ದೇಗುಲ ದರ್ಶನ: ಸಂತಾನ ಭಾಗ್ಯವಿಲ್ಲವೇ,ಬಾಲಗ್ರಹ ಜನ್ಮ ಕುಂಡಲಿ ದೋಷವೇ, ಅಪ್ರಮೇಯ ಸ್ವಾಮಿ ದೇವಸ್ಥಾನದ ಅಂಬೆಗಾಲು ಕೃಷ್ಣನ ದರ್ಶನದಿಂದ ಪರಿಹಾರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇಗುಲ ದರ್ಶನ: ಸಂತಾನ ಭಾಗ್ಯವಿಲ್ಲವೇ,ಬಾಲಗ್ರಹ ಜನ್ಮ ಕುಂಡಲಿ ದೋಷವೇ, ಅಪ್ರಮೇಯ ಸ್ವಾಮಿ ದೇವಸ್ಥಾನದ ಅಂಬೆಗಾಲು ಕೃಷ್ಣನ ದರ್ಶನದಿಂದ ಪರಿಹಾರ

ದೇಗುಲ ದರ್ಶನ: ಸಂತಾನ ಭಾಗ್ಯವಿಲ್ಲವೇ,ಬಾಲಗ್ರಹ ಜನ್ಮ ಕುಂಡಲಿ ದೋಷವೇ, ಅಪ್ರಮೇಯ ಸ್ವಾಮಿ ದೇವಸ್ಥಾನದ ಅಂಬೆಗಾಲು ಕೃಷ್ಣನ ದರ್ಶನದಿಂದ ಪರಿಹಾರ

Sri Aprameya Swamy Temple: ಕರ್ನಾಟಕದ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಮಳೂರು ಎಂಬ ಗ್ರಾಮದಲ್ಲಿರುವ ಅಪ್ರಮೇಯ ಸ್ವಾಮಿ ದೇವಸ್ಥಾನದ ಅಂಬೆಗಾಲು ಕೃಷ್ಣ (Ambegal Krishna) ದೇಗುಲದ ಮಹತ್ವವನ್ನು ಬೆಂಗಳೂರಿನ ಎಚ್‌. ಸತೀಶ್‌ ಇಲ್ಲಿ ವಿವರಿಸಿದ್ದಾರೆ.

ಚನ್ನಪಟ್ಟಣದ ಅಪ್ರಮೇಯ ಸ್ವಾಮಿ ದೇವಸ್ಥಾನದ ಅಂಬೆಗಾಲು ಕೃಷ್ಣನ ದರ್ಶನದಿಂದ ಸಕಲವೂ ಸಿದ್ಧಿ
ಚನ್ನಪಟ್ಟಣದ ಅಪ್ರಮೇಯ ಸ್ವಾಮಿ ದೇವಸ್ಥಾನದ ಅಂಬೆಗಾಲು ಕೃಷ್ಣನ ದರ್ಶನದಿಂದ ಸಕಲವೂ ಸಿದ್ಧಿ (Photo: Praveen Chandra)

ರಾಮನಗರ: ಚಿಕ್ಕಮಕ್ಕಳಿಗೆ ಬೇಗನೆ ಸೋಂಕು ಉಂಟಾಗುತ್ತದೆ. ಅತಿ ಬೇಗನೆ ಮಕ್ಕಳ ಆರೋಗ್ಯದಲ್ಲಿ ತೊಂದರೆಗಳು ಕಂಡುಬರುತ್ತವೆ. ಮಕ್ಕಳಲ್ಲಿ ರೋಗ ನಿರೋದಕ ಶಕ್ತಿ ಕಡಿಮೆ ಇರುತ್ತದೆ. ಬಹುಮುಖ್ಯವಾಗಿ ಅತಿಯಾದ ಉಷ್ಣತೆ ಮತ್ತು ಉಷ್ಣಕ್ಕೆ ಸಂಬಂಧಿಸಿದ ರೋಗ ಋಜಿನಗಳು ಇದ್ದೇ ಇರುತ್ತದೆ. ಇನ್ನೂ ಕೆಲವು ಮಕ್ಕಳಿಗೆ ಬಾಲಗ್ರಹದ ತೊಂದರೆ ತಲೆದೋರುತ್ತದೆ.

ಜನ್ಮ ಕುಂಡಲಿಯಲ್ಲಿ ಯಾವುದೇ ದೋಷಗಳು ಇರದೇ ಹೋದರೂ ಕೆಲ ದಂಪತಿಗಳಿಗೆ ಸಂತಾನವಾಗುವುದಿಲ್ಲ. ಕೆಲವೊಮ್ಮೆ ಜನಿಸಿದ ಮಕ್ಕಳು ಅಸುನೀಗುತ್ತವೆ.

ಇತ್ತೀಚಿನ ದಿನಗಳಲ್ಲಿ ತಾಯಿ ಮತ್ತು ಮಕ್ಕಳ ಅದರಲ್ಲಿಯೂ ಗಂಡುಮಕ್ಕಳ ನಡುವೆ ಪ್ರೀತಿಯ ಬಾಂಧವ್ಯವೇ ಇರುವುದಿಲ್ಲ. ಹಣ ಅಥವ ಆಸ್ತಿಯ ವಿಚಾರದಲ್ಲಿ ಜಗಳ ಕದನಗಳು ತಾರಕಕ್ಕೇರಿರುತ್ತದೆ. ಸೋದರ ಮಾವನ ಜೊತೆಯಲ್ಲಿ ಉತ್ತಮ ಸಂಬಂಧ ಇರುವುದಿಲ್ಲ.

ಕೆಲವರಲ್ಲಿ ಅನಾರೋಗ್ಯದ ತೊಂದರೆ ಬಹಳವಿರುತ್ತದೆ. ಯಾವುದೇ ಔಷಧಿಗಳಿಗೆ ಬಗ್ಗುವುದಿಲ್ಲ. ದೀರ್ಘಕಾಲ ಕಾಡುವ ರೋಗಗಳಿಂದ ಬಳಲುತ್ತಾರೆ.

ಈ ಎಲ್ಲಾ ಮೇಲಿನ ತೊಂದರೆಗೆ ಉತ್ತಮ ಪರಿಹಾರವು ಒಂದು ದೇವಾಲಯದಲ್ಲಿ ದೊರೆಯುತ್ತದೆ. ಅದುವೆ ಶ್ರೀ ಅಪ್ರಮೇಯ ಸ್ವಾಮಿಯ ದೇವಾಲಯ. ಇಲ್ಲಿ ಅರವಿಂದವಲ್ಲಿಯ ದೇವಾಲಯವೂ ಇದೆ. ಆದರೆ ಮುಖ್ಯವಾದ ಆಕರ್ಷಣೆ ಎಂದರೆ ಅಂಬೆಗಾಲು ಕೃಷ್ಣ. ವಿಶೇಷವೆಂದರೆ ಕೈಯಲ್ಲಿ ಬೆಣ್ಣೆಇದೆ. ಎಳೆ ಮಕ್ಕಳಂತೆ ಕೈಯಲ್ಲಿ ಬೆಣ್ಣೆ ಹಿಡಿದು ತೆವಳುತ್ತಿರುವ ಭಂಗಿಯಲ್ಲಿದೆ. ಇಂಥಹ ಬಂಗಿಯಲ್ಲಿ ಇರುವ ದೇವರು ಇರುವ ದೇವಾಲಯ ಇದೊಂದೆ ಎಂದು ಹೇಳಲಾಗಿದೆ. ಇದು ಕಣ್ವ ನದಿಯ ದಡದಲ್ಲಿ ಇದೆ. ಇದನ್ನು ವ್ಯಾಸರಾಜರು ಸ್ಥಾಪಿಸಿದರೆಂದು ಹೇಳಲಾಗಿದೆ.

ಈ ಅಂಬೆಗಾಲಿನ ಕೃಷ್ಣನಿಗೆ ಬೆಣ್ಣೆಯನ್ನು ಹಚ್ಚಿದಲ್ಲಿ ಈ ಮೇಲಿನ ಎಲ್ಲಾ ತೊಂದರೆಯಿಂದ ಸುಲಭವಾಗಿ ಪಾರಾಗಬಹುದು.

ಇಂಥಹ ಅಪರೂಪದ ದೇವಾಲಯ ಇರುವುದು ಕರ್ನಾಟಕದ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಮಳೂರು ಎಂಬ ಗ್ರಾಮದಲ್ಲಿ. ಇತಿಹಾಸದ ಪ್ರಕಾರ ಅಪ್ರಮೇಯನ ದೇವಾಲಯ ಚೋಳರ ಕಾಲದ್ದು ಅಂದರೆ 11ನೇ ಶತಮಾನದ್ದು ಎಂದು ಹೇಳಲಾಗಿದೆ. ಶ್ರೀ ರಾಮನು ಈ ಸ್ಥಳವನ್ನು ಅಯೋಧ್ಯೆಗೆ ಹೋಲಿಸಿದ್ದಾನೆ. ಆದ್ದರಿಂದ ಇದು ದಕ್ಷಿಣ ಅಯೋಧ್ಯೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಾತ್ರಿಯ ವೇಳೆ ಪೂಜೆ ಪುನಸ್ಕಾರವನ್ನು ಮುಗಿಸಿದ ಮೇಲೆ ಘಂಟೆಯ ಶಬ್ದ ಕೇಳಿದ ಜನರಿದ್ದಾರೆ.

  • ಲೇಖನ: ಎಚ್‌. ಸತೀಶ್‌, ಬೆಂಗಳೂರು(ಜ್ಯೋತಿಷಿ )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.