ಜೋಶ್ ಹೇಜಲ್​​ವುಡ್ ಇನ್, ಇಬ್ಬರು ಔಟ್; ಗಬ್ಬಾದಲ್ಲಿ ಭಾರತ ತಂಡ ವಿರುದ್ಧದ 3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಜೋಶ್ ಹೇಜಲ್​​ವುಡ್ ಇನ್, ಇಬ್ಬರು ಔಟ್; ಗಬ್ಬಾದಲ್ಲಿ ಭಾರತ ತಂಡ ವಿರುದ್ಧದ 3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಸಂಭಾವ್ಯ Xi

ಜೋಶ್ ಹೇಜಲ್​​ವುಡ್ ಇನ್, ಇಬ್ಬರು ಔಟ್; ಗಬ್ಬಾದಲ್ಲಿ ಭಾರತ ತಂಡ ವಿರುದ್ಧದ 3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಸಂಭಾವ್ಯ XI

Australias Likely XI: ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌ಗಾಗಿ ಜೋಶ್ ಹೇಜಲ್‌ವುಡ್ ಆಸ್ಟ್ರೇಲಿಯಾ ಪ್ಲೇಯಿಂಗ್ 11ಗೆ ಮರಳುವ ಸಾಧ್ಯತೆ ಇದೆ. 3ನೇ ಟೆಸ್ಟ್‌ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡದ ಸಂಭಾವ್ಯ XI ಇಲ್ಲಿದೆ.

ಜೋಶ್ ಹೇಜಲ್​​ವುಡ್ ಇನ್, ಇಬ್ಬರು ಔಟ್; ಗಬ್ಬಾದಲ್ಲಿ ಭಾರತ ತಂಡ ವಿರುದ್ಧದ 3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಸಂಭಾವ್ಯ XI
ಜೋಶ್ ಹೇಜಲ್​​ವುಡ್ ಇನ್, ಇಬ್ಬರು ಔಟ್; ಗಬ್ಬಾದಲ್ಲಿ ಭಾರತ ತಂಡ ವಿರುದ್ಧದ 3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಸಂಭಾವ್ಯ XI

ಮೊದಲ ಟೆಸ್ಟ್‌ ಪಂದ್ಯದಲ್ಲಿ 295 ರನ್‌ಗಳ ಅಂತರದಿಂದ ಸೋಲು ಅನುಭವಿಸಿದ್ದ ಆಸ್ಟ್ರೇಲಿಯಾ ತಂಡವು ಪ್ರಸ್ತುತ ಗೆಲುವಿನ ಹಾದಿಗೆ ಮರಳಿದೆ. ಅಡಿಲೇಡ್‌ನಲ್ಲಿ ಭಾರತ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿರುವ ಕಾಂಗರೂ ಪಡೆ, ಮುನ್ನಡೆ ಪಡೆಯಲು ಸಜ್ಜಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ತಂಡವನ್ನು ಸೋಲಿಸದ ಆಸೀಸ್, ಇದೀಗ ಸೇಡಿಗೆ ಸಿದ್ದವಾಗಿದೆ.

ಇಂಡೋ-ಆಸೀಸ್ ನಡುವಿನ ಮೂರನೇ ಟೆಸ್ಟ್​ ಡಿಸೆಂಬರ್​ 14ರಂದು ಬ್ರಿಸ್ಬೇನ್​ನ ಗಬ್ಬಾದಲ್ಲಿ ಆರಂಭವಾಗಲಿದೆ. 2020-2021ರ ಸರಣಿಯಲ್ಲಿ ಇದೇ ಪಿಚ್​​ನಲ್ಲಿ ರೋಚಕ ಗೆಲುವಿನೊಂದಿಗೆ ಸರಣಿ ಗೆದ್ದಿದ್ದ ಭಾರತ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಇದರೊಂದಿಗೆ 1988ರ ನಂತರ ಈ ಪಿಚ್​ನಲ್ಲಿ ಆಸೀಸ್ ಸೋತಿರಲಿಲ್ಲ. ಇದೇ ಮೈದಾನದಲ್ಲಿ ವರ್ಷದ ಆರಂಭ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತ್ತು.

ಇದೀಗ ಮೂರನೇ ಟೆಸ್ಟ್​ ಪಂದ್ಯಕ್ಕೆ ಆಸ್ಟ್ರೇಲಿಯಾ ಬಲಿಷ್ಠ ಪ್ಲೇಯಿಂಗ್ 11 ಕಟ್ಟಲು ತಯಾರಿ ನಡೆಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದೆ. ಆರಂಭಿಕನಾಗಿ ಕಣಕ್ಕಿಳಿಯುವ ನಾಥನ್ ಮೆಕ್‌ಸ್ವೀನಿ ಮಿಂಚಿನ ಪ್ರದರ್ಶನ ನೀಡಿಲ್ಲ. ಹಾಗಾಗಿ ಈತನ ಬದಲಿಗೆ ಸ್ಯಾಮ್ ಕೊಂಟಾಸ್ ಅವರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸ್ಯಾಮ್ ಕೊಂಟಾಸ್ ಪ್ರದರ್ಶನ

ಪಂದ್ಯ - 11

ರನ್ - 718

ಸರಾಸರಿ - 42.23

50/100 - 03/02

4/6 - 74/08

ಗರಿಷ್ಠ - 152

ಮತ್ತೊಂದು ಬದಲಾವಣೆ ವೇಗದ ವಿಭಾಗದಲ್ಲಿ. 2ನೇ ಟೆಸ್ಟ್​​ನಲ್ಲಿ ಗಾಯದ ಕಾರಣ ಜೋಶ್ ಹೇಜಲ್​ವುಡ್ ಸೇವೆ ಕಳೆದುಕೊಂಡಿತ್ತು. ಇದೀಗ ಅವರು ಫಿಟ್ ಆಗಿದ್ದಾರೆ ಎಂದು ವರದಿಯಾಗಿದ್ದು, 3ನೇ ಟೆಸ್ಟ್​ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಹೇಜಲ್​ವುಡ್ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದರು. ಆದರೆ, ಹೇಜಲ್​ವುಡ್ ಮರಳಿದರೆ ಸ್ಕಾಟ್ ಬೋಲ್ಯಾಂಡ್ ದಾರಿ ಬಿಟ್ಟುಕೊಡಬೇಕಾಗಬಹುದು. ಅದು ಕೂಡ ಹೇಜಲ್​ವುಡ್ ಫಿಟ್​ ಆಗಿದ್ದರೆ ಮಾತ್ರ ಎಂದು ವರದಿಯಾಗಿದೆ.

3ನೇ ಟೆಸ್ಟ್‌ಗೆ ಆಸ್ಟ್ರೇಲಿಯಾದ ಸಂಭಾವ್ಯ XI

ಉಸ್ಮಾನ್ ಖವಾಜಾ, ಸ್ಯಾಮ್ ಕೊಂಟಾಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕೇರಿ, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್, ಪ್ಯಾಟ್ ಕಮಿನ್ಸ್​, ನಾಥನ್ ಲಿಯಾನ್.

3ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ XI

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ರೋಹಿತ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಗಬ್ಬಾ ಮೈದಾನದಲ್ಲಿ ಭಾರತದ ಸಾಧನೆ

ಗಬ್ಬಾ ಮೈದಾನದಲ್ಲಿ ಭಾರತ ತಂಡವು ಇದುವರೆಗೆ ಏಳು ಪಂದ್ಯಗಳನ್ನು ಆಡಿದೆ. ಆದರೆ ಕೇವಲ ಆ ಒಂದು ಗೆಲುವು ಮಾತ್ರ ಕಂಡಿದೆ. ಹೀಗಾಗಿ ಕೊನೆಯದಾಗಿ ಗಬ್ಬಾದಲ್ಲಿ ಆಡಿದ ಪಂದ್ಯ ಹಾಗೂ ಗೆಲುವಿನ ನೆನಪು ಟೀಮ್‌ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಲಿದೆ. ಮತ್ತೆ 2021ರ ವಿಜಯೋತ್ವ ಮರುಕಳಿಸುತ್ತಾ ಎಂಬುದನ್ನು ಕಾದು ನೋಡೋಣ.

Whats_app_banner