ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಎಲ್ಲಿ, ಎಷ್ಟೊತ್ತಿಗೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಭಾರತ Vs ಪಾಕಿಸ್ತಾನ ಪಂದ್ಯ ಯಾವಾಗ, ಎಲ್ಲಿ, ಎಷ್ಟೊತ್ತಿಗೆ?

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಎಲ್ಲಿ, ಎಷ್ಟೊತ್ತಿಗೆ?

ICC Champions Trophy 2025 Schedule: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಫೆಬ್ರವರಿ 19ರಿಂದ ಆರಂಭವಾಗುವ ಟೂರ್ನಿ ಮಾರ್ಚ್​ 9ಕ್ಕೆ ಮುಕ್ತಾಯವಾಗಲಿದೆ. ಹಾಗಾದರೆ ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಯಾವಾಗ, ಎಲ್ಲಿ, ಎಷ್ಟೊತ್ತಿಗೆ? ಇಲ್ಲಿದೆ ವಿವರ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಎಲ್ಲಿ, ಎಷ್ಟೊತ್ತಿಗೆ?
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಎಲ್ಲಿ, ಎಷ್ಟೊತ್ತಿಗೆ?

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಎಂಟು ತಂಡಗಳ ನಡುವೆ ಮೆಗಾ ಟೂರ್ನಿ ಜರುಗಲಿದೆ. ಈ ಪಂದ್ಯಾವಳಿಗೆ ಪಾಕಿಸ್ತಾನ ತಂಡವು ಆತಿಥ್ಯ ವಹಿಸಿದ್ದರೂ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ. ಐಸಿಸಿ ತೀರ್ಪಿನಂತೆ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರಿಕೆಟ್ ಮೈದಾನಗಳಲ್ಲಿ ಪಂದ್ಯ ನಡೆಯಲಿವೆ. ಇದೀಗ ಈ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಹಾಗಿದ್ದರೆ ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ? ಇಲ್ಲಿದೆ ವಿವರ.

ಬಹುನಿರೀಕ್ಷಿತ ಟೂರ್ನಿಯು ಫೆಬ್ರವರಿ 19ರಿಂದ ಪ್ರಾರಂಭವಾಗುವ ಸಾಧ್ಯತೆ ಇದ್ದು, ಆರಂಭಿಕ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​​ ತಂಡಗಳು ಸೆಣಸಾಟ ನಡೆಸಬಹುದು ಎಂದು ವರದಿಯಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಫೆಬ್ರವರಿ 19ರಿಂದ ಮಾರ್ಚ್​ 9ರ ತನಕ ಎರಡು ಸೆಮಿಫೈನಲ್, ಫೈನಲ್ ಸೇರಿ ಒಟ್ಟು 14 ಪಂದ್ಯಗಳು ನಡೆಯಲಿವೆ. ಆದರೆ ಫೈನಲ್​ಗೆ ಮೀಸಲು ದಿನವನ್ನೂ ಇಡಲಾಗಿದೆ. ಮಾರ್ಚ್​ 10 ಮೀಸಲು ದಿನವಾಗಿದೆ. ಒಂದು ವೇಳೆ ಮಳೆಯಿಂದ ಅಥವಾ ತುರ್ತು ಕಾರಣದಿಂದ ಪಂದ್ಯ ರದ್ದಾದರೆ ಈ ದಿನದಂದು ಫೈನಲ್ ನಡೆಯಲಿದೆ ಎನ್ನಲಾಗಿದೆ.

ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಕರಾಚಿಯಲ್ಲಿ ಮೊದಲ ದಿನ ಪಂದ್ಯ ಆರಂಭಗೊಂಡ ಮರು ದಿನ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಘರ್ಷಣೆ ಫೆಬ್ರವರಿ 23 ರಂದು ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇನ್ನೂ ಪಾಕಿಸ್ತಾನದ ಕ್ರೀಡಾಂಗಣಗಳ ನವೀಕರಣ ಕಾರ್ಯದಲ್ಲಿ ತೊಡಗಿದೆ. ಆದರೆ ಶೀಘ್ರವೇ ಕೆಲಸ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಇಲ್ಲಿ ನಾವು ನಮೂದಿಸಿರುವ ದಿನಾಂಕ, ಸ್ಥಳಗಳು ತಾತ್ಕಾಲಿಕ ವೇಳಾಪಟ್ಟಿಯಷ್ಟೆ. ವರದಿಗಳ ಪ್ರಕಾರ ಇದು ಕೇವಲ ತಾತ್ಕಾಲಿಕ ವೇಳಾಪಟ್ಟಿಯಾಗಿದೆ. ಅಧಿಕೃತ ವೇಳಾಪಟ್ಟಿ ಅದಕ್ಕಿಂತ ಭಿನ್ನ ಆಗಿರಬಹುದು. ಭಾರತದ ಪಂದ್ಯಗಳನ್ನು ತಟಸ್ಥ ಎಂದು ಗುರುತಿಸಲಾಗಿದೆ. ಆದರೆ ದುಬೈ ಅಥವಾ ಬೇರೊಂದು ಸ್ಥಳ ಆಗಿರಬಹುದು. ಅಧಿಕೃತ ವೇಳಾಪಟ್ಟಿ ನಂತರ ಅದಕ್ಕೆ ಸ್ಪಷ್ಟನೆ ಸಿಗಲಿದೆ.

ಚಾಂಪಿಯನ್ಸ್ ಟ್ರೋಫಿ 2025 ಗುಂಪುಗಳು

RevSportzನ ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ.

ಗುಂಪು ಎ: ಪಾಕಿಸ್ತಾನ, ನ್ಯೂಜಿಲೆಂಡ್, ಭಾರತ, ಬಾಂಗ್ಲಾದೇಶ

ಗುಂಪು ಬಿ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ

ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ

  • ಫೆಬ್ರವರಿ 19, 2025 - ಪಾಕಿಸ್ತಾನ vs ನ್ಯೂಜಿಲೆಂಡ್ (ಮಧ್ಯಾಹ್ನ 2:30, ಕರಾಚಿ)
  • ಫೆಬ್ರವರಿ 20, 2025 - ಬಾಂಗ್ಲಾದೇಶ vs ಭಾರತ (ಮಧ್ಯಾಹ್ನ 2:30, ತಟಸ್ಥ)
  • ಫೆಬ್ರವರಿ 21, 2025 - ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ (ಮಧ್ಯಾಹ್ನ 2:30, ಕರಾಚಿ)
  • ಫೆಬ್ರವರಿ 22, 2025 - ಆಸ್ಟ್ರೇಲಿಯಾ vs ಇಂಗ್ಲೆಂಡ್ (ಮಧ್ಯಾಹ್ನ 2:30, ಲಾಹೋರ್)
  • ಫೆಬ್ರವರಿ 23, 2025 - ಪಾಕಿಸ್ತಾನ vs ಭಾರತ (ಮಧ್ಯಾಹ್ನ 2:30, ತಟಸ್ಥ)
  • ಫೆಬ್ರವರಿ 24, 2025 - ಬಾಂಗ್ಲಾದೇಶ vs ನ್ಯೂಜಿಲೆಂಡ್ (ಮಧ್ಯಾಹ್ನ 2:30, ರಾವಲ್ಪಿಂಡಿ)
  • ಫೆಬ್ರವರಿ 25, 2025 - ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (ಮಧ್ಯಾಹ್ನ 2:30, ರಾವಲ್ಪಿಂಡಿ)
  • ಫೆಬ್ರವರಿ 26, 2025 - ಅಫ್ಘಾನಿಸ್ತಾನ vs ಇಂಗ್ಲೆಂಡ್ (ಮಧ್ಯಾಹ್ನ 2:30, ಲಾಹೋರ್)
  • ಫೆಬ್ರವರಿ 27, 2025 - ಪಾಕಿಸ್ತಾನ vs ಬಾಂಗ್ಲಾದೇಶ (ಮಧ್ಯಾಹ್ನ 2:30, ರಾವಲ್ಪಿಂಡಿ)
  • ಫೆಬ್ರವರಿ 28, 2025 - ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ (ಮಧ್ಯಾಹ್ನ 2:30, ಲಾಹೋರ್)
  • ಮಾರ್ಚ್ 1, 2025 - ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ (ಮಧ್ಯಾಹ್ನ 2:30, ಕರಾಚಿ)
  • ಮಾರ್ಚ್ 2, 2025 - ನ್ಯೂಜಿಲೆಂಡ್ vs ಭಾರತ (ಮಧ್ಯಾಹ್ನ 2:30, ತಟಸ್ಥ)
  • ಮಾರ್ಚ್ 4, 2025 - ಸೆಮಿ-ಫೈನಲ್ A1 vs B2 (ಮಧ್ಯಾಹ್ನ 2:30, ತಟಸ್ಥ)
  • ಮಾರ್ಚ್ 5, 2025 - ಸೆಮಿ-ಫೈನಲ್ B1 vs A2 (ಮಧ್ಯಾಹ್ನ 2:30, ತಟಸ್ಥ)
  • ಮಾರ್ಚ್ 9, 2025 - ಫೈನಲ್ (ಮಧ್ಯಾಹ್ನ 2:30, ತಟಸ್ಥ)
  • ಮಾರ್ಚ್ 10, 2025 - ಫೈನಲ್​ಗೆ ಮೀಸಲು ದಿನ (ತಟಸ್ಥ)

ಇದನ್ನೂ ಓದಿ: ಗಾಯದ ಕಾರಣ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಔಟ್? ಈ ಇಬ್ಬರಿಗೆ ಅವಕಾಶ ಸಾಧ್ಯತೆ; ಹೀಗಿರಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ 11

Whats_app_banner