ಮನೆಯ ಯಾವ ದಿಕ್ಕಿನಲ್ಲಿ ಕೊಳವೆ ಬಾವಿ ಇರಬೇಕು, ತೆಂಗಿನ ಮರ ಯಾವ ದಿಕ್ಕಿಗೆ ಇದ್ದರೆ ಒಳಿತು?; ವಾಸ್ತುಶಾಸ್ತ್ರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯ ಯಾವ ದಿಕ್ಕಿನಲ್ಲಿ ಕೊಳವೆ ಬಾವಿ ಇರಬೇಕು, ತೆಂಗಿನ ಮರ ಯಾವ ದಿಕ್ಕಿಗೆ ಇದ್ದರೆ ಒಳಿತು?; ವಾಸ್ತುಶಾಸ್ತ್ರ

ಮನೆಯ ಯಾವ ದಿಕ್ಕಿನಲ್ಲಿ ಕೊಳವೆ ಬಾವಿ ಇರಬೇಕು, ತೆಂಗಿನ ಮರ ಯಾವ ದಿಕ್ಕಿಗೆ ಇದ್ದರೆ ಒಳಿತು?; ವಾಸ್ತುಶಾಸ್ತ್ರ

ವಾಸ್ತು ಇಂದು ನಿನ್ನೆಯದಲ್ಲ, ಪುರಾತನ ಕಾಲದಿಂದಲೂ ವಾಸ್ತುವಿಗೆ ಬಹಳ ಪ್ರಾಮುಖ್ಯತೆ ಇದೆ. ವಾಸ್ತುವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಖ, ಸಂತೋಷದಿಂದ ಜೀವನ ನಡೆಸಬಹುದು. ಆರೋಗ್ಯ ಸಮಸ್ಯೆಯೂ ಕಾಡುವುದಿಲ್ಲ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮನೆಯ ಯಾವ ದಿಕ್ಕಿನಲ್ಲಿ ಕೊಳವೆ ಬಾವಿ ಇರಬೇಕು, ತೆಂಗಿನ ಮರ ಯಾವ ದಿಕ್ಕಿಗೆ ಇದ್ದರೆ ಒಳಿತು?; ವಾಸ್ತುಶಾಸ್ತ್ರ
ಮನೆಯ ಯಾವ ದಿಕ್ಕಿನಲ್ಲಿ ಕೊಳವೆ ಬಾವಿ ಇರಬೇಕು, ತೆಂಗಿನ ಮರ ಯಾವ ದಿಕ್ಕಿಗೆ ಇದ್ದರೆ ಒಳಿತು?; ವಾಸ್ತುಶಾಸ್ತ್ರ (PC: Pixabay )

ವಾಸ್ತುವಿನಲ್ಲಿ ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ಮನೆಯ ಮುಖ್ಯದ್ವಾರದಿಂದ ಹಿಡಿದು ಶೌಚಾಲಯದವರೆಗೂ ವಾಸ್ತು ಅಳವಡಿಸಿಕೊಂಡರೆ ಯಾವುದೇ ನಕಾರಾತ್ಮಕ ಅಂಶಗಳು ಮನೆಯಲ್ಲಿ ಇರುವುದಿಲ್ಲ. ಹಣಕಾಸು, ವೃತ್ತಿ ಜೀವನ, ಆರೋಗ್ಯ ಎಲ್ಲವೂ ಚೆನ್ನಾಗಿರುತ್ತದೆ. ಇಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ಉಲ್ಲೇಖಿಸಲಾಗಿದೆ.

  • ಈಶಾನ್ಯದಿಂದ ನೈರುತ್ಯ ಮತ್ತು ಆಗ್ನೇಯದಿಂದ ವಾಯವ್ಯಕ್ಕೆ ಉದ್ದವು ಒಂದೇ ಸಮನಾಗಿ ಇರುವುದು ಒಳ್ಳೆಯದು. ಈಶಾನ್ಯದಿಂದ ನೈರುತ್ಯಕ್ಕಿರುವ ದೂರವು, ಆಗ್ನೇಯದಿಂದ ವಾಯುವ್ಯಕ್ಕಿರುವ ದೂರಕ್ಕಿಂತಲೂ ಹೆಚ್ಚಾಗಿರಬೇಕು.
  • ತ್ರಿಕೋನಾಕೃತಿಯ ಅಥವ ಪಂಚಮೂಲೆ ಇರುವ ನಿವೇಶನವನ್ನು ಮೊದಲು ಆಯತಾಕಾರ ಅಥವಾ ವರ್ಗಾಕಾರಕ್ಕೆ ಬದಲಾಯಿಸಿ ನಂತರ ಮನೆಯನ್ನು ಕಟ್ಟುವುದು ಒಳ್ಳೆಯದು. ಆದರೆ ಇಂತಹ ಮನೆಯನ್ನು ಕೊಂಡಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.
  • ಉತ್ತರ ದಿಕ್ಕಿನಲ್ಲಿ ಸೂರ್ಯನ ತಾಮ್ರದ ಭಾವಚಿತ್ರ ಅಥವ ಆಕೃತಿ ಹಾಕುವುದರಿಂದ ಆ ಮನೆಯಲ್ಲಿ ವಾಸಿಸುವ ಎಲ್ಲರಿಗೂ ಉತ್ತಮ ಆರೋಗ್ಯ ಇರುತ್ತದೆ.

ಇದನ್ನೂ ಓದಿ: ಸಿಂಪಲ್ಲಾಗೊಂದು ಬಣ್ಣದ ರಂಗೋಲಿ, ವರಮಹಾಲಕ್ಷ್ಮಿ ಹಬ್ಬಕ್ಕೆ ಆಕರ್ಷಕ ರಂಗೋಲಿ ಐಡಿಯಾಗಳು; ಫೋಟೋ ಗ್ಯಾಲರಿ

  • ವಾಸ್ತುದೋಷವಿರುವ ದಿಕ್ಕಿನಲ್ಲಿ ಪಂಚಲೋಹದಿಂದ ಮಾಡಿದ ಪಿರಮಿಡ್ ಇಡುವುದರಿಂದ ಶುಭ ಫಲಗಳು ದೊರೆಯುತ್ತವೆ.
  • ದೇವ ಮೂಲೆಯಲ್ಲಿ ಇರಿಸಿದ ನೀರನ್ನು ಕುಡಿಯುವುದರಿಂದ ಕುಟುಂಬದಲ್ಲಿನ ಅನುಬಂಧವು ಗಟ್ಟಿಗೊಳ್ಳುತ್ತದೆ.
  • ಅಡುಗೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಮಾಡುವುದರಿಂದ ಕುಟುಂಬದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ.
  • ಈಶಾನ್ಯ ಆಗ್ನೇಯ ನೈರುತ್ಯ ಮತ್ತು ವಾಯುವ್ಯ ಮೂಲೆಗಳಲ್ಲಿ ಮನೆಯ ಬಾಗಿಲಿದ್ದರೆ ಕುಟುಂಬದಲ್ಲಿ ಅನಾವಶ್ಯಕ ಕಲಹಗಳು ಉಂಟಾಗುತ್ತವೆ.
  • ದಕ್ಷಿಣ ದಿಕ್ಕಿನಲ್ಲಿ ಮನೆಯ ಗೇಟ್ ಇದ್ದರೂ ಸಹ ಮನೆಯ ಬಾಗಿಲನ್ನು ಪೂರ್ವ ದಿಕ್ಕಿನಲ್ಲಿ ನಿರ್ಮಿಸುವುದು ಬಹು ಮುಖ್ಯ.
  • ಉತ್ತರದಲ್ಲಿ ಮನೆಯ ಬಾಗಿಲಿದ್ದಾಗ ಪಶ್ಚಿಮದಲ್ಲಿ ಮನೆಯ ಗೇಟ್ ಇದ್ದರು ಯಾವುದೇ ತೊಂದರೆ ಕಂಡು ಬರುವುದಿಲ್ಲ.
  • ಮನೆಯ ಒಳಗಿನಿಂದ ಈಶಾನ್ಯ ದಿಕ್ಕಿಗೆ ನೀರು ಹರಿಯುವಂತೆ ಇರಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ಬಳಸಿದ ನೀರು ದಕ್ಷಿಣ ದಿಕ್ಕಿಗೆ ಹರಿಯಬಾರದು.
  • ಪೂರ್ವ ದಿಕ್ಕಿಗೆ ತಲೆಯನ್ನು ಇಟ್ಟು ಮಲಗಿದರೆ ಉತ್ತಮ ಆರೋಗ್ಯ ಲಭಿಸುತ್ತದೆ. ಆದರೆ ಪೂರ್ವ ದಿಕ್ಕಿಗೆ ಕಾಲನಿಟ್ಟು ಮಲಗಬಾರದು.

ಇದನ್ನೂ ಓದಿ: ಸಿಂಹ ರಾಶಿಗೆ ಸೂರ್ಯ ಸಂಚಾರ; ತ್ರಿಗ್ರಹಿ ಯೋಗದಿಂದ ವೃಶ್ಚಿಕ ಸೇರಿದಂತೆ 5 ರಾಶಿಯವರಿಗೆ ಪ್ರೀತಿಯಲ್ಲಿ ಜಯ, ಆರ್ಥಿಕ ಲಾಭ

  • ಉತ್ತರ ದಿಕ್ಕಿಗೆ ತಲೆಯನ್ನು ಇಟ್ಟು ಮಲಗಿದರೆ ಮಾನಸಿಕ ಶಾಂತಿ ನೆಮ್ಮದಿ ಇರುವುದಿಲ್ಲ. ಸದಾ ಕಾಲ ಮನದಲ್ಲಿ ಋಣಾತ್ಮಕ ಚಿಂತನೆಗಳು ಮೂಡುತ್ತವೆ.
  • ಅಗ್ನಿ ಮೂಲೆಯಲ್ಲಿ ಮಾತ್ರ ಅಡುಗೆ ಮನೆಯನ್ನು ನಿರ್ಮಿಸುವುದು ಒಳ್ಳೆಯದು. ಉತ್ತರ ದಿಕ್ಕಿಗೆ ಸೇರಿಕೊಂಡಂತೆ ವಾಯವ್ಯ ಮೂಲೆಯಲ್ಲಿ ಅಡುಗೆ ಮನೆ ನಿರ್ಮಿಸಬಾರದು.
  • ಶೌಚಾಲಯವು ವಾಯವ್ಯ ದಿಕ್ಕಿನಲ್ಲಿ ಇರುವುದು ಒಳ್ಳೆಯದು. ಆದರೆ ಶೌಚಾಲಯದಲ್ಲಿ ಕೂರುವಾಗ ನಮ್ಮ ಮುಖವು ದಕ್ಷಿಣ ದಿಕ್ಕಿಗೆ ಇರಬೇಕು.
  • ಈಶಾನ್ಯ ಅಥವಾ ವಾಯವ್ಯದ ಮೂಲೆಗಳಲ್ಲಿ ಕೊಳವೆ ಬಾವಿ ತೋಡಿಸಿದರೆ ಶುಭ ಫಲಗಳನ್ನು ಪಡೆಯಬಹುದು.
  • ಪೂರ್ವ ದಿಕ್ಕಿನಲ್ಲಿ ಖಾಲಿ ಜಾಗವನ್ನು ಬಿಡುವುದು ಕುಟುಂಬದ ಎಲ್ಲರಿಗೂ ಒಳ್ಳೆಯದು.
  • ಪೂರ್ವ ದಿಕ್ಕಿನಲ್ಲಿ ತುಳಸಿ ಬೃಂದಾವನವನ್ನು ನಿರ್ಮಿಸಿದರೆ ಗುರುಹಿರಿಯರ ಮತ್ತು ಕುಲದೇವರ ಅನುಗ್ರಹ ದೊರೆಯುತ್ತದೆ. ಆಗ್ನೇಯ ಮೂಲೆಯಲ್ಲಿ ತುಳಸಿ ಬೃಂದಾವನವನ್ನು ನಿರ್ಮಿಸಿದರೆ ಮನೆಯಲ್ಲಿರುವ ಗೃಹಿಣಿಯರಿಗೆ ಉತ್ತಮ ಆರೋಗ್ಯ ದೊರೆಯುತ್ತದೆ.
  • ಒಂದು ಅಥವಾ ಎರಡನೇ ಮಹಡಿಗಳಲ್ಲಿ ಉತ್ತರದಲ್ಲಿ ಖಾಲಿ ಜಾಗ ಬಿಡದೆ ಮನೆಯನ್ನು ಕಟ್ಟಿದಲ್ಲಿ ಕುಟುಂಬದ ವರಮಾನವು ಹೆಚ್ಚುತ್ತದೆ.
  • ಮನೆಯ ಪೂರ್ವ ದಿಕ್ಕಿನಲ್ಲಿ ತೆಂಗಿನ ಮರ, ಬೇವಿನ ಮರ ಅಥವಾ ಬಿಲ್ವಪತ್ರೆಯ ಮರಗಳಿದ್ದರೆ ಆ ಮನೆಯನ್ನುದೃಷ್ಟ ಶಕ್ತಿಗಳಿಂದ ಕುಲದೇವರು ಕಾಪಾಡುತ್ತಾನೆ.
  • ಮನೆಯಲ್ಲಿ ಗುಡಿಸಿದ ಕಸವನ್ನು ಪೂರ್ವ ದಿಕ್ಕಿನಲ್ಲಿ ಶೇಖರಿಸಿ ಇಡಬಾರದು.

ಇದನ್ನೂ ಓದಿ: ಈ ಬಾರಿ ಗಣೇಶ ಚತುರ್ಥಿ ಸಮಯ, ಶುಭ ಮುಹೂರ್ತ ಯಾವಾಗ?

  • ಮನೆಯನ್ನು ವಿಸ್ತರಿಸುವ ವೇಳೆ ಪೂರ್ವ ದಿಕ್ಕು ಮತ್ತು ಆಗ್ನೇಯ ಮೂಲೆಗಳ ಬಗ್ಗೆ ಗಮನಹರಿಸಬೇಕು. ಇವುಗಳನ್ನು ವಿಸ್ತರಿಸುವುದರಿಂದ ಎಲ್ಲಾ ರೀತಿಯ ಅನುಕೂಲತೆ ದೊರೆಯುತ್ತದೆ.
  • ಪೂರ್ವ ದಿಕ್ಕಿನ ಮಧ್ಯ ಭಾಗದಿಂದ ಈಶಾನ್ಯ ಮೂಲೆಯ ಕಡೆ ಮನೆಯ ದ್ವಾರವನ್ನು ನಿರ್ಮಿಸಿದರೆ ಆ ಮನೆಯಲ್ಲಿ ವಾಸಿಸುವವರಿಗೆ ಪ್ರತಿಯೊಂದು ವಿಚಾರಗಳಲ್ಲಿಯೂ ಅನುಕೂಲತೆಗಳು ದೊರೆಯುತ್ತವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.