ಉಪೇಂದ್ರ ಅವರ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ 'UI' ಒಟಿಟಿ ಸ್ಟ್ರೀಮಿಂಗ್ ಯಾವಾಗ? ಇಲ್ಲಿದೆ ಸಂಭಾವ್ಯ ದಿನಾಂಕ
ಉಪೇಂದ್ರ ಅವರ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ 'UI' ಒಟಿಟಿ ಸ್ಟ್ರೀಮಿಂಗ್ ಯಾವಾಗ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇಂದು ಡಿಸೆಂಬರ್ 20ರಂದು ಈ ಸಿನಿಮಾ ಬಿಡುಗಡೆಯಾಗಿದೆ.
!['UI' ಒಟಿಟಿ ಸ್ಟ್ರೀಮಿಂಗ್ ಯಾವಾಗ? 'UI' ಒಟಿಟಿ ಸ್ಟ್ರೀಮಿಂಗ್ ಯಾವಾಗ?](https://images.hindustantimes.com/kannada/img/2024/12/20/550x309/__u_fh_j_1734688640802_1734688645748.png)
ಉಪೇಂದ್ರ ಅವರ UI ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಉಪೇಂದ್ರ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಕೂಡ ಮಹತ್ತರವಾದದ್ದು. ಈ ಸಿನಿಮಾದ ಪ್ರಚಾರವೇ ವಿಭಿನ್ನವಾಗಿತ್ತು. ಸಾಕಷ್ಟು ಜನ ಈ ಸಿನಿಮಾ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಉಪೇಂದ್ರ ಅವರಿಗೆ ಅವರದೇ ಆದ ಅಭಿಮಾನಿ ಬಳಗ ಕೂಡ ಇದೆ. ಟ್ರೇಲರ್ ನೋಡಿದ ದಿನದಿಂದಲೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇನ್ನು ಈಗ ಒಟಿಟಿಯಲ್ಲಿ ಸಿನಿಮಾ ನೋಡುವ ಟ್ರೆಂಡ್ ಇರುವುದರಿಂದ ಸಾಕಷ್ಟು ಜನ ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ಲಭ್ಯವಾಗಬಹುದು ಎಂಬ ಪ್ರಶ್ನೆ ಹೊಂದಿದ್ದಾರೆ.
ಯಾವ ಒಟಿಟಿಯಲ್ಲಿ ಈ ಸಿನಿಮಾ ಬರಲಿದೆ?
ಆ ಪ್ರಶ್ನೆಗೆ ಒಂದು ಸಂಭವನೀಯ ಉತ್ತರ ಇಲ್ಲಿದೆ. ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆದ ಯುಐ ಸಾಕಷ್ಟು ಜನರಿಂದ ಪಾಸಿಟಾವ್ ಪಡೆದುಕೊಂಡಿದ್ದು. ಇನ್ನು ಕೆಲವು ಮಿಶ್ರ ಪ್ರತಿಕ್ರಿಯೆಗಳು ಸಹ ಲಭ್ಯವಾಗಿದೆ. ಈ ಸಿನಿಮಾ ಒಟಿಟಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಕೂಡ ಇದೆ. ವಿಕಿಪಿಡಿಯಾ ಮಾಹಿತಿ ಪ್ರಕಾರ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಇನ್ನೂ ಯಾರೂ ಖರೀದಿ ಮಾಡಿಲ್ಲ ಎಂದು ಡಿಸ್ನಿ+ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ದೊಡ್ಡ ಪ್ಲಾಟ್‌ಫಾರ್ಮ್‌ಗಳೇ ಖರೀದಿಸುವ ಸಾಧ್ಯತೆ ಇದೆ ಎಂದು ಇಂಡಿಯಾ ಟೈಮ್ಸ್ ವರದಿ ಮಾಡಿದೆ.
ಯಾವ ತಿಂಗಳಿನಲ್ಲಿ ವೀಕ್ಷಿಸಬಹುದು?
UI ಬಿಡುಗಡೆಯಾದ ನಾಲ್ಕರಿಂದ ಎಂಟು ವಾರಗಳಲ್ಲಿ ಸಂಬಂಧಪಟ್ಟ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೀಮಿಯರ್ ಆಗಬಹದು. ಜನವರಿ 2025ರಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಜನವರಿ 20ರಿಂದ ಫೆಬ್ರವರಿ 20ರ ನಡುವೆ ಸ್ಟ್ರೀಮ್ ಆಗಬಹುದು. ನೀವು ಮನೆಯಲ್ಲೇ ಕೂತು ಸಿನಿಮಾ ನೋಡಬಹುದು.
ಯುಐ ಸಿನಿಮಾ ಬಗ್ಗೆ
2023 ರಲ್ಲಿತೆರೆಕಂಡ ಕಬ್ಜ ಬಳಿಕ ಉಪೇಂದ್ರ ಅವರ ಮೊದಲ ಹಾಗೂ 2024ರ ಕೊನೆಯ ಚಿತ್ರ ಯುಐ. ಇದು ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಒಬ್ಬ ರಾಜ ಮತ್ತು ಅಸಾಧಾರಣ ವ್ಯಕ್ತಿಯ ನಡುವಿನ ಘರ್ಷಣೆಯನ್ನು ಕೇಂದ್ರೀಕರಿಸಿದೆ. ರಾಜ ಸರ್ವಾಧಿಕಾರಿಯಾಗಲು ಜನರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅಸಮಾನತೆ, ಜಾತಿ, ಧರ್ಮ, ದೇವರು, ಭ್ರಷ್ಟಾಚಾರ, ಬುದ್ಧ, ಬಸವ, ಚುನಾವಣೆ, ಪ್ರಜಾಪ್ರಭುತ್ವ, ಜ್ಯೋತಿಷ್ಯ, ಹೆಣ್ಣು ಹೀಗೆ ಹಲವಾರು ವಿಚಾರಗಳೊಂದಿಗೆ ಸಿನಿಮಾ ಸಾಗುತ್ತದೆ. ಈ ಚಿತ್ರವನ್ನು ಉಪೇಂದ್ರ ಅವರ ನಿರ್ದೇಶಿಸಿದ್ದಾರೆ. ತಾರಾಗಣದಲ್ಲಿ ಮುರಳಿ ಶರ್ಮಾ, ರೇಷ್ಮಾ ನಾಣಯ್ಯ, ಜಿಸ್ಶು ಹಾಗೂ ಸಾಧು ಕೋಕಿಲಾ ಇದ್ದಾರೆ. ಚಿತ್ರವನ್ನು 100 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.
ಹೇಗಿದೆ ಸಿನಿಮಾ
ಬಹುನಿರೀಕ್ಷೆ ಮೂಡಿಸಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕನಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವೆಡೆ ಮೊದಲ ಶೋ ಮುಕ್ತಾಯವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗೆಗಿನ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರ ಶುರುವಾಗುವುದಕ್ಕೂ ಮುನ್ನವೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ಸಿನಿಮಾ ಆರಂಭದಲ್ಲಿಯೇ ಈ ಸಿನಿಮಾ ದಡ್ಡರಿಗೆ ಮಾತ್ರ ಎಂಬ ಬರಹದ ಮೂಲಕ ಕುತೂಹಲ ಕೆರಳಿಸಿದ್ದಾರೆ. ನೆಕ್ಟ್ಸ್ ಲೆವೆಲ್ ಎಂದೆಲ್ಲ ಕಾಮೆಂಟ್ ಹಾಕುತ್ತಿದ್ದಾರೆ, ಇನ್ನು ಕೆಲವರು 4.5\5 ರೇಟಿಂಗ್ ನೀಡುತ್ತಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)