ಭಗವದ್ಗೀತೆ: ಜ್ಞಾನ ಮತ್ತು ಭಕ್ತಿಯಿಲ್ಲದೆ ಎಂದೂ ಮುಕ್ತಿ ಸಾಧ್ಯವಿಲ್ಲ; ಗೀತೆಯಲ್ಲಿನ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಜ್ಞಾನ ಮತ್ತು ಭಕ್ತಿಯಿಲ್ಲದೆ ಎಂದೂ ಮುಕ್ತಿ ಸಾಧ್ಯವಿಲ್ಲ ಎಂಬ ಗೀತೆಯಲ್ಲಿನ ಅರ್ಥವನ್ನ ತಿಳಿಯೋಣ.
ನ ಚೈತದ್ ವಿದ್ಮಃ ಕತರನ್ನೋ ಗರೀಯೋ
ಯದ್ ವಾ ಜಯೇಮ ಯದಿ ವಾ ನೋ ಜಯೇಯುಃ |
ಯಾನೇವ ಹತ್ವಾ ನ ಜಿಜೀವಿಷಾಮಸ್
ತೇವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ||6||
ಅವರನ್ನು ಸೋಲಿಸುವುದು ಅಥವಾ ಅವರಿಂದ ಸೋಲುವುದು ಎರಡರಲ್ಲಿ ಯಾವುದು ಉತ್ತಮ ಎಂದೂ ನಮಗೆ ತಿಳಿಯದು. ನಾವು ಧೃತರಾಷ್ಟ್ರನ ಮಕ್ಕಳನ್ನು ಕೊಂದರೆ ನಮಗೆ ಜೀವಿಸಬೇಕೆಂಬ ಆಸೆ ಇರುವುದಿಲ್ಲ. ಆದರೂ ರಣರಂಗದಲ್ಲಿ ಅವರೆಲ್ಲ ನಮ್ಮ ಮುಂದೆ ನಿಂತಿದ್ದಾರೆ.
ಯುದ್ಧ ಮಾಡುವುದು ಕ್ಷತ್ರಿಯನ ಕರ್ತವ್ಯವಾದರೂ ಯುದ್ಧ ಮಾಡಿ ಅನಗತ್ಯವಾದ ಹಿಂಸೆಯ ಸಾಧ್ಯತೆಗೆ ಎಡೆಕೊಡಬೇಕೆ ಅಥವಾ ಯುದ್ಧ ಮಾಡದೆ ಭಿಕ್ಷೆಬೇಡಿ ಬದುಕಬೇಕೆ ಎಂದು ಅರ್ಜನನಿಗೆ ತಿಳಿಯದಾಯಿತು. ಅವನು ಶತ್ರುಗಳನ್ನು ಸೋಲಿಸದಿದ್ದಲ್ಲಿ ಜೀವನನಿರ್ವಹಣೆಗೆ ಭಿಕ್ಷುಕವೃತ್ತಿಯೊಂದೇ ಮಾರ್ಗ. ವಿಜಯದ ಭರವಸೆಯೂ ಇರಲಿಲ್ಲ. ಎರಡರಲ್ಲಿ ಯಾವ ಪಕ್ಷವಾದರೂ ಗೆಲ್ಲುಬಹುದಾಗಿತ್ತು. (ಪಾಂಡವರದು ನ್ಯಾಯದ ಪಕ್ಷ). ಅವರಿಗೇ ಜಯವು ಒಲಿದರೂ ಧೃತರಾಷ್ಟ್ರನ ಮಕ್ಕಳು ಯುದ್ಧದಲ್ಲಿ ಸತ್ತರೆ ಅವರಿಲ್ಲದೆ ಬದುಕುವುದು ತುಂಬ ಕಷ್ಟವಾಗುವುದು.
ನಿರ್ಲಿಪ್ತತೆಯ ಮತ್ತೊಂದು ಲಕ್ಷಣ ಯಾವುದು?
ಇಂತಹ ಸ್ಥಿತಿಯಲ್ಲಿ ಪಾಂಡವರಿಗೆ ವಿಜಯವೂ ಒಂದು ಬಗೆಯ ಸೋಲೇ. ಅರ್ಜುನನ ಈ ಎಲ್ಲ ಅಂಶಗಳೂ ಅವನು ಭಗವಂತನ ಶ್ರೇಷ್ಠ ಭಕ್ತ. ಮಾತ್ರವಲ್ಲದೆ ಅವನು ತಿಳುವಳಿಕೆಯುಳ್ಳವನು ಮತ್ತು ತನ್ನ ಮನಸ್ಸು ಹಾಗೂ ಇಂದ್ರಿಯಗಳ ಮೇಲೆ ವಿಶೇಷ ನಿಯಂತ್ರಣ ಉಳ್ಳವನು ಎಂಬುದನ್ನು ತೋರಿಸಿದವು. ಅವನು ರಾಜವಂಶದಲ್ಲಿ ಜನಿಸಿದ್ದರೂ ಭಿಕ್ಷೆಬೇಡಿ ಬದುಕಲು ಸಿದ್ಧನಾಗಿರುವುದು ನಿರ್ಲಿಪ್ತತೆಯ ಮತ್ತೊಂದು ಲಕ್ಷಣ.
ಈ ಎಲ್ಲ ಗುಣಗಳೊಂದಿಗೆ ಅರ್ಜುನನು ತನ್ನ ಗುರು ಶ್ರೀಕೃಷ್ಣ ಉಪದೇಶದ ವಚನಗಳಲ್ಲಿ ಪೂರ್ಣಶ್ರದ್ಧೆಯನ್ನೂ ಹೊಂದಿದ್ದನು. ಅವನು ನಿಜವಾಗಿಯೂ ಸದ್ದುಣಿಯಾಗಿದ್ದನೆಂಬುದನ್ನು ಇದು ಸೂಚಿಸುತ್ತದೆ. ಅರ್ಜುನನು ಮುಕ್ಕಿಗೆ ಅರ್ಹನೆಂದು ನಿರ್ಣಯಿಸಬಹುದು. ಇಂದ್ರಿಯ ಸಂಯಮವಿಲ್ಲದೆ ಜ್ಞಾನಪೀಠವನ್ನೇರುವುದು ಸಾಧವಿಲ್ಲ. ಜ್ಞಾನ ಮತ್ತು ಭಕ್ತಿಗಳಿಲ್ಲದೆ ಮುಕ್ತಿ ಸಾಧ್ಯವಿಲ್ಲ. ಐಹಿಕ ಸಂಬಂಧಗಳಲ್ಲಿ ಅವನಿಗಿದ್ದ ಅಗಾಧ ಗುಣಗಳಲ್ಲದೆ ಅರ್ಜುನನು ಈ ಎಲ್ಲ ಗುಣಗಳಲ್ಲಿಯೂ ಸಮರ್ಥವಾಗಿದ್ದ.
ನ ಹಿ ಪ್ರಪಶ್ಯಾಮಿ ಮಮಾಪನುದ್ಯಾದ್
ಯಚ್ಥೋಕಮುಚ್ಛೋಷಣಮಿನ್ದ್ರಿಯಾಣಾಮ್ |
ಅವಾಪ್ಯ ಭೂಮಾನಸಪತ್ನಮೃದ್ಧಮ್
ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್ ||8||
ನನ್ನ ಇಂದ್ರಿಯಗಳನ್ನು ಸೊರಗಿಸುತ್ತಿರುವ ಈ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ, ಭೂಮಿಯಲ್ಲಿ ಸಮೃದ್ಧವಾದ, ಸಾಟಿಯೇ ಇಲ್ಲದ ರಾಜ್ಯವನ್ನು ಗೆದ್ದುಕೊಂಡರೂ ಮತ್ತು ಸ್ವರ್ಗದಲ್ಲಿರುವ ದೇವತೆಗಳ ಪ್ರಭುತ್ವದಂತಹ ಪ್ರಭುತ್ವವನ್ನು ಪಡೆದುಕೊಂಡರೂ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ.
ಧಾರ್ಮಿಕ ತತ್ವಗಳ ಮತ್ತು ನೀತಿ ಸಂಹಿತೆಗಳ ತಿಳುವಳಿಕೆಯ ಆಧಾರದ ಮೇಲೆ ಅರ್ಜುನನು ಇಷ್ಟೊಂದು ವಾದಗಳನ್ನು ಹೂಡುತ್ತಿದ್ದಾನೆ. ಆದರೂ ತನ್ನ ಗುರುವಾದ ಶ್ರೀಕೃಷ್ಣನ ನೆರವಿಲ್ಲದೆ ತನ್ನ ನಿಜವಾದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅವನಿಗೆ ಸಾಧ್ಯವಿಲ್ಲ ಎಂದು ಕಾಣುತ್ತದೆ. ಅವನ ಸಮಸ್ಯೆಗಳಿಂದ ಅವನ ಇಡೀ ಅಸ್ತಿತ್ವವೇ ಬತ್ತಿಹೋಗುತ್ತಿತ್ತು. ಈ ಸಮಸ್ಯೆಗಳನ್ನು ದೂರಮಾಡಲು ಅವನ ತೋರಿಕೆಯ ಅರಿವಿನಿಂದ ಏನೇನೂ ಉಪಯೋಗವಿಲ್ಲ ಎಂದವನಿಗೆ ಅರ್ಥವಾಗಿತ್ತು.
ಶ್ರೀಕೃಷ್ಣನಂತಹ ಗುರುವಿನ ನೆರವಿಲ್ಲದೆ ಇಂತಹ ಗೊಂದಲಗಳನ್ನು ಪರಿಹರಿಸಿಕೊಳ್ಳುವುದು ಅವನಿಗೆ ಸಾಧ್ಯವಿರಲಿಲ್ಲ. ವಿದ್ಯಾಸಂಸ್ಥೆಗಳಿಂದ ಪಡೆದ ಜ್ಞಾನ, ವಿದ್ವತ್ತು, ಉನ್ನತ ಸ್ಥಾನ ಮೊದಲಾದುವೆಲ್ಲ ಬದುಕಿನ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಸಾರರ್ಥಕವಾಗುತ್ತವೆ. ಶ್ರೀಕೃಷ್ಣನಂತಹ ಗುರುವಿನಿಂದ ಮಾತ್ರವೇ ನೆರವು ದೊರೆಯುವದು ಸಾಧ್ಯ. ಇದರ ನಿರ್ಣಯವೆಂದರ ನೂರಕ್ಕೆ ನೂರರಷ್ಟು ಕೃಷ್ಣಪ್ರಜ್ಞೆ ಇರುವವನು ಮಾತ್ರವೇ ನಿಜವಾದ ಗುರು, ಏಕೆಂದರೆ ಅವನು ಬದುಕಿನ ಸಮಸ್ಯೆಗಳನ್ನು ಬಿಡಿಸಬಲ್ಲ. ಕೃಷ್ಣಪ್ರಜ್ಞೆಯ ವಿಜ್ಞಾನದಲ್ಲಿ ಪರಿಣತನಾದವನು ಮಾತ್ರವೇ, ಅವನ ಸಾಮಾಜಿಕ ಸ್ಥಾನವು ಏನೇ ಆಗಿರಲಿ, ನಿಜವಾದ ಗುರು ಎಂದು ಚೈತನ್ಯ ಮಹಾಪ್ರಭು ಹೇಳಿದ್ದಾರೆ.