ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೇವಿಸಿ ಮಸಾಲೆ ಹಾಲಿನ ಪುಡಿ: ರೆಸಿಪಿ ಮಾಡುವುದು ಹೀಗೆ
ಚಳಿಗಾಲದಲ್ಲಿ ಚಹಾ ಮತ್ತು ಕಾಫಿಯ ಬದಲಿಗೆ ಮಸಾಲೆ ಹಾಲು ಕುಡಿಯಲು ಪ್ರಯತ್ನಿಸಬಹುದು. ಇದು ತುಂಬಾ ಆರೋಗ್ಯಕರ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಸಾಲೆ ಹಾಲು ತಯಾರಿಸಲು,ಮಸಾಲೆ ಪುಡಿಯನ್ನು ಮೊದಲು ತಯಾರಿಸಬೇಕಾಗುತ್ತದೆ. ಇಲ್ಲಿದೆ ರೆಸಿಪಿ.
ಚಳಿಗಾಲದಲ್ಲಿ ಕೆಲವು ವಿಶೇಷ ಆಹಾರಗಳನ್ನು ತೆಗೆದುಕೊಳ್ಳಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯಗಳನ್ನು ಸೇವಿಸುವುದರಿಂದ ಸೋಂಕನ್ನು ತಡೆಯಬಹುದು. ಚಹಾ ಮತ್ತು ಕಾಫಿಯ ಬದಲಿಗೆ ಮಸಾಲೆ ಹಾಲು ಕುಡಿಯಲು ಪ್ರಯತ್ನಿಸಿ. ಈ ಮಸಾಲೆ ಹಾಲು ತಯಾರಿಸಲು, ಮಸಾಲೆ ಪುಡಿಯನ್ನು ಮೊದಲು ತಯಾರಿಸಬೇಕಾಗುತ್ತದೆ. ಇಲ್ಲಿ ಹಾಲಿನ ಮಸಾಲೆ ಪುಡಿಯನ್ನು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಒಮ್ಮೆ ತಯಾರಿಸಿದರೆ ಎರಡರಿಂದ ಮೂರು ತಿಂಗಳು ಫ್ರೆಶ್ ಆಗಿರುತ್ತದೆ.
ಮಸಾಲೆ ಹಾಲಿನ ಪೌಡರ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಗೋಡಂಬಿ- ಅರ್ಧ ಕಪ್, ಬಾದಾಮಿ- ಅರ್ಧ ಕಪ್. ಪಿಸ್ತಾ- ಅರ್ಧ ಕಪ್, ಅರಿಶಿನ ಪುಡಿ- ಒಂದು ಟೀ ಚಮಚ, ಕಾಳುಮೆಣಸು- ಅರ್ಧ ಟೀ ಚಮಚ, ಏಲಕ್ಕಿ- ಆರು, ಹಾಲು- ಒಂದು ಗ್ಲಾಸ್, ಸಕ್ಕರೆ- ಕಾಲು ಕಪ್.
ಮಾಡುವ ವಿಧಾನ: ಸ್ಟೌವ್ ಮೇಲೆ ಬಾಣಲೆಯಿಟ್ಟು ಬಾದಾಮಿ, ಗೋಡಂಬಿ ಮತ್ತು ಪಿಸ್ತಾವನ್ನು ಹುರಿಯಿರಿ.
- ಏಲಕ್ಕಿ ಮತ್ತು ಕಾಳುಮೆಣಸು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
- ತಣ್ಣಗಾದ ನಂತರ ಅವೆಲ್ಲವನ್ನೂ ಮಿಕ್ಸಿಂಗ್ ಜಾರ್‌ನಲ್ಲಿ ಹಾಕಿ.
- ಸಕ್ಕರೆ ಸೇರಿಸಿ, ನುಣ್ಣಗೆ ಪುಡಿಮಾಡಿ.
- ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಡಿ. ಅಷ್ಟೇ, ಮಸಾಲೆ ಹಾಲಿನ ಪುಡಿ ಸಿದ್ಧವಾಗಿದೆ.
- ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಬಿಸಿ ಹಾಲನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಮಸಾಲೆ ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಸಾಲೆ ಹಾಲಿನ ಪುಡಿಯನ್ನು ಹಾಲಿಗೆ ಚಹಾದಂತೆಯೇ ಸೇರಿಸಿ, ಸ್ವಲ್ಪ ಕುದಿಯಲು ಬಿಡಿ.
- ಇದಾದ ನಂತರ ಗ್ಲಾಸ್‍ಗೆ ಹಾಕಿ ಬಿಸಿ ಬಿಸಿಯಾಗಿ ಕುಡಿದರೆ ರುಚಿ ತೀವ್ರವಾಗಿರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಂಟಲುನೋವು ಮತ್ತು ಮೂಗು ಕಟ್ಟುವಿಕೆ ಸಮಸ್ಯೆಗಳು ದೂರವಾಗುತ್ತವೆ.
ಈ ಮಸಾಲೆ ಹಾಲಿನ ಪುಡಿಯನ್ನು ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ತೆಗೆದುಕೊಳ್ಳಬಹುದು. ಚಳಿಗಾಲದಲ್ಲಿ ಬಿಸಿಯಾಗಿ ಸೇವಿಸಿದರೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಇದನ್ನು ಬೇಸಿಗೆಯಲ್ಲಿ ತಣ್ಣಗೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ. ಶಕ್ತಿಯನ್ನೂ ನೀಡುತ್ತದೆ.