ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಮಗನಿಗೆ ಗಣೇಶನ ಹೆಸರಿಡಬೇಕಾ; ಗಣಪತಿಯ ಹೆಸರಿಂದ ಪ್ರೇರಿತವಾದ 40ಕ್ಕೂ ಹೆಚ್ಚು ಹೆಸರುಗಳು ಇಲ್ಲಿವೆ

ನಿಮ್ಮ ಮಗನಿಗೆ ಗಣೇಶನ ಹೆಸರಿಡಬೇಕಾ; ಗಣಪತಿಯ ಹೆಸರಿಂದ ಪ್ರೇರಿತವಾದ 40ಕ್ಕೂ ಹೆಚ್ಚು ಹೆಸರುಗಳು ಇಲ್ಲಿವೆ

ಮಕ್ಕಳಿಗೆ ಆಧುನಿಕ ಬದುಕಿಗೆ ತಕ್ಕನಾಗಿ ಟ್ರೆಂಡೀ ಹೆಸರಿಡಬೇಕೆಂಬುದು ಪೋಷಕರ ಬಯಕೆ. ಸಾಂಪ್ರದಾಯಿಕ ಮನೆಗಳಲ್ಲಿ ಟ್ರೆಂಡ್‌ ಇಷ್ಟವಾಗುವುದಿಲ್ಲ. ಅಲ್ಲಿ ಅರ್ಥಪೂರ್ಣ ಹೆಸರುಗಳನ್ನು ಮಕ್ಕಳಿಗೆ ಇಡುತ್ತಾರೆ. ಅಂಥವರಿಗೆ ಗಣೇಶನಿಗೆ ಹತ್ತಿರವಾಗುವ ಹೆಸರುಗಳು ಇಲ್ಲಿವೆ.

ಗಣಪತಿಯ ಹೆಸರಿಂದ ಪ್ರೇರಿತವಾದ 40ಕ್ಕೂ ಹೆಚ್ಚು ಹೆಸರುಗಳು ಇಲ್ಲಿವೆ
ಗಣಪತಿಯ ಹೆಸರಿಂದ ಪ್ರೇರಿತವಾದ 40ಕ್ಕೂ ಹೆಚ್ಚು ಹೆಸರುಗಳು ಇಲ್ಲಿವೆ (Pexel)

ಹಿಂದೂ ಧರ್ಮೀಯರ ಧಾರ್ಮಿಕ ಆಚರಣೆಗಳ ಪ್ರಕಾರ ವಿಘ್ನನಿವಾರಕ ಗಣಪತಿಗೆ ಪ್ರಥಮ ಪೂಜೆ. ಹೀಗಾಗಿಯೇ ಗಣೇಶನನ್ನು ಪ್ರಥಮ ಪೂಜಿತ ಎಂಬುದಾಗಿ ಕರೆಯಲಾಗುತ್ತದೆ. ಆನೆಯ ತಲೆಯ ಗಣೇಶ, ವಿಘ್ನನಿವಾರಕನೂ ಹೌದು. ಸಂಕಷ್ಟಗಳನ್ನು ನೀಗಿಸುವ ದೇವನಿಗೆ ಆರಾಧನೆಯಲ್ಲಿ ಮಹತ್ವದ ಸ್ಥಾನವಿದೆ. ಹಿಂದೂ ಧರ್ಮದ ಪ್ರಕಾರ, ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಗಣೇಶನನ್ನು ಪ್ರತಿಯೊಂದು ಶುಭಕಾರ್ಯಗಳನ್ನು ಆರಂಭಿಸುವ ಮೊದಲು ಸ್ತುತಿಸಲಾಗುತ್ತದೆ. ಮಾಡುವ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಎಂಬುದೇ ಇದರ ಉದ್ದೇಶ. ಹೀಗಾಗಿಯೇ ಗಣೇಶ ಅಡೆತಡೆಗಳನ್ನು ನಿವಾರಿಸುವ ದೇವತೆ ಎಂದು ಪೂಜಿಸಲಾಗುತ್ತದೆ. ಪ್ರತಿ ದೇವಾಲಯಗಳಲ್ಲೂ ಗಣಪತಿ ಪೂಜೆ ಮಾಡಲಾಗುತ್ತದೆ.

ಬುದ್ದಿ, ಸಿದ್ಧಿ ಕರುಣಿಸುವ ದೇವರಾಗಿರುವ ಗಣೇಶ; ಜ್ಞಾನ, ಆಧ್ಯಾತ್ಮಿಕತೆ ಮತ್ತು ಸಮೃದ್ಧಿಯ ಸಂಕೇತ. ಈಗಲೂ, ಭಾರತದಲ್ಲಿ ಹಲವು ಸಾಂಪ್ರದಾಯಿಕ ಹಿನ್ನೆಲೆಯ ಕುಟುಂಬಗಳಲ್ಲಿ ಮಕ್ಕಳಿಗೆ ಗಣೇಶನ ಹೆಸರುಗಳನ್ನು ಇಡಲಾಗುತ್ತದೆ. ದೇವರ ಹಿಸರಿನ ಅರ್ಥ ಕಲ್ಪಿಸುವ ಹೆಸರಿಡುವುದು ಸಾಂಸ್ಕೃತಿಕ ಪರಂಪರೆ, ನಂಬಿಕೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಕೆಲವೊಂದು ಜಾತಕ ಅಥವಾ ರಾಶಿ ನಕ್ಷತ್ರಗಳ ಪ್ರಕಾರ, ಮಕ್ಕಳಿಗೆ ದೇವರ ಹೆಸರಿನ ಅರ್ಥ ಸೂಚಿಸುವ ಹೆಸರನ್ನು ಇಡಲಾಗುತ್ತದೆ. ಸಾಮಾನ್ಯವಾಗಿ ಗಣೇಶನ ಹೆಸರನ್ನು ಇಡುವವರ ಸಂಖ್ಯೆ ಹೆಚ್ಚು. ಒಂದು ವೇಳೆ ನಿಮ್ಮ ಮಗು ಗಂಡು ಮಗುವಾಗಿದ್ದರೆ ನೀವು ಇಡಬಹುದಾದ ಕೆಲವೊಂದು ಹೆಸರುಗಳನ್ನು ನಾವು ಕೊಡುತ್ತೇವೆ.

ಗಂಡು ಮಕ್ಕಳಿಗೆ ಹೆಸರುಗಳ ಆಯ್ಕೆ ಕಡಿಮೆ ಎನ್ನುವವರಿದ್ದಾರೆ. ಆದರೆ, ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ಹಲವು ಆಯ್ಕೆಗಳಿವೆ. ನಿಮಗೆ ಗಣೇಶನ ಹೆಸರಿನ ಅರ್ಥವೇ ಬರಬೇಕಾದ ಹೆಸರುಗಳು ಬೇಕಿದ್ದರೆ, ಈ ಪಟ್ಟಿಯನ್ನೊಮ್ಮೆ ನೋಡಿ.

ಗಂಡು ಮಕ್ಕಳಿಗೆ ಇಡಬಹುದಾದ ಗಣೇಶನಿಂದ ಪ್ರೇರಿತ ಹೆಸರುಗಳು

 • ನಿಧೀಶ್
 • ನಿಮಿಷ್
 • ​​ಸೂರ್ಯಾಕ್ಷ
 • ವಾಯುಪ್
 • ಆದಿದೇವ
 • ಅಮಿತಾಯ
 • ಅವ್ಯಾಯ
 • ಲಾವಯ
 • ಭೂಪತಿ
 • ತ್ರಿಯತ್ನವ್
 • ಮಹಾನ್ವೆ
 • ಭವ್ಯಯ
 • ಭಾವಾತ್ಮಜ
 • ಮನೋಮಯ್
 • ದಕ್ಷ

ಇದನ್ನೂ ಓದಿ | ಸೂರ್ಯ, ಬುಧ, ಶುಕ್ರ ಸಂಯೋಗದಿಂದ ತ್ರಿಗ್ರಹಿ ಯೋಗ; 3 ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಸಂಬಳ ಹೆಚ್ಚಳ

 • ದೇವರ್ತ್
 • ಧ್ಯೇಯಾಯ್
 • ದ್ವಿಶಿಕ್
 • ಗಜಾನಂದ್
 • ಗಣೇಶ್
 • ಗಣೇಶನ್
 • ಗಣೇಶಿತ್ರ
 • ಸಜಿತ್
 • ಸಚೇತನ್
 • ಗಣತ್
 • ಗೌರಾನ್ಶ್
 • ಗೌರಿಕ್
 • ಹರಿಹಾಯ್
 • ಹರ್ಷಯ
 • ಹವ್ಯಯ
 • ಇಕ್ಷು
 • ಇಂದ್ರಜಯ್
 • ಇಂದ್ರನಿಲ್
 • ಅದ್ವೇತಾಯ
 • ಅರ್ನವೋದರ
 • ಅಜವಕ್ತ್ರ
 • ಅಕ್ಷಪದ
 • ಶತಾಶ್ವ
 • ಜಗನ್
 • ಸರ್ವಂಭ್
 • ಯಶ್ವಾಸಿನ್
 • ಯುಗಯಾ
 • ಅಭಿಜ್ಯಾ
 • ಅಭಿರ್ವೇ
 • ಅಂಬ್ರಿಶ್
 • ಅಂಬಿಕೇಯ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.