Weekly Horoscope: ವಂಶಾಧಾರಿತ ಆಸ್ತಿಯಲ್ಲಿ ಪಾಲು ದೊರೆಯಲಿದೆ, ಉದ್ಯೋಗದಲ್ಲಿ ನಿರೀಕ್ಷಿಸಿದ ಯಶಸ್ಸು ನಿಮ್ಮದಾಗಲಿದೆ; ವಾರ ಭವಿಷ್ಯ
Weekly Horoscope: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (May 19th to May 25th Weekly Horoscope)
ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (May 19th to May 25th Weekly Horoscope)
ಮೇಷ
ಹೊಸ ನಿರೀಕ್ಷೆಯಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಏಕಾಂಗಿಯಾಗಿ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಬಲ್ಲಿರಿ. ಕುಟುಂಬದ ಸದಸ್ಯರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುತ್ತಾರೆ. ಹಣಕಾಸಿನ ವಿಚಾರವನ್ನು ಸಂಗಾತಿಯ ಜೊತೆ ಚರ್ಚಿಸುವಿರಿ. ಉದ್ಯೋಗ ಬದಲಾವಣೆಯ ಬಗ್ಗೆ ಎಚ್ಚರಿಕೆ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಮಕ್ಕಳ ವಿಚಾರವಾಗಿ ಶುಭ ವರ್ತಮಾನವೊಂದು ಬರಲಿದೆ. ಖರ್ಚು ವೆಚ್ಚಗಳು ಹೆಚ್ಚುವ ಕಾರಣ ಮಾನಸಿಕ ಒತ್ತಡ ಒಳಗಾಗುವಿರಿ. ಸಂಗೀತ ನಾಟ್ಯದಲ್ಲಿ ಆಸಕ್ತಿ ಮೂಡುತ್ತದೆ. ಸೋದರರ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ನಿನೂತನ ಸಾಧನೆ ಮಾಡುವಿರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣದು. ಅನಾವಶ್ಯಕವಾಗಿ ಯೋಚಿಸದಿರಿ.
ವೃಷಭ
ಬುದ್ಧಿವಂತಿಕೆಯಿಂದ ದೊರೆವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ದರ್ಜೆಗೆ ಏರುವಿರಿ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಾಯಿಸುವಿರಿ. ಮೊಮ್ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತಸ ತುಂಬಿರುತ್ತದೆ. ಹಣಕಾಸಿನ ಕೊರತೆ ಇರಲಿದೆ. ದಿನನಿತ್ಯದಲ್ಲಿ ನಿರೀಕ್ಷಿತ ಬದಲಾವಣೆಗಳು ದೊರೆಯುತ್ತವೆ. ಕುಟುಂಬದ ಸದಸ್ಯರು ಖರ್ಚು ವೆಚ್ಚಗಳನ್ನು ಹಂಚಿಕೊಳ್ಳುವರು. ಹಣದ ಕೊರತೆ ಕ್ರಮೇಣವಾಗಿ ಕಡಿಮೆ ಆಗಲಿದೆ. ಬಂಧು ಮಿತ್ರರ ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರದ ಸ್ಥಳಕ್ಕೆ ತೆರಳುವಿರಿ. ಮಗಳಿಗಾಗಿ ದುಬಾರಿ ಬೆಲೆಯ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ತಪ್ಪನ್ನು ಮಾಡಿದ ನಂತರ ಪಶ್ಚಾತಾಪ ಪಡೆಯುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ.
ಮಿಥುನ
ಅನುಕೂಲಕರ ವಾತಾವರಣದ ಕಾರಣ ಸಂತೃಪ್ತಿಯ ಭಾವನೆ ಮೂಡುತ್ತದೆ. ಬೇಸರದ ವಾತಾವರಣದ ಕಾರಣ ಉದ್ಯೋಗ ಬದಲಿಸುವಿರಿ. ಹೊಸ ಉದ್ಯೋಗಕ್ಕೆ ಸುಲಭವಾಗಿ ಹೊಂದಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕುಟುಂಬದಲ್ಲಿ ಶುಭ ಕಾರ್ಯವೊಂದು ನಡೆಯಲಿದೆ. ಮನೆಯನ್ನು ನವೀಕರಣಗೊಳಿಸಲು ಹಣ ಖರ್ಚಾಗಬಹುದು. ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಪಾಲುದಾರಿಕೆ ವ್ಯಾಪಾರ ಆರಂಭಿಸುವ ಮನಸ್ಸು ಇರುತ್ತದೆ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಆತುರವಿಲ್ಲದೆ ಸಹನೆಯಿಂದ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವಿರಿ. ಉತ್ತಮ ಪ್ರಯತ್ನದಿಂದ ಹಣ ಉಳಿತಾಯ ಮಾಡುವಿರಿ.
ಕಟಕ
ಸ್ವಂತ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಿರಿ. ಹಣಕಾಸಿನ ವಿಚಾರಗಳು ನಿಧಾನಗತಿಯಲ್ಲಿ ನಡೆಯಲಿವೆ. ತಂದೆಯ ವಿಚಾರದಲ್ಲಿ ಇದ್ದ ಮಾನಸಿಕ ಒತ್ತಡ ಮರೆಯಾಗುತ್ತದೆ. ಆರೋಗ್ಯದಲ್ಲಿ ತೊಂದರೆ ಉಂಟಾಗದು. ಕ್ರಿಯಾಶೀಲತೆಯಿಂದ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುವಿರಿ. ಉದ್ಯೋಗವನ್ನು ಬದಲಾಯಿಸುವ ಇಂಗಿತ ಕೈಬಿಡುವಿರಿ. ಉದ್ಯೋಗದ ಸಲುವಾಗಿ ವಿದೇಶ ಪ್ರಯಾಣ ಮಾಡುವಿರಿ. ಉತ್ತಮ ಭವಿಷ್ಯಕ್ಕಾಗಿ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸುವಿರಿ. ಬಂಧು ವರ್ಗದಿಂದ ಸಹಾಯ ಸಹಕಾರ ದೊರೆಯಲಿದೆ. ತಂದೆಯವರ ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗಲಿದೆ. ಆತುರದಿಂದ ವರ್ತಿಸದೆ ಸಹನೆ ಪ್ರೀತಿಯಿಂದ ಎಲ್ಲರ ಗಮನ ಸೆಳೆಯುವಿರಿ.
ಸಿಂಹ
ವಿರೋಧದ ನಡುವೆಯೂ ಆರಂಭಿಸಿದ ಕೆಲಸವನ್ನು ಪೂರ್ತಿ ಮಾಡುವಿರಿ. ಕುಟುಂಬದಲ್ಲಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಉದ್ಯೋಗದಲ್ಲಿ ದೊರೆಯಬೇಕಿದ್ದ ಉನ್ನತ ಅಧಿಕಾರ ದೊರೆಯದು. ಆದರೆ ಹಿರಿಯ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ಉನ್ನತ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ರಕ್ತ ಸಂಬಂಧಿಕರಿಂದ ಶುಭ ವಾರ್ತೆಯೊಂದು ದೊರೆಯುತ್ತದೆ. ನೇರ ನಿಷ್ಠುರದ ಮಾತುಕತೆ ಆತ್ಮೀಯರಲ್ಲಿ ಬೇಸರವನ್ನು ಮೂಡಿಸುತ್ತದೆ. ತಂದೆಗೆ ಧನಸಹಾಯ ಮಾಡುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗಲಿದೆ. ವಿದ್ಯಾರ್ಥಿಗಳ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿದೆ.
ಕನ್ಯಾ
ಸ್ಥಿರವಾದ ಮನಸ್ಸಿನಿಂದ ಸಮಯಾನುಸಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಅನುಕೂಲಕರ ಸನ್ನಿವೇಶ ಎದುರಾಗಲಿದೆ. ಕುಟುಂಬದ ಸದಸ್ಯರೊಂದಿಗೆ ಯಾತ್ರಾಸ್ಥಳಕ್ಕೆ ದೇವತಾ ಕಾರ್ಯ ನಿರ್ವಹಿಸಲು ತೆರಳುವಿರಿ. ಕೆಲಸ ಕಾರ್ಯಗಳಲ್ಲಿ ದಿಟ್ಟತನದ ತೀರ್ಮಾನಗಳಿಂದ ಯಶಸ್ಸನ್ನು ಗಳಿಸುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಚಿಕ್ಕ ಪ್ರಮಾಣದ ಸಣ್ಣ ಕೈಗಾರಿಕೆ ಒಂದನ್ನು ಆರಂಭಿಸುವಿರಿ. ಮನಸ್ಸು ಒಪ್ಪದೇ ಹೋದರೂ ಆತ್ಮೀಯರಿಂದ ಹಣವನ್ನು ಪಡೆಯುವಿರಿ. ಹಣದ ವಿಚಾರವಾಗಿ ಸಮಸ್ಯೆಯೊಂದು ಎದುರಾಗಲಿದೆ. ಹೊಸ ವಾಹನ ಕೊಳ್ಳುವಿರಿ. ತಂದೆಯವರ ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ.
ತುಲಾ
ಕೌಟುಂಬಿಕ ಜೀವನದಲ್ಲಿ ಬದಲಾವಣೆ ಉಂಟಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಬೇರೆಯವರ ಮನಸ್ಸಿಗೆ ಅನುಗುಣವಾಗಿ ವರ್ತಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಾರೆ. ಭವಿಷ್ಯದ ಹಣಕಾಸಿನ ಯೋಜನೆಗಳಲ್ಲಿ ಲಾಭ ದೊರೆಯುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಸ್ವತಂತ್ರವಾಗಿ ಪೂರ್ಣಗೊಳಿಸಬಲ್ಲಿರಿ. ಸೋದರ ಅಥವಾ ಸೋದರಿಯ ನಡುವಿನ ವಿವಾದ ಕೊನೆಯಾಗುತ್ತದೆ. ವಂಶಧಾರಿತ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಯಾರೊಂದಿಗೂ ವಾದ ವಿವಾದ ಮಾಡುವುದಿಲ್ಲ. ಹಣದ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ತಪ್ಪು ಮಾಡುವವರಿಂದ ದೂರ ಉಳಿಯುವಿರಿ.
ವೃಶ್ಚಿಕ
ಆರೋಗ್ಯದಲ್ಲಿನ ತೊಂದರೆ ದೂರವಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುತ್ತದೆ. ಕೋಪದ ಮೇಲೆ ನಿಯಂತ್ರಣ ಹೊಂದುವಿರಿ. ಅತಿಯಾದ ಶಿಸ್ತು ಮಕ್ಕಳಲ್ಲಿ ಬೇಸರವನ್ನು ಉಂಟುಮಾಡುತ್ತದೆ. ನಿಮ್ಮ ಮನದ ಆಸೆ ಈಡೇರಲಿವೆ. ಕುಟುಂಬದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸ ಕಾರ್ಯವನ್ನುಎಲ್ಲರೂ ಮೆಚ್ಚಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ತೀರ್ಮಾನವನ್ನು ಎಲ್ಲರೂ ಒಪ್ಪುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಹಣಕಾಸಿನ ವ್ಯವಹಾರವನ್ನು ಬುದ್ಧಿವಂತಿಕೆಯಿಂದ ನಡೆಸುವಿರಿ.
ಧನಸ್ಸು
ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ಮಕ್ಕಳು ಮಾಡಿದ ತಪ್ಪನ್ನು ಮನ್ನಿಸುವ ಕಾರಣ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವಿರಿ. ಕೆಲಸಕಾರ್ಯಗಳಲ್ಲಿ ಹಿನ್ನೆಡೆ ಲಭಿಸಬಹುದು. ಕುಟುಂಬದಲ್ಲಿನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದಂಪತಿಗಳ ನಡುವಿನ ಪ್ರೀತಿ ನಂಬಿಕೆ ಹೆಚ್ಚುತ್ತದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಆಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಮನದ ಬೇಸರ ಕಳೆಯಲು ಪ್ರವಾಸ ಕೈಗೊಳ್ಳುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಸಂಗಾತಿಯ ಸಹಾಯ ಬೇಕಾಗುತ್ತದೆ.
ಮಕರ
ಆತುರದಿಂದ ಕೆಲಸ ಕಾರ್ಯಗಳನ್ನು ಮಾಡಿದರೂ ಯಶಸ್ಸನ್ನು ಗಳಿಸುವಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಕುಟುಂಬದ ಹಣಕಾಸಿನ ಜವಾಬ್ದಾರಿ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಎಲ್ಲರಿಗೂ ಮಾದರಿಯಾಗುವಿರಿ. ಸಮಾಜದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ಜನಸೇವೆ ಮಾಡುವ ಸಲುವಾಗಿ ಸಂಘ ಸಂಸ್ಥೆಯನ್ನು ಆರಂಭಿಸುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯ ನಿಮ್ಮದಾಗುತ್ತದೆ. ಸಂಗಾತಿಯ ಜೊತೆ ಅನಗತ್ಯ ವಿವಾದ ಉಂಟಾಗಲಿದೆ. ಪರಿಚಯಸ್ಥರ ಜೀವನದ ಬದಲಾವಣೆ ನಿಮಗೆ ಅನುಕೂಲಕರವಾಗಲಿದೆ. ಆತ್ಮೀಯರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರ ವ್ಯವಹಾರ ಆರಂಭಿಸುವಿರಿ. ತಪ್ಪು ಮಾಹಿತಿಗಳನ್ನು ನಂಬಿದಲ್ಲಿ ಸಂತೋಷ ನೆಮ್ಮದಿ ಉಳಿಯದದು.
ಕುಂಭ
ಆರೋಗ್ಯದಲ್ಲಿ ಏರಿಳಿತ ಇರಲಿದೆ. ಮಕ್ಕಳ ಜೀವನದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಸಂತಸ ನೀಡುತ್ತದೆ. ಮನ ಬಿಚ್ಚಿ ಆತ್ಮೀಯರೊಂದಿಗೆ ಮನದ ಭಾವನೆಯನ್ನು ಹೇಳಿಕೊಳ್ಳುವಿರಿ. ಅನಾವಶ್ಯಕ ವಿಚಾರಗಳ ಬಗ್ಗೆ ಚಿಂತೆ ಮಾಡುವಿರಿ. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ವಾದ ವಿವಾದಗಳಿರುತ್ತವೆ. ಸಮಾಜ ಸೇವೆ ಮಾಡುವ ಆಸೆ ಮೂಡುತ್ತದೆ. ರಾಜಕೀಯ ಪ್ರವೇಶಿಸುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಹಣದ ವ್ಯವಹಾರದ ಬಗ್ಗೆ ಆತುರದ ನಿರ್ಧಾರ ಒಳ್ಳೆಯದಲ್ಲ. ಕೇವಲ ಮನಸ್ಸಿಗೆ ಮುದ ನೀಡುವ ವಿಚಾರಗಳನ್ನು ಮಾತ್ರ ಎಲ್ಲರೊಡನೆ ಹಂಚಿಕೊಳ್ಳುವಿರಿ. ಗುಟ್ಟಾಗಿ ಹಣ ಸಂಪಾದಿಸುವಿರಿ., ಸಾಲದ ವ್ಯವಹಾರದಿದ ದೂರ ಉಳಿಯುವಿರಿ.
ಮೀನ
ಬೇಸರ ಮರೆತು ಎಲ್ಲರ ಜೊತೆ ಸಂತೋಷದಿಂದ ಬೆರೆಯುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸುವಿರಿ. ಆಡುವ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಾಗದು. ಸಂತಾನ ಲಾಭವಿದೆ. ಉದ್ಯೋಗದಲ್ಲಿ ಹಿತಕರ ಬದಲಾವಣೆ ಉಂಟಾಗಲಿವೆ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ಪರಸ್ಥಳಕ್ಕೆ ತೆರಳಲಿದ್ದಾರೆ. ದೊರೆವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಸ್ವಂತ ಕೆಲಸ ಕಾರ್ಯಗಳು ಅಪೂರ್ಣವಾಗಲಿವೆ. ಗಂಟಲು ಅಥವಾ ಬಾಯಿಗೆ ಸಂಬಂಧಿಸಿದಂತೆ ಅನಾರೋಗ್ಯ ವಿರುತ್ತದೆ. ವಂಶಕ್ಕೆ ಸೇರಿದ ಆಸ್ತಿಯೊಂದು ನಿಮ್ಮದಾಗಲಿದೆ. ಮಕ್ಕಳಿಗೆ ಉದ್ಯೋಗ ದೊರೆಯಲಿದೆ. ನೂತನ ವಾಹನ ಲಾಭವಿದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)