Mandya Sahitya Sammelana: ಮಂಡ್ಯ ಕನ್ನಡದ ಹಬ್ಬಕ್ಕೆ ಓಡಿದ ಚಿತ್ರತಾರೆಯರು; ಸಾಹಿತ್ಯ ಸಮ್ಮೇಳನದಲ್ಲಿ ಮ್ಯಾರಥಾನ್ ಓಟದ ಖುಷಿ
Mandya Sahitya Sammelana: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯದಲ್ಲಿ ಚಳಿಯ ನಡುವೆ ಕನ್ನಡ ಓಟದಲ್ಲಿ ಉತ್ಸಾಹದಿಂದಲೇ ಹಲವರು ಭಾಗಿಯಾದರು. ನಟರೂ ಕೂಡ ಓಡಿ ಉತ್ತೇಜನ ತಂದರು.
(1 / 7)
: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಸಕ್ಕರೆ ನಗರಿ ಮಂಡ್ಯ ಸಜ್ಜಾಗುತ್ತಿದ್ದು, ಸಮ್ಮೇಳನದ ಪ್ರಚಾರಕ್ಕಾಗಿ ಇಂದು ಕನ್ನಡಕ್ಕಾಗಿ ಓಟ ಎಂಬ ಘೋಷ ವಾಕ್ಯದೊಂದಿಗೆ ಮ್ಯಾರಥಾನ್ ಸ್ಪರ್ಧೆಗೆ ಗಣ್ಯರು ಚಾಲನೆ ನೀಡಿದರು.
(2 / 7)
ಮ್ಯಾರಥಾನ್ ಉದ್ಘಾಟಿಸ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಾತನಾಡಿ, ಇಂದು ಜಿಲ್ಲೆಯಲ್ಲಿ ನಡೆಯತ್ತಿರುವ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆಯು ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷವಾದ ಕಾರ್ಯಕ್ರಮವಾಗಿದ್ದು, ಈ ಮೂಲಕ ಎಲ್ಲಾ ಕನ್ನಡಿಗರು ಒಂದಾಗಬೇಕು.ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತೆ ಎಂದು ಕನ್ನಡಕ್ಕಾಗಿ ನಡೆಯುತ್ತಿರುವ ಈ ಓಟ ಯಶಸ್ವಿಯಾಗಲಿ ಎಂದು ಆಶಿಸಿದರು
(3 / 7)
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿದ ವೇಳೆ ನಟ ಸತೀಶ್ ನಿನಾಸಂ, ಡಾ.ಮಹೇಶ್ ಜೋಶಿ, ವಿನಯ ಗುರೂಜಿ, ಸಚಿವ ಚಲುವರಾಯಸ್ವಾಮಿ, ಎಡಿಜಿಪಿ ಅಲೋಕ್ ಕುಮಾರ್, ಎಂಎಲ್ಸಿ ಮಧುಮಾದೇಗೌಡ, ಐಜಿಪಿ ರವಿಕಾಂತೇಗೌಡ ಭಾಗಿಯಾದರು.,
ಇತರ ಗ್ಯಾಲರಿಗಳು