ಜೋಶ್ ಹೇಜಲ್​ವುಡ್, ಮಿಚೆಲ್ ಮಾರ್ಷ್ ಔಟ್; ಪಿಂಕ್​ ಬಾಲ್ ಟೆಸ್ಟ್​ಗೆ​ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11
ಕನ್ನಡ ಸುದ್ದಿ  /  ಕ್ರಿಕೆಟ್  /  ಜೋಶ್ ಹೇಜಲ್​ವುಡ್, ಮಿಚೆಲ್ ಮಾರ್ಷ್ ಔಟ್; ಪಿಂಕ್​ ಬಾಲ್ ಟೆಸ್ಟ್​ಗೆ​ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಜೋಶ್ ಹೇಜಲ್​ವುಡ್, ಮಿಚೆಲ್ ಮಾರ್ಷ್ ಔಟ್; ಪಿಂಕ್​ ಬಾಲ್ ಟೆಸ್ಟ್​ಗೆ​ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

Australia Predicted XI: ಟೀಮ್ ಇಂಡಿಯಾ ವಿರುದ್ಧದ ಎರಡನೇ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಎರಡು ಬದಲಾವಣೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಜೋಶ್ ಹೇಜಲ್​ವುಡ್, ಮಿಚೆಲ್ ಮಾರ್ಷ್ ಔಟ್; ಪಿಂಕ್​ ಬಾಲ್ ಟೆಸ್ಟ್​ಗೆ​ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11
ಜೋಶ್ ಹೇಜಲ್​ವುಡ್, ಮಿಚೆಲ್ ಮಾರ್ಷ್ ಔಟ್; ಪಿಂಕ್​ ಬಾಲ್ ಟೆಸ್ಟ್​ಗೆ​ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಅಥವಾ ಪಿಂಕ್ ಬಾಲ್ ಟೆಸ್ಟ್​ ಪಂದ್ಯ ಡಿಸೆಂಬರ್ 6ರಂದು ಆರಂಭವಾಗಲಿದೆ. ಅಡಿಲೇಡ್​ನ ಓವಲ್​​ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಪರ್ತ್​ನ ಆಪ್ಟಸ್ ಮೈದಾನದಲ್ಲಿ ಜರುಗಿದ ಆರಂಭಿಕ ಪಂದ್ಯದಲ್ಲಿ 295 ರನ್​ಗಳ ಅಂತರದಿಂದ ಹೀನಾಯವಾಗಿ ಸೋಲು ಕಂಡ ಆಸೀಸ್, ಪುಟಿದೇಳುವ ವಿಶ್ವಾಸದಲ್ಲಿದೆ. ಆದರೆ ಎರಡನೇ ಟೆಸ್ಟ್​​ಗೂ ಮುನ್ನ ಡಬಲ್​ ಆಘಾತಕ್ಕೆ ಒಳಗಾಗಿದ್ದು, ಪ್ಲೇಯಿಂಗ್​ 11ನಲ್ಲಿ ಮೇಜರ್ ಸರ್ಜರಿಯಾಗಲಿದೆ.

ದಶಕದ ನಂತರ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆಲ್ಲುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪ್ರವೇಶಿಸುವ ಗುರಿ ಹೊಂದಿರುವ ಆಸ್ಟ್ರೇಲಿಯಾ, ಪ್ರಸ್ತುತ 1-0 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಮೊದಲ ಟೆಸ್ಟ್​​ನಲ್ಲಿ ಭಾರತ ಗೆಲ್ಲುತ್ತಿದ್ದಂತೆ ಆಸೀಸ್ ಭಾರೀ ಟಿಕೆಗೆ ಗುರಿಯಾಯಿತು. ಮತ್ತೊಂದೆಡೆ ಸರಣಿ ಉಳಿಸಿಕೊಂಡು ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭರ್ಜರಿ ಕಸರತ್ತು ನಡೆಸುತ್ತಿದೆ. ಇದರ ನಡುವೆ ಆಸೀಸ್ ವೇಗಿ ಜೋಶ್ ಹೇಜಲ್​ವುಡ್ ಇಂಜುರಿಯಾಗಿ ಹೊರಬಿದ್ದಿದ್ದರೆ, ಆಲ್​ರೌಂಡರ್ ಮಿಚೆಲ್ ಮಾರ್ಷ್ ಫಿಟ್ನೆಸ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಪಿಂಕ್ ಬಾಲ್ ಟೆಸ್ಟ್​​ನಲ್ಲಿ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದ್ದ ಆಸ್ಟ್ರೇಲಿಯಾ ತಂಡ, ಇಬ್ಬರು ಸ್ಟಾರ್​ ಕ್ರಿಕೆಟಿಗರ ಗಾಯ ಮತ್ತು ಫಿಟ್ನೆಸ್ ಸಮಸ್ಯೆ ದೊಡ್ಡ ಹಿನ್ನಡೆ ತಂದಿಟ್ಟಿದೆ. ಹೇಜಲ್​ವುಡ್ ಮೊದಲ ಟೆಸ್ಟ್​ನ ಪ್ರಥಮ ಇನ್ನಿಂಗ್ಸ್​​ನಲ್ಲಿ 29 ರನ್ ನೀಡಿ 4 ವಿಕೆಟ್, ದ್ವಿತೀಯ ಇನ್ನಿಂಗ್ಸ್​ನಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆಲ್​​ರೌಂಡರ್ ಮಿಚೆಲ್ ಮಾರ್ಷ್​ ಮೊದಲ ಟೆಸ್ಟ್​​ನಲ್ಲಿ 17 ಓವರ್​ಗಳು ಬೌಲಿಂಗ್ ಮಾಡಿದ್ದ ಕಾರಣ ಫಿಟ್​ನೆಸ್ ಸಮಸ್ಯೆಗೆ ತುತ್ತಾದರು. ಇದರಿಂದಾಗಿ ಎರಡನೇ ಪಂದ್ಯಕ್ಕೂ ಮುನ್ನ ಆತನ ಸ್ಥಾನಕ್ಕೆ ಬ್ಯೂ ವೆಬ್​​ಸ್ಟರ್​ಗೆ ಅವಕಾಶ ನೀಡಲಾಯಿತು.

ಆಸೀಸ್ ತಂಡದಲ್ಲಿ ಎರಡು ಬದಲಾವಣೆ

ಜೋಶ್ ಹೇಜಲ್​ವುಡ್ ಬದಲಿಗೆ ಮತ್ತೊಬ್ಬ ವೇಗಿ ಸ್ಕಾಟ್ ಬೋಲ್ಯಾಂಡ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಆ ಮೂಲಕ 2023ರ ಆಶಸ್ ಸರಣಿಯ ನಂತರ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ. 35 ವರ್ಷದ ಬೋಲ್ಯಾಂಡ್ ಅವರು 10 ಟೆಸ್ಟ್ ಪಂದ್ಯಗಳಲ್ಲಿ 35 ವಿಕೆಟ್‌ ಪಡೆದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಭಾರತದ ವಿರುದ್ಧ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಕಣಕ್ಕಿಳಿದಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಔಟ್​ ಮಾಡಿದ್ದು ಸೇರಿ ಒಟ್ಟು 5 ವಿಕೆಟ್ ಪಡೆದಿದ್ದರು.

ಮಿಚೆಲ್ ಮಾರ್ಷ್ ಕೂಡ ಎರಡನೇ ಅಲಭ್ಯರಾಗುವ ಸಾಧ್ಯತೆ ಇದೆ. ಹೀಗಾಗಿ ಅವಕಾಶ ಪಡೆದಿರುವ ಮತ್ತೊಬ್ಬ ಆಲ್-ರೌಂಡರ್ ಬ್ಯೂ ವೆಬ್‌ಸ್ಟರ್ ಅವರಿಗೆ ಅವಕಾಶ ನೀಡಬಹುದು. ಒಂದು ವೇಳೆ ಅವಕಾಶ ಪಡೆದರೆ ಅವರಿಗೆ ಇದೇ ಮೊದಲ ಟೆಸ್ಟ್ ಪಂದ್ಯವಾಗಿರಲಿದೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಇಲ್ಲಿಯವರೆಗೂ 93 ಪ್ರಥಮ ದರ್ಜೆ ಪಂದ್ಯಗಳಲ್ಲಿ ವೆಬ್‌ಸ್ಟರ್ 12 ಶತಕ, 24 ಅರ್ಧಶತಕ ಒಳಗೊಂಡಂತೆ 37.83 ಸರಾಸರಿಯಲ್ಲಿ 5,297 ರನ್‌ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 148 ವಿಕೆಟ್‌ಗಳನ್ನು ಪಡೆದಿದ್ದಾರೆ. ಉಳಿದಂತೆ ಆಸೀಸ್ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲ.

ಪಿಂಕ್ ಬಾಲ್​ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಉಸ್ಮಾನ್ ಖವಾಜಾ, ನಾಥನ್ ಮೆಕ್ಸ್‌ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

Whats_app_banner