ಬೆಳಗ್ಗೆ ಕೆಂಪು, ಮಧ್ಯಾಹ್ನ ಕೇಸರಿ, ಸಂಜೆ ವೇಳೆಗೆ ಕಪ್ಪು ಬಣ್ಣಕ್ಕೆ ತಿರುಗುವ ಶಿವನ ವಿಗ್ರಹ; ಅಚಲೇಶ್ವರ ದೇವಾಲಯ ವಿಜ್ಞಾನ ಲೋಕಕ್ಕೆ ಸವಾಲು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೆಳಗ್ಗೆ ಕೆಂಪು, ಮಧ್ಯಾಹ್ನ ಕೇಸರಿ, ಸಂಜೆ ವೇಳೆಗೆ ಕಪ್ಪು ಬಣ್ಣಕ್ಕೆ ತಿರುಗುವ ಶಿವನ ವಿಗ್ರಹ; ಅಚಲೇಶ್ವರ ದೇವಾಲಯ ವಿಜ್ಞಾನ ಲೋಕಕ್ಕೆ ಸವಾಲು

ಬೆಳಗ್ಗೆ ಕೆಂಪು, ಮಧ್ಯಾಹ್ನ ಕೇಸರಿ, ಸಂಜೆ ವೇಳೆಗೆ ಕಪ್ಪು ಬಣ್ಣಕ್ಕೆ ತಿರುಗುವ ಶಿವನ ವಿಗ್ರಹ; ಅಚಲೇಶ್ವರ ದೇವಾಲಯ ವಿಜ್ಞಾನ ಲೋಕಕ್ಕೆ ಸವಾಲು

ರಾಜಸ್ಥಾನದ ಅಚಲೇಶ್ವರ ದೇವಾಲಯ ವಿಜ್ಞಾನ ಲೋಕಕ್ಕೆ ಸವಾಲು ಎಸೆಯುಂತಹ ಅದ್ಭುತ ಶಕ್ತಿಗಳನ್ನು ಹೊಂದಿದೆ. ಈ ದೇವಾಲಯವನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. 1452 ರಲ್ಲಿ ನವೀಕರಿಸಲಾಯಿತು. ಅಚಲ ಎಂದರೆ ಚಲಿಸಲು ಸಾಧ್ಯವಿಲ್ಲದ ಎಂಬ ಅರ್ಥ ಬರುತ್ತದೆ. ಈ ದೇವಾಲಯದ ವೈಶಿಷ್ಟ್ಯಗಳನ್ನು ತಿಳಿಯೋಣ.

ರಾಜಸ್ಥಾನದಲ್ಲಿರುವ ಅಚಲೇಶ್ವರ ಮಹದೇವ್ ದೇವಾಲಯಲ್ಲಿನ ಅದ್ಭುತ ವಿಜ್ಞಾನ ಲೋಕಕ್ಕೆ ಸವಾಲು ಎನ್ನುವಂತಿದೆ.
ರಾಜಸ್ಥಾನದಲ್ಲಿರುವ ಅಚಲೇಶ್ವರ ಮಹದೇವ್ ದೇವಾಲಯಲ್ಲಿನ ಅದ್ಭುತ ವಿಜ್ಞಾನ ಲೋಕಕ್ಕೆ ಸವಾಲು ಎನ್ನುವಂತಿದೆ.

ಧಾರ್ಮಿಕ ಕೇಂದ್ರಗಳಿಗೆ ವಿಶೇಷ ಮಹತ್ವವನ್ನು ನೀಡುವ ಭಾರತದಲ್ಲಿ ಸಾಕಷ್ಟು ಶಿವನ ದೇವಾಲಯಗಳಿವೆ. ಆದರೆ ಸಾಕಷ್ಟು ಅದ್ಭುತ ಮತ್ತು ರಹಸ್ಯೆಗಳಿಂದ ಕೂಡಿದ ದೇವಾಲಯಗಳನ್ನು ಕಾಣುತ್ತೇವೆ. ಆಧುನಿಕ ಯುಗಕ್ಕೆ ಸವಾಲೆನಿಸಿರುವ ಶಿವನ ದೇವಾಲಯ ರಾಜಸ್ಥಾನದಲ್ಲಿದೆ. ಈ ದೇಗುಲದಲ್ಲಿ ಪರಮೇಶ್ವರನು ಲಿಂಗ ಸ್ವರೂಪಿಯಾಗಿದ್ದೇನೆ. ಇಲ್ಲಿನ ವಿಶೇಷವೆಂದರೆ ಶಿವಲಿಂಗವು ಬೆಳಗಿನ ವೇಳೆ ಕೆಂಪು ಬಣ್ಣದಲ್ಲಿರುತ್ತದೆ ಮಧ್ಯಾಹ್ನದ ವೇಳೆಯಲ್ಲಿ ಕೇಸರಿ ಬಣ್ಣದಲ್ಲಿ ಹಾಗೂ ಸಂಜೆಯ ವೇಳೆಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ರಹಸ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡಲು ಇಂದಿಗೂ ವಿಜ್ಞಾನ ಕ್ಷೇತ್ರಕ್ಕೆ ಸಾಧ್ಯವಾಗಿಲ್ಲ. ಇದನ್ನು ಅಚಲೇಶ್ವರ ಮಹಾದೇವನ ದೇವಸ್ಠಾನ ಎಂದು ಕರೆಯಲಾಗುತ್ತದೆ. ಈ ದೇವಾಲಯವು ರಾಜಸ್ಥಾನದ ಅಚಲಗಢ ಕೋಟೆಯ ಹೊರಭಾಗದಲ್ಲಿ ನೆಲೆಗೊಂಡಿದೆ.

ದೇವಾಲಯವನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. 1452 ನಲ್ಲಿ ನವೀಕರಿಸಲಾಯಿತು. ಅಚಲ ಎಂದರೆ ಚಲಿಸಲು ಸಾಧ್ಯವಿಲ್ಲದ ಎಂಬ ಅರ್ಥ ಬರುತ್ತದೆ. ಇದನ್ನು ಬದಲಿಸಲು ಸಾಧ್ಯವಾಗದ್ದು ಎಂಬ ಅರ್ಥವೂ ಬರುತ್ತದೆ. ಈ ಶಿವನ ದೇವಾಲಯದ ಸುತ್ತಮುತ್ತ ನಂದಿಯ ಹಲವಾರು ಸಣ್ಣ ದೇವಾಲಯಗಳಿವೆ. ಈ ದೇವಾಲಯದಲ್ಲಿ ಪಂಚಧಾತುಗಳಿಂದ ಮಾಡಿದ ನಾಲ್ಕು ಟನ್ ತೂಕದ ನಂದಿಯ ಪ್ರತಿಮೆ ಸ್ಥಿತಗೊಂಡಿದೆ. ವಿಗ್ರಹಗಳನ್ನು ತಯಾರಿಸಲು ಬಳಸುವ ಮಿಶ್ರಲೋಹದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುಗಳು ಸಹ ಕೂಡಿದೆ.

ಒಂದೇ ದಿನದಲ್ಲಿ ಮೂರು ಬಣ್ಣಗಳನ್ನು ಬದಲಾಯಿಸುವ ಅಚಲೇಶ್ವರ ದೇವಾಲಯದ ಶಿವನ ವಿಗ್ರಹ
ಒಂದೇ ದಿನದಲ್ಲಿ ಮೂರು ಬಣ್ಣಗಳನ್ನು ಬದಲಾಯಿಸುವ ಅಚಲೇಶ್ವರ ದೇವಾಲಯದ ಶಿವನ ವಿಗ್ರಹ

ಇಲ್ಲಿನ ವಿಶೇಷವಾದ ವಿಚಾರ ಎಂದರೆ, ಈ ದೇವಾಲಯವನ್ನು ಶಿವನ ಕಾಲ್ಬೆರಳ ಮುದ್ರೆಯ ಸುತ್ತಲೂ ನಿರ್ಮಿಸಲಾಗಿದೆ. ಹೆಚ್ಚಿನ ಶಿವ ದೇವಾಲಯಗಳಂತೆ, ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ, ಪರಮಾಣು ರಿಯಾಕ್ಟರನ್ನು ಹೋಲುವ ಗುಮ್ಮಟದ ಆಕಾರವನ್ನು ನಾವಿಲ್ಲಿ ಕಾಣಬಹುದು. ಇದರಿಂದ ಹಿಂದಿನ ದಿನಗಳಲ್ಲಿ ವಿಜ್ಞಾನದ ಮಹತ್ವವನ್ನು ಜನರು ಅರಿತಿದ್ದಿದ್ದರು ಎಂದು ತಿಳಿದುಬರುತ್ತದೆ. ಶಿವ ಮತ್ತು ಸೃಷ್ಟಿಯ ಶಕ್ತಿಯನ್ನು ಪ್ರತಿನಿಧಿಸುವ ರಚನೆ ಇಲ್ಲಿದೆ. ಈ ದೇವಾಲಯದಲ್ಲಿರುವ ಶಿವಲಿಂಗವನ್ನು ಶಿಲ್ಪಿಗಳು ನಿರ್ಮಿಸಿದಂತೆ ಕಂಡುಬರುವುದಿಲ್ಲ, ಬದಲಾಗಿ ಅದು ನೈಸರ್ಗಿಕವಾಗಿ ಕಂಡುಬರುವ ಕಲ್ಲಿನ ರಚನೆಯಾಗಿದೆ.

ಈ ಭಾಗದ ಜನರು ಹೇಳುವ ದಂತಕಥೆಯ ಪ್ರಕಾರ, ನಂದಿಯ ಪ್ರತಿಮೆಯು ಹಿಂದು ವಿರೋಧಿಗಳು ದಾಳಿ ಮಾಡಿದಾಗ ಈ ಶಿವನ ದೇವಾಲಯವನ್ನು ರಕ್ಷಿಸಿತು ಎನ್ನಲಾಗಿದೆ. ನಂದಿಯು ದಾಳಿಕೋರರ ಮೇಲೆ ಅಗಾಧ ಪ್ರಮಾಣದಲ್ಲಿ ಜೇನುನೊಣಗಳನ್ನು ಆಕ್ರಮಣ ಮಾಡಲೆಂದು ಬಿಡುಗಡೆ ಮಾಡುತ್ತದೆ. ಇದರಿಂದ ಪ್ರಾಣ ಭಯದಿಂದ ದಾಳಿಕೋರರು ಓಡಿ ಹೋದರೆಂದು ತಿಳಿದುಬರುತ್ತದೆ. ಈ ರೀತಿಯಲ್ಲಿ ನಂದಿಯು ದೇವಾಲಯವನ್ನು ವಿನಾಶದಿಂದ ರಕ್ಷಿಸುತ್ತದೆ. ದೇವಾಲಯವು ಹಲವಾರು ಇತರ ವಿಗ್ರಹಗಳನ್ನು ಹೊಂದಿದೆ. ಸಾಮಾನ್ಯವಾಗಿ ಇಲ್ಲಿನ ವಿಗ್ರಹಗಳನ್ನು ಸ್ಫಟಿಕ ಶಿಲೆಯಿಂದ ಕೆತ್ತಲಾಗಿದೆ, ಇದು ಹಗಲಿನ ವೇಳೆ ಸೂರ್ಯನ ಬೆಳಕಿನಲ್ಲಿ ಅಪಾರದರ್ಶಕವಾಗಿ ಕಾಣುತ್ತದೆ. ಅದರ ಮೂಲಕ ಬೆಳಕನ್ನು ಹಾಯುವಂತೆ ಮಾಡಿದಾಗ ಸ್ಫಟಿಕವು ಅರೆಪಾರದರ್ಶಕವಾಗುತ್ತದೆ.

ದೇವಾಲಯದ ಒಳ ಭಾಗದಲ್ಲಿ ದೊಡ್ಡದಾದ ಒಂದು ಹಳ್ಳವಿದೆ. ಇದು ನರಕಕ್ಕಿರುವ ಮುಂಬಾಗಿಲು ಎಂಬ ನಂಬಿಕೆ ಎಲ್ಲರಲ್ಲಿದೆ. ಈ ದೇವಾಲಯದ ಸಮೀಪದಲ್ಲಿ ಮೂರು ದೊಡ್ಡ ಕಲ್ಲಿನ ಎಮ್ಮೆಗಳ ಪ್ರತಿಮೆಗಳನ್ನು ಹೊಂದಿರುವ ನೀರಿರುವ ದೊಡ್ಡ ಕೊಳವಿದೆ. ಈ ಎಮ್ಮೆಗಳನ್ನು ರಾಕ್ಷಸರ ಪ್ರತಿನಿಧಿಗಳೆಂದು ನಂಬಲಾಗಿದೆ.

ದೇವಸ್ಥಾನದ ದುರಸ್ತಿಯ ವೇಳೆ ನಿಜವಾದ ಹಳೆಯ ಕೆತ್ತನೆಗಳು ಬಲಿಯಾಗಿದೆ. ಈ ದೇವಾಲಯದ ಒಳಾಂಗಣವು ಅಮೃತಶಿಲೆಯ ಕೆತ್ತನೆಗಳನ್ನು ಆವರಿಸಿದೆ. ಇದನ್ನು ಕಾಪಾಡುವ ಸಲುವಾಗಿ ನುರಿತ ಕುಶಲಕರ್ಮಿಗಳು ದೇವಾಲಯವನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸಲು ಸುಣ್ಣವನ್ನು ಎಚ್ಚರಿಕೆಯಿಂದ ತೆಗೆದುಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ಇಲ್ಲಿ ಪೂಜೆ ಮಾಡುವುದರಿಂದ ಮನಸ್ಸಿನ ಅಂದಕಾರವು ದೂರವಾಗುತ್ತದೆ ಎಂದು ಹೇಳಲಾಗಿದೆ. ಚಿತ್ತಾ ಪೌರ್ಣಮಿಯ ದಿನದಂದು ಇಲ್ಲಿ ವಿಶೇಷವಾದ ಪೂಜೆಯನ್ನು ನಡೆಸಲಾಗುತ್ತದೆ. ಇದರಿಂದ ಹತ್ತಾರು ಜನ್ಮದ ಪಾಪಕರ್ಮಗಳು ದೂರವಾಗುತ್ತದೆ ಎನ್ನಲಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.