ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ 2024: ದಿಲ್ಜಿತ್ ದೋಸಾಂಜ್ ಅತ್ಯುತ್ತಮ ನಟ, ಕರೀನಾ ಕಪೂರ್ ಬೆಸ್ಟ್ ನಟಿ; ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
Filmfare OTT Awards 2024: ಈ ವರ್ಷದ ಫಿಲ್ಮ್‌ಫೇರ್ ಒಟಿಟಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗಿದ್ದು, 39 ವಿಭಾಗಗಳಲ್ಲಿ ಅವಾರ್ಡ್ ಗೆದ್ದ ವಿವಿಧ ವೆಬ್ ಸೀರೀಸ್‌ಗಳು ಮತ್ತು ವೆಬ್ ಚಲನಚಿತ್ರಗಳು ಯಾವುವು ಎಂಬ ವಿವರ ಇಲ್ಲಿದೆ.
ಬಹುನಿರೀಕ್ಷಿತ 5ನೇ ಆವೃತ್ತಿಯ ಫಿಲ್ಮ್‌ಫೇರ್ ಒಟಿಟಿ ಪ್ರಶಸ್ತಿ 2024 ಭಾನುವಾರ (ಡಿಸೆಂಬರ್ 1ರ) ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಖ್ಯಾತ ಗಣ್ಯ ನಟರು, ನಿರ್ದೇಶಕರು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದರು. ಸಮಾರಂಭಕ್ಕೂ ಮುಂಚಿತವಾಗಿ ಭಾನುವಾರ ಸಂಜೆ ವೆಬ್ ಸೀರೀಸ್‌ಗಳು ಮತ್ತು ಚಲನಚಿತ್ರಗಳಿಗೆ 39 ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಅನಾವರಣಗೊಳಿಸಲಾಯಿತು.
'ಹೀರಮಂಡಿ: ಡೈಮಂಡ್ ಬಜಾರ್' 16 ವಿಭಾಗಗಳಲ್ಲಿ ನಾಮಿನೇಷನ್ ಆಗುವ ಮೂಲಕ ಅತಿ ಹೆಚ್ಚು ನಾಮನಿರ್ದೇಶನಗಳನ್ನು ಪಡೆದುಕೊಂಡಿತು. ಉಳಿದಂತೆ ಗನ್ಸ್ & ಗುಲಾಬ್ಸ್ 12, ಕಾಲಾ ಪಾನಿ 8 ನಾಮನಿರ್ದೇಶನಗಳನ್ನು ಪಡೆಯಿತು. ಕೋಟಾ ಫ್ಯಾಕ್ಟರಿ ಸೀಸನ್ 3, ಮೇಡ್ ಇನ್ ಹೆವನ್ ಸೀಸನ್ 2 ಮತ್ತು ಮುಂಬೈ ಡೈರೀಸ್ ಸೀಸನ್ 2 ತಲಾ 7 ನಾಮಿನೇಶನ್ ಪಡೆದವು.
ಫಿಲ್ಮ್‌ಫೇರ್ ಪ್ರಕಾರ ಈ ವರ್ಷದ ಅತ್ಯುತ್ತಮ ವೆಬ್ ಸೀರೀಸ್‌ಗಳು ಮತ್ತು ವೆಬ್ ಚಲನಚಿತ್ರಗಳ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ...
ಸೀರೀಸ್ ವಿಭಾಗ
- ಅತ್ಯುತ್ತಮ ಸರಣಿ: ದಿ ರೈಲ್ವೆ ಮೆನ್
- ಅತ್ಯುತ್ತಮ ನಿರ್ದೇಶಕ : ಸಮೀರ್ ಸಕ್ಸೇನಾ ಮತ್ತು ಅಮಿತ್ ಗೋಲಾನಿ (ಕಾಲಾ ಪಾನಿ)
- ಅತ್ಯುತ್ತಮ ನಟ : ಹಾಸ್ಯ: ರಾಜ್ಕುಮಾರ್ ರಾವ್ (ಗನ್ಸ್ & ಗುಲಾಬ್ಸ್)
- ಅತ್ಯುತ್ತಮ ನಟ : ಡ್ರಾಮಾ: ಗಗನ್ ದೇವ್ ರಿಯಾರ್ (ಸ್ಕ್ಯಾಮ್ 2003: ದಿ ಟೆಲ್ಗಿ ಸ್ಟೋರಿ)
- ಅತ್ಯುತ್ತಮ ನಟಿ : ಹಾಸ್ಯ: ಗೀತಾಂಜಲಿ ಕುಲಕರ್ಣಿ (ಗುಲ್ಲಕ್ ಸೀಸನ್ 4)
- ಅತ್ಯುತ್ತಮ ನಟಿ : ಡ್ರಾಮಾ: ಮನೀಷಾ ಕೊಯಿರಾಲಾ (ಹೀರಮಂಡಿ: ದಿ ಡೈಮಂಡ್ ಬಜಾರ್):
- ಅತ್ಯುತ್ತಮ ಪೋಷಕ ನಟ,: ಹಾಸ್ಯ: ಫೈಸಲ್ ಮಲಿಕ್ (ಪಂಚಾಯತ್ ಸೀಸನ್ 3)
- ಅತ್ಯುತ್ತಮ ಪೋಷಕ ನಟ: ಡ್ರಾಮಾ: ಆರ್ ಮಾಧವನ್ (ದಿ ರೈಲ್ವೆ ಮೆನ್)
- ಅತ್ಯುತ್ತಮ ಪೋಷಕ ನಟಿ : ಹಾಸ್ಯ: ನಿಧಿ ಬಿಶ್ತ್ (ಮಾಮ್ಲಾ ಲೀಗಲ್ ಹೈ)
- ಅತ್ಯುತ್ತಮ ಪೋಷಕ ನಟಿ: ಡ್ರಾಮಾ: ಮೋನಾ ಸಿಂಗ್ (ಮೇಡ್ ಇನ್ ಹೆವೆನ್ ಸೀಸನ್ 2)
- ಅತ್ಯುತ್ತಮ ಮೂಲ ಕಥೆ : ಬಿಸ್ವಪತಿ ಸರ್ಕಾರ್ (ಕಾಲಾ ಪಾನಿ)
- ಅತ್ಯುತ್ತಮ ಹಾಸ್ಯ (ಸೀರೀಸ್/ವಿಶೇಷ): ಮಾಮ್ಲಾ ಲೀಗಲ್ ಹೈ
- ಅತ್ಯುತ್ತಮ ನಾನ್-ಫಿಕ್ಷನ್ (ಸರಣಿ / ವಿಶೇಷ): ದಿ ಹಂಟ್ ಫರ್ ವೀರಪ್ಪನ್
- ಅತ್ಯುತ್ತಮ ಸಂಭಾಷಣೆ: ಸುಮಿತ್ ಅರೋರಾ (ಗನ್ಸ್ & ಗುಲಾಬ್ಸ್)
- ಅತ್ಯುತ್ತಮ ಮೂಲ ಚಿತ್ರಕಥೆ: ಎಜೆ ನಿಡಿಮೋರು, ಕೃಷ್ಣ ಡಿಕೆ ಮತ್ತು ಸುಮನ್ ಕುಮಾರ್ (ಗನ್ & ಗುಲಾಬ್ಸ್).
- ಅತ್ಯುತ್ತಮ ಚಿತ್ರಕಥೆ ಕಿರಣ್ ಯದ್ನಿಯೋಪವಿತ್, ಕೇದಾರ್ ಪಾಟಂಕರ್ ಮತ್ತು ಸ್ಕ್ಯಾಮ್ ವ್ಯಾಸ್ (ಹಗರಣ 2003 - ದಿ ತೆಲಗಿ ಸ್ಟೋರಿ)
- ಅತ್ಯುತ್ತಮ ಛಾಯಾಗ್ರಾಹಕ: ಸುದೀಪ್ ಚಟರ್ಜಿ (ಐಎಸ್‌ಸಿ), ಮಹೇಶ್ ಲಿಮಾಯೆ (ಐಎಸ್‌ಸಿ), ಹುಯೆನ್ಸ್ಟಾಂಗ್ ಮೊಹ್ಪಾತ್ರ ಮತ್ತು ರಾಗುಲ್ ಹೆರಿಯನ್ ಧರುಮಾನ್ (ಹೀರಮಂಡಿ: ದಿ ಡೈಮಂಡ್ ಬಜಾರ್)
- ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರಾಯ್ (ಹೀರಮಂಡಿ: ದಿ ಡೈಮಂಡ್ ಬಜಾರ್)
- ಅತ್ಯುತ್ತಮ ಸಂಕಲನ: ಯಶಾ ಜೈದೇವ್ ರಾಮ್ಚಂದಾನಿ (ದಿ ರೈಲ್ವೆ ಮೆನ್)
- ಅತ್ಯುತ್ತಮ ವಸ್ತ್ರವಿನ್ಯಾಸ: ರಿಂಪಲ್, ಹರ್ಪ್ರೀತ್ ನರುಲಾ ಮತ್ತು ಚಂದ್ರಕಾಂತ್ ಸೋನಾವಾನೆ (ಹೀರಮಂಡಿ: ದಿ ಡೈಮಂಡ್ ಬಜಾರ್)
- ಅತ್ಯುತ್ತಮ ಹಿನ್ನೆಲೆ ಸಂಗೀತ: ಸ್ಯಾಮ್ ಸ್ಲೇಟರ್ (ದಿ ರೈಲ್ವೆ ಮೆನ್)
- ಅತ್ಯುತ್ತಮ ಮೂಲ ಸೌಂಡ್‌ಟ್ರ್ಯಾಕ್: ಸಂಜಯ್ ಲೀಲಾ ಬನ್ಸಾಲಿ, ರಾಜಾ ಹಸನ್ ಮತ್ತು ಶರ್ಮಿಷ್ಠಾ ಚಟರ್ಜಿ (ಹೀರಮಂಡಿ: ದಿ ಡೈಮಂಡ್ ಬಜಾರ್)
- ಅತ್ಯುತ್ತಮ ವಿಎಫ್ಎಕ್ಸ್ : ಫಿಲ್ಮ್ಗೇಟ್ ಎಬಿ ಮತ್ತು ಹೈವ್ ಸ್ಟುಡಿಯೋಸ್ (ದಿ ರೈಲ್ವೆ ಮೆನ್)
- ಅತ್ಯುತ್ತಮ ಧ್ವನಿ ವಿನ್ಯಾಸ (ಸರಣಿ): ಸಂಜಯ್ ಮೌರ್ಯ ಮತ್ತು ಆಲ್ವಿನ್ ರೆಗೊ (ಕಾಲಾ ಪಾನಿ)
- ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಶಿವ್ ರವೈಲ್, ದಿ ರೈಲ್ವೆ ಮೆನ್
ಚಲನಚಿತ್ರ ವಿಭಾಗ
- ಅತ್ಯುತ್ತಮ ಚಿತ್ರ, ವೆಬ್ ಮೂಲ: ಅಮರ್ ಸಿಂಗ್ ಚಮ್ಕಿಲಾ
- ಅತ್ಯುತ್ತಮ ನಿರ್ದೇಶಕ, ವೆಬ್ ಮೂಲ ಚಿತ್ರ: ಇಮ್ತಿಯಾಜ್ ಅಲಿ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ನಟ, ವೆಬ್ ಮೂಲ ಚಿತ್ರ: ದಿಲ್ಜಿತ್ ದೋಸಾಂಜ್ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ನಟಿ, ವೆಬ್ ಮೂಲ ಚಿತ್ರ : ಕರೀನಾ ಕಪೂರ್ ಖಾನ್ (ಜಾನೆ ಜಾನ್)
- ಅತ್ಯುತ್ತಮ ಪೋಷಕ ನಟ, ವೆಬ್ ಮೂಲ ಚಿತ್ರ: ಜೈದೀಪ್ ಅಹ್ಲಾವತ್ (ಮಹಾರಾಜ್)
ಇದನ್ನೂ ಓದಿ | 60ರ ಕಾಲಘಟ್ಟದ ಸ್ಲಂ ಕಥೆ ಹೊತ್ತು ಬಂದ ಸಿನಿಮಾ ತಂಡ; ಠಾಣೆ ಚಿತ್ರಕ್ಕೆ ಶ್ರೀ ರವಿಶಂಕರ್ ಗುರೂಜಿ ಶುಭ ಹಾರೈಕೆ
- ಅತ್ಯುತ್ತಮ ಪೋಷಕ ನಟಿ, ವೆಬ್ ಮೂಲ ಚಿತ್ರ: ವಾಮಿಕಾ ಗಬ್ಬಿ (ಖುಫಿಯಾ)
- ಅತ್ಯುತ್ತಮ ಸಂಭಾಷಣೆ (ವೆಬ್ ಮೂಲ ಚಿತ್ರ): ಇಮ್ತಿಯಾಜ್ ಅಲಿ ಮತ್ತು ಸಾಜಿದ್ ಅಲಿ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ಮೂಲ ಚಿತ್ರಕಥೆ (ವೆಬ್ ಮೂಲ ಚಿತ್ರ): ಇಮ್ತಿಯಾಜ್ ಅಲಿ ಮತ್ತು ಸಾಜಿದ್ ಅಲಿ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ಛಾಯಾಗ್ರಾಹಕ (ವೆಬ್ ಮೂಲ ಚಿತ್ರ): ಸಿಲ್ವೆಸ್ಟರ್ ಫೊನ್ಸೆಕಾ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ನಿರ್ಮಾಣ ವಿನ್ಯಾಸ (ವೆಬ್ ಮೂಲ ಚಿತ್ರ): ಸುಝೇನ್ ಕ್ಯಾಪ್ಲಾನ್ ಮೆರ್ವಾಂಜಿ (ದಿ ಆರ್ಚೀಸ್)
- ಅತ್ಯುತ್ತಮ ಸಂಕಲನ (ವೆಬ್ ಮೂಲ ಚಿತ್ರ): ಆರತಿ ಬಜಾಜ್ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ಹಿನ್ನೆಲೆ ಸಂಗೀತ (ವೆಬ್ ಮೂಲ ಚಿತ್ರ): ಎಆರ್ ರೆಹಮಾನ್ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ಧ್ವನಿ ವಿನ್ಯಾಸ (ವೆಬ್ ಮೂಲ ಚಿತ್ರ): ಧಿಮನ್ ಕರ್ಮಾಕರ್ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ಕಥೆ (ವೆಬ್ ಮೂಲ ಚಿತ್ರ): ಜೋಯಾ ಅಖ್ತರ್, ಅರ್ಜುನ್ ವರೈನ್ ಸಿಂಗ್ ಮತ್ತು ರೀಮಾ ಕಾಗ್ತಿ (ಖೋ ಗಯೇ ಹಮ್ ಕಹಾನ್)
- ಅತ್ಯುತ್ತಮ ಮ್ಯೂಸಿಕ್ ಆಲ್ಬಂ, ಚಿತ್ರ: ಎಆರ್ ರೆಹಮಾನ್ (ಅಮರ್ ಸಿಂಗ್ ಚಮ್ಕಿಲಾ)
- ಅತ್ಯುತ್ತಮ ಚೊಚ್ಚಲ ನಿರ್ದೇಶಕ, ಚಿತ್ರ: ಅರ್ಜುನ್ ವರೈನ್ ಸಿಂಗ್, ಖೋ ಗಯೇ ಹಮ್ ಕಹಾನ್
ಇದನ್ನೂ ಓದಿ | ಪುಷ್ಪ 2 ದ ರೂಲ್ ಸಿನಿಮಾ ರಿಲೀಸ್‌ಗೂ ಮೊದಲೇ ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ಕೇಸ್, ಕಾರಣ ಅದೊಂದು ಪದ ಬಳಕೆ
ವಿಮರ್ಶಕರ ವಿಭಾಗ
- ಅತ್ಯುತ್ತಮ ಸರಣಿ: ಗನ್ಸ್ ಮತ್ತು ಗುಲಾಬ್ಸ್
- ಅತ್ಯುತ್ತಮ ನಿರ್ದೇಶಕ: ಮುಂಬೈ ಡೈರೀಸ್ ಸೀಸನ್ 2
- ಅತ್ಯುತ್ತಮ ನಟ, ಸೀರೀಸ್, ವಿಮರ್ಶಕರು: ಡ್ರಾಮಾ: ಕೇ ಕೇ ಮೆನನ್ (ಬಾಂಬೈ ಮೇರಿ ಜಾನ್)
- ಅತ್ಯುತ್ತಮ ನಟಿ, ಸೀರೀಸ್, ವಿಮರ್ಶಕರು: ಡ್ರಾಮಾ: ಹುಮಾ ಖುರೇಷಿ (ಮಹಾರಾಣಿ ಎಸ್ 03)
- ಅತ್ಯುತ್ತಮ ಚಿತ್ರ, ವಿಮರ್ಶಕರು: ಜಾನೆ ಜಾನ್
- ಅತ್ಯುತ್ತಮ ನಟ, ವಿಮರ್ಶಕರು - ಚಿತ್ರ: ಜೈದೀಪ್ ಅಹ್ಲಾವತ್
- ಅತ್ಯುತ್ತಮ ನಟಿ, ವಿಮರ್ಶಕರು - ಚಿತ್ರ: ಅನನ್ಯಾ ಪಾಂಡೆ
- ವಿಶೇಷ ಮನ್ನಣೆ: ಅರ್ಜುನ್ ವರೈನ್ ಸಿಂಗ್, ಖೋ ಗಯೇ ಹಮ್ ಕಹಾನ್
ಇದನ್ನೂ ಓದಿ | Shobitha Shivanna: ಬ್ರಹ್ಮಗಂಟು ಧಾರಾವಾಹಿ ಪಿಂಕಿ ಖ್ಯಾತಿಯ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣು