Venus Transit: ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ, ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾರಿಗೆ ಶುಭ, ಯಾರಿಗೆ ಅಶುಭ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Venus Transit: ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ, ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾರಿಗೆ ಶುಭ, ಯಾರಿಗೆ ಅಶುಭ

Venus Transit: ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ, ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾರಿಗೆ ಶುಭ, ಯಾರಿಗೆ ಅಶುಭ

ಜ್ಯೋತಿಷ್ಯದಲ್ಲಿ ಗ್ರಹಗಳ ಬದಲಾವಣೆಗೆ ವಿಶೇಷ ಮಹತ್ವವಿದೆ. ಡಿಸೆಂಬರ್ 2 ರಂದು ಶುಕ್ರನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದರ ಪರಿಣಾಮವು 12 ರಾಶಿಗಳ ಮೇಲಾಗುತ್ತದೆ. ಹಾಗಾದರೆ ಶುಕ್ರ ಸಂಕ್ರಮಣದಿಂದ ಯಾವ ರಾಶಿಗೆ ಶುಭವಾಗಲಿದೆ, ಯಾರಿಗೆ ಅಶುಭ ಎಂಬುದನ್ನು ನೋಡೋಣ.

ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ
ಮಕರ ರಾಶಿಯಲ್ಲಿ ಶುಕ್ರ ಸಂಕ್ರಮಣ

ಗ್ರಹಗಳಲ್ಲಿ ಶುಕ್ರ ಗ್ರಹಕ್ಕೆ ವಿಶೇಷ ಮಹತ್ವವಿದೆ. ಶುಕ್ರನ ಸ್ಥಾನಪಲ್ಲಟವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಡಿಸೆಂಬರ್ 2 ರಂದು ಶುಕ್ರನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಪಡೆದಿದ್ದಾನೆ. ಶುಕ್ರನು ಮಕರ ರಾಶಿಯನ್ನು ಆಳುತ್ತಾನೆ. ಹಾಗಾಗಿ ಮಕರ ರಾಶಿಗೆ ಶುಕ್ರನ ಪ್ರವೇಶವು ಹಲವು ಬದಲಾವಣೆಗಳನ್ನು ತರಲಿದೆ.

ಶುಕ್ರನ ಸ್ನಾನಪಲ್ಲಟದಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ ಕೆಲವು ರಾಶಿಯವರಿಗೆ ಶುಭಫಲಗಳು ದೊರೆಯಲಿದೆ, ಇನ್ನೂ ಕೆಲವು ರಾಶಿಯವರಿಗೆ ಶುಕ್ರ ಸಂಕ್ರಮಣದಿಂದ ತೊಂದರೆಯಾಗಲಿದೆ. ಹಾಗಾದರೆ ಯಾವೆಲ್ಲಾ ರಾಶಿಗೆ ಶುಭ, ಯಾರಿಗೆ ಅಶುಭ ಎಂಬುದನ್ನು ನೋಡೋಣ.

ಮೇಷ ರಾಶಿ

ಶುಕ್ರ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಶುಭವಾಗಲಿದೆ. ಈ ಸಮಯದಲ್ಲಿ ಅವರ ಶಕ್ತಿಯು ದ್ವಿಗುಣವಾಗಿರುತ್ತದೆ. ನೀವು ಪ್ರೇಮ ಸಂಬಂಧದಲ್ಲಿದ್ದರೆ ನಿಮ್ಮ ಸಂಬಂಧ ಮದುವೆವರೆಗೆ ಸಾಗಬಹುದು. ಕೆಲಸದ ಸ್ಥಳದಲ್ಲಿ ನೀವು ಮೆಚ್ಚುಗೆಯನ್ನು ಪಡೆಯಲಿದ್ದೀರಿ.

ವೃಷಭ ರಾಶಿ

ವೃಷಭ ರಾಶಿಯು ಈ ಸಮಯದಲ್ಲಿ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಕೆಲಸದಲ್ಲಿ ಸ್ಥಳದಲ್ಲಿ ಸಂತೋಷವಿರುತ್ತದೆ. ಉತ್ತಮ ಅವಕಾಶಗಳು ಬರುತ್ತಿವೆ. ಉತ್ತಮ ಭವಿಷ್ಯಕ್ಕಾಗಿ ಕೆಲಸ ಬದಲಿಸುವ ಬಗ್ಗೆ ಯೋಚಿಸಬಹುದು. ನೀವು ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಹೊಸ ಪ್ರೀತಿಯ ಆಗಮನವಾಗಬಹುದು.

ಮಿಥುನ ರಾಶಿ

ಮಿಥುನ ರಾಶಿಯವರು ವೃತ್ತಿಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ನೀವು ಈ ಸಮಯದಲ್ಲಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ನಷ್ಟವಾಗಬಹುದು. ನಿಮಗೆ ಹಿತಶತ್ರುಗಳು ಹೆಚ್ಚಾಗಬಹುದು.

ಕಟಕ ರಾಶಿ

ಕಟಕ ರಾಶಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅತಿಯಾಗಿ ಯೋಚಿಸಬಹುದು. ಆದರೆ ನಿಮಗೆ ವೃತ್ತಿಜೀವನದಲ್ಲಿ ಎಲ್ಲವೂ ಒಳಿತಾಗುತ್ತದೆ. ಈ ಅವಧಿಯಲ್ಲಿ ಕೆಲಸದ ಪ್ರತಿಫಲ ನಿಮಗೆ ಸಿಗಲಿದೆ. ಸಂಗಾತಿಯೊಂದಿಗೆ ನೀವು ಉತ್ತಮ ಸಮಯ ಕಳೆಯಲಿದ್ದೀರಿ. ಒಂಟಿ ಇರುವವರು ಹೊಸ ಪ್ರೀತಿಯನ್ನು ಕಂಡುಕೊಳ್ಳಲಿದ್ದೀರಿ.

ಸಿಂಹ ರಾಶಿ

ಸಿಂಹ ರಾಶಿಯವರು ವೃತ್ತಿ ಜೀವನದಲ್ಲಿ ಹೊಸ ಸವಾಲುಗಳನ್ನು ಎದುರಿಸಬೇಕಾಗಬಹುದು. ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಎದುರಾಗಬಹುದು. ಕೆಲಸದ ಒತ್ತಡದಿಂದ ಗುರಿ ತಲುಪುವಲ್ಲಿ ವಿಳಂಬವಾಗಬಹುದು. ತಾಳ್ಮೆ ಬಹಳ ಮುಖ್ಯ.

ಕನ್ಯಾ ರಾಶಿ

ಕನ್ಯಾ ರಾಶಿಯವವರಿಗೆ ಸಂಬಂಧ ಹಾಗೂ ಕೌಟುಂಬಿಕ ಜೀವನವು ಒತ್ತಡಕ್ಕೆ ಕಾರಣವಾಗಬಹುದು. ಸಂಬಂಧದಲ್ಲಿ ಭಿನ್ನಾಭಿಪ್ರಾಯ ಹಾಗೂ ಸಂವಹನದಲ್ಲಿ ವ್ಯತ್ಯಯವಾಗುವುದನ್ನು ತಪ್ಪಿಸುವುದು ಉತ್ತಮ. ಆರೋಗ್ಯದ ಮೇಲೆ ಹೆಚ್ಚಿನ ಗಮನ ಕೊಡುವುದು ಅಗತ್ಯ. ಒತ್ತಡ ನಿರ್ವಹಣೆ ಕಲಿಯಿರಿ

ತುಲಾ ರಾಶಿ

ಈ ರಾಶಿಯವರು ತಮ್ಮ ಸಹೋದ್ಯೋಗಿಗಳಿಗೆ ಸಂವಹನ ನಡೆಸುವಲ್ಲಿ ತೊಂದರೆ ಎದುರಿಸಬೇಕಾಗಬಹುದು. ಉದ್ಯೋಗ ಸ್ಥಳದಲ್ಲಿ ಹೊಸ ಅವಕಾಶಗಳು ಹುಡುಕಿ ಬರಲಿವೆ. ನೀವು ಐಷಾರಾಮಿ ಜೀವನವನ್ನು ಆನಂದಿಸಲಿದ್ದೀರಿ. ಹೊಸ ಗ್ಯಾಜೆಟ್‌, ವಾಹನ, ಮನೆ ಖರೀದಿ ಸಾಧ್ಯತೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ಸಮಯದಲ್ಲಿ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು. ಪ್ರೀತಿಪಾತ್ರರೊಂದಿಗೆ ಸಾಮರಸ್ಯದ ಕೊರತೆ ಎದುರಾಗಬಹುದು. ಹಣಕಾಸಿನ ಬಗ್ಗೆ ಸಾಕಷ್ಟು ಎಚ್ಚರದಿಂದಿರುವುದು ಮುಖ್ಯ.

ಧನು ರಾಶಿ

ವೃತ್ತಿಯಲ್ಲಿ ನೀವು ಗಮನಾರ್ಹ ಬದಲಾವಣೆಯನ್ನು ಎದುರಿಸಲಿದ್ದೀರಿ. ನಿಮ್ಮ ಅದೃಷ್ಟವು ಜೀವನದ ಪ್ರತಿಯೊಂದು ಅಂಶದಲ್ಲೂ ನಿಮಗೆ ಅನುಕೂಲರವಾಗಿರುತ್ತದೆ. ಈ ಅವಧಿಯು ನಿಮ್ಮನ್ನು ಪ್ರೀತಿಸಲು ಯಾರಾದರೂ ನಿಮಗೆ ಬೇಕು ಎಂಬುದು ನಿಮಗೆ ಅರಿವಾಗುತ್ತದೆ. ಆದರೆ ವಿಶೇಷವಾದ ವ್ಯಕ್ತಿ ನಿಮ್ಮ ಜೀವನದಲ್ಲಿ ಇಲ್ಲ ಎನ್ನುವುದೇ ನಿಮ್ಮ ಅಸಮಾಧಾನಕ್ಕೆ ಕಾರಣವಾಗಬಹುದು.

ಮಕರ ರಾಶಿ

ನೀವು ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ನೀವು ಕೆಲಸದಿಂದ ವಿರಾಮ ತೆಗೆದುಕೊಂಡು ದೇವರ ಆಶೀರ್ವಾದ ಪಡೆಯಲು ಆಧ್ಯಾತ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಸಾಕಷ್ಟು ಅವಕಾಶಗಳು ನಿಮ್ಮ ದಾರಿ ಬರಲಿವೆ. ಆದರೆ ನೀವು ತಾಳ್ಮೆಯಿಂದಿರಬೇಕು.

ಕುಂಭ ರಾಶಿ

ಈ ಸಮಯದಲ್ಲಿ ನಿಮ್ಮ ವೃತ್ತಿ ಹಾಗೂ ವ್ಯವಹಾರದ ಕ್ಷೇತ್ರದಲ್ಲಿ ನಿಮಗೆ ಕಷ್ಟಗಳು ಎದುರಾಗಬಹುದು. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಹಣಕಾಸಿನ ಅಸ್ಥಿರತೆಯು ಹತಾಶೆಗೆ ಕಾರಣವಾಗಬಹುದು. ಈ ಹಂತವನ್ನು ದಾಟಲು ತಾಳ್ಮೆ ಅತ್ಯಗತ್ಯ.

ಮೀನ ರಾಶಿ

ಶುಕ್ರನ ಸ್ಥಾನಪಲ್ಲಟವು ಗುರು ಗ್ರಹದಿಂದ ಆಳಲ್ಪಡುವ ಮೀನ ರಾಶಿಯ ಮೇಲೆ ನೇರ ಪರಿಣಾಮ ಬೀರಬಹುದು. ಈ ಬದಲಾವಣೆಯು ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಸಮತೋಲನಕ್ಕೆ ಕಷ್ಟವಾಗುವಂತೆ ಮಾಡಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಹೊರೆಯಾಗಿ ಕಾಣಿಸಬಹುದು. ವೃತ್ತಿಜೀವನದ ಪ್ರಗತಿಯು ಜಡವಾಗಿ ಕಾಣಿಸಬಹುದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.