Ramachari Serial: ಜೈಲಿನಿಂದ ಮತ್ತೆ ಮನೆಗೆ ಬರ್ತಾಳಾ ವೈಶಾಖಾ? ಚಾರು ಆಡಿದ ಮಾತು ರುಕ್ಕು ಮೂಲಕ ನೇರ ಪ್ರಸಾರ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಹಾಗೂ ವೈಶಾಖಾ ಒಂದಾಗಿದ್ದಾರೆ. ರಾಮಾಚಾರಿ ಮನೆಯ ನೆಮ್ಮದಿ ಕೆಡಿಸಲು ಅವರಿಬ್ಬರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗ ಮುಂದೇನಾಗಿದೆ ಗಮನಿಸಿ.
![ಇಷ್ಟಕ್ಕೆಲ್ಲ ಕಾರಣ ವೈಶಾಖಾ, ರುಕ್ಕು ಇಷ್ಟಕ್ಕೆಲ್ಲ ಕಾರಣ ವೈಶಾಖಾ, ರುಕ್ಕು](https://images.hindustantimes.com/kannada/img/2024/12/20/550x309/__ufhj_1734683335019_1734683344675.png)
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕು ಜೈಲಿನಲ್ಲಿರುವ ವೈಶಾಖಾಳಿಗೆ ಕದ್ದು ಕಾಲ್ ಮಾಡಿದ್ದಾಳೆ, ವೈಶಾಖಾ ಕೂಡ ಮಾತಾಡುತ್ತಾ ಇದ್ದಾಳೆ. ಈ ರೀತಿ ಇರುವಾಗ ಚಾರು ಮನೆಯಲ್ಲಿ ಎಲ್ಲಿಯೂ ರುಕ್ಕು ಕಾಣುತ್ತಿಲ್ಲ ಎಂದು ಎಲ್ಲ ಕಡೆ ಅವಳನ್ನು ಹುಡುಕುತ್ತಿದ್ದಾಳೆ. ಹಾಗೇ ಅವಳು ಹುಡುಕಿಕೊಂಡು ಹೋದಾಗ ರುಕ್ಕು ಮಹಡಿಯ ಮೇಲೆ ಕಾಣಿಸುತ್ತಾಳೆ.. ಆಗ ಅಲ್ಲೇ ಹೋಗುತ್ತಾಳೆ. ಅಷ್ಟರಲ್ಲಿ ರುಕ್ಕು ವೈಶಾಖ ಹತ್ತಿರ ಸಾಕಷ್ಟು ಮಾತನಾಡಿರುತ್ತಾಳೆ.
ವೈಶಾಖಾಳಿಗೆ ಸಿಗ್ತಿದೆ ಎಲ್ಲ ಮಾಹಿತಿ
ಮನೆಯಲ್ಲಿ ನಿನ್ನ ಗಂಡ ಕುಡಿದುಕೊಂಡು ಬಂದು ರಂಪಾಟ ಮಾಡಿದ್ದಾನೆ. ಎಷ್ಟು ಮಜವಾಗಿತ್ತು ಗೊತ್ತಾ? ಎಂದು ಪ್ರಶ್ನೆ ಮಾಡುತ್ತಾಳೆ. ಆ ಮಾತನ್ನು ಕೇಳಿ ವೈಶಾಖಳಿಗೆ ಶಾಕ್ ಆಗುತ್ತದೆ. ಏನು ನನ್ನ ಗಂಡ ಕುಡ್ಕೊಂಡು ಬಂದದ್ನಾ? ಅವನಿಗೆ ಅದೆಲ್ಲ ಗೊತ್ತೇ ಇರಲಿಲ್ಲ ಎಂದು ಹೇಳುತ್ತಾಳೆ. ಆಗ ರುಕ್ಕು ಹೇಳುತ್ತಾಳೆ “ಒಂದು ದಿನ ನನಗೆ ನಿದ್ದೆ ಬರ್ತಾ ಇಲ್ಲ ಅಂದ. ಅದಕ್ಕೆ ಕಾಫ್ ಸಿರಪ್ ಬಾಟಲ್ ಅಲ್ಲಿ ರಮ್ ಹಾಕಿ ಕೊಟ್ಟೆ” ಎನ್ನುತ್ತಾಳೆ.
ರುಕ್ಕು ಬಗ್ಗೆ ಚಾರುಗೆ ಅನುಮಾನವೂ ಇಲ್ಲ
ಅದನ್ನು ಕೇಳಿ ವೈಶಾಖ ಶಾಕ್ ಆಗುತ್ತಾಳೆ. ಇನ್ನು ಅಷ್ಟೆಲ್ಲ ಮಾತಾಡುವಷ್ಟರಲ್ಲಿ ಹಿಂದಿನಿಂದ ಚಾರು ಬರುತ್ತಾಳೆ. ಬಂದ ತಕ್ಷಣ ರುಕ್ಕು ಎಂದು ಕೂಗುತ್ತಾಳೆ. ಆಗ ಅವಳು ಕಾಲ್ ಕಟ್ ಮಾಡಿದಂತೆ ನಾಟಕ ಮಾಡಿ ಮಾತಾಡುತ್ತಾಳೆ. ಆಹ ಚಾರು ಮಾತಾಡುವುದೆಲ್ಲವನ್ನೂ ವೈಶಾಖ ಕೇಳಿಸಿಕೊಳ್ಳುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಮದುವೆ ಕಿಂತ ಮೊದಲು ಈ ರುಕ್ಕು ಅಳಕೊಂತ ಮನೆಯ ಒಂದು ಮುಲೆಯಲಿ ಕುತಿರತಾ ಇದ್ದಳು. ಮದುವೆ ಆದ ಮೇಲೆ ಬಹಳ ಜೋರಾಗಿದ್ದಾಳೆ. ಎಲಿಂದ ಬಂತು ಅಂತ ಇಷ್ಟು ಧೈರ್ಯ ಎಂದು ಮಾಧುರಿ ಕಾಮೆಂಟ್ ಮಾಡಿದ್ದಾರೆ. ಅದೇ ರೀತಿ ವೀಕ್ಷಕರು ಏನೂ ಅರಿಯದಂತೆ ಇದ್ದ ರುಕ್ಕುವನ್ನು ಒಂದೇ ಬಾರಿ ಈ ರೀತಿಯಾಗಿ ನೋಡಲು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಸರಿ ಆಯ್ತು ಎನ್ನುವಷ್ಟರಲ್ಲಿ ಮತ್ತೆ ಸಮಸ್ಯೆ ಬರುತ್ತದೆ ಎನ್ನುತ್ತಿದ್ದಾರೆ. ಧಾರಾವಾಹಿ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
![Whats_app_banner Whats_app_banner](https://kannada.hindustantimes.com/static-content/1y/wBanner.png)