕ, ಕನ್ಯಾ, ಧನಸ್ಸು ಮತ್ತು ಕುಂಭ ರಾಶಿಗಳಲ್ಲಿ ಇರುವಾಗ ಶುಭ ಕಾರ್ಯಗಳನ್ನು ಮಾಡಲೇಬಾರದು. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪ್ರಥಮ ಏಕಾದಶಿ ಎಂದು ಕರೆಯುತ್ತೇವೆ. ಇದಕ್ಕೆ ಶಯನಿ ಏಕಾದಶಿ ಎಂಬ ಮತ್ತೊಂದು ಹೆಸರು ಇದೆ. 2024ರಲ್ಲಿ ಜುಲೈ ತಿಂಗಳ ಬುಧವಾರ 17 ರಂದು ಪ್ರಥಮ ಏಕಾದಶಿಯನ್ನು ಆಚರಿಸುತ್ತೇವೆ. ಈ ದಿನ ವಿಷ್ಣುಶಯನೋತ್ಸವವನ್ನು ಆಚರಿಸುತ್ತಾರೆ. ಅಂದರೆ ಶಂಖ ಚಕ್ರ ಮುಂತಾದ ಆಯುಧಗಳನ್ನು ಒಳಗೊಂಡ ವಿಷ್ಣುವನ್ನು ನಾನಾ ರೀತಿಯ ಒಡವೆ ವಸ್ತ್ರ ಹೂಗಳಿಂದ ಅಲಂಕರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮುಖ್ಯ ವಿಚಾರವೆಂದರೆ ಈ ವಿಗ್ರಹವು ಮಲಗಿರುವ ವಿಷ್ಣುವಿನ ಪಾದವನ್ನು ಒತ್ತುತ್ತಿರುವ ಲಕ್ಷ್ಮಿಯನ್ನು ಒಳಗೊಂಡಿರುತ್ತದೆ.

ಈ ದಿನ ಲಕ್ಷ್ಮೀಸಮೇತ ವಿಷ್ಣುವನ್ನು ಪೂಜಿಸಿದರೆ ಕುಟುಂಬದಲ್ಲಿನ ಮನಸ್ತಾಪಗಳು ದೂರವಾಗಿ ಅನ್ಯೋನ್ಯತೆ ಉಂಟಾಗುತ್ತದೆ. ಪ್ರಮುಖವಾಗಿ ಈ ದಿನ ಅನುರಾಧ ನಕ್ಷತ್ರ ಇರಬೇಕು. ನಿರ್ಣಯ ಸಿಂಧುವಿನ ಪ್ರಕಾರ ಏಕಾದಶಿಯಂದೇ ಚಾತುರ್ಮಾಸ ವ್ರತದ ಸಂಕಲ್ಪವನ್ನು ಮಾಡಬೇಕು ಎಂದು ಹೇಳಲಾಗಿದೆ. ಆದರೆ ಗುರು ಅಥವಾ ಶುಕ್ರರು ಅಸ್ತವಾಗಿದ್ದಲ್ಲಿ ಮತ್ತು ಅಶೌಚವಿದ್ದಲ್ಲಿ ಯಾವುದೇ ವ್ರತವನ್ನು ಮಾಡಬಾರದು. ಏಕಾದಶಿ ಆಚರಿಸಲು ಯಾವುದೇ ತಾರತಮ್ಯ ಇರುವುದಿಲ್ಲ. ರಾಜ ಮಹಾರಾಜರ ಕಾಲದಲ್ಲಿ ಏಕಾದಶಿಯಂದು ಸಂಗೀತ ಮತ್ತು ನಾಟ್ಯ ಸೇವೆಯು ನಡೆಯುತ್ತಿತ್ತು ಎಂದು ತಿಳಿದು ಬರುತ್ತದೆ. ಭಗವಾನ್ ಶ್ರೀ ವಿಷ್ಣುವಿಗೆ ಸಂಗೀತ ಮತ್ತು ನಾಟ್ಯದ ಮೇಲೆ ವಿಶೇಷ ಅಭಿಮಾನವಿದೆ. ಭಗವಾನ್ ವಿಷ್ಣುವು ಶಯನಶಾಯಿ ಆಗುವ ಕಾರಣ ಈ ಏಕಾದಶಿಯನ್ನು ಶಯನೀ ಏಕಾದಶಿ ಎಂದು ಕರೆಯಲಾಗಿದೆ. ಈ ದಿನದಿಂದ ನಾಲ್ಕು ಮಾಸಗಳು ಶ್ರೀ ಹರಿಯು ಹಾಲಿನ ಕಡಲಿನಲ್ಲಿ ಇರುವ ಶಯನವನ್ನು ಆಶ್ರಯಿಸುತ್ತಾನೆ. ಈ ಚಾತುರ್ಮಾಸವನ್ನು ವೈಷ್ಣವರು ವಿಶೇಷವಾಗಿ ಆಚರಿಸುತ್ತಾರೆ.

ತ್ರಿಮೂರ್ತಿಗಳನ್ನು ಪೂಜಿಸಿದ ಪುಣ್ಯ

ಈ ದಿನ ಮಾಡುವ ಪೂಜೆ ಪುನಸ್ಕಾರಗಳು ತ್ರಿಮೂರ್ತಿಗಳನ್ನು ಪೂಜಿಸಿದಷ್ಟೇ ಶ್ರೇಷ್ಠ. ತ್ರಿಮೂರ್ತಿಗಳನ್ನು ಪೂಜಿಸಿದಾಗ ಬರುವ ಪುಣ್ಯವು ನಮ್ಮದಾಗುತ್ತದೆ. ಆದರೆ ಉಪವಾಸ ಮಾಡುವುದು ಅತಿ ಮುಖ್ಯ. ಕೆಲವರು ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಆರೋಗ್ಯ ಸಮಸ್ಯೆ ಇರುವವರು ಹಣ್ಣು ಹಂಫಲುಗಳನ್ನು ಸ್ವೀಕರಿಸಬಹುದಾಗಿದೆ. ಈ ದಿನ ಕೆಲವರು ನೀರನ್ನು ಸಹ ಸೇವಿಸದೆ ಉಪವಾಸ ಮಾಡುತ್ತಾರೆ. ಈ ದಿನ ಉಪವಾಸ ಮಾಡಿ ವಿಷ್ಣುವನ್ನು ಪೂಜಿಸಿದರೆ ಅವರು ಶ್ರೀಹರಿಗೆ ಹತ್ತಿರವಾಗುತ್ತಾರೆ. ಇದರೊಂದಿಗೆ ಜಾಗರಣೆ ಮಾಡಿದರೆ, ಮಾಡಿರುವ ಯಾವುದೇ ಪಾಪವಾದರೂ ಅದರಿಂದ ಮುಕ್ತರಾಗಬಹುದು, ಆದರೆ ಕಡ್ಡಾಯವಾಗಿ ಬ್ರಹ್ಮಚರ್ಯವನ್ನು ಆಚರಿಸಬೇಕು. ಪೂಜೆ, ಉಪವಾಸ ಮತ್ತು ಜಾಗರಣೆ ಈ ಮೂರನ್ನು ಆಚರಿಸಿದರೇ ಅಶ್ವಮೇಧ ಯಜ್ಞವನ್ನು ಮಾಡಿದ ಪುಣ್ಯವನ್ನು ಗಳಿಸುತ್ತಾರೆ.

ಯೋಗ ನಿದ್ರೆಯಲ್ಲಿ ಇರುವ ಭಗವಾನ್ ವಿಷ್ಣುವನ್ನು ಪೂಜಿಸುವ ಜೊತೆಗೆ ದಾನ ಧರ್ಮವನ್ನು ಮಾಡಬಹುದು. ಮಕ್ಕಳಿಗೆ ಮೊಸರಿನಲ್ಲಿ ಕಲಸಿದ ಅವಲಕ್ಕಿಯನ್ನು ನೀಡಿದರೆ ಸಂತಾನ ದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ದ್ವಾದಶಿಯ ದಿನ ಗೋಪೂಜೆಯನ್ನು ಮಾಡಿದ ನಂತರ ಭೋಜನ ಮಾಡುವುದು ಬಹಳ ಒಳ್ಳೆಯದು. ಏಕಾದಶಿ ದಿನ ತಪ್ತ ಮುದ್ರಾಧಾರಣೆ ಆಚರಿಸುತ್ತಾರೆ. ಶಂಕು ಮತ್ತು ಚಕ್ರದ ಚಿನ್ಹೆ ಇರುವ ಲೋಹವನ್ನು ಬೆಂಕಿಯಲ್ಲಿ ಕಾಯಿಸಿ ದೇಹದ ನಿರ್ದಿಷ್ಟವಾದ ಭಾಗಗಳಲ್ಲಿ ಮುದ್ರೆ ಹಾಕಲಾಗುತ್ತದೆ. ಆತ್ಮಶುದ್ಧಿ ಮತ್ತು ದೇಹಶುದ್ದಿಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.