ಮಹಾ ಕುಂಭಮೇಳಕ್ಕೆ ಹೋಗ್ತೀರಾ, ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೆ ನೋಡಿ, ದಿನಾಂಕ, ಸಮಯ ವಿವರ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾ ಕುಂಭಮೇಳಕ್ಕೆ ಹೋಗ್ತೀರಾ, ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೆ ನೋಡಿ, ದಿನಾಂಕ, ಸಮಯ ವಿವರ ಹೀಗಿದೆ

ಮಹಾ ಕುಂಭಮೇಳಕ್ಕೆ ಹೋಗ್ತೀರಾ, ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೆ ನೋಡಿ, ದಿನಾಂಕ, ಸಮಯ ವಿವರ ಹೀಗಿದೆ

Maha Kumbh Mela 2025: ಮುಂದಿನ ತಿಂಗಳು 12 ರಿಂದ ಫೆಬ್ರವರಿ 26 ರ ತನಕ ಪ್ರಯಾಗರಾಜ್ ಮಹಾ ಕುಂಭಮೇಳ 2025 ನಡೆಯಲಿದೆ. ಮಹಾ ಕುಂಭಮೇಳಕ್ಕೆ ಹೋಗ್ತೀರಾದರೆ, ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೆ ನೋಡಿ, ದಿನಾಂಕ, ಸಮಯ ವಿವರ ಇಲ್ಲಿದೆ.

ಮಹಾ ಕುಂಭಮೇಳಕ್ಕೆ ಹೋಗ್ತೀರಾದರೆ ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಭಾರತೀಯ ರೈಲ್ವೆ ಶುರುಮಾಡಿದೆ ನೋಡಿ. (ಸಾಂಕೇತಿಕ ಚಿತ್ರ)
ಮಹಾ ಕುಂಭಮೇಳಕ್ಕೆ ಹೋಗ್ತೀರಾದರೆ ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಭಾರತೀಯ ರೈಲ್ವೆ ಶುರುಮಾಡಿದೆ ನೋಡಿ. (ಸಾಂಕೇತಿಕ ಚಿತ್ರ)

Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮುಂದಿನ ತಿಂಗಳು ಮಧ್ಯಭಾಗದಿಂದ ಮಹಾ ಕುಂಭಮೇಳ ಶುರುವಾಗಲಿದ್ದು ಫೆಬ್ರವರಿ ಕೊನೆವರೆಗೆ ಇರಲಿದೆ. ಈ ಹಬ್ಬಕ್ಕೆ ಮೊದಲೇ ಜನದಟ್ಟಣೆ ಶುರುವಾಗಿದೆ. ಅನೇಕರು ಕುಂಭಕ್ಕೆ ಮೊದಲೇ ಪ್ರಯಾಗ್‌ರಾಜ್‌ಗೆ ಹೊರಟಿದ್ದಾರೆ. ಹೀಗಾಗಿ ಪ್ರಯಾಣಿಕ ದಟ್ಟಣೆ ಮನಗಂಡ ಭಾರತೀಯ ರೈಲ್ವೆಯ ನೈಋತ್ವ ರೈಲ್ವೆ ವಿಭಾಗವು ಮೈಸೂರಿನಿಂದ ಪ್ರಯಾಗ್ ರಾಜ್ ಗೆ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು (06215) ಓಡಿಸಲಿದೆ.

ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು

ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲು (ರೈಲು ಸಂಖ್ಯೆ 06215) ಏಕಮುಖ ಸಂಚಾರ ಮಾಡಲಿದ್ದು ನಾಳೆ (ಡಿಸೆಂಬರ್ 23) ಮೊದಲ ಪ್ರಯಾಣ ಹೊರಡಲಿದೆ. ಮೈಸೂರು-ಪ್ರಯಾಗ್ ರಾಜ್ ಒನ್-ವೇ ಕುಂಭ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು ನಾಳೆ (ಡಿಸೆಂಬರ್ 23) ಸೋಮವಾರ ನಸುಕಿನ 00:30 ಗಂಟೆಗೆ ಮೈಸೂರಿನಿಂದ ಹೊರಟು, ಬುಧವಾರ ನಸುಕಿನ 3:00 ಗಂಟೆಗೆ ಪ್ರಯಾಗ್ ರಾಜ್ ಜಂಕ್ಷನ್ ತಲುಪಲಿದೆ.

ಮಾರ್ಗಮಧ್ಯದಲ್ಲಿ, ಈ ರೈಲು ಮಂಡ್ಯಾ, ಕೆಎಸ್‌ಆರ್. ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು,ದಾವಣಗೆರೆ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್‌. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಚೋರ್ಡ್ ಲೈನ್, ಅಹ್ಮದ್ಮಗರ, ಮನ್ಮಡ, ಭುಸಾವಲ್, ಖಾಂಡ್ವಾ, ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬನಪುರ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ಟಿ, ಮೈಹಾರ್, ಸಾ ಮತ್ತು ಮಾಣಿಕ್ಷುರ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಆಗಮನ ನಿರ್ಗಮನ ವಿವರ

ಈ ಮೈಸೂರು - ಪ್ರಯಾಗರಾಜ್ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಆಗಮನ ಮತ್ತು ನಿರ್ಗಮನದ ಸಮಯವನ್ನು ತಿಳಿಯಲು, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧದಿಕೃತ ವೆಬ್‌ಸೈಟ್‌ (www.enquiry.indianrail.gov.in) ಭೇಟಿ ನೀಡಿ, 139 ನಂಬರಗೆ ಡಯಲ್ ಮಾಡಿ ಅಥವಾ ಎನ್‌ಟಿಇಎಸ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಡಾ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ 2025

ಉತ್ತರ ಪ್ರದೇಶದ ಪ್ರಯಾಗರಾಜ್ (ಅಲಹಾಬಾದ್) ನಲ್ಲಿ 2025ರ ಜನವರಿ 13 ರಿಂದ ಫೆಬ್ರವರಿ 26 ವರೆಗೆ ಮಹಾ ಕುಂಭಮೇಳ ನಡೆಯಲಿದೆ. ಹಿಂದೂಗಳು ಈ ಹಬ್ಬವನ್ನು ಅಪಾರ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಮಹಾ ಕುಂಭವು ವಿಶ್ವದ ಅತಿದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜಾತ್ರೆ ಎಂದು ಹೇಳಲಾಗುತ್ತದೆ. ಈ ಜಾತ್ರೆಯು ಭಾರತದಲ್ಲಿ ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿ ಈ 4 ಸ್ಥಳಗಳಲ್ಲಿ ಮಾತ್ರ ನಡೆಯುತ್ತದೆ. ಮಹಾ ಕುಂಭ ಮೇಳದ ಸಮಯದಲ್ಲಿ ನಾಗಾ ಸಾಧುಗಳು ಮೊದಲು ಸ್ನಾನ ಮಾಡುತ್ತಾರೆ. ಮಹಾ ಕುಂಭದಲ್ಲಿ ಸ್ನಾನ ಮಾಡಿದ ನಂತರ ವ್ಯಕ್ತಿಯ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ. ಅಷ್ಟೇ ಅಲ್ಲ ಅಂತಹ ವ್ಯಕ್ತಿಯು ದೇವರ ಅನುಗ್ರಹವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಒಂದೇ ದಿನದಲ್ಲಿ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳ ಸಂಖ್ಯೆ ಬೇರೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚಾಗಿರುತ್ತದೆ. ಸೂರ್ಯ, ಗುರು ಮತ್ತು ಚಂದ್ರನ ಸ್ಥಾನಗಳನ್ನು ನೋಡಿ ಮಹಾಕುಂಭದ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ನೂರಾರು ವರ್ಷಗಳಿಂದ ಮಹಾಕುಂಭ ಜಾತ್ರೆ ನಿರಂತರವಾಗಿ ನಡೆಯುತ್ತಿರುವುದು ವಿಶೇಷ. ಅಲ್ಲಿ ಸರ್ಕಾರವೂ ಈ ಉತ್ಸವದ ಆಚರಣೆಗೆ ಬಹಳಷ್ಟು ಸಿದ್ಧತೆ ನಡೆಸುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.