Lunar Eclipse 2022: ಚಂದ್ರಗ್ರಹಣ ಕುರಿತ ಆಸಕ್ತಿದಾಯಕ ವಿಚಾರಗಳಿವು
- Lunar Eclipse 2022: ಚಂದ್ರ ಗ್ರಹಣ (Lunar Eclipse or Chandra Grahan) ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿ ಮತ್ತು ನಿಮಗೆ ಗೊತ್ತಿರಲಾರದ ಕೆಲವು ವಿಚಾರ ವಿವರ ಇಲ್ಲಿದೆ.
- Lunar Eclipse 2022: ಚಂದ್ರ ಗ್ರಹಣ (Lunar Eclipse or Chandra Grahan) ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿ ಮತ್ತು ನಿಮಗೆ ಗೊತ್ತಿರಲಾರದ ಕೆಲವು ವಿಚಾರ ವಿವರ ಇಲ್ಲಿದೆ.
(1 / 5)
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಮ ರೇಖೆಯಲ್ಲಿ ಬಂದಾಗ ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಹಿಂಭಾಗದಲ್ಲಿರುವ ಚಂದ್ರನ ಮೇಲ್ಮೈಗೆ ಅದು ತಲುಪದೇ ಇದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಭಾರತ ಮತ್ತು ಜಗತ್ತಿನ ಕೆಲವು ಭಾಗಗಳು ನವೆಂಬರ್ 8 ರಂದು ಸಂಪೂರ್ಣ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿವೆ. ಚಂದ್ರಗ್ರಹಣದ ಕುರಿತು ನೀವು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ.(File Image)
(2 / 5)
ಭಾರತ ಮತ್ತು ವಿವಿಧೆಡೆ ಜನರು ಚಂದ್ರಗ್ರಹಣದ ಅವಧಿಯು ಶುದ್ಧೀಕರಿಸಲು ಮತ್ತು ಪುನರ್ಯೌವನಗೊಳಿಸಲು ಪ್ರಬಲ ಸಮಯ ಎಂದು ನಂಬುತ್ತಾರೆ. ಇದು ಹೊಸ ಆರಂಭ ಮತ್ತು ಬದಲಾವಣೆಗೆ ನಾಂದಿ ಸಮಯ ಎಂದು ನಂಬಲಾಗಿದೆ.(File Image)
(3 / 5)
ಜನಪದರ ನಂಬಿಕೆಯ ಪ್ರಕಾರ, ಚಂದ್ರಗ್ರಹಣವನ್ನು ಗರ್ಭಿಣಿಯರಿಗೆ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಆದರೂ ವೈಜ್ಞಾನಿಕವಾಗಿ, ಗರ್ಭಾವಸ್ಥೆಯಲ್ಲಿ ಚಂದ್ರ ಮತ್ತು ಸೂರ್ಯಗ್ರಹಣಗಳೆರಡೂ ಹಾನಿಕಾರಕವೆಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.(Shutterstock)
(4 / 5)
ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಮತ್ತು ತಾಜಾ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಲು ಸೂಚಿಸಲಾಗುತ್ತದೆ. ಈ ಅಭ್ಯಾಸವು ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಈ ವಿದ್ಯಮಾನದ ಸಮಯದಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು.(File Image)
ಇತರ ಗ್ಯಾಲರಿಗಳು