R Ashwin Net Worth: ನಿವೃತ್ತಿ ಹೊಂದಿದ ಆರ್ ಅಶ್ವಿನ್ ಆಸ್ತಿ ಎಷ್ಟಿರಬಹುದು, ಐಷಾರಾಮಿ ಮನೆ ಬೆಲೆ ಎಷ್ಟು, ಯಾವೆಲ್ಲಾ ಕಾರುಗಳಿವೆ?
- Ravichandran Ashwin: ಟೀಮ್ ಇಂಡಿಯಾದ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಅವರ ನೆಟ್ವರ್ತ್ ಎಷ್ಟಿದೆ ಎನ್ನುವುದರ ಬಗ್ಗೆ ಹುಡುಕಾಟ ನಡೆಯುತ್ತಿದೆ.
- Ravichandran Ashwin: ಟೀಮ್ ಇಂಡಿಯಾದ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಅವರ ನೆಟ್ವರ್ತ್ ಎಷ್ಟಿದೆ ಎನ್ನುವುದರ ಬಗ್ಗೆ ಹುಡುಕಾಟ ನಡೆಯುತ್ತಿದೆ.
(1 / 5)
ರವಿಚಂದ್ರನ್ ಅಶ್ವಿನ್ ಭಾರತದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (537) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವಿನ್, ಬ್ರಿಸ್ಬೇನ್ ಟೆಸ್ಟ್ ನಂತರ ಡಿಸೆಂಬರ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.(AFP)
(2 / 5)
ನಿವೃತ್ತಿಯಾಗಿ ಕೆಲವೇ ದಿನಗಳಾದರೂ ರವಿಚಂದ್ರನ್ ಅಶ್ವಿನ್ ಎಷ್ಟು ಆಸ್ತಿ ಹೊಂದಿದ್ದಾರೆ ಎನ್ನುವುದರ ಕುರಿತು ಗೂಗಲ್ನಲ್ಲಿ ಸರ್ಚಿಂಗ್ ನಡೆಯುತ್ತಿದೆ. ಅಶ್ವಿನ್ ಅವರು ಸುಮಾರು 135 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಅವರ ಆಸ್ತಿಯ ಮೊತ್ತ ಭಾರತೀಯ ಕರೆನ್ಸಿಯಲ್ಲಿ 117 ಕೋಟಿ ರೂಪಾಯಿ ಇತ್ತು. ಈ ವರ್ಷ ಅದು ಸುಮಾರು 18 ಕೋಟಿ ರೂ ಹೆಚ್ಚಾಗಿದೆ.(HT_PRINT)
(3 / 5)
ಭಾರತೀಯ ಕ್ರಿಕೆಟ್ನಿಂದಲೂ ಅಶ್ವಿನ್ ಉತ್ತಮ ಸಂಬಳ ಪಡೆಯುತ್ತಿದ್ದರು. ಅಶ್ವಿನ್ ಬಿಸಿಸಿಐನೊಂದಿಗೆ ಗ್ರೇಡ್ ಎ ಒಪ್ಪಂದ ಪಡೆದಿದ್ದಾರೆ. ಅಂದರೆ, ಅವರು ವಾರ್ಷಿಕ 5 ಕೋಟಿ ರೂಪಾಯಿಗಳ ಸಂಬಳ ಪಡೆಯುತ್ತಿದ್ದರು. ಪಂದ್ಯದ ಶುಲ್ಕ ಸೇರಿದಂತೆ ಮಂಡಳಿಯಿಂದ ಸುಮಾರು 10 ಕೋಟಿ ರೂಪಾಯಿ ಗಳಿಸುತ್ತಿದ್ದರು.(HT_PRINT)
(4 / 5)
ರವಿಚಂದ್ರನ್ ಅಶ್ವಿನ್ ಐಪಿಎಲ್ನಲ್ಲಿ ಉತ್ತಮ ಆದಾಯ ಗಳಿಸಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 9.75 ಕೋಟಿ ರೂ.ಗೆ ಖರೀದಿಸಿತು. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಪ್ರತಿ ಆವೃತ್ತಿಯಲ್ಲೂ 5 ಕೋಟಿ ರೂ.ಗಳನ್ನು ಪಡೆಯುತ್ತಿದ್ದರು. ಜಾಹೀರಾತು ಮೂಲಕವೂ ಕೋಟಿಗಟ್ಟಲೆ ಆದಾಯ ಪಡೆಯುತ್ತಿದ್ದರು ಎಂದು ವರದಿಯಾಗಿದೆ.(HT_PRINT)
ಇತರ ಗ್ಯಾಲರಿಗಳು