ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜಗತ್ತಿನಲ್ಲಿ ಶುಭ, ಅಶುಭಕರ ಎಂಬುದನ್ನ ಮನುಷ್ಯನೇ ಕಲ್ಪಿಸಿಕೊಂಡಿರುವುದು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಜಗತ್ತಿನಲ್ಲಿ ಶುಭ, ಅಶುಭಕರ ಎಂಬುದನ್ನ ಮನುಷ್ಯನೇ ಕಲ್ಪಿಸಿಕೊಂಡಿರುವುದು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಜಗತ್ತಿನಲ್ಲಿ ಶುಭ, ಅಶುಭಕರ ಎಂಬುದನ್ನ ಮನುಷ್ಯನೇ ಕಲ್ಪಿಸಿಕೊಂಡಿರುವುದು ಎಂಬುದರ ಅರ್ಥವನ್ನು ಭಗವದ್ಗೀತೆಯ 10 ಅಧ್ಯಾಯದ 3ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ-3

ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ |

ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ ||3||

ಭಗವದ್ಗೀತೆಯ 10ನೇ ಅಧ್ಯಾಯದ 3ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಕೃಷ್ಣನನ್ನು ಮನುಷ್ಯನೆಂದು ಭಾವಿಸಿ ಅವನನ್ನು ಅರಿಯಲು ಪ್ರಯತ್ನಿಸಬಾರದು. ಆಗಲೇ ಹೇಳಿದಂತೆ, ಮೂಢನಾದವನು ಮಾತ್ರ ಅವನೊಬ್ಬ ಮನುಷ್ಯ ಎಂದು ಯೋಚಿಸುತ್ತಾನೆ. ಇದನ್ನು ಇಲ್ಲಿ ಬೇರೊಂದು ರೀತಿಯಲ್ಲಿ ಹೇಳಿದೆ. ಮೂಢನಲ್ಲದವನು, ಭಗವಂತನ ಸಹಜ ಸ್ವರೂಪವನ್ನು ಅರಿಯುವಷ್ಟು ಬುದ್ಧಿವಂತನಾದವನು, ಯಾವಾಗಲೂ ಪಾಪಗಳಿಂದ ಮುಕ್ತನಾಗಿರುತ್ತಾನೆ (Bhagavad Gita Updesh in Kannada).

ಕೃಷ್ಣನನು ದೇವಕಿಯ ಮಗನೆಂದು ಜನ ತಿಳಿದಿದ್ದರೆ, ಅವನು ಹುಟ್ಟು ಇಲ್ಲದಿರುವವನು ಹೇಗೆ? ಇದಕ್ಕೂ ಶ್ರೀಮದ್ಭಾಗವತದಲ್ಲಿ ಉತ್ತರವಿದೆ. ಅವನು ದೇವಕಿ ಮತ್ತು ವಸುದೇವರಿಗೆ ಕಾಣಿಸಿಕೊಂಡಾಗ ಸಾಮಾನ್ಯ ಮಗುವಿನಂತೆ ಹುಟ್ಟಲಿಲ್ಲ. ತನ್ನ ಮೂಲ ಸ್ವರೂಪದಲ್ಲಿ ಕಾಣಿಸಿಕೊಂಡ. ಅನಂತರ ಸಾಮಾನ್ಯ ಮಗುವಾಗಿ ರೂಪವನ್ನು ಮಾರ್ಪಡಿಸಿಕೊಂಡ.

ಕೃಷ್ಣನ ಆದೇಶದಂತೆ ಮಾಡಿದುದೆಲ್ಲ ಅಧ್ಯಾತ್ಮಿಕವೇ. ಅದಕ್ಕೆ ಐಹಿಕ ಪ್ರತಿಕ್ರಿಯೆಗಳ ಕಲ್ಮಷ ಸೋಂಕಬಾರದು. ಈ ಪ್ರಕ್ರಿಯೆಗಳು ಶುಭಕರವಾಗಿರಬಹುದು, ಅಶುಭಕರವಾಗಿರಬಹುದು. ಐಹಿಕ ಜಗತ್ತಿನಲ್ಲಿ ಶುಭಕರವಾದ ಮತ್ತು ಅಶುಭಕರವಾದ ಸಂಗತಿಗಳಿರುತ್ತವೆ ಎನ್ನುವುದು ಸ್ವಲ್ಪ ಹೆಚ್ಚು ಕಡಿಮೆ ಮನಸ್ಸಿನ ಮಿಥ್ಯಾಸೃಷ್ಟಿ. ಐಹಿಕ ಜಗತ್ತಿನಲ್ಲಿ ಶುಭಕರವಾದದ್ದು ಎನ್ನುವುದೇ ಇಲ್ಲ. ಎಲ್ಲ ಅಶುಭಕರವೇ. ಏಕೆಂದರೆ ಐಹಿಕ ಜಗತ್ತೇ ಅಶುಭಕರವಾದದ್ದು. ಅದು ಶುಭಕರ ಎಂದು ನಾವು ಕಲ್ಪಿಸಿಕೊಳ್ಳುತ್ತೇವೆ ಅಷ್ಟೇ.

ನಿಜವಾದ ಶುಭವು ಸಂಪೂರ್ಣ ಶಕ್ತಿ ಮತ್ತು ಸೇವೆಗಳಲ್ಲಿ ಕೃಷ್ಣಪ್ರಜ್ಞೆಯಲ್ಲಿ ನಡೆಸುವ ಕಾರ್ಯಗಳನ್ನು ಅವಲಂಬಿಸಿರುತ್ತದೆ. ಆದುದರಿಂದ ನಮ್ಮ ಕಾರ್ಯಗಳು ಶುಭಕರವಾಗಿರಬೇಕೆಂದು ನಾವು ಬಯಸುವುದೇ ಆದಲ್ಲಿ ನಾವು ಪರಮ ಪ್ರಭುವಿನ ಆದೇಶದಂತೆ ಕೆಲಸ ಮಾಡಬೇಕು. ಇಂತಹ ಆದೇಶಗಳನ್ನು ಶ್ರೀಮದ್ಬಾಗವತ ಮತ್ತು ಭಗವದ್ಗೀತೆಗಳಂತಹ ಪ್ರಮಾಣ ಗ್ರಂಥಗಳು ಅಥವಾ ಅರ್ಹ ಗುರುವು ಕೊಡಲು ಸಾಧ್ಯ. ಗುರುವು ಪರಮ ಪ್ರಭುವಿನ ಪ್ರತಿನಿಧಿಯಾದದ್ದರಿಂದ ಆತನ ನಿರ್ದೇಶನವು ನೇರವಾಗಿ ಪರಮ ಪ್ರಭುವಿನ ನಿರ್ದೇಶನವೇ.

ಗುರುವೂ, ಸಾಧುಗಳೂ, ಧಾರ್ಮಿಕ ಗ್ರಂಥಗಳೂ ಒಂದೇ ದಾರಿಯಲ್ಲಿ ಕರೆದೊಯ್ಯುತ್ತವೆ. ಈ ಮೂರು ಮೂಲಗಳಲ್ಲಿ ಪರಸ್ಪರ ವಿರೋಧವಿಲ್ಲ. ಇಂತಹ ನಿರ್ದೇಶಗಳಿಗೆ ಅನುಗುಣವಾಗಿ ಮಾಡಿದ ಕ್ರಿಯೆಗಳಲ್ಲಿ ಈ ಐಹಿಕ ಜಗತ್ತಿನ ಪಾಪ-ಪುಣ್ಯ ಫಲಗಳಿಂದ ಮುಕ್ತವಾದವು. ಚಟುವಟಿಕೆಗಳನ್ನು ನಿರ್ವಹಿಸುವಾಗ ಭಕ್ತನ ಅಧ್ಯಾತ್ಮಿಕ ನಿಲುವು ವಾಸ್ತವವಾಗಿ ಸನ್ಯಾಸದ ನಿಲುವು. ಇದನ್ನು ಸನ್ಯಾಸ ಎಂದು ಕರೆಯುತ್ತಾರೆ.

ಭಗವದ್ಗೀತೆಯ (Bhagavad Gita) ಆರನೆಯ ಅಧ್ಯಾಯದ ಮೊದನೆಯ ಶ್ಲೋಕದಲ್ಲಿ ಹೇಳಿರುವಂತೆ, ಪರಮ ಪ್ರಭುವಿನ ಅಪ್ಪಣೆಯಂತೆ ಕರ್ತವ್ಯವೆಂದು ಕಾರ್ಯಮಾಡುವ, ಮತ್ತು ಕರ್ಮಫಲಗಳಲ್ಲಿ ಆಶ್ರಯವನ್ನು ಬಯಸದ (ಅನಾಶ್ರಿತಃ ಕರ್ಮಫಲಮ್) ಮನುಷ್ಯನು ನಿಜವಾದ ಸನ್ಯಾಸಿ. ಪರಮ ಪ್ರಭುವಿನ ಆದೇಶದಂತೆ ಕೆಲಸ ಮಾಡುವವನು ನಿಜವಾದ ಸನ್ಯಾಸಿ ಮತ್ತು ನಿಜವಾದ ಯೋಗಿ. ಸನ್ಯಾಸಿಯ ಉಡುಪನ್ನು ಧರಿಸಿದ ಮಾತ್ರಕ್ಕೆ ಅಥವಾ ಹುಸಿ ಯೋಗಿಯಾದ ಮಾತ್ರಕ್ಕೇ ಸನ್ಯಾಸಿಯಾಗುವುದಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)