ಗಲ್ಲ ಒರಟಾಗಿದ್ದರೆ ಎಲ್ಲವೂ ಒಳಿತಾಗುತ್ತೆ, ಚಿಕ್ಕ ವಯಸ್ಸಿನಲ್ಲೇ ನಾಯಕತ್ವ ಗುಣ ಇರುತ್ತೆ, ಒರಟು ಗಲ್ಲ ಹೊಂದಿದವರ ಗುಣಲಕ್ಷಣ ತಿಳಿಯಿರಿ
ಸಾಮಾನ್ಯವಾಗಿ ಮನುಷ್ಯರ ಮುಖದ ವಿವಿಧ ಭಾಗಗಳು ನಯವಾಗಿರುತ್ತವೆ. ಆದರೆ ಕೆಲವರ ಮುಖದ ಚರ್ಮ ಒರಟಾಗಿರುತ್ತದೆ. ಇಂದಿನ ಲೇಖನದಲ್ಲಿ ಗಲ್ಲ ಒರಟಾಗಿದ್ದರೆ ಏನು ಅರ್ಥ, ಅದರ ವ್ಯಕ್ತಿತ್ವ ಹೇಗಿರುತ್ತೆ, ಅವರ ಬದುಕು ಹೇಗಿರುತ್ತೆ ಎಂಬುದನ್ನು ತಿಳಿಯೋಣ (ಬರಹ: ಎಚ್. ಸತೀಶ್, ಜ್ಯೋತಿಷಿ)
ಗುರು ಗ್ರಹವು ಉಸಿರಾಟಕ್ಕೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಇದು ಮೂಗನ್ನು ಸಹ ಪ್ರತಿನಿಧಿಸುತ್ತದೆ. ಗಲ್ಲವು ಶನಿಗೆ ಸಂಬಂಧಿಸಿದಾಗಿದೆ. ಆದ್ದರಿಂದ ಮೂಗು ಮತ್ತು ಗಲ್ಲ ಎರಡು ನೋಡಲು ಸುಂದರವಾಗಿದ್ದಲ್ಲಿ ಅವರ ಜೀವನದಲ್ಲಿ ಹಲವು ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತವೆ. ಇವರು ಜೀವನದಲ್ಲಿ ಹಲವು ಶುಭಫಲಗಳು ಪಡೆಯುತ್ತಾರೆ. ಗಲ್ಲದಿಂದ ಒಬ್ಬ ವ್ಯಕ್ತಿಯ ಗುಣ ಧರ್ಮವನ್ನು ನಿರ್ಧರಿಸಬಹುದಾಗಿದೆ.
ಒರಟು ಗಲ್ಲದವರ ಗುಣಲಕ್ಷಣಗಳು
ಗಲ್ಲವನ್ನು ಮುಟ್ಟಿದರೆ ಒರಟಾಗಿ ಇದ್ದಲ್ಲಿ ಆ ವ್ಯಕ್ತಿಯ ಜೀವನದಲ್ಲಿ ಉತ್ತಮ ಅವಕಾಶಗಳು ಎದುರಾಗುತ್ತವೆ. ಆದರೆ ಸ್ವತಂತ್ರವಾಗಿ ಯಾವುದೇ ಕೆಲಸವನ್ನು ನಿರ್ವಹಿಸುವ ಮನಸ್ಸು ಇರುವುದಿಲ್ಲ. ಸರಳವಾದಂತಹ ವಿಚಾರಗಳಿಗೂ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಬಾಲ್ಯದಿಂದಲೇ ಇವರಿಗೆ ಮುಂದಿನ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಉತ್ತಮ ಅಭಿಪ್ರಾಯಗಳು ಮನದಲ್ಲಿ ಇರುತ್ತದೆ. ಯಾವುದೇ ವಿಚಾರವಾದರೂ ನಿರಾಸೆ ತಾಳುವುದಿಲ್ಲ. ತಮಗೆ ಇಷ್ಟವಾದಂತಹ ವಿಚಾರಗಳ ಬಗ್ಗೆ ಅಧ್ಯಯನ ನಡೆಸುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುವ ಇವರು ಅನಾರೋಗ್ಯದಿಂದ ದೂರ ಉಳಿಯಲು ಯೋಗ ಪ್ರಾಣಾಯಾಮದಂತಹ ದೈಹಿಕ ವ್ಯಾಯಾಮವನ್ನು ಅವಲಂಬಿಸುತ್ತಾರೆ. ಆರೋಗ್ಯದ ಬಗ್ಗೆ ಅತೀವ ಕಾಳಜಿ ಇರುವ ಕಾರಣ ಆಹಾರ ಸೇವನೆಯಲ್ಲಿ ಇತಿಮಿತಿಯನ್ನು ಹೊಂದಿರುತ್ತಾರೆ.
ಬಾಲ್ಯದಲ್ಲಿ ಸುಖ–ಸಂತೋಷದ ಜೀವನವಿರುತ್ತದೆ. ಯಾವುದೇ ಅಂಕೆ ಇವರಿಗೆ ಇರುವುದಿಲ್ಲ. ಹಿರಿಯರ ಮೇಲೆ ಗೌರವವಿದ್ದರೂ ತಮ್ಮ ಮನದ ಆಶಯಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುತ್ತಾರೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಇರುವುದಿಲ್ಲ. ಆದರೆ ಹೆಚ್ಚಿನ ಪರಿಶ್ರಮದಿಂದ ಕಲಿಕೆಯಲ್ಲಿ ತೊಡಗುವುದಿಲ್ಲ. ಸಹಪಾಠಿಗಳಿಂದ ಸಹಕಾರವಿರುತ್ತದೆ. ಚಿಕ್ಕವಯಸ್ಸಿನಲ್ಲಿ ಎಲ್ಲರ ಮನ ಗೆದ್ದು ನಾಯಕರಂತೆ ವರ್ತಿಸುತ್ತಾರೆ. ತಮ್ಮ ಮನಸ್ಸಿಗೆ ಒಪ್ಪುವ ತಮ್ಮ ಜೀವನದ ರೀತಿ ನೀತಿಯಲ್ಲಿ ನಡೆಯುವ ವ್ಯಕ್ತಿಯ ಜೊತೆ ವಿವಾಹವಾಗುತ್ತದೆ. ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ. ಅನಾವಶ್ಯಕವಾಗಿ ಸಂಗಾತಿಯ ಜೊತೆ ವಾದ ಮಾಡುವುದಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವ ಕಾರಣ ಶಾಂತಿ ನೆಮ್ಮದಿಯ ಜೀವನವಿರುತ್ತದೆ. ಕುಟುಂಬದಲ್ಲಿ ಇವರ ಮಾತೇ ಅತಿ ಮುಖ್ಯವೆನಿಸುತ್ತದೆ.
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ
ಕುಟುಂಬದ ಹಿರಿಯರು ಸಹ ಇವರ ನಿರ್ಧಾರಗಳನ್ನು ಒಪ್ಪುತ್ತಾರೆ. ಉದ್ಯೋಗದಲ್ಲಿ ಉಂಟಾಗುವ ಆಂತರಿಕ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾರೆ. ಹೆಚ್ಚಿನ ನಿರೀಕ್ಷೆ ಇರುವುದಿಲ್ಲ. ಆದರೆ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳುವುದು ಇವರ ವಿಶೇಷತೆಯಾಗಿರುತ್ತದೆ. ಮನಸ್ಸಿಗೆ ಬೇಸರವಾದಲ್ಲಿ ಉದ್ಯೋಗ ಬದಲಾಯಿಸುವುದು ಇವರ ಹವ್ಯಾಸವಾಗಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಕಾರಣವೆಂದರೆ ಮಾನಸಿಕ ಒತ್ತಡವ ದೂರವಿರುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ಆದರೆ ಹಣದ ವ್ಯವಹಾರದ ಸಂಪೂರ್ಣ ಜವಾಬ್ದಾರಿಯನ್ನು ಬೇರೆಯವರಿಗೆ ನೀಡುತ್ತಾರೆ. ಆತ್ಮೀಯರ ವಿವಾಹದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುತ್ತಾರೆ.
ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಉಂಟಾಗುವ ಭಿನ್ನಾಭಿಪ್ರಾಯವನ್ನು ಸಂಧಾನದ ಮೂಲಕ ಬಗೆಹರಿಸುತ್ತಾರೆ. ಸಮಾಜದಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಾಳುವುದು ಇವರ ವಿಶೇಷ. ಸಾಮಾನ್ಯವಾಗಿ ಇವರಿಗೆ ವಿರೋಧಿಗಳೇ ಇರುವುದಿಲ್ಲ. ಒಂದು ವೇಳೆ ವಿರೋಧಿಗಳು ಇದ್ದರೂ ಅವರೊಂದಿಗೆ ಸ್ನೇಹದಿಂದ ಬಾಳುತ್ತಾರೆ. ಪ್ರೀತಿ ವಿಶ್ವಾಸಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಆತ್ಮೀಯರೊಂದಿಗೆ ಮತ್ತು ಬಂಧು ಬಳಗದವರೊಂದಿಗೆ ಸಾಲದ ವ್ಯವಹಾರ ಮಾಡುವುದಿಲ್ಲ. ಸ್ವಂತ ಆಸ್ತಿಯ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಒಲವು ಇರುತ್ತದೆ. ಆದರೆ ಮನೆಯನ್ನು ಕಟ್ಟುವ ಇರಾದೆ ತೋರುವುದಿಲ್ಲ. ಕೇವಲ ಕಟ್ಟಿರುವ ಮನೆಯನ್ನು ಕೊಳ್ಳುವಲ್ಲಿ ಆಸಕ್ತಿ ತೋರುತ್ತಾರೆ.
ವಿದೇಶಕ್ಕೆ ತೆರಳುವ ಸಾಧ್ಯತೆ ಇರುತ್ತದೆ
ಮಕ್ಕಳ ವಿಚಾರದಲ್ಲಿ ಹೆಚ್ಚಿನ ನಿರೀಕ್ಷೆ ಇರುವುದಿಲ್ಲ. ಮಕ್ಕಳ ಜೊತೆಯಲ್ಲಿಸಮಯ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಬಾಳುವರು. ಮಕ್ಕಳ ಸಲುವಾಗಿ ಹಣದ ಉಳಿತಾಯ ಮಾಡುವಿರಿ. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಕೆಲಸ ಕಾರ್ಯಗಳಿಂದ ದೂರ ಉಳಿಯುವರು. ನಿಮ್ಮ ಇಳಿವಯಸಿನಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಿರಿ. ದೈಹಿಕ ದೌರ್ಬಲ್ಯತೆ ಇದ್ದರೂ ಸಹ ದುಡಿಯದೇ ತಿನ್ನುವ ಮನಸ್ಸು ಇರುವುದಿಲ್ಲ. ಇಳಿ ವಯಸ್ಸಿನಲ್ಲಿಯೂ ಆರೋಗ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಬೇರೆಯವರ ಆಶ್ರಯದಲ್ಲಿ ಬಾಳುವ ಆಶಯ ಇರುವುದಿಲ್ಲ. ಸ್ವತಂತ್ರವಾಗಿ ಹಣವನ್ನು ಸಂಪಾದಿಸುವ ಚತುರತೆ ಇವರಲ್ಲಿ ಇರುತ್ತದೆ. ಸಂಗಾತಿಯೊಂದಿಗೆ ವಿಹಾರದ ನೆಪದಲ್ಲಿ ವಿದೇಶಕ್ಕೆ ತೆರಳುವ ಸಾಧ್ಯತೆಗಳು ಇರುತ್ತವೆ. ನಿಮಗೆ ಅರಿವಿಲ್ಲದಂತೆ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುವಿರಿ.
(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ)