ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರು ನಕ್ಷತ್ರ ಬದಲಾವಣೆ; ಜುಲೈ 13ರಿಂದ ಈ 5 ರಾಶಿಯವರ ಜೀವನದಲ್ಲಿ ಆಗಲಿದೆ ಮಹತ್ತರ ಬದಲಾವಣೆ

ಗುರು ನಕ್ಷತ್ರ ಬದಲಾವಣೆ; ಜುಲೈ 13ರಿಂದ ಈ 5 ರಾಶಿಯವರ ಜೀವನದಲ್ಲಿ ಆಗಲಿದೆ ಮಹತ್ತರ ಬದಲಾವಣೆ

ಜುಲೈ 13ರಂದು ಗುರು ನಕ್ಷತ್ರ ಬದಲಾಯಿಸುತ್ತಿದ್ದಾನೆ. ಗುರುವು ಆ ದಿನದಂದು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಗ್ರಹದ ಈ ಬದಲಾವಣೆಯಿಂದ ಕೆಲವು ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯಿರಿ.

ಜುಲೈ 13ರಿಂದ ಈ 5 ರಾಶಿಯವರ ಜೀವನದಲ್ಲಿ ಆಗಲಿದೆ ಮಹತ್ತರ ಬದಲಾವಣೆ
ಜುಲೈ 13ರಿಂದ ಈ 5 ರಾಶಿಯವರ ಜೀವನದಲ್ಲಿ ಆಗಲಿದೆ ಮಹತ್ತರ ಬದಲಾವಣೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಗುರುವಿಗೆ ವಿಶೇಷ ಸ್ಥಾನವಿದೆ. ಗುರು ಗ್ರಹದ ಕೃಪೆಯಿಂದ ವ್ಯಕ್ತಿಯು ಅದೃಷ್ಟವಂತನಾಗುತ್ತಾನೆ ಎಂದು ನಂಬಲಾಗಿದೆ. ಗುರುವನ್ನು ಜ್ಞಾನ, ಶಿಕ್ಷಣ, ಸಂತಾನ, ಸಂಪತ್ತು, ಧಾರ್ಮಿಕ ಕಾರ್ಯ, ದಾನ, ಪುಣ್ಯ ಮತ್ತು ಪ್ರಗತಿ ಇತ್ಯಾದಿಗಳಿಗೆ ಕಾರಣವಾದ ಗ್ರಹ ಎಂದು ಹೇಳಲಾಗುತ್ತದೆ. 27 ನಕ್ಷತ್ರಗಳ ಪೈಕಿ ಗುರು ಗ್ರಹವು ಪುನರ್ವಸು, ವಿಶಾಖ ಮತ್ತು ಪೂರ್ವ ಭಾದ್ರಪದ ನಕ್ಷತ್ರಗಳಿಗೆ ಅಧಿಪತಿಯಾಗಿದ್ದಾನೆ. ಈ ಗುರು ಗ್ರಹವು ಜುಲೈ 13ರಂದು ನಕತ್ರವನ್ನು ಬದಲಾಯಿಸಲಿದ್ದಾನೆ. ಆ ದಿನ ಗುರು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಗುರು ಗ್ರಹದ ನಕತ್ರ ಪರಿವರ್ತನೆಯು ಕೆಲವು ರಾಶಿಯವರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಿದೆ. ಗುರು ಗ್ರಹವು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಯಾವ ರಾಶಿಯವರ ಮೇಲೆ ಬದಲಾವಣೆಗಳಾಗುತ್ತದೆ ತಿಳಿಯೋಣ.

ಮೇಷ ರಾಶಿ

ಗುರು ಗ್ರಹವು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಮೇಷ ರಾಶಿಯವರ ಜೀವನದಲ್ಲಿ ಖರ್ಚು ಹೆಚ್ಚುತ್ತದೆ. ಬಟ್ಟೆಗಾಗಿ ಹೆಚ್ಚಿನ ಹಣ ವ್ಯಯವಾಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಮುಖ್ಯವಾಗಿದೆ. ಸಂಗ್ರಹವಾದ ಸಂಪತ್ತು ಕಡಿಮೆಯಾಗಲಿದೆ. ಆತ್ಮವಿಶ್ವಾಸ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಶಾಂತರಾಗಿರುವುದು ಉತ್ತಮ. ಬರವಣಿಗೆ ಮತ್ತು ಬೌದ್ಧಿಕ ಕೆಲಸಗಳಲ್ಲೂ ಹಿನ್ನಡೆಯುಂಟಾಗಬಹುದು.

ಮಿಥುನ ರಾಶಿ

ಮಿಥುನ ರಾಶಿಯವರು ಉದ್ಯೋಗ ಮತ್ತು ಖರ್ಚಿನ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಬರಬಹುದು ಮತ್ತು ಉದ್ಯೋಗ ಬದಲಾವಣೆ ಕೂಡಾ ಸಾಧ್ಯ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿಯ ಭಾವನೆ ಕಾಡಬಹುದು. ಆತ್ಮವಿಶ್ವಾಸದ ಕೊರತೆ ಉಂಟಾಗಲಿದ್ದು ಖರ್ಚು ಸಹ ಹೆಚ್ಚಾಗಲಿದೆ.

ಸಿಂಹ ರಾಶಿ

ಬೃಹಸ್ಪತಿಯ ನಕ್ಷತ್ರ ಬದಲಾವಣೆಯಿಂದ ಸಿಂಹ ರಾಶಿಯವರಲ್ಲೂ ಸ್ಥಳ ಬದಲಾವಣೆ ಸಾಧ್ಯ. ನಿಮ್ಮ ಮತ್ತು ತಾಯಿಯ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ತಾಳ್ಮೆ ಕಡಿಮೆಯಾಗುವುದರಿಂದ, ಅತಿಯಾದ ಕೋಪ ಬರಬಹುದು. ಸ್ವಯಂ ನಿಯಂತ್ರಣದಲ್ಲಿ ಉಳಿಯುವುದು ಉತ್ತಮ. ಮಾತಿನಲ್ಲಿ ಕಠೋರತೆ ಇರುವುದರಿಂದ ಸಂಭಾಷಣೆಯಲ್ಲಿ ಸಂಯಮವಿರಲಿ. ಬಟ್ಟೆ ಇತ್ಯಾದಿ ವಸ್ತುಗಳ ಕಡೆಗೆ ಒಲವು ಹೆಚ್ಚಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಆತ್ಮವಿಶ್ವಾಸದ ಕೊರತೆ ಕಂಡುಬಂದರೂ ಕುಟುಂಬದ ಬೆಂಬಲ ಇರುತ್ತದೆ. ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲಸಗಳು ಹೆಚ್ಚಾಗುವ ಸಾಧ್ಯತೆಯಿದೆ. ಮಾತಿನ ಮೇಲೆ ಹೆಚ್ಚು ನಿಗಾವಹಿಸಿ. ಖರ್ಚು ಹೆಚ್ಚಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ, ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಆಹಾರ ಪದ್ಧತಿ ಮತ್ತು ಆರೋಗ್ಯದ ಮೇಲೆ ಜಾಗರೂಕರಾಗಿರಿ.

ಧನು ರಾಶಿ

ಈ ರಾಶಿಯ ಅಧಿಪತಿ ಗುರುವೇ ಆಗಿದ್ದರೂ ಸಹ ಒಳ್ಳೆಯ ಸಮಯಕ್ಕಾಗಿ ತಾಳ್ಮೆಯಿಂದ ಕಾಯಲೇಬೇಕಾಗಿದೆ. ರಕ್ತ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಕಾನೂನು ಮೊಕದ್ದಮೆಗಳನ್ನು ಎದುರಿಸಬೇಕಾಗಬಹುದು. ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ವಂಚಕರ ಬಗ್ಗೆ ಎಚ್ಚರದಿಂದಿರಿ. ಮನೆಯಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಅದರಿಂದ ಜೀವನದಲ್ಲಿ ಅಪಶ್ರುತಿ ಉಂಟಾಗಬಹುದು. ಏಕಾಗ್ರತೆಯ ಕೊರತೆ ಉಂಟಾಗಬಹುದು.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.