Seetha Rama Serial: ಇದು ಹೊಸ ಆಟ ಅಲ್ಲ, ಅಭಿಮಾನಿಗಳಿಗೆ ನೀವ್ ಕೊಡ್ತಿರೋ ಕಾಟ; ಸೀತಾ ರಾಮ ಸೀರಿಯಲ್ ಮೇಲೆ ವೀಕ್ಷಕರ ಮುನಿಸು
Seetha Rama serial: ಸೀತಾ ರಾಮ ಸೀರಿಯಲ್ ಮೊದಲಿನಂತೆ ಬರುತ್ತಿಲ್ಲ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ದೂರುತ್ತಿದ್ದಾರೆ. ಸಿಹಿಯನ್ನು ಅಪಘಾತದಲ್ಲಿ ಬಲಿ ಕೊಟ್ಟಾಗಲೇ ವೀಕ್ಷಕರು ಬಹಿರಂಗವಾಗಿ ಮುನಿಸು ಹೊರಹಾಕಿದ್ದರು. ಈಗ ಆ ಮುನಿಸು ಮತ್ತಷ್ಟು ಹೆಚ್ಚಾಗಿದೆ. ಇದು ಹೊಸ ಆಟ ಅಲ್ಲ, ಅಭಿಮಾನಿಗಳಿಗೆ ನೀವ್ ಕೊಡ್ತಿರೋ ಕಾಟ ಎನ್ನುತ್ತಿದ್ದಾರೆ.
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಇಲ್ಲದ ಮೇಲೆ ವೀಕ್ಷಕ ವಲಯದಲ್ಲಿ ಸಾಕಷ್ಟು ಬೇಸರ ಮನೆ ಮಾಡಿದೆ. ಅಪಘಾತದಲ್ಲಿ ಸಿಹಿ ಸಾವಿನ ಬಳಿಕ, "ನಾವಿನ್ನೂ ಈ ಸೀರಿಯಲ್ ನೋಡಲ್ಲ" ಎಂದೂ ಈ ಸೀರಿಯಲ್‌ನ ಪ್ರೋಮೋಗಳಿಗೆ ಬಹಿರಂಗ ಕಾಮೆಂಟ್ ಮೂಲಕ ತಮ್ಮೊಳಗಿನ ಮುನಿಸನ್ನು ಹೇಳಿಕೊಂಡಿದ್ದರು. ಕಥೆಯ ಸಾಗುವಿಕೆಯ ಲಯ ತಪ್ಪಿದೆ ಎಂದೂ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಇದೀಗ ಸಿಹಿ ಮತ್ತು ಸುಬ್ಬಿಯನ್ನು ಒಂದು ಮಾಡಿಸೋ ಪ್ರಯತ್ನವನ್ನು ನಿರ್ದೇಶಕರು ಮಾಡುತ್ತಿದ್ದಾರೆ.
ಸೀತಾಗೆ ಅವಳಿ ಮಕ್ಕಳಿದ್ದವು. ಆ ಇಬ್ಬರು ಮಕ್ಕಳಲ್ಲಿ ಒಂದು ಮಗು ಹುಟ್ಟಿದ ಕೂಡಲೇ ಸತ್ತೋಯ್ತು ಎಂದು ಡಾಕ್ಟರ್ ಅನಂತ ಲಕ್ಷ್ಮೀ ಕೋರ್ಟ್‌ಗೆ ಪತ್ರದ ಮೂಲಕ ಉತ್ತರ ನೀಡಿದ್ದರು. ಹೀಗಿರುವಾಗಲೇ ಸುಬ್ಬಿ ಅನ್ನೋ ಹೊಸ ಪಾತ್ರದ ಮೂಲಕ ಸಿಹಿಯನ್ನೇ ಹೋಲುವ ಹುಡುಗಿಯ ಆಗಮನವಾಗಿತ್ತು. ಇವಳು ಪಕ್ಕಾ ಸಿಹಿಯ ಅಕ್ಕನೋ ತಂಗಿಯೋ ಇರಬೇಕು ಎಂದು ವೀಕ್ಷಕರು ಊಹಿಸಿದ್ದರು. ಈಗ ಇದೇ ಸಿಹಿ- ಮತ್ತು ಸುಬ್ಬಿಯನ್ನು ಮುಖಾಮುಖಿ ಆಗುವ ಕಾಲ ಸನಿಹ ಬಂದಿದೆ.
ಈ ವಿಚಾರವಾಗಿಯೇ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಜೀ ಕನ್ನಡ, ಸಿಹಿ-ಸುಬ್ಬಿ ಒಬ್ಬರನ್ನೊಬ್ಬರು ನೋಡಿದ್ರೆ ಹೊಸ ಆಟ ಶುರುವಾಗದೇ ಇರುತ್ತ? ಎಂದಿದೆ. ಈ ಪೋಸ್ಟ್‌ಗೆ ವೀಕ್ಷಕರು ತರಹೇವಾರಿ ಕಾಮೆಂಟ್ಸ್‌ಗಳನ್ನು ಮಾಡಿದ್ದಾರೆ. ಬಹುತೇಕರು, ಸೀರಿಯಲ್ ಸಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಯಾಕೋ ಈ ಥರದ ಹುಚ್ಚಾಟ, ಚೆನ್ನಾಗಿರೋ ಸೀರಿಯಲ್‌ನ, ಈಗೀಗ ತುಂಬ ಬೋರ್ ಮಾಡ್ಬಿಟದ್ಟಿದ್ದೀರಾ? ಎನ್ನುತ್ತಿದ್ದಾರೆ.
ಸೀರಿಯಲ್ ಬಗ್ಗೆ ವೀಕ್ಷಕರ ಕಾಮೆಂಟ್ಸ್
- ದಯವಿಟ್ಟು ಸೀತಾ ರಾಮ ನಿರ್ದೇಶಕರು ಹಾಗೂ ಬರಹಗಾರರು ಈ ಹಿಂದಿನ 250 ಸಂಚಿಕೆಗಳು ಕಥೆ ಹೇಗೆ ಬಂತು ಒಮ್ಮೆ ಕೂತು ಪುನರಾವಲೋಕಿಸುವ ಅಗತ್ಯವಿದೆ. ನಂತರದ ಸಂಚಿಕೆಗಳಲ್ಲಿ ಖಂಡಿತವಾಗಿಯೂ ನೀವು ಎಡವಿದ್ದೀರಿ!! ನಿರ್ದೇಶಕರು ಮತ್ತು ಬರಹಾರರು ನೀವೇ ಸೃಷ್ಟಿಸಿದ ಪಾತ್ರಗಳ ಜೊತೆಗೆ ಜೀವಿಸಿ, ಹಾಗೆಯೇ ವೀಕ್ಷಕರಾಗಿ, ನೀವು ಕೂಡ ವೀಕ್ಷಕರೊಟ್ಟಿಗೆ ಪಯಣಿಸಿ, ವೀಕ್ಷಕರ ತುಡಿತ- ಮಿಡಿತಗಳನ್ನು ಅರ್ಥಮಾಡಿಕೊಂಡು ಕಥೆಯನ್ನು ಮುಂದುವರೆಸಿ.
- ಸಿಹಿ ಸುಬ್ಬಿನ ನೋಡಬಹುದು ಆದ್ರೆ ಸುಬ್ಬಿ ಹೇಗ್ರಿ ಸಿಹಿನ ನೋಡೋಕೆ ಆಗುತ್ತೆ
- ನಮಗೆ ಹಳೇ ಸೀತಾ ರಾಮ ಧಾರಾವಾಹಿಯ ವೈಬ್ ಬೇಕು
- ಕರ್ಮ ಮಾರಾಯ್ರೆ!!!! ಇದು ಹೊಸ ಆಟ ಅಲ್ಲ, ಅಭಿಮಾನಿಗಳಿಗೆ ನೀವ್ ಕೊಡ್ತಿರೋ ಕಾಟ ಅಷ್ಟೇ. ಧಾರಾವಾಹಿಯನ್ನು ಪೂರ್ತಿಯಾಗಿ ಹಾಳುಮಾಡಬೇಕೆಂದು ನಿರ್ಧರಿಸಿದ ಮೇಲೆ ನಾವೇನು ಮಾಡುವುದು ಹೇಳಿ
- ಯಾಕ್ರೋ ಸ್ಟೋರಿನ ಈ ಥರ ಎಳಿತ ಇದೀರಾ. ಆದಷ್ಟು ಬೇಗ ಸಿಹಿಗೆ ಸುಬ್ಬಿ ಸೀಗೋ ಹಾಗೆ ಮಾಡಿ. ಭಾರ್ಗವಿ ನಾಟಕನ ಎಲ್ಲಾರಿಗೂ ಗೊತ್ತಾಗೋ ಹಾಗೆ ಮಾಡಿ
- ಡೈರೆಕ್ಟರ್ ಸಾಹೆಬ್ರೇ ಈ ಡೈರೆಕ್ಷನ್ ನಿಮಗಾದರೂ ಕಥೆಯ ಅರ್ಥ ತಿಳಿದಿದೆಯೇ? ಅಥವಾ ನಾವು ನಿಮಗೆ ತಿಳಿಸಬೇಕಾ;ಮುಂದಿನ ಎಪಿಸೋಡ್ ಹೇಗಿರಬೇಕು ಅಂತಾ?
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ