ಜನವರಿ 2025 ಮಾಸ ಭವಿಷ್ಯ: ಹೆಚ್ಚಿನ ಜವಾಬ್ದಾರಿಗಳಿಂದ ನೆಮ್ಮದಿ ಕಡಿಮೆ, ಪ್ರವಾಸದಿಂದ ಲಾಭ; ಕಟಕ, ಸಿಂಹ, ಕನ್ಯಾ ರಾಶಿಯವರ ತಿಂಗಳ ಭವಿಷ್ಯ
ಜನವರಿ 2025 ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025 ರ ಜನವರಿ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಕಟಕ, ಸಿಂಹ ಹಾಗೂ ಕನ್ಯಾ ರಾಶಿಯವರಿಗೆ ಜನವರಿ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಜನವರಿ 2025 ಮಾಸ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. 2025ರ ಜನವರಿಯಲ್ಲಿ ಕಟಕ, ಸಿಂಹ ಹಾಗೂ ಕನ್ಯಾ ರಾಶಿಯವರ ಮಾಸ ಭವಿಷ್ಯ ಇಲ್ಲಿದೆ.
ಕಟಕ ರಾಶಿ
ತಮ್ಮ ಆಲೋಚನೆಯಿಂದ ಜೀವನದಲ್ಲಿ ಆಶಾದಾಯಕ ಬದಲಾವಣೆಗಳು ಉಂಟಾಗಲಿವೆ. ಕುಟುಂಬದ ಹಿರಿಯರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವಿರಿ. ವಿದ್ಯಾರ್ಥಿಗಳ ನಿರೀಕ್ಷೆಗಳು ಗುರುಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಗತಗೊಳ್ಳಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಕಾಣುವುದಿಲ್ಲ. ಆದರೆ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಷ್ಟವೆನಿಸಿದರು ಹಣಉಳಿಸಲು ಯಶಸ್ವಿಯಾಗುವಿರಿ. ಸ್ವಂತ ಮನೆಯ ಕನಸು ಕುಟುಂಬದವರ ಸಹಕಾರದೊಂದಿಗೆ ಕೈಗೂಡಲಿದೆ. ಆರೋಗ್ಯದಲ್ಲಿ ಏರಿಳಿತವಿರುತ್ತದೆ. ಸವಾಲುಗಳನ್ನು ಎದುರಿಸಲು ಧೈರ್ಯ ಮಾಡುತ್ತೀರಿ. ಆರ್ಥಿಕ ನಷ್ಟವನ್ನು ತಪ್ಪಿಸಲು ಪ್ರಯತ್ನಿಸುತ್ತೀರಿ. ಸಂಬಂಧಿಕರಿಂದ ದೂರ ಉಳಿಯುವುದು ಒಳ್ಳೆಯದು.
ಸಿಂಹ ರಾಶಿ
ಅಪೂರ್ಣಗೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡವು ಅಧಿಕವಾಗಿರುತ್ತದೆ. ಹಿರಿಯ ಅಧಿಕಾರಿಗಳ ಜೊತೆಯಲ್ಲಿ ವಿಶ್ವಾಸದಿಂದ ಇರಲು ಪ್ರಯತ್ನಿಸಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ನಿಮ್ಮ ಜವಾಬ್ದಾರಿಯನ್ನು ಮಕ್ಕಳ ಸಹಕಾರದಿಂದ ನಿರ್ವಹಿಸುವಿರಿ. ಸಮಯಕ್ಕೆ ಅನುಸಾರವಾಗಿ ವರ್ತಿಸುವಿರಿ. ವಾದ ವಿವಾದಗಳಿಂದ ದೂರವಿದ್ದು ಎಲ್ಲರ ಮೆಚ್ಚುಗೆ ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ಬೇರೆಯವರ ಒತ್ತಡಕ್ಕೆ ಮಣಿದು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಪ್ರವಾಸದಿಂದ ಲಾಭವಿದೆ. ಉದ್ಯೋಗ ಬದಲಿಸುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಲಾಭದ ಅವಕಾಶ ಇರುತ್ತದೆ. ಮನೆಯವರಿಂದ ಒತ್ತಡ ಹೆಚ್ಚಾಗುವ ಕಾರಣ ಅವಿವಾಹಿತರು ಮದುವೆಯ ಬಗ್ಗೆ ಯೋಚಿಸುತ್ತಾರೆ.
ಕನ್ಯಾ ರಾಶಿ
ಹೆಚ್ಚಿನ ಜವಾಬ್ದಾರಿಗಳಿಂದ ನೆಮ್ಮದಿ ಮತ್ತು ವಿಶ್ರಾಂತಿ ದೂರವಾಗುತ್ತವೆ. ಕಲಾವಿದರಿಗೆ ವಿಶೇಷ ಅವಕಾಶಗಳು ದೊರೆಯುತ್ತವೆ. ಉದ್ಯೋಗದಲ್ಲಿ ಹೊಸ ರೀತಿಯ ಅವಕಾಶಗಳು ದೊರೆಯಲಿವೆ. ಆತ್ಮೀಯರ ಸಹಾಯದಿಂದ ಉದ್ಯೋಗ ಲಭಿಸುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುವ ಸಾಧ್ಯತೆ ಇರುತ್ತದೆ. ಷೇರಿನಲ್ಲಿ ಲಾಭಗಳಿಸುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ದಂಪತಿ ನಡುವಿನ ಮನಸ್ತಾಪವು ದೂರವಾಗಲಿದೆ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ಉತ್ತಮ ಜೀವನ ನಡೆಸಬಹುದು. ಆರ್ಥಿಕವಾಗಿ ಸವಾಲುಗಳು ಇರುತ್ತವೆ. ಹೊಸ ಉತ್ಸಾಹದಿಂದ ಕೆಲಸ ಮಾಡಲು ಮುಂದಾಗುತ್ತೀರಿ. ಹೊಸ ಯೋಜನೆಗಳನ್ನು ರೂಪಿಸುತ್ತೀರಿ. ನಿವೇಶನ ಖರೀದಿಸುವ ಬಗ್ಗೆ ಯೋಚಿಸುತ್ತೀರಿ. ನಿಮ್ಮ ಕೆಲಸಗಳಿಗೆ ಸ್ನೇಹಿತರಿಂದ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ