ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ

Sabarimala Temple: ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರೊಬ್ಬರು ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದು ಸ್ಥಳದಲ್ಲಿ ಕಳವಳ ಮೂಡಿಸಿದ್ದರು. ಇದು ಆತ್ಮಹತ್ಯೆ ಪ್ರಯತ್ನ ಎಂದು ಹೇಳಲಾಗುತ್ತಿದ್ದು, ಕರ್ನಾಟಕದ ಅಯ್ಯಪ್ಪ ಭಕ್ತ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತನ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವು ಸಂಭವಿಸಿದೆ.
ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತನ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವು ಸಂಭವಿಸಿದೆ.

Sabarimala Temple: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತ ಸ್ಕೈವಾಕ್‌ನ ಮೇಲ್ಛಾವಣಿ ಏರಿದ್ದು ಅಲ್ಲಿಂದ ಜಿಗಿದ ವಿಡಿಯೋ ವೈರಲ್ ಆಗಿದೆ. ಕೆಳಕ್ಕೆ ಬಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೃತನನ್ನು ಕರ್ನಾಟಕದ ಕನಕಪುರದ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಪ್ರತ್ಯೇಕ ಪ್ರಕರಣದಲ್ಲಿ ಕರ್ನಾಟಕದ ಮತ್ತೊಬ್ಬ ಅಯ್ಯಪ್ಪ ಭಕ್ತ ಶಬರಿಮಲೆ ಏರುವಾಗ ಬಿದ್ದು ಗಾಯಗೊಂಡ ಘಟನೆಯೂ ವರದಿಯಾಗಿದೆ. ಕೂಡಲೇ ಅವರಿಗೆ ಚಿಕಿತ್ಸೆ ಒದಗಿಸಲಾಗಿದ್ದು, ಕೈ ಮತ್ತು ಕಾಲುಗಳಿಗೆ ಹೆಚ್ಚಿನ ಏಟಾಗಿದೆ ಎಂದು ನ್ಯೂಸ್ ಫಸ್ಟ್‌ ವರದಿ ವಿವರಿಸಿದೆ.

ಶಬರಿಮಲೆ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ವೈರಲ್ ವಿಡಿಯೋ

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲೇರಿದ ಅಯ್ಯಪ್ಪ ಭಕ್ತ ಅಲ್ಲಿಂದ ಕೆಳಕ್ಕೆ ಜಿಗಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ದೃಶ್ಯ ಗಮನಿಸಿದರೆ, ಭಸ್ಮದ ಕೊಳ ಮತ್ತು ಮಾಳಿಗೆಪುರ ದೇವಿ ದೇವಸ್ಥಾನಕ್ಕೆ ಹೋಗುವ ಸ್ಕೈವಾಕ್‌ ಮೊದಲು ಕಾಣಿಸುತ್ತದೆ. ವಿಡಿಯೋ ಬಳಿಕ ಛಾವಣಿಯತ್ತ ಫೋಕಸ್ ಆಗಿದ್ದು, ಅಲ್ಲೊಬ್ಬ ವ್ಯಕ್ತಿ ಎದುರು ಬಂದು ನಿಲ್ಲುವುದು ಕಾಣಿಸುತ್ತದೆ. ಎಲ್ಲರೂ ನೋಡುತ್ತಿರುವಂತೆಯೇ ಆತ ಅಲ್ಲಿಂದ ಕೆಳಕ್ಕೆ ಜಿಗಿಯುವುದು ಕಾಣಿಸುತ್ತದೆ. ಈ ಸಂದರ್ಭದಲ್ಲಿ ಅಲ್ಲಿ ಕೋಲಾಹಲ ಉಂಟಾಗಿದ್ದು, ಕಳೆಕ್ಕೆ ಬಿದ್ದ ಅಯ್ಯಪ್ಪ ಭಕ್ತ ನೆಲದ ಮೇಲೆ ನಿಸ್ತೇಜನಾಗಿ ಬಿದ್ದಿರುವುದು ಕಂಡುಬರುತ್ತದೆ. ಕೂಡಲೇ ಅಲ್ಲಿದ್ದವರು ದೂರ ಸರಿದಂತೆ ಕಂಡುಬಂದಿದೆ. ಈ ವಿಡಿಯೋ 20 ಸೆಕೆಂಡ್ ಮಾತ್ರ ಇದೆ.

ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಶಂಕೆ

ಶಬರಿಮಲೆಯಲ್ಲಿ ಸ್ಕೈವಾಕ್ ಮೇಲ್ಛಾವಣಿ ಮೇಲೇರಿದ ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿಯೇ ಹೋದಂತೆ ಇದೆ ಎಂದು ಹೇಳಲಾಗುತ್ತಿದೆ. ಕೆಳಗೆ ಬಿದ್ದ ಅವರನ್ನು ಅಲ್ಲಿದ್ದವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಕುಮಾರಸ್ವಾಮಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ಧಾಗಿ ವರದಿ ವಿವರಿಸಿದೆ. ಕುಮಾರಸ್ವಾಮಿ ಅವರು ಖಿನ್ನತೆಯಿಂದ ಬಳಲಿದ್ದರು ಎಂದು ಹೇಳಲಾಗುತ್ತಿದ್ದು, ಕೇರಳ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.