ಹೆಂಡತಿಗೆ ಹೊಸ ಕೆಲಸ ಕೊಡಿಸಿದ ಸಿದ್ದೇಗೌಡ, ವರ್ಕ್‌ ಫ್ರಮ್‌ ಹೋಮ್ ದೊರೆತ ಖುಷಿಯಲ್ಲಿ ಥ್ಯಾಂಕ್ಸ್‌ ಹೇಳಿದ ಭಾವನಾ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಹೆಂಡತಿಗೆ ಹೊಸ ಕೆಲಸ ಕೊಡಿಸಿದ ಸಿದ್ದೇಗೌಡ, ವರ್ಕ್‌ ಫ್ರಮ್‌ ಹೋಮ್ ದೊರೆತ ಖುಷಿಯಲ್ಲಿ ಥ್ಯಾಂಕ್ಸ್‌ ಹೇಳಿದ ಭಾವನಾ; ಲಕ್ಷ್ಮೀ ನಿವಾಸ ಧಾರಾವಾಹಿ

ಹೆಂಡತಿಗೆ ಹೊಸ ಕೆಲಸ ಕೊಡಿಸಿದ ಸಿದ್ದೇಗೌಡ, ವರ್ಕ್‌ ಫ್ರಮ್‌ ಹೋಮ್ ದೊರೆತ ಖುಷಿಯಲ್ಲಿ ಥ್ಯಾಂಕ್ಸ್‌ ಹೇಳಿದ ಭಾವನಾ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 19ರ ಎಪಿಸೋಡ್‌ನಲ್ಲಿ ಚೆಲ್ವಿ , ವೆಂಕಿ ಮನೆಗೆ ತಡವಾಗಿ ಬಂದಿದ್ದಕ್ಕೆ ಜಯಂತ್‌ ರೇಗಾಡುತ್ತಾನೆ, ಮತ್ತೊಂದೆಡೆ ಸಿದ್ದೇಗೌಡ ಭಾವನಾಗೆ ಹೊಸ ಕೆಲಸ ಕೊಡಿಸುತ್ತಾನೆ. ವರ್ಕ್‌ ಫ್ರಮ್‌ ಹೋಮ್‌ ದೊರೆತ ಖುಷಿಯಲ್ಲಿ ಭಾವನಾ ಸಿದ್ದುವಿಗೆ ಥ್ಯಾಂಕ್ಸ್‌ ಹೇಳುತ್ತಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 19ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 19ರ ಎಪಿಸೋಡ್‌ (PC: Zee Kannada)

Lakshmi Nivasa Serial: ಜಾಹ್ನವಿಯನ್ನು ನೋಡಲು ಚೆಲ್ವಿ, ವೆಂಕಿ ಹಾಗೂ ಅಜ್ಜಿ ಬಂದಿದ್ದಾರೆ. ಚೆಲ್ವಿ ಅಡುಗೆ ಮನೆಯಲ್ಲಿ ಸಾಮಗ್ರಿಗಳನ್ನು ಚೆಲ್ಲಾ ಪಿಲ್ಲಿ ಮಾಡಿರುವುದನ್ನು ನೋಡಿ ಜಯಂತ್‌ ಕೋಪಗೊಳ್ಳುತ್ತಾನೆ. ಅದರೆ ಅದನ್ನು ಹೇಳಲಾಗದೆ ಸುಮ್ಮನಾಗುತ್ತಾನೆ. ಜಾನು ಒತ್ತಾಯದ ಮೇರೆಗೆ ಜಯಂತ್‌ ಆಫೀಸಿಗೆ ಹೋಗುತ್ತಾನೆ. ಅಜ್ಜಿ ಹಾಗೂ ಜಾನು ಏನು ಮಾತನಾಡುತ್ತಿದ್ದಾರೆ ಎಂದು ಕಾರಿನಲ್ಲಿ ಕುಳಿತು ಮೊಬೈಲ್‌ಗೆ ಅಳವಡಿಸಿಕೊಂಡಿರುವ ಸಿಸಿ ಕ್ಯಾಮರಾದಲ್ಲಿ ನೋಡುತ್ತಾನೆ.

ಜಾನು ಮೇಲಿನ ಪ್ರೀತಿಗೆ ವೆಂಕಿ, ಚೆಲ್ವಿ ಮೇಲೆ ರೇಗಾಡಿದ ಜಯಂತ್‌

ಜಾನು ವಿಚಾರದಲ್ಲಿ ನಾನು ಕೆಲವೊಂದು ವಿಷಯಗಳನ್ನು ಮರೆತೇಬಿಟ್ಟಿದ್ದೇನೆ ಎಂದು ಮನೆಗೆ ವಾಪಸ್‌ ಹೋಗುವಾಗ ಹಣ್ಣು , ಕೇಸರಿ ಸೇರಿದಂತೆ ಇತರ ವಸ್ತುಗಳನ್ನು ಕೊಂಡೊಯ್ಯುತ್ತಾನೆ. ಗರ್ಭಿಣಿ ಮಹಿಳೆಯವರು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನೂ ವಿವರಿಸುತ್ತಾನೆ. ಅದನ್ನು ಕೇಳಿದ ಅಜ್ಜಿಗೆ ಆಶ್ಚರ್ಯವಾಗುತ್ತದೆ, ನಾವಿಬ್ಬರೂ ಮಾತನಾಡಿಕೊಂಡಿದ್ದು ನಿನ್ನ ಗಂಡನಿಗೆ ಹೇಗೆ ತಿಳಿಯಿತು? ಆಫೀಸ್‌ಗೆ ಹೋಗುವುದನ್ನು ಬಿಟ್ಟು ನಾವು ಮಾತನಾಡಿದ್ದನ್ನು ಕೇಳಿಸಿಕೊಂಡ್ಯಾ ಎಂದು ಕೇಳುತ್ತಾರೆ. ಅಜ್ಜಿ ಮಾತಿಗೆ ಜಯಂತ್‌ ಗಾಬರಿ ಆಗುತ್ತಾನೆ. ನೀವು ಅಷ್ಟು ಸೀರಿಯಸ್‌ ಆಗಬೇಡಿ. ಅಜ್ಜಿ ನಿಮ್ಮನ್ನು ತಮಾಷೆ ಮಾಡುತ್ತಿದ್ದಾರೆ ಎಂದು ಜಾನು ಸಮಾಧಾನ ಮಾಡುತ್ತಾಳೆ.

ಹೊರಗೆ ಹೋದ ವೆಂಕಿ , ಚೆಲ್ವಿ ಇನ್ನೂ ಮನೆಗೆ ಬರಲಿಲ್ಲವೆಂದು ಅಜ್ಜಿ ಗಾಬರಿಯಾಗುತ್ತಾರೆ. ಜಾನು ಕೂಡಾ ಅಣ್ಣ ಅತ್ತಿಗೆ ಇಷ್ಟು ರಾತ್ರಿಯಾದರೂ ಮನೆಗೆ ಬಂದಿಲ್ಲವೆಂದು ಟೆನ್ಷನ್‌ ಆಗುತ್ತಾಳೆ. ಇದನ್ನು ನೋಡಿ ಜಯಂತ್‌ ಕೋಪಗೊಳ್ಳುತ್ತಾನೆ. ನೀವೂ ಗಾಬರಿ ಆಗುವುದಲ್ಲದೆ, ಜಾಹ್ನವಿಗೂ ಗಾಬರಿ ಮಾಡುತ್ತೀರಿ, ನೀವೇ ಅವರಿಗೆ ಸಮಾಧಾನ ಹೇಳಿ ಎನ್ನುತ್ತಾನೆ. ಅಷ್ಟರಲ್ಲಿ ವೆಂಕಿ , ಚೆಲ್ವಿ ಮನೆಗೆ ಬರುತ್ತಾರೆ. ಇಷ್ಟು ಸಮಯವಾದರೂ ನೀವು ಮನೆಗೆ ಬಂದಿಲ್ಲವೆಂದು ಜಾಹ್ನವಿ ಗಾಬರಿ ಆಗಿದ್ದಾರೆ, ಒಂದು ಫೋನ್‌ ಮಾಡಿ ಹೇಳಬೇಕು ಎಂಬ ಪರಿಜ್ಞಾನ ಇಲ್ವಾ ನಿಮಗೆ ಎಂದು ರೇಗುತ್ತಾನೆ. ಜಯಂತ್‌, ವೆಂಕಿ ಹಾಗೂ ಚೆಲ್ವಿ ಮೇಲೆ ರೇಗಾಡುವುದನ್ನು ಕಂಡು ಅವನನ್ನು ಸಮಾಧಾನ ಮಾಡಿ ಅಲ್ಲಿಂದ ಕಳಿಸುತ್ತಾಳೆ. ನಾನು ಟೆನ್ಷನ್‌ ಆಗುತ್ತೇನೆ ಎಂದು ಅವರು ಈ ರೀತಿ ಮಾತನಾಡಿದ್ದಾರೆ, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಎಂದು ವೆಂಕಿ, ಚೆಲ್ವಿ ಬಳಿ ಕ್ಷಮೆ ಕೇಳುತ್ತಾಳೆ.

ಭಾವನಾಗೆ ಹೊಸ ಕೆಲಸ ಕೊಡಿಸಿದ ಸಿದ್ದೇಗೌಡ

ಇತ್ತ ಭಾವನಾ ಕೆಲಸ ಕಳೆದುಕೊಳ್ಳುತ್ತಾಳೆ. ನನಗೆ ಕೆಲಸ ಹೋಗಿದ್ದು ಬೇಸರವಿಲ್ಲ, ಆದರೆ ನನ್ನನ್ನು ಕರೆದು ಇದ್ದಕ್ಕಿದ್ದಂತೆ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದು ಬೇಸರ ಆಯ್ತು. ನಾನು ಕೆಲಸ ಮಾಡುತ್ತಿದ್ದದ್ದು ದುಡ್ಡಿಗಾಗಿ ಮಾತ್ರವಲ್ಲ, ನನ್ನ ಜೀವನದಲ್ಲಿ ನಡೆಯುತ್ತಿರುವ ಒತ್ತಡಗಳನ್ನು ಮರೆಯಲು ಕೆಲಸಕ್ಕೆ ಹೋಗುತ್ತಿದ್ದೆ ಎನ್ನುತ್ತಾಳೆ. ಹೆಂಡತಿಯ ಪರಿಸ್ಥಿತಿ ಅರ್ಥ ಮಾಡಿಕೊಂಡ ಸಿದ್ದೇಗೌಡ ನಾನು ನಿಮಗೆ ಬೇರೆ ಕೆಲಸ ಕೊಡಿಸುತ್ತೇನೆ ಎನ್ನುತ್ತಾನೆ. ನನಗೆ ನಿಮ್ಮ ಸಹಾಯ ಬೇಡ ಎನ್ನುತ್ತಾಳೆ. ಸರಿ ಹಾಗಿದ್ದರೆ ಎಲ್ಲಿ ಕೆಲಸ ಇದೆ ಎಂದು ತಿಳಿದುಕೊಂಡು ನಿಮಗೆ ಹೇಳುತ್ತೇನೆ. ನೀವೇ ಮಾತನಾಡಿಕೊಳ್ಳಿ ಎನ್ನುತ್ತಾನೆ. ಮರುದಿನ ತನಗೆ ಪರಿಚಯವಿರುವವರ ಬಳಿ ಹೋಗಿ ಸಿದ್ದೇಗೌಡ ಬಹಳ ಬೇಕಾದವರಿಗೆ ಕೆಲಸ ಕೊಡುವಂತೆ ಮನವಿ ಮಾಡುತ್ತಾನೆ.

ಭಾವನಾಗೆ ನಾನೇ ಈ ಕೆಲಸ ಕೊಡಿಸುತ್ತಿರುವುದು ತಿಳಿಯಬಾರದು ಎಂಬ ಕಾರಣಕ್ಕೆ ಇಲ್ಲಿ ಕೆಲಸ ಖಾಲಿ ಇದೆ ಎಂಬ ವಿಚಾರ ಗೊತ್ತಾಯ್ತು, ಅದಕ್ಕಾಗಿ ಬಂದೆ ನೀವು ಹೋಗಿ ವಿಚಾರಿಸಿ ಎನ್ನುತ್ತಾನೆ. ಭಾವನಾ, ಕಂಪನಿ ಓನರ್‌ಗೆ ತನ್ನ ಪ್ರೊಫೈಲ್‌ ತೋರಿಸುತ್ತಾಳೆ. ಅದನ್ನು ನೋಡಿದ ಆಕೆ ನಮ್ಮಲ್ಲಿ ಕೆಲಸ ಮಾಡುವ ಎಲ್ಲಾ ಗುಣಗಳೂ ನಿಮಗೆ ಇದೆ. ಸಂಬಳ ಎಷ್ಟು ಬಯಸುತ್ತೀರಿ ಎಂದು ಕೇಳುತ್ತಾರೆ, ಭಾವನಾ 30 ಸಾವಿರ ಕೇಳುತ್ತಾಳೆ. ಅದಕ್ಕೆ ಒಪ್ಪುವ ಬಾಸ್‌, ಸರಿ ನಾಳೆಯಿಂದಲೇ ಕೆಲಸಕ್ಕೆ ಬನ್ನಿ, ನಿಮಗೆ ಮತ್ತೊಂದು ಆಯ್ಕೆಯೂ ಇದೆ. ನೀವು ಮನೆಯಿಂದಲೇ ಕೆಲಸ ಮಾಡಬಹುದು, ವಾರಕ್ಕೆ ಒಂದು ಬಾರಿ ರಿಪೋರ್ಟ್‌ ತೋರಿಸಿದರೆ ಸಾಕು ಎನ್ನುತ್ತಾರೆ, ಅದನ್ನು ಕೇಳಿ ಭಾವನಾ ಖುಷಿಯಾಗುತ್ತಾಳೆ. ಹೊರಗೆ ಬಂದು ಸಿದ್ದುವಿಗೆ ಥ್ಯಾಂಕ್ಸ್‌ ಹೇಳುತ್ತಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner