ಕನ್ನಡ ಸುದ್ದಿ  /  Astrology  /  Ketu Transit In Virgo For Next 9 Months Three Zodiac Signs Including Aries Scorpio Cancer Get Lucky Days Rsm

Ketu Transit: ಮುಂದಿನ 9 ತಿಂಗಳ ಕಾಲ ಕನ್ಯಾ ರಾಶಿಯಲ್ಲಿ ನೆಲೆಸುವ ಕೇತು; ಈ 3 ರಾಶಿಯವರಿಗೆ ಶುಭ, ಉಳಿದವರಿಗೆ ಮಿಶ್ರಫಲ

Ketu Transit: ಕಳೆದ ವರ್ಷ (2023) ಕೇತು ಕನ್ಯಾ ರಾಶಿ ಪ್ರವೇಶಿಸಿದ್ದಾನೆ. ಮುಂದಿನ 9 ತಿಂಗಳ ಕಾಲ ಕೇತು ಅದೇ ರಾಶಿಯಲ್ಲಿ ನೆಲೆಸಲಿದ್ದಾನೆ. ಈ ಸಮಯದಲ್ಲಿ ಮೇಷ, ವೃಶ್ಚಿಕ, ಕರ್ಕಾಟಕ ರಾಶಿಯವರಿಗೆ ಕೇತು ವಿವಿಧ ಶುಭ ಫಲಗಳನ್ನು ನೀಡಲಿದ್ದಾನೆ. ಉಳಿದ ರಾಶಿಯವರಿಗೆ ಮಿಶ್ರ ಫಲ ದೊರೆಯಲಿದೆ.

ಮುಂದಿನ 9 ತಿಂಗಳ ಕಾಲ ಕನ್ಯಾ ರಾಶಿಯಲ್ಲಿ ನೆಲೆಸುವ ಕೇತು
ಮುಂದಿನ 9 ತಿಂಗಳ ಕಾಲ ಕನ್ಯಾ ರಾಶಿಯಲ್ಲಿ ನೆಲೆಸುವ ಕೇತು

ಕೇತು ಸಂಚಾರ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೇತುವನ್ನು ನೆರಳಿನ ಗ್ರಹ ಎಂದು ಕರೆಯಲಾಗುತ್ತದೆ. ನಿಧಾನವಾಗಿ ಚಲಿಸುವ ಗ್ರಹಗಳಲ್ಲಿ ಕೇತು ಕೂಡ ಒಂದು. ಕೇತು ಯಾವಾಗಲೂ ಹಿಮ್ಮುಖ ದಿಕ್ಕಿನಲ್ಲಿ ಚಲಿಸುತ್ತದೆ. ಕಳೆದ ವರ್ಷ ಅಕ್ಟೋಬರ್ 30 ರಂದು ಕೇತು ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. ಈ ವರ್ಷ ಪೂರ್ತಿ ಅವರು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಾರೆ. ಕೇತು ಸಂಕ್ರಮಣದ ಪರಿಣಾಮ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಧನಾತ್ಮಕ ಪರಿಣಾಮಗಳನ್ನು ನೀಡುತ್ತದೆ ಮತ್ತು ಇತರರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಕೇತುವಿನ ಋಣಾತ್ಮಕ ಪ್ರಭಾವದಿಂದಾಗಿ ಆರ್ಥಿಕ ಸಮಸ್ಯೆಗಳು ಮತ್ತು ಸಾಲದ ಸಮಸ್ಯೆ ಎದುರಿಸಬೇಕಾಗುತ್ತದೆ. ಮನೆಯಲ್ಲಿ ಅಶಾಂತಿಯ ವಾತಾವರಣವಿರುತ್ತದೆ. ಕೆಲವರಿಗೆ ಕಾನೂನು ಸಮಸ್ಯೆಗಳಿಂದ ತೊಂದರೆಯಾಗುತ್ತದೆ. ಮೇ 2025 ರಲ್ಲಿ ಕೇತು ಕನ್ಯಾರಾಶಿಯಿಂದ ಸಿಂಹ ರಾಶಿ ಪ್ರವೇಶಿಸುತ್ತಾರೆ. ಕೇತುವಿನ ಚಲನೆಯು ಕೆಲವು ರಾಶಿಗಳಿಗೆ ಬಹಲ ಅನುಕೂಲಕರವಾಗಿದೆ. ಮುಂದಿನ 9 ತಿಂಗಳ ಕಾಲ ಕನ್ಯಾರಾಶಿಯಲ್ಲಿ ಕೇತುವಿನ ಉಪಸ್ಥಿತಿಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ತರುತ್ತದೆ. ಕೇತು ಸಂಕ್ರಮಣದಿಂದ ಯಾವ ರಾಶಿಯವರು ಅದೃಷ್ಟವಂತರಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ

ಕೇತು ಸಂಕ್ರಮಣವು ಮೇಷ ರಾಶಿಯವರಿಗೆ ಅದೃಷ್ಟ ತಂದು ನೀಡುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ಈ ಸಮಯದಲ್ಲಿ ಕೆಲಸ ಮಾಡಲು ನಿಮಗೆ ಅನೇಕ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಜೀವನವು ತೃಪ್ತಿಕರವಾಗಿದೆ, ಈ ರಾಶಿಯವರು ಧೈರ್ಯಶಾಲಿಗಳಾಗಿರುತ್ತಾರೆ. ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು, ಉತ್ತಮ ಆಹಾರ ಸೇವಿಸಬೇಕು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಪ್ರೀತಿ ಇನ್ನಷ್ಟು ಸುಧಾರಿಸಲಿದೆ. ವ್ಯಾಪಾರದಲ್ಲಿ ಉತ್ತಮ ಯೋಜನೆಗಳೊಂದಿಗೆ ಮುಂದುವರೆಯಲಿದ್ದೀರಿ. ಪರಿಣಾಮವಾಗಿ, ನಿಮ್ಮ ವ್ಯವಹಾರದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಬರಲಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯುವಿರಿ. ವೃತ್ತಿ ಜೀವನ ಎಲ್ಲಾ ರೀತಿಯಲ್ಲೂ ಚೆನ್ನಾಗಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಕೇತು ಗ್ರಹದ ಸಂಚಾರ ಬಹಳಷ್ಟು ಪ್ರಯೋಜನಗಳನ್ನು ತಂದು ನೀಡುತ್ತದೆ. ಈ ಸಮಯದಲ್ಲಿ ನಿಮಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಾಗುತ್ತದೆ. ವ್ಯವಹಾರದಲ್ಲಿ ಉತ್ತಮ ಮತ್ತು ಲಾಭದಾಯಕ ಅವಕಾಶವಿದೆ. ಕೇತುವಿನ ಅನುಕೂಲಕರ ಪ್ರಭಾವದಿಂದ, ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ವಿವಿಧ ಮೂಲಗಳಿಂದ ಹಣ ದೊರೆಯುವ ಸಾಧ್ಯತೆಗಳಿವೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿ, ಬುದ್ಧಿವಂತಿಕೆಯನ್ನು ಬಳಸಿಕೊಂಡು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಜೀವನದಲ್ಲಿ ಹೊಸ ಜನರು ಬರುತ್ತಾರೆ. ಈ ಸಮಯದಲ್ಲಿ ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ. ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಗುರುತಿಸಿ. ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ. ಹಣವನ್ನು ಉಳಿಸುವುದು ಯಶಸ್ಸಿಗೆ ಕಾರಣವಾಗುತ್ತದೆ.

ಕರ್ಕಾಟಕ ರಾಶಿ

ಕೇತು ಸಂಕ್ರಮಣವು ಕರ್ಕಾಟಕ ರಾಶಿಯವರಿಗೆ ಹೆಚ್ಚಿನ ಅದೃಷ್ಟವನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಸಾಧಿಸಲು ಬಯಸುವ ಗುರಿಗಳನ್ನು ನೀವು ಯಶಸ್ವಿಯಾಗಿ ತಲುಪುತ್ತೀರಿ. ಅತ್ಯುತ್ತಮ ಉದ್ಯೋಗಾವಕಾಶಗಳು ಲಭ್ಯವಿವೆ. ವಿದೇಶಕ್ಕೆ ಹೋಗುವ ನಿಮ್ಮ ಬಹಳ ದಿನಗಳ ಆಸೆ ಈ ಸಮಯದಲ್ಲಿ ಈಡೇರುತ್ತದೆ. ಚೆನ್ನಾಗಿ ಹಣ ಸಂಪಾದಿಸಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಸೂಕ್ತ ಸಮಯ. ಒಡ ಹುಟ್ಟಿದವರೊಂದಿಗಿನ ಭಿನ್ನಾಭಿಪ್ರಾಯ ದೂರವಾಗುತ್ತವೆ. ಹಣದ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೇತು ಸಂಕ್ರಮಣದ ಸಮಯದಲ್ಲಿ ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುವಿರಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.