Palmistry: ಅಂಗೈಯಲ್ಲಿ ಮಚ್ಚೆ ಇದ್ದರೆ ಏನರ್ಥ, ಇದು ಅದೃಷ್ಟವೋ, ಅಶುಭವೋ; ಹಸ್ತಸಾಮುದ್ರಿಕ ಶಾಸ್ತ್ರದ ವಿವರ-spiritual news palmistry is there a mole in the center of your palm know its meaning hasta samudrika rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Palmistry: ಅಂಗೈಯಲ್ಲಿ ಮಚ್ಚೆ ಇದ್ದರೆ ಏನರ್ಥ, ಇದು ಅದೃಷ್ಟವೋ, ಅಶುಭವೋ; ಹಸ್ತಸಾಮುದ್ರಿಕ ಶಾಸ್ತ್ರದ ವಿವರ

Palmistry: ಅಂಗೈಯಲ್ಲಿ ಮಚ್ಚೆ ಇದ್ದರೆ ಏನರ್ಥ, ಇದು ಅದೃಷ್ಟವೋ, ಅಶುಭವೋ; ಹಸ್ತಸಾಮುದ್ರಿಕ ಶಾಸ್ತ್ರದ ವಿವರ

Mole on palm meaning: ದೇಹದ ವಿವಿಧ ಭಾಗದಲ್ಲಿ ಮಚ್ಚೆ ಇರುವುದು ಸಾಮಾನ್ಯ. ಆದರೆ ಕೆಲವರಿಗೆ ಅಂಗೈ ಮಧ್ಯದಲ್ಲಿ ಮಚ್ಚೆ ಇರುತ್ತದೆ. ಅಂಥವರು ಬಲವಾದ ಇಚ್ಛಾಶಕ್ತಿ, ದೃಢನಿಶ್ಚಯ ಮತ್ತು ಮಹತ್ವಾಕಾಂಕ್ಷೆಯುಳ್ಳವರು ಎಂದು ಹೇಳಲಾಗುತ್ತದೆ. ಈ ರೀತಿ ಮಚ್ಚೆ ಹೊಂದಿರುವವರ ಇನ್ನಿತರ ಗುಣ ತಿಳಿಯಿರಿ.

ಅಂಗೈಯಲ್ಲಿ  ಮಚ್ಚೆ ಇದ್ದರೆ ಏನರ್ಥ, ಇದು ಅದೃಷ್ಟವೋ, ಅಶುಭವೋ?
ಅಂಗೈಯಲ್ಲಿ ಮಚ್ಚೆ ಇದ್ದರೆ ಏನರ್ಥ, ಇದು ಅದೃಷ್ಟವೋ, ಅಶುಭವೋ? (PC: Canva)

ಮನುಷ್ಯನ ದೇಹದಲ್ಲಿ ಒಂದಿಲ್ಲೊಂದು ಭಾಗದಲ್ಲಿ ಮಚ್ಚೆ ಇರುವುದು ಸಹಜ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ಈ ಶಾಸ್ತ್ರವು ವ್ಯಕ್ತಿಯ ಅಂಗೈಯಲ್ಲಿ ಇರುವ ಮಚ್ಚೆಗಳ ಬಗ್ಗೆ ವಿವರವಾದ ವಿವರಣೆಯನ್ನು ನೀಡುತ್ತದೆ. ಅಂಗೈಯ ಕೆಲವು ಸ್ಥಳಗಳಲ್ಲಿ ಮಚ್ಚೆಗಳಿದ್ದರೆ ಅದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಅಂಗೈಯ ಮಧ್ಯದಲ್ಲಿ ಮಚ್ಚೆ ಇದ್ದರೆ ಅರ್ಥವೇನು, ಇದು ಶುಭವೋ, ಅಶುಭವೋ ಎನ್ನುವ ವಿವರ ತಿಳಿಯಿರಿ.

ಅಂಗೈಯ ಮಧ್ಯದಲ್ಲಿ ಮಚ್ಚೆ ಇರುವುದು

 ಹಸ್ತ್ರಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅಂಗೈಯ ಮಧ್ಯದಲ್ಲಿ ಮಚ್ಚೆ ಇರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅಂತಹ ಜನರು ಉತ್ತಮ ವೈವಾಹಿಕ ಜೀವನವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ. ಹಸ್ತದ ಮಧ್ಯದಲ್ಲಿ ಇರುವ ಮಚ್ಚೆಯನ್ನು ಸಾಮಾನ್ಯವಾಗಿ ಶಕ್ತಿ ಮತ್ತು ಆತ್ಮವಿಶ್ವಾಸದ ಸಂಕೇತವಾಗಿ ನೋಡಲಾಗುತ್ತದೆ. ಅಂತಹ ಮಚ್ಚೆ ಹೊಂದಿರುವ ಜನರು ನೈಸರ್ಗಿಕ ನಾಯಕತ್ವ ಕೌಶಲಗಳನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಬಲ ಮತ್ತು ಎಡ ಅಂಗೈಯ ಮೇಲ್ಭಾಗದಲ್ಲಿ ಮಚ್ಚೆ ಇರುವುದು

 ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಬಲ ಅಂಗೈಯ ಮೇಲ್ಭಾಗದಲ್ಲಿರುವ ಮಚ್ಚೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ವ್ಯಕ್ತಿಯು ಶ್ರೀಮಂತನಾಗುತ್ತಾನೆ ಎಂದು ಹೇಳಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಎಡಗೈಯ ಮೇಲಿನ ಅಂಗೈಯಲ್ಲಿ ಮಚ್ಚೆ ಇದ್ದರೆ ಒಬ್ಬ ವ್ಯಕ್ತಿಯು ಹಣವನ್ನು ಗಳಿಸುತ್ತಾನೆ, ಆದರೆ ಅದನ್ನು ತಕ್ಷಣವೇ ಖರ್ಚು ಮಾಡುತ್ತಾನೆ ಎಂಬುದನ್ನು ಸೂಚಿಸುತ್ತದೆ.

ಹೆಬ್ಬೆರಳಿನ ಮೇಲೆ ಮಚ್ಚೆ ಇರುವುದರ ಅರ್ಥ

 ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹೆಬ್ಬೆರಳಿನ ಮೇಲೆ ಮಚ್ಚೆ ಇರುವವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಅಂಥವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎನ್ನುತ್ತಾರೆ. ಅಂತಹವರು ತಮ್ಮ ಕೆಲಸದಲ್ಲಿ ಪರಿಪೂರ್ಣರು ಎಂದು ಹೇಳಲಾಗುತ್ತದೆ. ಈ ರೀತಿ ಮಚ್ಚೆ ಹೊಂದಿರುವವರು ನ್ಯಾಯೋಚಿತ ಮನಸ್ಸಿನವರು.

ಮಧ್ಯದ ಬೆರಳಿನಲ್ಲಿ ಮಚ್ಚೆ ಇರುವುದರ ಅರ್ಥ

 ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಮಧ್ಯದ ಬೆರಳಿನಲ್ಲಿ ಮಚ್ಚೆ ಇರುವವರ ಜೀವನ ಸುಖಮಯ ಮತ್ತು ಆನಂದಮಯವಾಗಿರುತ್ತದೆ.

ಕಿರುಬೆರಳಿನಲ್ಲಿ ಮಚ್ಚೆ ಇರುವುದರ ಅರ್ಥ

 ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಕಿರುಬೆರಳಿನಲ್ಲಿ ಮಚ್ಚೆ ಇರುವವರು ಅದೃಷ್ಟವಂತರು. ಆದರೆ ಇವರು ಶ್ರೀಮಂತರಾಗಿದ್ದರೂ ಜೀವನದಲ್ಲಿ ದುಃಖವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

 

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.