ಶಿವನಿಗೆ ಜಲಾಭಿಷೇಕ ಏಕೆ ಪ್ರಿಯ, ಅಭಿಷೇಕ ಮಾಡುವಾಗ ಯಾವ ನಿಯಮಗಳನ್ನು ಪಾಲಿಸಬೇಕು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿವನಿಗೆ ಜಲಾಭಿಷೇಕ ಏಕೆ ಪ್ರಿಯ, ಅಭಿಷೇಕ ಮಾಡುವಾಗ ಯಾವ ನಿಯಮಗಳನ್ನು ಪಾಲಿಸಬೇಕು?

ಶಿವನಿಗೆ ಜಲಾಭಿಷೇಕ ಏಕೆ ಪ್ರಿಯ, ಅಭಿಷೇಕ ಮಾಡುವಾಗ ಯಾವ ನಿಯಮಗಳನ್ನು ಪಾಲಿಸಬೇಕು?

ಶಿವನನ್ನು ಅಭಿಷೇಕ ಪ್ರಿಯ ಎಂದು ಏಕೆ ಕರೆಯುತ್ತಾರೆ. ಶಿವಪೂಜೆಯಲ್ಲಿ ಜಲಾಭಿಷೇಕ ಏಕೆ ಮುಖ್ಯ? ಲಿಂಗಕ್ಕೆ ಅಭಿಷೇಕ ಮಾಡುವಾಗ ಯಾವ ನಿಯಮಗಳನ್ನು ಪಾಲಿಸಬೇಕು? ಎಂಬ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಶಿವನಿಗೆ ಜಲಾಭಿಷೇಕ ಮಾಡುವಾಗ ಪಾಲಿಸಬೇಕಾದ ನಿಯಮಗಳು
ಶಿವನಿಗೆ ಜಲಾಭಿಷೇಕ ಮಾಡುವಾಗ ಪಾಲಿಸಬೇಕಾದ ನಿಯಮಗಳು

ಶಿವನನ್ನು ಮೆಚ್ಚಿಸಲು ಕಠೋರ ತಪಸ್ಸು ಮಾಡಬೇಕಾಗಿಲ್ಲ, ಕಠಿಣ ಉಪವಾಸಗಳ ಅಗತ್ಯವಿಲ್ಲ ಎಂದು ಪುರಾಣಗಳು ಹೇಳುತ್ತವೆ, ನೀವು ಭಕ್ತಿಯಿಂದ ಅವನಿಗೆ ಜಲಾಭಿಷೇಕ ಮಾಡಿದರೆ, ಶಿವನು ಪ್ರಸನ್ನನಾಗಿ ವರಗಳನ್ನು ನೀಡುತ್ತಾನೆ. ಆದ್ದರಿಂದಲೇ ಶಿವನನ್ನು ಅಭಿಷೇಕಪ್ರಿಯ ಎಂದು ಕರೆಯುತ್ತಾರೆ. ಶಿವನಿಗೆ ಜಲಾಭಿಷೇಕ ಮಾಡುವುದರಿಂದ ಹೃದಯ ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಪವಿತ್ರಗೊಳಿಸುತ್ತದೆ. ಪಾಪಗಳು ಕಳೆಯುತ್ತವೆ. ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ. ನಕಾರಾತ್ಮಕ ಶಕ್ತಿಗಳು ದೂರಾಗುತ್ತವೆ. ಶಿವನಿಗೆ ಮಾಡುವ ಅಭಿಷೇಕಕ್ಕೆ ಪ್ರಕೃತಿ ವಿಕೋಪದಿಂದ ರಕ್ಷಿಸುವ ಶಕ್ತಿ ಇದೆ ಎಂಬುದು ಭಕ್ತರ ನಂಬಿಕೆಯಾಗಿದೆ .

ವಿಷ ಕುಡಿದು ನೀಲಕಂಠ ಎನಿಸಿದ ಶಿವ

ಕ್ಷೀರ ಸಾಗರದ ಮಂಥನದ ಸಮಯದಲ್ಲಿ ಹಾಲಾಹಲ ಉದ್ಭವಿಸುತ್ತದೆ. ಈ ವಿಷವನ್ನು ಹಾಗೇ ಬಿಟ್ಟರೆ ಅದು ಜಗತ್ತನ್ನು ನಾಶಪಡಿಸುತ್ತದೆ ಎಂಬ ಕಾರಣಕ್ಕೆ ಶಿವನು ಆ ವಿಷವನ್ನು ನುಂಗಿ ತನ್ನ ಗಂಟಲಿನಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಪರಿಣಾಮವಾಗಿ ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದಲೇ ಶಿವನನ್ನು ನೀಲಕಂಠ ಎಂದು ಕರೆಯುತ್ತಾರೆ. ಆದರೆ ವಿಷಕಾರಿ ಪರಿಣಾಮವನ್ನು ಕಡಿಮೆ ಮಾಡಲು, ಎಲ್ಲಾ ದೇವತೆಗಳು ಒಟ್ಟಾಗಿ ಆ ಸಮಯದಲ್ಲಿ ಶಿವನಿಗೆ ನೀರಿನಿಂದ ಅಭಿಷೇಕ ಮಾಡುತ್ತಾರೆ. ಅಂದಿನಿಂದ, ಶಿವನ ಆರಾಧನೆಯಲ್ಲಿ ಅಭಿಷೇಕ ಪ್ರಮುಖವಾದದ್ದೆಂದು ಪರಿಗಣಿಸಲಾಗಿದೆ. ಶಿವನನ್ನು ಮೆಚ್ಚಿಸಲು ಶಿವಲಿಂಗಕ್ಕೆ ಪವಿತ್ರ ನೀರಿನಿಂದ ಅಭಿಷೇಕ ಮಾಡಬೇಕು ಎಂದು ಅನೇಕ ಪುರಾಣಗಳು ಹೇಳುತ್ತವೆ.

ಜಲಾಭಿಷೇಕದ ನಿಯಮಗಳೇನು?

  • ಶಿವಲಿಂಗಕ್ಕೆ ಅಭಿಷೇಕ ಶಿವಲಿಂಗದ ಎಡಭಾಗದಿಂದ ಉತ್ತರಾಭಿಮುಖವಾಗಿ ನೀರನ್ನು ಅರ್ಪಿಸಬೇಕು. ಶಿವನ ಎಡಭಾಗದಲ್ಲಿ ಪಾರ್ವತಿ ದೇವಿ ಇದ್ದಾರೆ. ಹೀಗೆ ಲಿಂಗಕ್ಕೆ ನೀರು ಅರ್ಪಿಸಿದರೆ ಶಿವ-ಪಾರ್ವತಿಯರ ಕೃಪೆಗೆ ಪಾತ್ರರಾಗಬಹುದು. ಲಿಂಗಕ್ಕೆ ಜಲಾಭಿಷೇಕ ಮಾಡುವಾಗ ನಿಲ್ಲಬಾರದು. ಈ ರೀತಿ ಮಾಡುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಶಿವನಿಗೆ ಕುಳಿತು ಅಭಿಷೇಕ ಮಾಡುವುದು ಒಳ್ಳೆಯದು.

ಇದನ್ನೂ ಓದಿ: ಜೋತಿಷ್ಯದಲ್ಲಿ ಪ್ರಾಣಿಗಳ ಪಾತ್ರ: ಕುಂಡಲಿ ದೋಷ, ಗ್ರಹ ಗ್ರತಿಗಳ ಚಲನೆ ಪ್ರಕಾರ ಯಾವ ಪರಿಹಾರ ಕೈಗೊಳ್ಳಬೇಕು?

  • ಜಲಾಭಿಷೇಕವನ್ನು ಉಕ್ಕಿನ ಅಥವಾ ಕಬ್ಬಿಣದ ಪಾತ್ರೆಯಲ್ಲಿ ಮಾಡಬಾರದು ತಾಮ್ರ, ಕಂಚು ಅಥವಾ ಬೆಳ್ಳಿ ಪಾತ್ರೆಗಳಲ್ಲಿ ಮಾತ್ರ ಮಾಡಬೇಕು. ಆದರೆ ಹಾಲಿನ ಅಭಿಷೇಕ ಮಾಡುವಾಗ ತಾಮ್ರದ ಪಾತ್ರೆ ಬಳಸಬಾರದು.
  • ಶಿವನಿಗೆ ನೀರಿನಿಂದ ಅಭಿಷೇಕ ಮಾಡುವಾಗ ನೀರಿನ ಹರಿವನ್ನು ತಡೆಯಬಾರದು, ಅದು ಹರಿಯುತ್ತಲೇ ಇರಬೇಕು.
  • ಶಿವನಿಗೆ ಜಲಾಭಿಷೇಕ ಅರ್ಪಿಸುವಾಗ ಶಂಖವನ್ನು ಎಂದಿಗೂ ಬಳಸಬಾರದು. ಪುರಾಣಗಳ ಪ್ರಕಾರ ಶಿವಪೂಜೆಯಲ್ಲಿ ಶಂಖ ನಿಷಿದ್ಧ. ಶಿವನು ಶಂಖಚೂಡ ಎಂಬ ರಾಕ್ಷಸನನ್ನು ಕೊಂದನು, ಆ ರಾಕ್ಷಸನ ಮೂಳೆಗಳು ಶಂಖದ ಭಾಗವಾಗಿದೆ, ಆದ್ದರಿಂದ ಶಿವಪೂಜೆಯಲ್ಲಿ ಶಂಖಕ್ಕೆ ಅವಕಾಶವಿಲ್ಲ.

ಇದನ್ನೂ ಓದಿ: ಕುಂಭ, ಸಿಂಹ ರಾಶಿಗೆ ಪ್ರವೇಶಿಸಲಿರುವ ರಾಹು ಕೇತು; 3 ರಾಶಿಯವರಿಗೆ ಆಶೀರ್ವದಿಸಲಿವೆ ನೆರಳು ಗ್ರಹಗಳು

  • ಶಿವಲಿಂಗಕ್ಕೆ ನೀರು ಅರ್ಪಿಸುವಾಗ ಸಮಯ ಕೂಡ ಬಹಳ ಮುಖ್ಯ. ಬೆಳಿಗ್ಗೆ 5 ರಿಂದ 11 ಗಂಟೆಯೊಳಗೆ ಲಿಂಗಕ್ಕೆ ಜಲಾಭಿಷೇಕ ಮಾಡುವುದು ಶುಭ ಎಂದು ಪರಿಗಣಿಸಲಾಗಿದೆ. ಲಿಂಗಕ್ಕೆ ಸಂಜೆ ನೀರು ಅರ್ಪಿಸಿದರೆ ಫಲ ಸಿಗುವುದಿಲ್ಲ ಎಂಬುದು ನಂಬಿಕೆ.
  • ಶಿವನಿಗೆ ಜಲಾಭಿಷೇಕ ಅರ್ಪಿಸುವಾಗ ನೀರು ಅತ್ಯಂತ ಪವಿತ್ರವಾಗಿರಬೇಕು. ನೀರಿಗೆ ಯಾವುದೇ ಪದಾರ್ಥಗಳನ್ನು ಸೇರಿಸಬೇಡಿ. ಜಲಾಭಿಷೇಕ ಮಾಡುವಾಗ ಶಿವ ಮಂತ್ರವನ್ನು ಜಪಿಸಬೇಕು, ನೀರನ್ನು ನಿಧಾನವಾಗಿ ಅರ್ಪಿಸಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.