Amruthadhaare Serial: ಗೌತಮ್ ದಿವಾನ್‌ಗೆ ಸೆಡ್ಡು ಹೊಡೆಯಲು ಬಂದ ಆಗುಂತಕ ಯಾರು? ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ತಿರುವು
- Amruthadhaare Serial Today Episode: ಡಿಸೆಂಬರ್ 20ರ ಅಮೃತಧಾರೆ ಧಾರಾವಾಹಿ ಎಪಿಸೋಡ್‌ನಲ್ಲಿ ಗೌತಮ್ ಹಳೆ ನೆನಪುಗಳನ್ನು ನೆನಪಿಸುತ್ತ ಹೊಸ ಆಗುಂತಕ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಈ ಸೀರಿಯಲ್‌ಗೆ ಹೊಸ ಕಥೆಯೊಂದು ಸೇರ್ಪಡೆಗೊಂಡಿದೆ. ಗೌತಮ್ ದಿವಾನ್, ಪಾರ್ಥ ಇಬ್ಬರೂ ಬ್ಯಾಂಕ್ ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
- Amruthadhaare Serial Today Episode: ಡಿಸೆಂಬರ್ 20ರ ಅಮೃತಧಾರೆ ಧಾರಾವಾಹಿ ಎಪಿಸೋಡ್‌ನಲ್ಲಿ ಗೌತಮ್ ಹಳೆ ನೆನಪುಗಳನ್ನು ನೆನಪಿಸುತ್ತ ಹೊಸ ಆಗುಂತಕ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಈ ಸೀರಿಯಲ್‌ಗೆ ಹೊಸ ಕಥೆಯೊಂದು ಸೇರ್ಪಡೆಗೊಂಡಿದೆ. ಗೌತಮ್ ದಿವಾನ್, ಪಾರ್ಥ ಇಬ್ಬರೂ ಬ್ಯಾಂಕ್ ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
(1 / 11)
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಳೆ ನೆನಪುಗಳನ್ನು ನೆನಪಿಸುತ್ತ ಹೊಸ ಆಗುಂತಕ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಈ ಸೀರಿಯಲ್‌ಗೆ ಹೊಸ ಕಥೆಯೊಂದು ಸೇರ್ಪಡೆಗೊಂಡಿದೆ. ಗೌತಮ್ ದಿವಾನ್, ಪಾರ್ಥ ಇಬ್ಬರೂ ಬ್ಯಾಂಕ್ ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. "ಇವತ್ತು ಹರಾಜು ಆಗುತ್ತಿರುವ ಪ್ರಾಪರ್ಟಿಯ ಮೌಲ್ಯ ಹತ್ತು ಕೋಟಿ ರೂಪಾಯಿ ಆಗಿರುತ್ತದೆ" ಎಂದು ಬ್ಯಾಂಕ್‌ನವರು ಹರಾಜು ಆರಂಭಿಸುತ್ತಾರೆ. ಗೌತಮ್ ಪರವಾಗಿ ಆನಂದ್ "11 ಕೋಟಿ ರೂಪಾಯಿ" ಎನ್ನುತ್ತಾರೆ. 11.50 ಕೋಟಿ ಎಂದು ಇನ್ನೊಬ್ಬರು ಕೂಗುತ್ತಾರೆ. 12 ಕೋಟಿ ರೂಪಾಯಿ ಎಂದು ಮತ್ತೊಬ್ಬರು ಹರಾಜು ಕೂಗುತ್ತಾರೆ. ಹದಿನಾಲ್ಕು ಕೋಟಿ, ಹದಿನೇಳು ಕೋಟಿ ಎಂದು ಗೌತಮ್ ದಿವಾನ್ ಕಂಪನಿಯ ಪರವಾಗಿ ಆನಂದ್ ಕೂಗುತ್ತಾರೆ.
(2 / 11)
ಹರಾಜು ಪ್ರಕ್ರಿಯೆ ಹೀಗೆ ಸಾಗುತ್ತ ಇರುತ್ತದೆ. ಇಪ್ಪತ್ತು ಮೂವತ್ತು ಕೋಟಿವರೆಗೂ ಹೋಗುತ್ತದೆ. ಗೌತಮ್ ದಿವಾನ್ ಕಂಪನಿ ಕೊನೆಗೆ 40 ಕೋಟಿ ಎನ್ನುತ್ತದೆ. ಬೇರೆ ಯಾರೂ ಅಷ್ಟು ಹಣಕ್ಕೆ ಹರಾಜಿಗೆ ಭಾಗವಹಿಸುವುದಿಲ್ಲ. ಇನ್ಯಾರು ಇಲ್ಲ ಎಂದಾಗ ದೂರದಿಂದ 50 ಕೋಟಿ ಎಂಬ ಧ್ವನಿ ಕೇಳಿಸುತ್ತದೆ. ಅಮೃತಧಾರೆ ಸೀರಿಯಲ್‌ನಲ್ಲಿ ಅಪರಿಚಿತನ ಎಂಟ್ರಿಯಾಗುತ್ತದೆ.
(3 / 11)
ಹರಾಜು ಪ್ರಕ್ರಿಯೆ ಹೀಗೆ ಸಾಗುತ್ತ ಇರುತ್ತದೆ. ಇಪ್ಪತ್ತು ಮೂವತ್ತು ಕೋಟಿವರೆಗೂ ಹೋಗುತ್ತದೆ. ಗೌತಮ್ ದಿವಾನ್ ಕಂಪನಿ ಕೊನೆಗೆ 40 ಕೋಟಿ ಎನ್ನುತ್ತದೆ. ಬೇರೆ ಯಾರೂ ಅಷ್ಟು ಹಣಕ್ಕೆ ಹರಾಜಿಗೆ ಭಾಗವಹಿಸುವುದಿಲ್ಲ. ಇನ್ಯಾರು ಇಲ್ಲ ಎಂದಾಗ ದೂರದಿಂದ 50 ಕೋಟಿ ಎಂಬ ಧ್ವನಿ ಕೇಳಿಸುತ್ತದೆ.
(4 / 11)
ಅಮೃತಧಾರೆ ಸೀರಿಯಲ್‌ನಲ್ಲಿ ಅಪರಿಚಿತನ ಎಂಟ್ರಿಯಾಗುತ್ತದೆ.ಬಿಡ್ ಮುಂದುವರೆಯುತ್ತದೆ. 69 ಕೋಟಿ ರೂಪಾಯಿ ಎಂದು ಕೊನೆಗೆ ಆಗುಂತಕ ಹೇಳುತ್ತಾರೆ. ಬೇರೆ ಯಾರೋ 70 ಕೋಟಿ ಎನ್ನುತ್ತಾರೆ. ಇದಾದ ಬಳಿಕ ಆಗುಂತಕ ಬಿಡ್ ಮಾಡುವುದಿಲ್ಲ. ಈ ಮೂಲಕ ಗೌತಮ್‌ಗೆ ಪ್ರಾಪರ್ಟಿ ದೊರಕದಂತೆ ಆಗುಂತಕ ನೋಡಿಕೊಳ್ಳುತ್ತಾರೆ.
(5 / 11)
"ಏನು ನಡೆಯುತ್ತಿದೆ. ನಮಗೆ ಯಾಕೆ ಬಿಡ್ಡಿಂಗ್ ದೊರಕಿಲ್ಲ" "ನಾವು ಮೀಟಿಂಗ್ ಸೋತಿದ್ದೇವೆ" "ಸಮ್‌ಥಿಂಗ್ ಈಸ್ ರಾಂಗ್" ಎಂದು ಪಾರ್ಥ ಮತ್ತು ಜೈದೇವ್ ಮಾತನಾಡಿಕೊಳ್ಳುತ್ತಿದ್ದಾರೆ. ಇವರಿಗೆ ಇಲ್ಲಿ ಏನು ನಡೆಯುತ್ತಿದೆ, ಆಗುಂತಕ ಯಾರು ಎನ್ನುವುದು ಅರ್ಥವಾಗುವುದಿಲ್ಲ.
(6 / 11)
ಬಿಡ್ ಮುಗಿದ ಬಳಿಕ ಗೌತಮ್ ಮತ್ತು ಆನಂದ್ ಎದ್ದು ಹೋಗುತ್ತಾರೆ. ಆಗ ಆಗುಂತಕ ಚಿಟಿಕೆ ಹೊಡೆದು ಇವರನ್ನು ಕರೆಯುತ್ತಾರೆ. "ಗೌತಮ್ ದಿವಾನ್, ನೋಡಿದ್ರೂ ನೋಡದವನ ರೀತಿ ಹೋಗ್ತಾ ಇದ್ದೀಯಾ. ಈ ಮುಖನಾ ಇಷ್ಟೊಂದು ಬೇಗ ಮರೆತುಬಿಟ್ಯಾ?ʼ ಎಂದು ಕೇಳುತ್ತಾರೆ. "ಮರೆಯುವಂತಹ ಮುಖ ನಿಮ್ಮದಲ್ಲ, ಹೇಗೆ ಮರೆಯಲಿ" ಎಂದು ಗೌತಮ್ ಹೇಳುತ್ತಾರೆ.
(7 / 11)
"ಗೌತಮ್ ದಿವಾನ್ ಎಂದೂ ಸೋತವನಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಇವತ್ತು ಸೋತುಬಿಟ್ಟೆ. ನಾನು ಬಂದಾಯ್ತಲ್ಲ. ಇನ್ಮುಂದೆ ಗೆಲುವನ್ನು ನಿನ್ನ ಕನಸಲ್ಲಿಯೂ ಕಾಣಲಾಗದು" ಎಂದು ಆಗುಂತಕ ಹೇಳುತ್ತಾರೆ. ಸುಧಾಳನ್ನು ಗೌತಮ್ ಮನೆಗೆ ಕಳುಹಿಸಿದ ಆಗಂತಕನೂ ಈತನೇ ಆಗಿರಬಹುದೇ?
(8 / 11)
"ಇನ್ಮುಂದೆ ಸೋತು ಮಣ್ಣಾಗಿ ಮಣ್ಣು ಮುಕ್ಕಬೇಕು" ಎಂದು ಆ ಆಗುಂತಕ ಹೇಳುತ್ತಾನೆ. ನಿನ್ನನ್ನು ಮಣ್ಣುಮುಕ್ಕಿಸಿಯೇ ನಾನು ಮಣ್ಣಾಗೋದು" ಎಂದು ಆಗುಂತಕ ಹೇಳಿದಾಗ ಗೌತಮ್ ನಗುತ್ತಾರೆ. ಈ ಸಮಯದಲ್ಲಿ ಆಗ ಬಿಡ್ ಗೆದ್ದಿದ್ದ ಮತ್ತೊಬ್ಬ ವ್ಯಕ್ತಿ "ಸರ್ ನೀವು ಹೇಳಿದಂತೆ ಬಿಡ್ ಗೆದ್ದಿದ್ದೇನೆ ಸರ್" ಎಂದು ಹೇಳುತ್ತಾರೆ. ಈ ಮೂಲಕ ಬೇರೊಬ್ಬರ ಮೂಲಕ ಗೌತಮ್ ಬಿಡ್ ತನ್ನದಾಗಿಸಿಕೊಂಡಿರುತ್ತಾರೆ. ಆಗುಂತಕನಿಗೆ ಇಲ್ಲಿ ಸೋಲಾಗಿದೆ.
(9 / 11)
"ಅವರ್ಯಾರು" ಎಂದು ಆಗುಂತಕ ಕೈ ತೋರಿಸುತ್ತಾರೆ. "ನನ್ನ ಕಡೆಯವರೇ" ಎಂದು ಗೌತಮ್ ಹೇಳುತ್ತಾರೆ. "ಎದುರಾಳಿಗಳು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಪರ್ಯಾಯ ಅಸ್ತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಗೆಲ್ಲುವುದನ್ನಷ್ಟನ್ನೇ ನೋಡಬೇಕು. ಇದನ್ನ ನನ್ನ ಅಪ್ಪ ಹೇಳಿಕೊಟ್ಟದ್ದು. ನನ್ನ ಪ್ರಕಾರ ಯುದ್ಧ ಮಾಡಿ ಗೆಲ್ಲುವಂತಹದ್ದು ಏನೂ ಇಲ್ಲ. ಪ್ರೀತಿಯಿಂದ ಗೆಲ್ಲಬೇಕು. ಅದೇ ನಿಜವಾದ ಗೆಲುವು" ಎಂದು ಗೌತಮ್ ಹೇಳುತ್ತಾರೆ.
(10 / 11)
"ನನಗೆ ಉಪಾದೇಶ ಮಾಡುತ್ತಾ ಇದ್ದೀಯಾ? ಬಣ್ಣ ಹಚ್ಚಲು ಬರಬೇಡ. ನೀನು ಎಷ್ಟೇ ಹೇಳಿದರೂ ನನಗೆ ನಿನ್ನವರ ಮೇಲೆ ಆಗಲಿ, ಮನೆಯವರ ಮೇಲಾಗಲ ದ್ವೇಷ ಕಡಿಮೆಯಾಗದು" ಎಂದು ಆಗುಂತಕ ಹೇಳುತ್ತಾರೆ. ಈ ಆಗುಂತಕ ಯಾರು? ಗೌತಮ್ ಮೇಲೆ ಈತನಿಗೆ ಯಾಕೆ ದ್ವೇಷ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ದೊರಕಬಹುದು.
ಇತರ ಗ್ಯಾಲರಿಗಳು