ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡ್ತಾ ಇಲ್ವ? ಫೆಂಗ್‌ ಶೂಯಿ ಸಲಹೆ ಪಾಲಿಸಿ, ಬದಲಾವಣೆ ಗಮನಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡ್ತಾ ಇಲ್ವ? ಫೆಂಗ್‌ ಶೂಯಿ ಸಲಹೆ ಪಾಲಿಸಿ, ಬದಲಾವಣೆ ಗಮನಿಸಿ

ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡ್ತಾ ಇಲ್ವ? ಫೆಂಗ್‌ ಶೂಯಿ ಸಲಹೆ ಪಾಲಿಸಿ, ಬದಲಾವಣೆ ಗಮನಿಸಿ

ಕೆಲವೊಮ್ಮೆ ಮನೆಯಲ್ಲಿನ ವಾಸ್ತು ದೋಷಗಳು ಮತ್ತು ಋಣಾತ್ಮಕ ಅಂಶಗಳು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಮಕ್ಕಳು ಎಷ್ಟೇ ಓದಿದರೂ ಒಳ್ಳೆಯ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನಿಮ್ಮ ಮಗುವಿನ ಸ್ಟಡಿ ರೂಂನಲ್ಲಿ ನಕಾರಾತ್ಮಕ ಶಕ್ತಿ ಕಡಿಮೆ ಮಾಡಿ, ಧನಾತ್ಮಕ ಶಕ್ತಿ ಹೆಚ್ಚಿಸಲು ಫೆಂಗ್‌ ಶೂಯಿ ಸಲಹೆಗಳನ್ನು ಪಾಲಿಸಿ. (ಬರಹ: ಅರ್ಚನಾ ವಿ ಭಟ್‌)

ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡ್ತಾ ಇಲ್ವ? ಫೆಂಗ್‌ ಶೂಯಿ ಸಲಹೆ ಪಾಲಿಸಿ, ಬದಲಾವಣೆ ಗಮನಿಸಿ
ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡ್ತಾ ಇಲ್ವ? ಫೆಂಗ್‌ ಶೂಯಿ ಸಲಹೆ ಪಾಲಿಸಿ, ಬದಲಾವಣೆ ಗಮನಿಸಿ (PC: Unsplash)

ಕೆಲವು ಮಕ್ಕಳಿಗೆ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ. ಅದಲ್ಲದೇ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವೂ ಇರುವುದಿಲ್ಲ. ಸದಾ ಆಟ, ಮನರಂಜನೆಯಲ್ಲಿಯೇ ಸಮಯ ಹಾಳು ಮಾಡುತ್ತಾರೆ. ಎಷ್ಟೇ ಪ್ರಯತ್ನ ಮಾಡಿದರೂ ಮಗು ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಹೆತ್ತವರು ಕೂಡಾ ನೊಂದುಕೊಳ್ಳುತ್ತಾರೆ. ಮಗುವಿನ ಮೇಲೆ ಕೋಪಗೊಳ್ಳುತ್ತಾರೆ.

ಹೆತ್ತವರ ಬೈಗುಳದಿಂದ, ತೀವ್ರ ಒತ್ತಡದಿಂದಾಗಿ ಮಕ್ಕಳ ಮಾನಸಿಕ ಸ್ಥಿತಿ ಹದಗೆಡಬಹುದು. ಮನೆಯ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಅಂಶಗಳು ಮಗುವಿನ ಮೇಲೆ ಈ ರೀತಿ ಪರಿಣಾಮ ಬೀರುವ ಸಾಧ್ಯತೆ ಇದೆ. ಮನೆಯಲ್ಲಿರುವ ಋಣಾತ್ಮಕ ಶಕ್ತಿ ಹೋಗಲಾಡಿಸಿದರೆ ಇವುಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು. ಆದ್ದರಿಂದ ಮನೆಯಲ್ಲಿ ಋಣಾತ್ಮಕತೆಯನ್ನು ಕಡಿಮೆ ಮಾಡಲು ಮತ್ತು ಅಧ್ಯಯನ ಕೊಠಡಿಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಈ ಸರಳ ಮತ್ತು ಪರಿಣಾಮಕಾರಿ ಫೆಂಗ್ ಶೂಯಿ ಸಲಹೆಗಳನ್ನು ಪ್ರಯತ್ನಿಸಿ.

ಸ್ವಚ್ಛತೆ ಕಡೆಗೆ ಗಮನವಿರಲಿ

ಮಕ್ಕಳ ಸ್ಟಡಿ ರೂಂ ಯಾವಾಗಲೂ ಸ್ವಚ್ವವಾಗಿರಬೇಕು. ಜೊತೆಗೆ ಮನೆಯ ಪ್ರತಿಯೊಂದು ಕೋಣೆಯು ಯಾವಾಗಲೂ ಸ್ವಚ್ಛವಾಗಿಡಬೇಕು. ವಸ್ತುಗಳನ್ನು ಮೇಜಿನ ಮೇಲೆ ಹರಡಬಾರದು. ಮಕ್ಕಳು ಸ್ಟಡಿ ಮಾಡುವ ರೂಂ ಯಾವಾಗಲೂ ಗಾಳಿ ಬೆಳಕಿನಿಂದ ಕೂಡಿರಬೇಕು. ಮನೆಯ ಉತ್ತರ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಅದು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಮಕ್ಕಳ ಸ್ಟಡಿ ಟೇಬಲ್‌ ಮೇಲೆ ಗ್ಲೋಬ್‌ ಇಡಬಹುದು. ಉದಯಿಸುತ್ತಿರುವ ಸೂರ್ಯನ ದೊಡ್ಡ ಫೋಟೋವನ್ನು ಗೋಡೆಯ ಮೇಲೆ ಅಂಟಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಫೆಂಗ್‌ ಶೂಯಿ ಶಾಸ್ತ್ರ ಹೇಳುತ್ತದೆ.

ಜೇಡ್ ಪ್ಲಾಂಟ್‌

ಮಕ್ಕಳು ದೀರ್ಘಕಾಲದವರೆಗೆ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯೂ ಕಾರಣವಾಗಿರಬಹುದು ಎಂದು ಫೇಂಗ್‌ ಶೂಯಿ ಹೇಳುತ್ತದೆ. ಆದ್ದರಿಂದ ನೀವು ಮನೆಯಲ್ಲಿ ಸಕಾರಾತ್ಮಕತೆಯನ್ನು ಆಕರ್ಷಿಸಲು, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಮಕ್ಕಳ ಸ್ಟಡಿ ರೂಂನಲ್ಲಿ ಜೇಡ್ ಪ್ಲಾಂಟ್‌ಅನ್ನು ಇಡಬಹುದು. ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ ಜೇಡ್ ಗಿಡವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಇದನ್ನು ಕುಬೇರ ಸಸ್ಯ ಎಂದೂ ಕರೆಯುತ್ತಾರೆ. ನಿಮ್ಮ ಮನೆಯಲ್ಲಿ ಈ ಗಿಡವಿದ್ದರೆ ಯಾವುದಕ್ಕೂ ಕೊರತೆ ಇರುವುದಿಲ್ಲ. ಹಣದ ಕೊರತೆ ಸೇರಿದಂತೆ ಇತರ ಸಮಸ್ಯೆಗಳು ದೂರವಾಗುತ್ತದೆ.

ಆಮೆ

ಫೆಂಗ್ ಶೂಯಿ ಪ್ರಕಾರ ಆಮೆಯನ್ನು ಮನೆ ಅಥವಾ ಕಚೇರಿಯಲ್ಲಿ ಇರಿಸುವುದರಿಂದ ಸಮಾಜದಲ್ಲಿ ವ್ಯಕ್ತಿಯ ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಅಲ್ಲದೆ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಆಮೆಯ ಪ್ರತಿಮೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆಮೆಯನ್ನು ಸ್ಟಡಿ ರೂಂನಲ್ಲಿ ಇರಿಸುವುದರಿಂದ ವಾತಾವರಣಕ್ಕೆ ಧನಾತ್ಮಕ ಶಕ್ತಿ ಬರುತ್ತದೆ ಎಂದು ಫೆಂಗ್‌ ಶೂಯಿ ಹೇಳುತ್ತದೆ.

ನಾಣ್ಯಗಳು

ಫೆಂಗ್ ಶೂಯಿ ವಾಸ್ತು ಶಾಸ್ತ್ರದ ಪ್ರಕಾರ, ಮೂರು ಫೆಂಗ್‌ಶೂಯಿ ನಾಣ್ಯಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅವು ಅದೃಷ್ಟವನ್ನು ತರುವ ನಾಣ್ಯಗಳು ಎಂಬ ನಂಬಿಕೆಯಿದೆ. ಈ ನಾಣ್ಯಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಅಥವಾ ಕೆಂಪು ದಾರದಲ್ಲಿ ಕಟ್ಟಿದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಇವುಗಳನ್ನು ಮನೆಯಲ್ಲಿ ನೇತು ಹಾಕಿದರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿಗಳ ಪ್ರವೇಶದಿಂದಾಗಿ ವಾಸ್ತು ದೋಷ ದೂರವಾಗುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಬರಹ: ಅರ್ಚನಾ ವಿ ಭಟ್‌)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.