ಅಡುಗೆ ಮನೆಯಲ್ಲಿ ಚೆಲ್ವಿ ಅವಾಂತರ ಕಂಡು ಸಿಟ್ಟಾದ ಜಯಂತ್‌, ಗಂಡನಿಗೆ ಸಮಾಧಾನ ಹೇಳಿದ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಡುಗೆ ಮನೆಯಲ್ಲಿ ಚೆಲ್ವಿ ಅವಾಂತರ ಕಂಡು ಸಿಟ್ಟಾದ ಜಯಂತ್‌, ಗಂಡನಿಗೆ ಸಮಾಧಾನ ಹೇಳಿದ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ

ಅಡುಗೆ ಮನೆಯಲ್ಲಿ ಚೆಲ್ವಿ ಅವಾಂತರ ಕಂಡು ಸಿಟ್ಟಾದ ಜಯಂತ್‌, ಗಂಡನಿಗೆ ಸಮಾಧಾನ ಹೇಳಿದ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 18ರ ಎಪಿಸೋಡ್‌ನಲ್ಲಿ ಅಡುಗೆ ಮನೆಯಲ್ಲಿ ಚೆಲ್ಲಾಡಿದ ತರಕಾರಿ ಸಿಪ್ಪೆಗಳು, ಸಿಂಕ್‌ನಲ್ಲಿ ಹಾಗೇ ಉಳಿದುಕೊಂಡಿದ್ದ ಪಾತ್ರೆಗಳನ್ನು ನೋಡಿ ಜಯಂತ್‌ ಚೆಲ್ವಿ ಮೇಲೆ ಸಿಟ್ಟಾಗುತ್ತಾನೆ. ಗಂಡನ ಮನಸ್ಸು ಅರ್ಥ ಮಾಡಿಕೊಂಡ ಜಾನು, ಅವನನ್ನು ಸಮಾಧಾನ ಮಾಡುತ್ತಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 18ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 18ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಜಾಹ್ನವಿಯನ್ನು ನೋಡಲು ವೆಂಕಿ ಹಾಗೂ ಅಜ್ಜಿ ಹೊರಡಲು ಸಿದ್ಧರಾಗುತ್ತಾರೆ. ಆದರೆ ವೆಂಕಿ ಹಾಗೂ ಚೆಲ್ವಿಯನ್ನು ದೂರ ಮಾಡುವುದು ಬೇಡ ಎಂದು ಶ್ರೀನಿವಾಸ್‌, ಚೆಲ್ವಿಗೆ ಕೂಡಾ ಜಾನು ಮನೆಗೆ ಹೋಗುವಂತೆ ಹೇಳುತ್ತಾನೆ. ಚೆಲ್ವಿ, ಖುಷಿಯಾಗಿ ವೆಂಕಿ ಜೊತೆ ಹೋಗಲು ಒಪ್ಪುತ್ತಾಳೆ. ಮೂವರೂ ಒಟ್ಟಿಗೆ ಮನೆಗೆ ಬಂದಿದ್ದನ್ನು ಕಂಡು ಜಯಂತ್‌ ಗಾಬರಿ ಆಗುತ್ತಾನೆ. ಇಷ್ಟವಿಲ್ಲದಿದ್ರೂ ಒಲ್ಲದ ಮನಸ್ಸಿನಿಂದ ಮೂವರನ್ನೂ ಬರಮಾಡಿಕೊಳ್ಳುತ್ತಾನೆ.

ಅಜ್ಜಿ, ಚೆಲ್ವಿ, ವೆಂಕಿಯನ್ನು ನೋಡಿ ಶಾಕ್‌ ಆದ ಜಯಂತ್

ಅಜ್ಜಿ, ವೆಂಕಿ ಅಣ್ಣ, ಚೆಲ್ವಿ ಅತ್ತಿಗೆಯನ್ನು ನೋಡಿ ಜಾನು ಬಹಳ ಖುಷಿಯಾಗುತ್ತಾಳೆ. ಬಹಳ ದಿನಗಳ ನಂತರ ತವರು ಮನೆಯವನ್ನು ನೋಡಿ ಜಾನು ಸಂತೋಷ ಪಡುತ್ತಾಳೆ. ಮೂವರನ್ನೂ ಸಡಗರದಿಂದ ಬರಮಾಡಿಕೊಂಡು ಎಲ್ಲರ ಯೋಗಕ್ಷೇಮ ವಿಚಾರಿಸುತ್ತಾಳೆ. ಜಾನು ಇಷ್ಟು ಖುಷಿ ಆಗಿದ್ದನ್ನು ಕಂಡು ಜಯಂತ್‌ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಮರುದಿನ ಜಾನು, ಜಯಂತ್‌ ಎದ್ದೇಳುವ ಮುನ್ನವೇ ಚೆಲ್ವಿ ಎದ್ದು ಅಡುಗೆ ಮನೆಗೆ ಹೋಗಿ ತಿಂಡಿ ಮಾಡುತ್ತಾಳೆ. ಜಯಂತ್‌ ಎದ್ದು ಅಡುಗೆ ಮನೆಗೆ ಬಂದು ಚೆಲ್ವಿಯನ್ನು ನೋಡುತ್ತಿದ್ದಂತೆ ಕೋಪಗೊಳ್ಳುತ್ತಾನೆ. ಅಡುಗೆ ಮನೆಯಲ್ಲಿ ಎಲ್ಲೆಂದಲ್ಲಿ ಬಿಸಾಡಿದ ವಸ್ತುಗಳು, ತರಕಾರಿ ಸಿಪ್ಪೆಗಳು, ಸಿಂಕ್‌ನಲ್ಲಿ ಹಾಗೇ ಇಟ್ಟ ಪಾತ್ರೆಗಳನ್ನು ನೋಡಿ ಅಸಹ್ಯ ಪಡುತ್ತಾನೆ.

ಚೆಲ್ವಿಗೆ ಏನನ್ನೂ ನೇರವಾಗಿ ಹೇಳಲು ಸಾಧ್ಯವಾಗದೆ ನೀವು ನಮ್ಮ ಮನೆ ಅತಿಥಿಗಳು ದಯವಿಟ್ಟು ನೀವು ಸುಮ್ಮನೆ ಕೂರಿ ನಾನು ಅಡುಗೆ ಮಾಡುತ್ತೇನೆ ಎನ್ನುತ್ತಾನೆ. ನಾವು ಬಂದಿರುವುದೇ ಜಾನು ನೋಡಿಕೊಳ್ಳಲು , ಅಂತದರಲ್ಲಿ ನಾವು ಸುಮ್ಮನೆ ಕುಳಿತು ನಿಮ್ಮ ಕೈಲಿ ಅಡುಗೆ ಮಾಡಿಸಿದರೆ ಏನು ಚೆನ್ನಾಗಿರುತ್ತೆ ಎಂದು ಚೆಲ್ವಿ ಕೇಳುತ್ತಾಳೆ. ಜಯಂತ್‌ ಒಲ್ಲದ ಮನಸ್ಸಿನಿಂದ ತಿಂಡಿಗೆ ಕೂರುತ್ತಾನೆ. ಆದರೆ ಮಧ್ಯದಲ್ಲಿ ಎದ್ದು ಪಾತ್ರೆ ತೊಳೆಯಲು ಹೋಗುತ್ತಾನೆ. ಇವರು ಹೀಗೆ, ಎಲ್ಲದರಲ್ಲೂ ಕ್ಲೀನ್‌ ಇರಬೇಕು ಎಂದು ಬಯಸುತ್ತಾರೆ, ನೀವು ಯೋಚನೆ ಮಾಡಬೇಡಿ ತಿಂಡಿ ಮುಗಿಸಿ ನಾನು ಎಲ್ಲವನ್ನೂ ಕ್ಲೀನ್‌ ಮಾಡುತ್ತೇನೆ ಎಂದು ಸಮಾಧಾನ ಮಾಡುತ್ತಾಳೆ. ಜಯಂತ್‌ ತಿಂಡಿಯೂ ತಿನ್ನದೇ ಆಫೀಸಿಗೆ ಹೋಗುತ್ತಾನೆ. ಜಾಹ್ನವಿ ನನ್ನ ಬಗ್ಗೆ ಅಜ್ಜಿಗೆ ಏನಾದರೂ ಹೇಳಬಹುದಾ ಎಂದು ಅನುಮಾನಗೊಂಡು ಸಿಸಿ ಕ್ಯಾಮರಾ ನೋಡುತ್ತಾನೆ. ಅವರಿಬ್ಬರೂ ನಗು ನಗುತ್ತಾ ಮಾತಾಡುವುದನ್ನು ಕಂಡು, ಸದ್ಯ ಜಾನು ನನ್ನ ಬಗ್ಗೆ ಏನೂ ಹೇಳಿಲ್ಲ ಎಂದು ಸಮಾಧಾನಗೊಳ್ಳುತ್ತಾನೆ.‌

ಭಾವನಾ ಕೆಲಸಕ್ಕೆ ಹೋಗಬಾರದು ಎಂದು ಕಂಡಿಷನ್‌ ಮಾಡಿದ ರೇಣುಕಾ

ಇತ್ತ ಭಾವನಾ ಕೆಲಸಕ್ಕೆ ಹೊರಡಲು ರೆಡಿ ಆಗುತ್ತಾಳೆ. ಸಿದ್ದು ಅವಳನ್ನು ಡ್ರಾಪ್‌ ಮಾಡಲು ಜೊತೆಯಾಗಿ ಹೋಗುತ್ತಾನೆ. ಅದನ್ನೂ ನೊಡಿ ರೇಣುಕಾ ಸಿಟ್ಟಾಗುತ್ತಾಳೆ. ಇವಳು ಎಲ್ಲಿಗೆ ಹೋಗುತ್ತಿದ್ದಾಳೆ ಎಂದು ಕೇಳುತ್ತಾಳೆ. ಇದೇನಮ್ಮ ಹೊಸದಾಗಿ ಕೇಳುತ್ತಿದ್ದೀಯ? ಅವರು ಕೆಲಸಕ್ಕೆ ಹೋಗುತ್ತಿದ್ದಾರೆ ಎನ್ನುತ್ತಾನೆ. ಇವಳು ಕೆಲಸಕ್ಕೆ ಹೋಗಬಾರದು ಎಂದು ರೇಣುಕಾ ಕಂಡಿಷನ್‌ ಮಾಡುತ್ತಾಳೆ. ಆದರೆ ನೀಲು ಮಧ್ಯೆ ಮಾತನಾಡಿ ಅತ್ತೆ ನೀವು ಟೆನ್ಷನ್‌ ಆಗಬೇಡಿ ನಾನು ಮಾತನಾಡುತ್ತೇನೆ ನೀವು ಹೋಗಿ ರೆಸ್ಟ್‌ ಮಾಡಿ ಎನ್ನುತ್ತಾಳೆ. ಭಾವನಾ ನೀವು ಮದುವೆ ಆಗಿ ಬಂದಾಗಿನಿಂದ ಮನೆಯಲ್ಲಿ ಬಹಳ ಸಮಸ್ಯೆಗಳಾಗುತ್ತಿವೆ. ನೀವೇ ಏನಾದರೂ ನಿರ್ಧಾರ ತೆಗೆದುಕೊಳ್ಳಬೇಕು, ಸದ್ಯಕ್ಕೆ ನೀವು ಕೆಲಸಕ್ಕೆ ಹೋಗಿ ಎನ್ನುತ್ತಾಳೆ. ಭಾವನಾ ಏನೂ ಮಾತನಾಡದೆ ತಲೆ ಆಡಿಸಿ ಅಲ್ಲಿಂದ ಹೊರಡುತ್ತಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner