ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನ ಹಾದಿ ಅಂತ್ಯ? ಹಿರಿಯ ಆಟಗಾರನನ್ನು ಕೈಬಿಟ್ಟ ಕರ್ನಾಟಕ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನ ಹಾದಿ ಅಂತ್ಯ? ಹಿರಿಯ ಆಟಗಾರನನ್ನು ಕೈಬಿಟ್ಟ ಕರ್ನಾಟಕ ತಂಡ

ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನ ಹಾದಿ ಅಂತ್ಯ? ಹಿರಿಯ ಆಟಗಾರನನ್ನು ಕೈಬಿಟ್ಟ ಕರ್ನಾಟಕ ತಂಡ

Manish Pandey: ಡಿಸೆಂಬರ್​ 21ರಿಂದ ಶುರುವಾಗುವ ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಆಟಗಾರ ಮನೀಷ್ ಪಾಂಡೆ ಅವರನ್ನು ಕೈಬಿಡಲಾಗಿದೆ.

ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನ ಹಾದಿ ಅಂತ್ಯ? ಹಿರಿಯ ಆಟಗಾರನನ್ನು ಕೈಬಿಟ್ಟ ಕರ್ನಾಟಕ ತಂಡ
ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನ ಹಾದಿ ಅಂತ್ಯ? ಹಿರಿಯ ಆಟಗಾರನನ್ನು ಕೈಬಿಟ್ಟ ಕರ್ನಾಟಕ ತಂಡ

ಆಘಾತಕಾರಿ ಬೆಳವಣಿಗೆಯಲ್ಲಿ ಡಿಸೆಂಬರ್​ 21ರಿಂದ ಶುರುವಾಗುವ ವಿಜಯ್ ಹಜಾರೆ ಟ್ರೋಫಿ 2024-25ಗೆ ಕರ್ನಾಟಕ ತಂಡವನ್ನು ಘೋಷಿಸಿದೆ. ಆದರೆ ಪ್ರಕಟಿಸಲಾದ ಏಕದಿನ ತಂಡದಿಂದ ಹಿರಿಯ ಆಟಗಾರರಲ್ಲಿ ಒಬ್ಬರಾದ ಮನೀಶ್ ಪಾಂಡೆ (Manish Pandey) ಅವರನ್ನು ಕೈಬಿಟ್ಟಿದೆ. ಇದು ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನ ಹಾದಿ ಬಹುತೇಕ ಅಂತ್ಯವನ್ನು ಸೂಚಿಸುತ್ತಿದೆ. ಹಿರಿಯರನ್ನು ಕೈಬಿಟ್ಟು ಹೊಸ ಮುಖಗಳತ್ತ ಹೆಜ್ಜೆ ಹಾಕುತ್ತಿರುವ ಕರ್ನಾಟಕ, ಯುವ ರಕ್ತದ ಅಗತ್ಯತೆ ಇದೆ ಎಂದು ಸೂಚಿಸಿದೆ.

ಮನೀಷ್ ಪಾಂಡೆ ಅವರನ್ನು ಕೈಬಿಡಲು ಫಾರ್ಮ್​ ಕೂಡ ಕಾರಣ. ಇತ್ತೀಚೆಗೆ ಮುಕ್ತಾಯಗೊಂಡ ಸೈಯಸ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕೇವಲ 5 ಇನ್ನಿಂಗ್ಸ್​​ಗಳಲ್ಲಿ 117 ರನ್ ಗಳಿಸಿದ್ದರು. ಈ ಟೂರ್ನಿಯಲ್ಲಿ ನಾಕೌಟ್ ಪ್ರವೇಶಿಸಲು ವಿಫಲವಾದ ಕರ್ನಾಟಕ, ಎಂಟು ತಂಡಗಳ ಗುಂಪಿನಲ್ಲಿ ಬರೋಡಾ ಮತ್ತು ಸೌರಾಷ್ಟ್ರ ವಿರುದ್ಧ ಸೋತು ನಾಲ್ಕನೇ ಸ್ಥಾನ ಗಳಿಸಿತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(ಕೆಎಸ್‌ಸಿಎ) ಹಳೆಯ ಆಟಗಾರರನ್ನು ಕೈ ಬಿಡುವ ಸುಳಿವು ನೀಡಿರುವ ಕಾರಣ ಪಾಂಡೆ ಪುನರಾಗಮನ ಕಷ್ಟ.

ಅಷ್ಟೆ ಅಲ್ಲ, ರಣಜಿ ಟ್ರೋಫಿಯ 2ನೇ ಹಂತಕ್ಕೂ ಮನೀಶ್ ಪಾಂಡೆ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಅವರು 6 ಇನ್ನಿಂಗ್ಸ್‌ಗಳಲ್ಲಿ ಒಂದು ಅರ್ಧಶತಕ ಸಿಡಿಸಿದ್ದಾರೆ. ಕೆಎಸ್‌ಸಿಎ ಆಯ್ಕೆ ಸಮಿತಿ ಅಧ್ಯಕ್ಷ ಜೆ ಅಭಿರಾಮ್ ಅವರು ತಂಡದ ಆಯ್ಕೆ ಕುರಿತು ಮಾತನಾಡಿದ್ದು, ನಾವು ಹಳೆಯ ಆಟಗಾರರನ್ನು ಬಿಟ್ಟು ಹೊಸ ರಕ್ತ ತರಲು ಚಿಂತಿಸಿದ್ದೇವೆ. ನಾವು ಗತ ವೈಭವದಲ್ಲಿ ಬದುಕಲು ಸಾಧ್ಯವಿಲ್ಲ. ನಾವು ಈ ಹಿಂದೆ ಟ್ರೋಫಿ ಗೆದ್ದಾಗ ಅದು ಯುವಕರ ತಂಡದಿಂದ ಕೂಡಿತ್ತು. ನಾವು ಮತ್ತೊಮ್ಮೆ ಯುವಕರ ಮೇಲೆ ಬ್ಯಾಂಕಿಂಗ್ ಮಾಡುತ್ತಿದ್ದೇವೆ ಎಂದರು.

ಮನೀಷ್ ಪಾಂಡೆ ವೃತ್ತಿಜೀವನ

ಮನೀಷ್ ಪಾಂಡೆ 2015ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. 2021ರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಟೀಮ್ ಇಂಡಿಯಾ ಪರ 29 ಏಕದಿನ, ಮತ್ತು 39 ಟಿ20ಐಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಪಾಂಡೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 118 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 25 ಶತಕ, 32 ಅರ್ಧಶತಕಗಳೊಂದಿಗೆ 50.78 ಸರಾಸರಿಯಲ್ಲಿ 7973 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸಹ ಅನುಭವಿ 192 ಪಂದ್ಯಗಳನ್ನು ಆಡಿದ್ದು 45.39 ಸರಾಸರಿಯಲ್ಲಿ 6310 ರನ್ ಗಳಿಸಿ 10 ಶತಕ, 39 ಅರ್ಧಶತಕ ಬಾರಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಐಪಿಎಲ್ ಸೇರಿ 308 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 31.56ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದು, 3 ಶತಕ, 39 ಅರ್ಧಶತಕ ಸಹಿತ 7008 ರನ್ ಚಚ್ಚಿದ್ದಾರೆ. ನವೆಂಬರ್​​ನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಮೆಗಾ ಹರಾಜಿನಲ್ಲಿ ಮನೀಷ್ ಪಾಂಡೆ ತನ್ನ ಮೂಲ ಬೆಲೆ 75 ಲಕ್ಷ ರೂಪಾಯಿಗೆ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ ಖರೀದಿಸಿದೆ. 2009ರಲ್ಲಿ ಆರ್​ಸಿಬಿ ಪರ ಡೆಕ್ಕನ್ ಚಾರ್ಜರ್ಸ್ ವಿರುದ್ಧ 73 ಎಸೆತಗಳಲ್ಲಿ 114 ರನ್ ಸಿಡಿಸುವ ಐಪಿಎಲ್​ನಲ್ಲಿ ಮೊದಲ ಬಾರಿಗೆ ಭಾರತೀಯ ಶತಕವೀರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ

ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಎಸ್ ನಿಕಿನ್ ಜೋಸ್, ಕೆವಿ ಅನೀಶ್, ಆರ್ ಸ್ಮರನ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವೈಶಾಕ್ ವಿಜಯ್ ಕುಮಾರ್, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್, ಕಿಶನ್ ಬೇಡರೆ, ಅಭಿಲಾಷ್ ಶೆಟ್ಟಿ, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ.

Whats_app_banner