Tulsi Decoration: ತುಳಸಿ ಬೃಂದಾವನ ದೀಪಗಳಿಂದ ಅಲಂಕರಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ? ಈ ಸರಳ ವಿಧಾನ ಅನುಸರಿಸಿ
ತುಳಸಿ ಬೃಂದಾವನ ದೀಪಾಲಂಕಾರ: ನೈಸರ್ಗಿಕವಾಗಿ ಸಿಗುವ ಮಣ್ಣಿನ ದೀಪಗಳು ಹಾಗೂ ವಿದ್ಯುತ್ ದೀಪಗಳಿಂದಲೂ ತುಳಸಿ ಬೃಂದಾವನವನ್ನು ಸುಂದರವಾಗಿ ಅಲಂಕರಿಸಬಹುದು. ಒಂದು ವೇಳೆ ನೀವೇನಾದರೂ ಸಿಂಪಲ್ ಆಗಿ ತುಳಸಿ ಬೃಂದಾವನವನ್ನು ಅಲಂಕಾರ ಮಾಡಬೇಕೆಂದು ಪ್ಲಾನ್ ಮಾಡುತ್ತಿದ್ದರೆ ನಿಮಗಾಗಿ ಇಲ್ಲೊಂದಿಷ್ಟು ಟಿಪ್ಸ್ ಇವೆ.
ತುಳಸಿ ಪೂಜೆಗೆ ಬೃಂದಾವನದಲ್ಲಿ ದೀಪಾಲಂಕಾರ ಮಾಡುವುದು ಹೇಗೆ ಎಂಬುದರ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ.
ತುಳಸಿ ಬೃಂದಾವನ ದೀಪಾಲಂಕಾರ: ಉತ್ಥಾನ ದ್ವಾದಶಿ ದಿನದಂದು ಮನೆಯಲ್ಲಿ ತುಳಸಿ ಕಲ್ಯಾಣವನ್ನು ಸಹ ಆಯೋಜಿಸಲಾಗುತ್ತದೆ. ಅಂದು ತುಳಸಿ ಗಿಡವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ತುಳಸಿ ವಿವಾಹದಂದು ಉಪವಾಸ ಮಾಡುವುದು ಮತ್ತು ತುಳಸಿ ವಿವಾಹ ಪೂಜೆ ಮಾಡುವುದು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಕಲ್ಯಾಣದ ದಿನದಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಸಹ ನಿವಾರಿಸಬಹುದು. ಇದರೊಂದಿಗೆ, ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಸಹ ಪಡೆಯಲಾಗುತ್ತದೆ. ತುಳಸಿ ಬೃಂದಾವನನ್ನು ದೀಪಗಳಿಂದ ಹೇಗೆ ಅಲಂಕರಿಸಬೇಕು ಎಂಬುದನ್ನು ತಿಳಿಯೋಣ.
ತುಳಸಿ ವೃಂದಾವನ ದೀಪಾಲಂಕಾರ
- ಮೊದಲು ತುಳಸಿ ವೃಂದಾವನವನ್ನು ಸ್ವಚ್ಚಗೊಳಿಸಬೇಕು. ಬಳಿಕ ವೃಂದಾವನ ಹಳೆಯದಾಗಿದ್ದರೆ ಅದಕ್ಕೆ ಬಣ್ಣ ಬಳಿಯಬೇಕು. ನಂತರ ಮನೆಯ ಮುಂಭಾಗದಲ್ಲಿ ಇಟ್ಟು ಅದರ ಸುತ್ತಲೂ ನಿಮಗೆ ಇಷ್ಟವಾದ ರಂಗೋಲಿ ಬಿಡಿಸಿ. ಆ ರಂಗೋಲಿಯನ್ನು ಹೂವುಗಳಿಂದ ಅಲಂಕಾರ ಮಾಡಿ. ಹೂವುಗಳಿಂದ ಅಲಂಕಾರ ಮಾಡಿರುವ ರಂಗೋಲಿ ಮಧ್ಯದಲ್ಲಿ ಒಂದೊಂದು ದೀಪವನ್ನು ಹಚ್ಚಿ. ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ.
- ತುಳಸಿ ಪೂಜೆಗೂ ಮುನ್ನ ನೀವು ದೀಪಾಲಂಕಾರ ಮಾಡಬೇಕೆಂದು ಯೋಚಿಸುತ್ತಿದ್ದರೆ ಇಲ್ಲಿ ನೀಡಲಾಗಿರುವ ಮತ್ತೊಂದು ಸರಳ ವಿಧಾನವನ್ನು ಅನುಸರಿಸಬಹುದು. ಮೊದಲು ತುಳಸಿ ಬೃಂದಾವನವನ್ನು ಅಲಂಕಾರ ಮಾಡಿ ಕೊನೆಯಲ್ಲಿ ಬೃಂದಾವನದ ಸುತ್ತಲೂ ಅರ್ಧ ಅಡಿ ಅಂತರದಂತೆ ಎಣ್ಣೆಯ ದೀಪಗಳನ್ನು ಬೆಳಗಿಸಿ. ಮಣ್ಣಿನಿಂದ ಮಾಡಿದ ದೀಪಗಳನ್ನು ಬಳಸುವುದು ತುಂಬಾ ಒಳ್ಳೆಯದು.
- ತುಳಸಿ ಪೂಜೆಯ ಸಮಯದಲ್ಲಿ ದೀಪಗಳಿಂದ ಅಲಂಕಾರ ಮಾಡುವ ವಿದ್ಯುತ್ ದೀಪಗಳನ್ನು ಬಳಸಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಬಣ್ಣ ಬಣ್ಣದ ಸಣ್ಣ ದೀಪಗಳು ಸಿಗುತ್ತವೆ. ಈ ಅಲಂಕಾರದ ದೀಪಗಳು ನಿಮ್ಮ ಪೂಜೆಯ ಖುಷಿಯನ್ನು ಹೆಚ್ಚಿಸುತ್ತವೆ. ತುಳಸಿ ಪೂಜೆಗೂ ಮುನ್ನವೇ ತುಳಸಿ ಬೃಂದಾವನ ಸುತ್ತಲೂ ವಿದ್ಯುತ್ ದೀಪಗಳನ್ನು ಅಲಂಕರಿಸಬಹುದು.
- ನೀವು ಶಾಶ್ವತವಾಗಿ ಅಳವಡಿಸಿರುವ ತುಳಸಿ ಬೃಂದಾವನದಲ್ಲಿ ದೀಪಾಲಂಕಾರ ಮಾಡಬಹುದು. ಪೂಜೆಯ ಎಲ್ಲಾ ರೀತಿಯ ಅಲಂಕಾರವನ್ನು ಮಾಡಿದ ನಂತರ ತುಳಸಿ ವೃಂದಾವನದ ಸುತ್ತಲೂ ಬಿಡಿಸಿಟ್ಟುಕೊಂಡಿರುವ ಹಳದಿ ಹೂವುಗಳನ್ನು ಹರಡಿ ಅದರ ನಂತರ ಮಣ್ಣಿನಿಂದ ಮಾಡಿದ ದೀಪಗಳನ್ನು ಜೋಡಿಸಿ. ಇದರ ಮತ್ತೆ ಮತ್ತೆ ನಿಮಗೆ ಇಷ್ಟವಾದ ಬಣ್ಣದ ಹೂವುಗಳನ್ನು ಹರಡಿ. ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸಿದಾಗ ನೋಡುವ ತುಂಬಾ ಸುಂದರವಾಗಿ ಕಾಣುತ್ತದೆ. ಅಲ್ಲದೆ, ನಿಮ್ಮ ಒಂದು ರೀತಿಯ ಅಧ್ಯಾತ್ಮಿಕ ಶಕ್ತಿ ಹೆಚ್ಚಿದಂತ ಅನುಭವಾಗುತ್ತದೆ.
- ತುಳಸಿ ಬೃಂದಾವನ್ನು ದೀಪಗಳಿಂದ ಅಲಂಕರಿಸುವ ಮತ್ತೊಂದು ಐಡಿಯಾ ಎಂದರೆ ನಿಮ್ಮ ತುಳಸಿ ಕಟ್ಟೆಯ ಮೊದಲು ಸಿಂಗಾರ ಮಾಡಿ. ಆನಂತರ ಎರಡು ಬದಿಗಳಲ್ಲಿ ಮಣ್ಣಿನ ಮಡಿಕೆಗಳನ್ನು ಬಳಸಿ ಮಾಡಿದ ಕಳಶಗಳನ್ನು ಜೋಡಿಸಿ ಇವುಗಳ ಮಧ್ಯದಲ್ಲಿ ಮಣ್ಣಿನ ದೀಪಗಳನ್ನು ಇಡಿ. ಅರ್ಧ ಅಡಿ ಅಂತರದ ಬಳಿಕ ಎರಡೂ ಬದಿಗಳಲ್ಲಿ ಸಣ್ಣದಾಗಿ ದೀಪದ ರಂಗೋಳಿ ಬಡಿಸಿ ಆ ರಂಗೋಲಿಯ ಮೇಲೆ ತಲಾ ಐದು ದೀಪಗಳನ್ನು ಹಚ್ಚಿ, ಬಣ್ಣದ ರಂಗೋಲಿ, ಎಣ್ಣೆಯ ದೀಪಗಳು ನಿಮ್ಮ ತುಳಸಿ ಬೃಂದಾವನದ ಅಂದವನ್ನು ಹೆಚ್ಚಿಸುತ್ತವೆ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.