ಐಸಿಸಿ ಟೆಸ್ಟ್ ರ‍್ಯಾಂಕಿಂಗ್; ಹ್ಯಾರಿ ಬ್ರೂಕ್ಸ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಿ ದಾಖಲೆ ಬರೆದ ಜೋ ರೂಟ್
Joe Root: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಜೋ ರೂಟ್ ನಂಬರ್ 1 ಸ್ಥಾನವನ್ನು ಮರಳಿ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಗ್ರಸ್ಥಾನದಲ್ಲಿದ್ದ ಹ್ಯಾರಿ ಬ್ರೂಕ್ ಅವರನ್ನು 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC Test rankings update) ಟೆಸ್ಟ್ ಕ್ರಿಕೆಟ್ನ ನೂತನ ಶ್ರೇಯಾಂಕ ಬಿಡುಗಡೆಯಾಗಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಅವರು (Joe Root) ತಮ್ಮದೇ ದೇಶದ ಹ್ಯಾರಿ ಬ್ರೂಕ್ (Harry Brook) ಅವರನ್ನು ಹಿಂದಿಕ್ಕಿ ಮತ್ತೆ ನಂಬರ್ 1 ಪಟ್ಟಕ್ಕೇರಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ 10ನೇ ಬಾರಿಗೆ ನಂಬರ್ 1 ಪಟ್ಟ ಅಲಂಕರಿಸುವ ಮೂಲಕ ದಾಖಲೆ ಬರೆದಿದ್ದಾರೆ. 895 ರೇಟಿಂಗ್ ಅಂಕ ಪಡೆದಿರುವ ರೂಟ್ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಹಾಗೂ 3ನೇ ಟೆಸ್ಟ್ನಲ್ಲಿ 32 ಮತ್ತು 54 ರನ್ ಸಿಡಿಸಿದರು. ಇದೇ ಪಂದ್ಯದಲ್ಲಿ ಬ್ರೂಕ್ಸ್ ಎರಡೂ ಇನ್ನಿಂಗ್ಸ್ ಸೇರಿ 1 ರನ್ ಗಳಿಸಿದರು. ಇದರಿಂದ ರೇಟಿಂಗ್ ಅಂಕ ಕಳೆದುಕೊಂಡು 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮತ್ತೊಂದೆಡೆ ಶತಕ ಗಳಿಸಿದ ಹೊರತಾಗಿಯೂ ನ್ಯೂಜಿಲೆಂಡ್ ಲೆಜೆಂಡ್ ಕೇನ್ ವಿಲಿಯಮ್ಸನ್ (Kane Williamson) ಅವರು 867 ರೇಟಿಂಗ್ ಪಾಯಿಂಟ್ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಬುಧವಾರ (ಡಿಸೆಂಬರ್ 18) ಮುಕ್ತಾಯಗೊಂಡಿದ್ದು, ಈ ಪಂದ್ಯದಲ್ಲಿ ಆಟಗಾರರು ನೀಡಿದ ಪ್ರದರ್ಶನವನ್ನು ಶ್ರೇಯಾಂಕಕ್ಕೆ ಪರಿಗಣಿಸಲಾಗಿಲ್ಲ. ಮುಂದಿನ ವಾರ ಬುಧವಾರ ಇಂಡೋ-ಆಸೀಸ್ ಆಟಗಾರರ ಶ್ರೇಯಾಂಕ ಅಪ್ಡೇಟ್ ಆಗಲಿದೆ. ಪ್ರಸ್ತುತ ಯಶಸ್ವಿ ಜೈಸ್ವಾಲ್ 4ನೇ ಸ್ಥಾನ ಉಳಿಸಿಕೊಂಡಿದ್ದಾರೆ. 3ನೇ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನದ ಹಿನ್ನೆಲೆ ಕುಸಿಯುವ ನಿರೀಕ್ಷೆ ಇದೆ.
ಮತ್ತೊಂದೆಡೆ ಶತಕವೀರ ಟ್ರಾವಿಸ್ ಹೆಡ್, ಶ್ರೇಯಾಂಕದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ. ಅಲ್ಲದೆ, ಉತ್ತಮ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಕೂಡ ಏರುವ ನಿರೀಕ್ಷೆ ಇದೆ. ಮತ್ತೊಂದೆಡೆ ರಿಷಭ್ ಪಂತ್ 724 ರೇಟಿಂಗ್ ಅಂಕಗಳೊಂದಿಗೆ ಅಗ್ರ 10 (9ನೇ ಸ್ಥಾನ)ದಲ್ಲಿರುವ ಎರಡನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಗಬ್ಬಾದಲ್ಲಿ 8 ವಿಕೆಟ್ ಕಬಳಿಸಿರುವ ಬುಮ್ರಾ, ನಂಬರ್ 1 ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ. ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಬ್ಯಾಟರ್ಗಳ ಶ್ರೇಯಾಂಕ
1. ಜೋ ರೂಟ್ - 895
2. ಹ್ಯಾರಿ ಬ್ರೂಕ್ - 876
3. ಕೇನ್ ವಿಲಿಯಮ್ಸನ್ - 867
4. ಯಶಸ್ವಿ ಜೈಸ್ವಾಲ್ - 811
5. ಟ್ರಾವಿಸ್ ಹೆಡ್ - 781
ಬೌಲರ್ಗಳ ಶ್ರೇಯಾಂಕ
1. ಜಸ್ಪ್ರೀತ್ ಬುಮ್ರಾ - 890
2. ಕಗಿಸೊ ರಬಾಡ - 856
3. ಜೋಶ್ ಹೇಜಲ್ವುಡ್ - 851
4. ಪ್ಯಾಟ್ ಕಮಿನ್ಸ್ - 816
5. ರವಿಚಂದ್ರನ್ ಅಶ್ವಿನ್ - 797