ತುಲಾ ರಾಶಿ ಭವಿಷ್ಯ: ಆರೋಗ್ಯ ಹಾಳು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ, ಕಚೇರಿಯಲ್ಲಿ ಇಂದು ನಿಮಗೆ ಹೊಸ ಸವಾಲುಗಳು ಎದುರಾಗಲಿವೆ-libra sign astrology for 5th september 2024 tula rashi love finance job health horoscope dina bhavishya rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತುಲಾ ರಾಶಿ ಭವಿಷ್ಯ: ಆರೋಗ್ಯ ಹಾಳು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ, ಕಚೇರಿಯಲ್ಲಿ ಇಂದು ನಿಮಗೆ ಹೊಸ ಸವಾಲುಗಳು ಎದುರಾಗಲಿವೆ

ತುಲಾ ರಾಶಿ ಭವಿಷ್ಯ: ಆರೋಗ್ಯ ಹಾಳು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ, ಕಚೇರಿಯಲ್ಲಿ ಇಂದು ನಿಮಗೆ ಹೊಸ ಸವಾಲುಗಳು ಎದುರಾಗಲಿವೆ

Libra Daily Horoscope 5th September 2024: ಇದು ರಾಶಿಚಕ್ರದ ಏಳನೇ ರಾಶಿಚಕ್ರದ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ತುಲಾ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯನ್ನು ತುಲಾ ಎಂದು ಪರಿಗಣಿಸಲಾಗುತ್ತದೆ. ಈ ದಿನ ತುಲಾ ರಾಶಿಯವರ ದಿನ ಭವಿಷ್ಯ ಹೇಗಿದೆ ನೋಡೋಣ.

ತುಲಾ ರಾಶಿ ಭವಿಷ್ಯ: ಆರೋಗ್ಯ ಹಾಳು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ, ಕಚೇರಿಯಲ್ಲಿ ಇಂದು ನಿಮಗೆ ಸವಾಲುಗಳು ಎದುರಾಗಲಿವೆ
ತುಲಾ ರಾಶಿ ಭವಿಷ್ಯ: ಆರೋಗ್ಯ ಹಾಳು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ, ಕಚೇರಿಯಲ್ಲಿ ಇಂದು ನಿಮಗೆ ಸವಾಲುಗಳು ಎದುರಾಗಲಿವೆ

ತುಲಾ ರಾಶಿ ದಿನ ಭವಿಷ್ಯ 5 ಸೆಪ್ಟೆಂಬರ್‌ 2024: ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯದಲ್ಲಿ ಸಮತೋಲನ ಮತ್ತು ಸಾಮರಸ್ಯ ತುಂಬಿದ ದಿನ ಇದಾಗಿದೆ. ಇಂದು ನಿಮ್ಮ ಜೀವನದ ವಿವಿಧ ಅಂಶಗಳಲ್ಲಿ ಸಮತೋಲನವನ್ನು ಕಂಡುಕೊಳ್ಳುವ ದಿನವಾಗಿದೆ. ಇಂದಿನ ತುಲಾ ರಾಶಿಯ ವಿವರವಾದ ಜಾತಕ ನೋಡೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ತುಲಾ ರಾಶಿ ಪ್ರೇಮ ಭವಿಷ್ಯ (Libra Love Horoscope)

ನಿಮ್ಮ ಪ್ರೀತಿಯ ಜೀವನ ಇಂದು ಚೆನ್ನಾಗಿದೆ. ನೀವು ಒಂಟಿಯಾಗಿರಲಿ ಅಥವಾ ಸಂಬಂಧದಲ್ಲಿರಲಿ, ಸಾಮರಸ್ಯ ಮತ್ತು ತಿಳುವಳಿಕೆಯಿಂದ ಮುಂದುವರೆಯಿರಿ. ಹೊಸ ವ್ಯಕ್ತಿಗಳನ್ನು ಭೇಟಿ ಅದರೂ ನಿಧಾನವಾಗಿ ಅವರ ಬಗ್ಗೆ ವಿವರಿಸಿ ನಂತರ ಮುಂದುವರೆಯಿರಿ, ಸಂಬಂಧಗಳಲ್ಲಿ ಆತುರ ಬೇಡ. ಸಂಬಂಧದಲ್ಲಿರುವವರು ಮುಕ್ತ ಸಂವಹನ ಮತ್ತು ಪರಸ್ಪರ ಗೌರವಕ್ಕೆ ಆದ್ಯತೆ ನೀಡಬೇಕು. ದಯೆ ಮತ್ತು ಮೆಚ್ಚುಗೆಯ ಸಣ್ಣ ಸಣ್ಣ ವಿಚಾರಗಳೂ ನಿಮ್ಮ ಬಂಧವನ್ನು ಬಲಪಡಿಸುವಲ್ಲಿ ಸಹಾಯ ಮಾಡಬಹುದು.

ತುಲಾ ರಾಶಿ ವೃತ್ತಿ ಭವಿಷ್ಯ (Libra Professional Horoscope)

ನಿಮ್ಮ ವೃತ್ತಿ ಜೀವನದಲ್ಲಿ, ವೃತ್ತಿಪರ ಜವಾಬ್ದಾರಿಗಳು ಮತ್ತು ವೈಯಕ್ತಿಕ ಯೋಗಕ್ಷೇಮದ ನಡುವೆ ಸಮತೋಲನಕ್ಕಾಗಿ ಶ್ರಮಿಸಿ. ಕೆಲಸದ ಸ್ಥಳದಲ್ಲಿ ನಿಮಗೆ ಹೆಚ್ಚಿನ ಸವಾಲುಗಳು ಉಂಟಾಗಬಹುದು, ಆದರೆ ಸಂಘಟಿತ ಮತ್ತು ಶಾಂತವಾಗಿರುವುದು ಅವುಗಳನ್ನು ಪರಿಣಾಮಕಾರಿಯಾಗಿ ಹ್ಯಾಂಡಲ್‌ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇಂದು ಒಬ್ಬರೇ ಕೆಲಸ ಮಾಡುವುದಕ್ಕಿಂತ ಸಹಯೋಗದ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ಮುಕ್ತ ಮನಸ್ಸನ್ನು ಇಟ್ಟುಕೊಳ್ಳಿ ಮತ್ತು ಅಗತ್ಯವಿದ್ದಾಗ ರಾಜಿ ಮಾಡಿಕೊಳ್ಳಲು ಸಿದ್ಧರಾಗಿರಿ. ನಿಮ್ಮ ಸಹೋದ್ಯೋಗಿಗಳ ಕೊಡುಗೆಗಳನ್ನು ಗುರುತಿಸಿ ಅವರಿಗೂ ನಿಮ್ಮ ಬೆಂಬಲ ನೀಡಿ.

ತುಲಾ ರಾಶಿಯ ಆರ್ಥಿಕ ಭವಿಷ್ಯ (Libra Money Horoscope)

ಆರ್ಥಿಕವಾಗಿ, ಇಂದು ವಿವೇಚನಾಶೀಲ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ಅನಗತ್ಯ ವಸ್ತುಗಳ ಖರೀದಿಯನ್ನು ತಪ್ಪಿಸಿ ಹಣಕಾಸಿನ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಳ್ಳಿ. ನಿಮ್ಮ ಬಜೆಟ್ ಪರಿಶೀಲಿಸಿ ಮತ್ತು ಅಗತ್ಯವಿರುವ ಕಡೆ ಉಳಿತಾಯ ಮಾಡಿ. ದೀರ್ಘಾವಧಿಯ ಹಣಕಾಸಿನ ಗುರಿಗಳ ಮೇಲೆ ಕೇಂದ್ರೀಕರಿಸಿ. ಇಂದು ಮಾಡಿದ ಹೂಡಿಕೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು, ಅಪಾಯ ತೆಗೆದುಕೊಳ್ಳುವುದನ್ನು ನಿಲ್ಲಿಸಿ, ಭದ್ರತೆಗೆ ಒತ್ತು ನೀಡಿ. ನೀವು ಯಾರಿಗಾದರೂ ಹಣ ನೀಡಬೇಕಿದ್ದರೆ ಅಥವಾ ಸಾಲ ಹೊಂದಿದ್ದರೆ, ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ಅವುಗಳನ್ನು ಪರಿಹರಿಸುವುದು ನಿಮ್ಮ ಮೊದಲ ಆದ್ಯತೆ ಆಗಿರಲಿ.

ತುಲಾ ರಾಶಿಯ ಆರೋಗ್ಯ ಭವಿಷ್ಯ (Libra Health Horoscope)

ಆರೋಗ್ಯದ ದೃಷ್ಟಿಯಿಂದ, ದೈಹಿಕ ಚಟುವಟಿಕೆ ಮತ್ತು ವಿಶ್ರಾಂತಿಯ ನಡುವೆ ಬ್ಯಾಲೆನ್ಸ್‌ ಮಾಡುವುದು ಮುಖ್ಯವಾಗಿದೆ. ನಿಮ್ಮ ದೇಹವನ್ನು ಫಿಟ್ ಆಗಿ ಮತ್ತು ನಿಮ್ಮ ಮನಸ್ಸನ್ನು ಶಾಂತಿಯಿಂದ ಇರಿಸಿಕೊಳ್ಳಲು ಕಾರ್ಡಿಯೋ ಮತ್ತು ಯೋಗದಂತಹ ವ್ಯಾಯಾಮಗಳ ಮಿಶ್ರಣವನ್ನು ಅಳವಡಿಸಿಕೊಳ್ಳಿ. ನಿಮ್ಮ ಆಹಾರ ಕ್ರಮಕ್ಕೆ ಗಮನ ಕೊಡಿ. ನಾಲಿಗೆಗೆ ರುಚಿ ಕೊಟ್ಟು ಆರೋಗ್ಯ ಹಾಳು ಮಾಡುವ ಆಹಾರ ಪದಾರ್ಥಗಳಿಂದ ದೂರವೇ ಇರಿ, ಅತಿಯಾದರೆ ಅಮೃತವೂ ವಿಷ ಎಂಬುದನ್ನು ನೆನಪಿಡಿ.

ತುಲಾ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ತುಲಾ ರಾಶಿಯ ಅಧಿಪತಿ: ಶುಕ್ರ, ತುಲಾ ರಾಶಿಯವರಿಗೆ ಶುಭ ದಿನಾಂಕಗಳು: 1,2,4,7,10,28,22,17,26, ತುಲಾ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಸೋಮವಾರ,ಮಂಗಳವಾರ,ಬುಧವಾರ ಮತ್ತು ಶನಿವಾರ, ತುಲಾ ರಾಶಿಯವರಿಗೆ ಶುಭ ವರ್ಣ: ಕಿತ್ತಳೆ, ಬಿಳಿ ಮತ್ತು ಕೆಂಪು, ತುಲಾ ರಾಶಿಯವರಿಗೆ ಅಶುಭ ವರ್ಣ: ನೀಲಿ, ಹಸಿರು ಮತ್ತು ಹಳದಿ, ತುಲಾ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ, ತುಲಾ ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15ರಿಂದ ಸೆಪ್ಟಂಬರ್ 14, ತುಲಾ ರಾಶಿಯವರಿಗೆ ಶುಭ ಹರಳು: ಹಸಿರುಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ, ತುಲಾ ರಾಶಿಯವರಿಗೆ ಶುಭ ರಾಶಿ: ಮಕರ, ಕುಂಭ ಮತ್ತು ಮಿಥುನ, ತುಲಾ ರಾಶಿಯವರಿಗೆ ಅಶುಭ ರಾಶಿ: ವೃಷಭ, ಮೇಷ ಮತ್ತು ಸಿಂಹ.

ತುಲಾ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1)ವಿಷ್ಣು ಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿದೆ

2)ಈ ದಾನಗಳು ಶುಭ ಫಲ:ಕೆಂಪು ಬಟ್ಟೆ ಮತ್ತು ತೊಗರಿಬೇಳೆ ದಾನ ನೀಡುವುದರಿಂದ ವಿರೋಧಿಗಳು ಕಡಿಮೆ ಆಗಲಿದ್ದಾರೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಮಾಡುವುದರಿಂದ ಭೂವಿವಾದಗಳು ದೂರವಾಗಲಿದೆ. ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ವಿದ್ಯಾಭ್ಯಾಸ ಮತ್ತು ಆರೋಗ್ಯದಲ್ಲಿ ಪ್ರಗತಿ ದೊರೆಯುತ್ತದೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ:ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.